ಶಿವಣ್ಣ ಕರಟಕ, ಪ್ರಭುದೇವ ದಮನಕ: ಇದು ಯೋಗರಾಜ ಭಟ್ಟರು ಹೆಣೆದ ಕುತಂತ್ರಿ ನರಿಗಳ ಕಥೆ
‘ಶಿವಣ್ಣ ಜತೆಗೆ ನಟಿಸುವುದು ತುಂಬಾ ಸಂತೋಷ. ಅವರ ಎನರ್ಜಿ ಲೆವಲ್ಲೇ ಬೇರೆ. ಸೆಟ್‌ನಲ್ಲಿ ತುಂಬಾ ಸರಳವಾಗಿ ಇರುತ್ತಾರೆ. ಒಂದು ಒಳ್ಳೆಯ ಚಿತ್ರದಲ್ಲಿ ಇಬ್ಬರು ಜತೆಯಾಗಿದ್ದೇವೆ ಎಂಬುದು ಈ ಚಿತ್ರದ ಹೈಲೈಟ್’ ಎಂದು ಹೇಳಿದ್ದು ಪ್ರಭುದೇವ.

ಒಂದು ಕಡೆ ಪ್ರಭುದೇವ, ಮತ್ತೊಂದು ಕಡೆ ಶಿವರಾಜ್‌ಕುಮಾರ್. ಇವರ ನಡುವೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮತ್ತು ನಿರ್ದೇಕ ಯೋಗರಾಜ್ ಭಟ್. ಮುಖ್ಯಮಂತ್ರಿ ಚಂದ್ರು, ತೆಲುಗು ನಟ ತನಿಕೆಲ್ಲ ಭರಣಿ, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ, ಕಲಾ ನಿರ್ದೇಶಕ ಹೊಸ್ಮನೆ ಮೂರ್ತಿ, ಆನಂದ್ ಆಡಿಯೋ ಮಾಲೀಕ ಶ್ಯಾಮ್, ನಾಯಕಿಯರಾದ ನಿಶ್ವಿಕಾ ನಾಯ್ಡು, ಪ್ರಿಯಾ ಆನಂದ್ ಎಲ್ಲರೂ ತಮ್ಮನ್ನು ಸುತ್ತುವರಿದಿದ್ದ ಕ್ಯಾಮೆರಾಗಳನ್ನೇ ನೋಡುತ್ತ ಕೂತಿದ್ದರು.
ಇದು ‘ಕರಟಕ ದಮನಕ’ ಚಿತ್ರದ ಶೂಟಿಂಗ್ ಸೆಟ್ ಭೇಟಿಯ ವಿಶೇಷತೆ. ಮೊದಲಿಗೆ ಮಾತು ಶುರು ಮಾಡಿದ್ದು ತನಿಕೆಲ್ಲ ಭರಣಿ. ‘ಶಿವಣ್ಣ ಜತೆಗೆ ಪಾತ್ರ ಮಾಡುತ್ತಿರುವುದು ಹೆಮ್ಮೆ ವಿಚಾರ. ಇದು ವಿಶೇಷವಾದ ಕಾಂಬಿನೇಶನ್‌ನ ಸಿನಿಮಾ’ ಎಂದರು ಭರಣಿ. ನಿರ್ದೇಶಕ ಯೋಗರಾಜ್ ಭಟ್ ಮಾತನಾಡಿ, ‘ಕರಟಕ ದಮನಕ ಎಂದರೆ ಎರಡು ಕುತಂತ್ರಿ ನರಿಗಳ ಹೆಸರು. ಪಂಚತಂತ್ರ ಕತೆಗಳಲ್ಲಿ ಬರುವ ಪಾತ್ರಗಳು ಇವು. ಅಂಥ ಕುತಂತ್ರಿ ನರಿಗಳ ಇಮೇಜ್‌ನಲ್ಲಿ ಶಿವಣ್ಣ ಹಾಗೂ ಪ್ರಭುದೇವ ನಟಿಸಿದ್ದಾರೆ. ಶಿವಣ್ಣ ಕರಟಕ, ಪ್ರಭುದೇವ ದಮನಕ. ಇಬ್ಬರು ಸ್ಟಾರ್ ನಟರು ಒಂದೇ ಚಿತ್ರದಲ್ಲಿ ನಟಿಸುತ್ತಿರುವುದು, ರಾಕ್‌ಲೈನ್ ವೆಂಕಟೇಶ್ ಯಾವುದಕ್ಕೂ ಕೊರತೆ ಮಾಡದೆ ಚಿತ್ರ ನಿರ್ಮಿಸುತ್ತಿರುವುದು ವಿಶೇಷ’ ಎಂದರು.
ಮಗು ಇರುವೆಯನ್ನು ಚುಚ್ಚಿ ಸಾಯಿಸುತ್ತೆ, ಅದು ಕ್ರೌರ್ಯ: ರಾಜ್ ಬಿ ಶೆಟ್ಟಿ ಹೀಗೆ ಹೇಳಿದ್ಯಾ
ಶಿವರಾಜ್‌ಕುಮಾರ್, ‘ಪ್ರಭುದೇವ ಜತೆಗೆ ಸಿನಿಮಾ ಮಾಡುವ ನನ್ನ ಕನಸು ಈ ಚಿತ್ರದ ಮೂಲಕ ಈಡೇರಿದೆ. ರಾಕ್ ಲೈನ್ ಪ್ರೊಡಕ್ಷನ್ಸ್ ನನ್ನ ಕುಟುಂಬದಂತೆ. ಯೋಗರಾಜ್ ಭಟ್ ಚಿತ್ರಗಳು ನನಗೆ ಇಷ್ಟ. ಅವರ ಎಷ್ಟೋ ಚಿತ್ರಗಳನ್ನು ಚಿತ್ರಮಂದಿರಕ್ಕೆ ಹೋಗಿ ನೋಡಿದ್ದೇನೆ. ಅವರ ನಿರ್ದೇಶನದಲ್ಲಿ ನಟಿಸುತ್ತಿರುವುದು ಖುಷಿ ಕೊಟ್ಟಿದೆ’ ಎಂದರು.
‘ಶಿವಣ್ಣ ಜತೆಗೆ ನಟಿಸುವುದು ತುಂಬಾ ಸಂತೋಷ. ಅವರ ಎನರ್ಜಿ ಲೆವಲ್ಲೇ ಬೇರೆ. ಸೆಟ್‌ನಲ್ಲಿ ತುಂಬಾ ಸರಳವಾಗಿ ಇರುತ್ತಾರೆ. ಒಂದು ಒಳ್ಳೆಯ ಚಿತ್ರದಲ್ಲಿ ಇಬ್ಬರು ಜತೆಯಾಗಿದ್ದೇವೆ ಎಂಬುದು ಈ ಚಿತ್ರದ ಹೈಲೈಟ್’ ಎಂದು ಹೇಳಿದ್ದು ಪ್ರಭುದೇವ. ರಾಕ್‌ಲೈನ್ ವೆಂಕಟೇಶ್, ‘ಶಿವಣ್ಣ ಜತೆಗೆ ಸಿನಿಮಾ ಮಾಡಿ ತುಂಬಾ ವರ್ಷಗಳೇ ಆಗಿತ್ತು. ನಮ್ಮ ಬ್ಯಾನರ್‌ನಲ್ಲಿ ಪ್ರಭುದೇವ ಜತೆಗೆ ಸಿನಿಮಾ ಮಾಡುವ ಕನಸು ಇತ್ತು. ಅದು ಈಗ ಈಡೇರಿದೆ. ಯೋಗರಾಜ್ ಭಟ್ ತುಂಬಾ ಒಳ್ಳೆಯ ಕತೆ ಮಾಡಿದ್ದಾರೆ. ಮನರಂಜನೆಗೆ ಇಲ್ಲಿ ಕೊರತೆ ಆಗಲ್ಲ’ ಎಂದರು.
JAILER ಚಿತ್ರಕ್ಕೆ ರಜನಿಕಾಂತ್ ಈ ಪರಿ ಸಂಭಾವನೆನಾ? ಶಿವರಾಜ್‌ಕುಮಾರ್, ತಮನ್ನಾ ಪಡೆದದ್ದೆಷ್ಟು?
ವಿ ಹರಿಕೃಷ್ಣ ಸಂಗೀತದಲ್ಲಿ 7 ಹಾಡುಗಳು ಮೂಡಿ ಬರಲಿವೆ. ಸಂತೋಷ್ ರೈ ಪಾತಾಜೆ ಕ್ಯಾಮೆರಾ ಈ ಚಿತ್ರಕ್ಕಿದೆ. ನಿಶ್ವಿಕಾ ನಾಯ್ಡು, ಪ್ರಿಯಾ ಆನಂದ್, ಮುಖ್ಯಮಂತ್ರಿ ಚಂದ್ರು, ಹೊಸ್ಮನೆ ಮೂರ್ತಿ, ಶ್ಯಾಮ್ ಚಿತ್ರದ ಬಗ್ಗೆ ಮಾತನಾಡಿದರು.