ಕರಟಕ ದಮನಕ ಸಾಂಗ್ ರಿಲೀಸ್ ಸಮಯದಲ್ಲಿ ಯೋಗರಾಜ್‌ ಭಟ್ ಕಾಲೆಳೆದ ಶಿವಣ್ಣ-ಪ್ರಭು. ನಿರೀಕ್ಷೆ ಹೆಚ್ಚಿಸಿದ ಹಾಡು.

ಯೋಗರಾಜ್‌ ಭಟ್ ಆಕ್ಷನ್ ಕಟ್ ಹೇಳುತ್ತಿರುವ ಕರಟಕ ದಮನಕ ಸಿನಿಮಾ ಹಾಡೊಂದು ರಿಲೀಸ್ ಆಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ಡ್ಯಾನ್ಸ್ ಮಾಸ್ಟರ್ ಪ್ರಭುದೇವ ನಟಿಸಿರುವ ಸಿನಿಮಾ ಇದಾಗಿದ್ದು ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ಅದ್ಧೂರಿಯಾಗಿ ಸಾಂಗ್ ರಿಲೀಸ್ ಕಾರ್ಯಕ್ರಮ ನಡೆದಿದ್ದು, ಶಿವಣ್ಣ ಮತ್ತು ಪ್ರಭು ಮಾತುಗಳನ್ನು ಕೇಳಿ ಖುಷಿ ಪಟ್ಟಿದ್ದಾರೆ. 

'ಕರಟಕ ದಮನಕ ಸಿನಿಮಾದಲ್ಲಿ ಹೇಗೆ ನಟನೆ ಮಾಡುತ್ತೇನೆ ಅನ್ನೋದು ಗೊತ್ತಿಲ್ಲ, ಆದರೆ ಶಿವಣ್ಣ ಸರ್ ಕೈಯಲ್ಲಿ ಒಳ್ಳೆಯ ಹುಡುಗ ಅಂತ ಅನಿಸಿಕೊಳ್ಳಬೇಕು ಅಂತಿತ್ತು. ಫಸ್ಟ್‌ ಶೆಡ್ಯೂಲ್ ಮುಗಿಸಿ ಎರಡನೇ ಶೆಡ್ಯೂಲ್ ಆರಂಭವಾಗಿತ್ತು. ಅಗ ಫೈಟ್ ಮಾಡ್ತಿದ್ರು ಏನು ಕೇಳಬೇಕು ಸರ್ ಅಂತ ಅಂದೆ. ಏನು ಪ್ರಭು ಅಂದ್ರು. ನೀವು ಹೇಗೆ ಸಾರ್ ಇಷ್ಟೋಂದು ಒಳ್ಳೆಯವರಾಗಿದ್ದೀರಿ ಅಂತ ಕೇಳಿದೆ ಅದಿಕ್ಕೆ ಅವರು ಹೆಳಿದ್ರು ನಂಗೆ ಬೆಳೆಸಿದ್ದೇ ಹಂಗೆ ಪ್ರಭು ನನ್ನನ್ನು ಸ್ಟಾರ್ ಮಗ ಅಂತ ಬೆಳೆಸಿಲ್ಲ. ಅವರನ್ನು ನೋಡಿದಾಗ ಇದು ಹೆಂಗೆ ಸಾಧ್ಯ ಅಂತ ಅನಿಸುತ್ತದೆ' ಎಂದು ಶಿವಣ್ಣ ಬಗ್ಗೆ ಪ್ರಭುದೇವ ಮಾತನಾಡಿದ್ದರು.

ಯೋಗರಾಜ್‌ಭಟ್ಟರ ಸಾರಥ್ಯದಲ್ಲಿ ಮಲ್ಟಿಸ್ಟಾರರ್ ಚಿತ್ರ: ಮೊದಲ ಬಾರಿಗೆ ಒಂದಾದ ಪ್ರಭುದೇವ-ಶಿವಣ್ಣ

'ನಿರ್ದೇಶಕ ಯೋಗರಾಜ್‌ ಭಟ್ಟರು ಹೆಂಡತಿ ತರ ಬಿಡುವುದಕ್ಕೂ ಆಗಲ್ಲ. ಜೊತೆಗೆ ಇರುವುದಕ್ಕೂ ಆಗಲ್ಲ. ಫೈನಲ್‌ ಆಗಿ ಇರಬೇಕಲ್ಲ. ಕರಟಕ ದಮನಕ ಸ್ಕ್ರೀನ್‌ನಲ್ಲಿ ಇರುವುದು ನಾವು ಆದರೆ ನಿಜಕ್ಕೂ ಕರಟಕ ದಮನಕ ಅವರಿಬ್ಬರೇ. ಎಂಥಾ ಬ್ರೈನ್‌ ಮೆಚ್ಚಬೇಕು. ಸಿನಿಮಾ ಮಾಡೋದು ಸ್ವಲ್ಪ ಕಷ್ಟನೇ ಏಕೆಂದರೆ ಮೊದಲನೇ ಸೀನ್‌ನಿಂದ ಕೊನೆಯ ಸೀನ್‌ವರೆಗೂ ಅಷ್ಟೇ ಫ್ಯಾಷನ್‌ ಇಟ್ಟಿಕೊಂಡಿರಬೇಕು' ಎಂದು ಯೋಗರಾಜ್‌ ಭಟ್‌ ಬಗ್ಗೆ ಪ್ರಭು ಹೇಳಿದ್ದಾರೆ.

ಶಿವಣ್ಣ ಕರಟಕ, ಪ್ರಭುದೇವ ದಮನಕ: ಇದು ಯೋಗರಾಜ ಭಟ್ಟರು ಹೆಣೆದ ಕುತಂತ್ರಿ ನರಿಗಳ ಕಥೆ

'ರಾಕ್‌ಲೈನ್‌ ವೆಂಕಟೇಶ್‌ ನೋಡುವುದಕ್ಕೆ ಬಾಡಿ ಬಿಲ್ಡರ್‌ ಆದರೆ ತುಂಬಾ ಸಾಫ್ಟ್ ಮನುಷ್ಯ. ನಮ್ಮಿಬ್ಬರನ್ನು ಕಂಟ್ರೋಲ್ ಮಾಡುವುದು ತುಂಬಾನೇ ಸುಲಭ. ಡೈರೆಕ್ಟರ್ ಯೋಗರಾಜ್‌ ಭಟ್‌ರನ್ನು ಕಂಟ್ರೋಲ್ ಮಾಡಿ ಪಿಕ್ಚರ್‌ ಮುಗಿಸಿದ್ರಲ್ಲ ಅದು ನಿಜಕ್ಕೂ ಗ್ರೇಟ್' ರಾಕ್‌ಲೈನ್‌ ಬಗ್ಗೆ ಹೀಗೆ ಹೇಳಿದ್ದಾರೆ.