ಕನ್ನಡ ಚಿತ್ರರಂಗದ ಕರುನಾಡಿನ 'ಧೃವತಾರೆ' ಡಾ.ರಾಜ್‌ಕುಮಾರ್‌ ಕುಟುಂಬದ ಮತ್ತೊಂದು ಕುಡಿ ಬೆಳ್ಳಿ ತೆರಿಗೆ ಪಾದಾರ್ಪಣೆ ಮಾಡುತ್ತಿದೆ. ಚಿತ್ರದ ಫಸ್ಟ್ ಲುಕ್‌ ಪೋಸ್ಟರ್‌ ಅನ್ನು ಅಣ್ಣವ್ರ 92ನೇ ಹುಟ್ಟು ಹಬ್ಬಕ್ಕೆ ರಾಘವೇಂದ್ರ ರಾಜ್‌ಕುಮಾರ್ ರಿವೀಲ್‌ ಮಾಡಿದ್ದಾರೆ.

ರಾಘವೇಂದ್ರ ರಾಜ್‌ಕುಮಾರ್‌ ಅವರ ಇಬ್ಬರು ಮಕ್ಕಳು ವಿನಯ್ ರಾಜ್‌ಕುಮಾರ್ ಹಾಗೂ ಯುವರಾಜ್‌ಕುಮಾರ್‌ ಇಬ್ಬರೂ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ನಟರು. 'ಸಿದ್ಧಾರ್ಥ' ಚಿತ್ರದ ಮೂಲಕ ವಿನಯ್‌ ಈಗಾಗಲೇ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ. ಯುವರಾಜ್‌ 'YR 01' ಮೂಲಕ ಎಂಟ್ರಿ ನೀಡುತ್ತಿದ್ದಾರೆ. 

 

ಚಿತ್ರದ ಪೋಸ್ಟರ್‌ನಲ್ಲಿ ಯುವರಾಜ್‌ ಇಂಗ್ಲಿಷ್‌ ಚಿತ್ರದ ರಾಜನಂತೆ ತಯಾರಿ ಆಗಿದ್ದಾರೆ. ಪೋಸ್ಟರ್‌ ಬಿಡುಗಡೆಯಾದ ಕೆಲವೇ ಕ್ಷಣದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಚಿತ್ರದ ಟೈಟಲ್ ಫೈನಲ್ ಆಗದ ಕಾರಣ YR 01 ಅನ್ನೋದು ವರ್ಕಿಂಗ್ ಟೈಟಲ್ ಆಗಿ ಬಳಸಿಕೊಳ್ಳಲಾಗಿದೆ. ಪ್ರಶಾಂತ್ ನೀಲ್ ಗರಡಿಯಲ್ಲಿ ಪಳಗಿದ ಪ್ರತಿಭೆ ಪುನೀತ್‌ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರೀಕರಣದ ಬಗ್ಗೆ ಇನ್ನೂ ಪ್ಲ್ಯಾನ್ ಆಗಿಲ್ಲವಾದರೂ ಲಾಕ್‌ಡೌನ್ ಮುಂಚೇಯೇ ಚಿತ್ರದ ಫೋಟೋ ಶೂಟ್ ಮಾಡಲಾಗಿತ್ತು. ಆ ಫೋಟೋಗಳಲ್ಲಿ ಬಳಸಲಾಗಿದ್ದ ಲುಕ್‌ ಅನ್ನು ಈಗ ರಿವೀಲ್ ಮಾಡಿರುವುದು. ಸ್ಯಾಂಡಲ್‌ವುಡ್‌ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕ ರವಿ ಬಸ್ರೂರ್‌ ಈ ಚಿತ್ರಕ್ಕೂ ಸಂಗೀತ ನಿರ್ದೇಶಿಸಲಿದ್ದಾರೆ.

ಜಾಲಿ ಮೋಡ್‌ನಲ್ಲಿ ಯುವರಾಜ್‌; ದುಬೈನಲ್ಲಿ ಫ್ಲೈ ಬೋರ್ಡಿಂಗ್ ವಿಡಿಯೋ ನೋಡಿ!

ಯುವರಾಜ್‌ ಚಿತ್ರರಂಗಕ್ಕೆ ಕಾಲಿಡಲು ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಡ್ಯಾನ್ಸ್‌ ಹಾಗೂ ಫೈಟಿಂಗ್‌ನಲ್ಲಿ ಪಂಟರಾಗಿದ್ದಾರೆ. ಇನ್ನು 2020 ವಿನಯ್‌ ವಿಶೇಷವಾಗಿ ಬರ ಮಾಡಿಕೊಂಡಿದ್ದಾರೆ. ದುಬೈನಲ್ಲಿ  ಫ್ಲೈ ಬೋರ್ಡಿಂಗ್‌ ಮಾಡುವ ಮೂಲಕ ವಿಭಿನ್ನವಾಗಿ ಆಚರಿಸಿದ್ದಾರೆ. ಈ ವಿಡಿಯೋವನ್ನು ಟ್ಟಿಟರ್‌ನಲ್ಲಿ ಶೇರ್ ಮಾಡಿಕೊಂಡ ಯುವ ಧೈರ್ಯವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ರಾಜ್ ಕುಮಾರ್ ಮೊಮ್ಮಗ ಯುವರಾಜ್ - ಶ್ರೀದೇವಿ ಮ್ಯಾರೆಜ್ ಫೋಟೋಸ್!

ಮೇ 26,2019ರಲ್ಲಿ ಗೆಳತಿ ಶ್ರೇದೇವಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಯುವರಾಜ್. ಯುವ ರಾಜ್‌ಕುಮಾರ್‌ ಅವರ ತಮ್ಮ ವಿನಯ್‌ ರಾಜ್‌ಕುಮಾರ್‌ ಬಾಕ್ಸಿಂಗ್ ಕಲಿಯುವ ಮೂಲಕ 'ಟೆನ್‌' ಚಿತ್ರಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ಕರಮ್‌ ಚಾವ್ಲಾ ನಿರ್ದೇಶಕದಲ್ಲಿ ಮೂಡುತ್ತಿರುವ ಈ ಚಿತ್ರಕ್ಕೆ ಆಶಿಕಾ ರಂಗನಾಥ್‌ ಅಕ್ಕ ನಾಯಕಿ.