Asianet Suvarna News Asianet Suvarna News

Avatara Purusha: ಸಿಂಪಲ್ ಸುನಿ-ಶರಣ್ ಕಾಂಬಿನೇಷನ್‌ ಚಿತ್ರದ ರಿಲೀಸ್‌ಗೆ ಮುಹೂರ್ತ ಫಿಕ್ಸ್!

ಬಹು ನಿರೀಕ್ಷೆಯ ಕನ್ನಡದ ಮತ್ತೊಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಶರಣ್‌ ನಟನೆಯ, ಸಿಂಪಲ್‌ ಸುನಿ ನಿರ್ದೇಶನದ 'ಅವತಾರ ಪುರುಷ' ಸಿನಿಮಾದ ಮೊದಲ ಭಾಗ ಮೇ.6ರಂದು ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ.

Sharan Starring Simple Suni Directorial Avatara Purusha Will Release on May 6th gvd
Author
Bangalore, First Published Mar 14, 2022, 10:35 AM IST

ಕಾಮಿಡಿ ಕಿಂಗ್ ಅಧ್ಯಕ್ಷ ಶರಣ್ (Sharan) ಅಭಿನಯದ ಸಿಂಪಲ್ ಸುನಿ (Simple Suni) ಆಕ್ಷನ್ ಕಟ್ ಹೇಳಿರುವ 'ಅವತಾರ ಪುರುಷ' (Avatar Purusha) ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರದಲ್ಲಿ ಅವರಿಗೆ ಜತೆಯಾಗಿ ಬಣ್ಣಹಚ್ಚಿರುವವರು ಚುಟು ಚುಟು ಹುಡುಗಿ ಆಶಿಕಾ ರಂಗನಾಥ್ (Ashika Ranganath). ಈಗಾಗಲೇ ತೆರೆಯ ಮೇಲೆ ಮೋಡಿ ಮಾಡಿರುವ ಈ ಜೋಡಿಯನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾದಿದ್ದಾರೆ. ಎಲ್ಲವೂ ಸರಿಯಿದ್ದಿದ್ದರೆ 2021ರ ಡಿಸೆಂಬರ್​ನಲ್ಲೇ ಚಿತ್ರ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ನಿಯಮಾವಳಿಗಳ ಕಾರಣದಿಂದ ಚಿತ್ರದ ರಿಲೀಸ್ ಮುಂದೂಡಲಾಗಿತ್ತು. 

ಇದೀಗ ಚಿತ್ರದ ಹೊಸ ರಿಲೀಸ್ ದಿನಾಂಕವನ್ನು ಘೋಷಿಸಲಾಗಿದೆ. 'ಅವತಾರ ಪುರುಷ' ಸಿನಿಮಾದ ಮೊದಲ ಭಾಗ ಮೇ.6ರಂದು ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ಈ ಬಗ್ಗೆ ಟ್ವೀಟ್ (Tweet) ಮಾಡಿರುವ ಸಿಂಪಲ್ ಸುನಿ, 'ಕಪ್ಪುಜಾದು ಶುರುವಾಗುವ ಸಮಯ. ಮೇ 6ರಂದು ಬಿಡುಗಡೆ. ಆಶೀರ್ವಾದವಿರಲಿ' ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಚಿತ್ರದ ರಿಲೀಸ್ ಜತೆಗೆ ಹೊಸ ಪೋಸ್ಟರ್ ಹಂಚಿಕೊಳ್ಳಲಾಗಿದ್ದು, ಸಿನಿರಸಿಕರ ಗಮನ ಸೆಳೆಯುತ್ತಿದೆ. ಮಾತ್ರವಲ್ಲದೇ 'ಅವತಾರ ಪುರುಷ' ಚಿತ್ರದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ (Pushkara Mallikarjunaiah) ವೃತ್ತಿ ಬದುಕಿನ ಇತ್ತೀಚಿನ ಏಳುಬೀಳುಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಟ್ವೀಟ್ ಮಾಡಿದ್ದು, 'ನನ್ನ ಸಾವು-ಬದುಕಿನ ಮದ್ಯೆ ಸಣ್ಣ ಎಳೆಯಂತೆ ಇರುವ ನನ್ನ ಕೊನೆಯ ಆಸರೆ ಅವತಾರಪುರುಷ. ನಿಮ್ಮ ಪ್ರಾರ್ಥನೆ ಹಾಗು ಬೆಂಬಲ ನನ್ನ ಜೊತೆಯಿರಲಿ' ಎಂದು ಬರೆದುಕೊಂಡಿದ್ದಾರೆ.

Avatara Purusha: ಶರಣ್ ಸಿನಿಮಾ ಬಿಡುಗಡೆ ಕುರಿತು ನಿರ್ದೇಶಕ ಸಿಂಪಲ್ ಸುನಿ ಟ್ವೀಟ್

'ಅವತಾರ ಪುರುಷ' ಚಿತ್ರದ ಈಗಾಗಲೇ ಟೀಸರ್‌ (Teaser) ಹಾಗೂ ಟ್ರೇಲರ್‌ (Trailer) ಮೂಲಕ ಸಾಕಷ್ಟು ಗಮನ ಸೆಳೆದಿದೆ. ಮನರಂಜನೆಗೆ ಕೊರತೆ ಇಲ್ಲದಂತೆ ಇಡೀ ಸಿನಿಮಾ ರೂಪಿಸಿರುತ್ತಾರೆ ಎಂಬುದಕ್ಕೆ ಸಿಂಪಲ್‌ ಸುನಿ ಅವರ ಪಂಚಿಂಗ್‌ ಡೈಲಾಗ್‌ಗಳು ಕಾರಣ ಆಗಿರುತ್ತವೆ. ವಾಮಾಚಾರ, ಮಾಟ ಮಂತ್ರದ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದ್ದು, ಶರಣ್‌ ಜೂನಿಯರ್‌ ಆರ್ಟಿಸ್ಟ್‌ ಪಾತ್ರದಲ್ಲಿ ಹತ್ತಕ್ಕೂ ಹೆಚ್ಚು ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಾಂತ್ರಿಕವಾಗಿ ತುಂಬ ಶ್ರೀಮಂತವಾಗಿ ಮೂಡಿಬಂದಿರುವ ಈ ಚಿತ್ರದ ಪೋಸ್ಟರ್ ಹಾಗೂ ಟೀಸರ್​ ಗಮನ ಸೆಳೆದಿತ್ತು. ಚಿತ್ರ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಲಿದೆ ಎಂದು ತಿಳಿಸಲಾಗಿದೆ. 
 


ಇದೊಂದು ಬ್ಲಾಕ್‌ ಮ್ಯಾಜಿಕ್‌ ಕತೆ. ಕಾಮಿಡಿ, ಬ್ಲಾಕ್‌ ಮ್ಯಾಜಿಕ್‌ ಅಂಶಗಳ ಸುತ್ತ ಈ ಸಿನಿಮಾ ಸಾಗುತ್ತದೆ. ಇದು ವೆಬ್‌ ಸರಣಿಗೆ ಮಾಡಿಕೊಂಡಿದ್ದ ಕತೆಯಾಗಿದ್ದರಿಂದ ಅದನ್ನು ಸಿನಿಮಾ ಮಾಡಲು ಹೊರಟಾಗ ಒಂದೇ ಕಂತಿನಲ್ಲಿ ಹೇಳುವುದು ಕಷ್ಟ ಎನಿಸಿತು. ಹೀಗಾಗಿ ಆರಂಭದಲ್ಲೇ ಎರಡು ಪಾರ್ಟ್‌ಗಳಲ್ಲಿ ಸಿನಿಮಾ ಮಾಡುವ ಪ್ಲಾನ್‌ ಮಾಡಿಕೊಂಡು ಚಿತ್ರ ಆರಂಭಿಸಲಾಯಿತು ಎಂದು ಚಿತ್ರದ ನಿರ್ದೇಶಕ ಸಿಂಪಲ್ ಸುನಿ ಈ ಮೊದಲು ಹೇಳಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ವಿಕ್ರಮ್ ಮೊರ್ ಅವರು ಚಿತ್ರಕ್ಕೆ ನೃತ್ಯ ಸಂಯೋಜನೆ ಮಾಡಿದ್ದಾರೆ. ವಿಲಿಯಮ್ ಡೇವಿಡ್ ಛಾಯಾಗ್ರಹಣದಲ್ಲಿ 'ಅವತಾರ ಪುರುಷ'  ಚಿತ್ರ ಮೂಡಿ ಬಂದಿದೆ. 

Avatar Purusha: ಆಶಿಕಾ ರಂಗನಾಥ್ ಹಾಕಿದ 'ಲಡ್ಡೂ' ಬಂದು ಶರಣ್ ಬಾಯಿಗೆ ಬಿತ್ತು

ಇನ್ನು ಈ ಚಿತ್ರದಲ್ಲಿ ಸಾಯಿಕುಮಾರ್‌, ಶ್ರೀನಗರ ಕಿಟ್ಟಿ,  ಸುಧಾರಾಣಿ, ಸಾಧುಕೋಕಿಲ, ಭವ್ಯ, ಅಯ್ಯಪ್ಪ ಸೇರಿದಂತೆ ಮುಂತಾದವರ ತಾರಬಳಗವಿದೆ. ವಿಶೇಷವಾಗಿ ಅವತಾರಪುರುಷ' ಚಿತ್ರ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. 'ಅವತಾರ ಪುರುಷ 1' ಮತ್ತು 'ಅವತಾರ ಪುರುಷ 2' ಹೆಸರಿನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಆದರೆ, ಚಿತ್ರದ ಟ್ಯಾಗ್‌ಲೈನ್  ಮಾತ್ರ ಬೇರೆ ಬೇರೆ ಇಡಲಾಗುತ್ತಿದೆ. ಮೊದಲ ಭಾಗಕ್ಕೆ ಅಷ್ಟದಿಗ್ಬಂಧನ ಮಂಡಲಕ ಹಾಗೂ ಎರಡನೇ ಪಾರ್ಟ್‌ಗೆ  ತ್ರಿಶಂಕು ಎನ್ನುವ ಟ್ಯಾಗ್‌ಲೈನ್ ಇಡಲಾಗಿದೆ. ಮೊದಲನೇ ಭಾಗ ರಿಲೀಸ್‌ ಆದ 101ನೇ ದಿನಕ್ಕೆ ಎರಡನೇ ಭಾಗವನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
 

Follow Us:
Download App:
  • android
  • ios