ಈ ಸಿನಿಮಾದಲ್ಲಿ ಶಿವರಾಜ್‌ ಕುಮಾರ್‌ ಯೋಧನ ಪಾತ್ರ ನಿರ್ವಹಿಸಲಿದ್ದಾರೆ.

ಶ್ರೀಚರಣ್‌ ಪಕಲ ಸಂಗೀತ ಸಂಯೋಜನೆ ಮಾಡಲಿದ್ದಾರೆ. ರವಿಕುಮಾರ್‌ ಸನಾ ಛಾಯಾಗ್ರಹಣ ಇರುವ ಈ ಚಿತ್ರವನ್ನು ಶ್ರೀಕಾಂತ್‌ ಧುಲಿಪುಡಿ ಮತ್ತು ನರಲ ಶ್ರೀನಿವಾಸ ರೆಡ್ಡಿ ಸೇರಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ.

ಕೋಟಿಗೊಬ್ಬ 3 ಹಾಡು ಬಿಡುಗಡೆ

ಸುದೀಪ್‌ ಅಭಿನಯದ ಕೋಟಿಗೊಬ್ಬ 3 ಚಿತ್ರದ ‘ಆಕಾಶವೇ ಅದುರಿಸುವ..’ ಎನ್ನುವ ಲಿರಿಕಲ್‌ ವಿಡಿಯೋ ಹಾಡು ಬಿಡುಗಡೆ ಆಗಿದೆ. ಆನಂದ್‌ ಆಡಿಯೋ ಯೂಟ್ಯೂಬ್‌ ಚಾನಲ್‌ನಲ್ಲಿ ಬೆಳಗ್ಗೆ ಈ ಹಾಡು ಅನಾವರಣಗೊಂಡಿದೆ. ಶಿವ ಕಾರ್ತಿಕ್‌ ನಿರ್ದೇಶನದ, ಸೂರಪ್ಪ ಬಾಬು ನಿರ್ಮಾಣದ ಈ ಚಿತ್ರಕ್ಕೆ ಡಾ ವಿ ನಾಗೇಂದ್ರ ಪ್ರಸಾದ್‌ ಹಾಡು ಬರೆದಿದ್ದು, ಅರ್ಜುನ್‌ ಜನ್ಯಾ ಸಂಗೀತ ನೀಡಿದ್ದಾರೆ. ವ್ಯಾಸರಾಜ್‌ ಶೋಷಲೆ ಹಾಡಿದ್ದಾರೆ.

ಕಿಚ್ಚ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ರಿಲೀಸ್‌ ಆಗುತ್ತಿದೆ ಸಖತ್ ಸಾಂಗ್!

ಕೆಜಿಎಫ್‌ ತಂಡದಲ್ಲಿ ಯುವರಾಜ್‌ ಕುಮಾರ್‌

ರಾಘವೇಂದ್ರ ರಾಜ್‌ಕುಮಾರ್‌ ಪುತ್ರ ಯುವರಾಜ್‌ ಕುಮಾರ್‌ ನಟನೆಯ ಮೊದಲ ಚಿತ್ರದ ಫಸ್ಟ್‌ಲುಕ್‌ ಬಿಡುಗಡೆ ಆಗಿದೆ. ವಿಭಿನ್ನ ರೂಪದಲ್ಲಿ ಯುವರಾಜ್‌ ಕುಮಾರ್‌ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದು, ನಿರ್ದೇಶಕ ಪ್ರಶಾಂತ್‌ ನೀಲ್‌ ಗರಡಿಯಲ್ಲಿ ಬೆಳೆದ ಪುನೀತ್‌ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ರವಿ ಬಸ್ರೂರ್‌ ಸಂಗೀತ ನೀಡಲಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಯುವರಾಜನ ಆರ್ಭಟ; 'YR 01' ಲುಕ್‌ ನೋಡಿ!