Asianet Suvarna News Asianet Suvarna News

Avatar Purusha: ಆಶಿಕಾ ರಂಗನಾಥ್ ಹಾಕಿದ 'ಲಡ್ಡೂ' ಬಂದು ಶರಣ್ ಬಾಯಿಗೆ ಬಿತ್ತು

ಕಾಮಿಡಿ ಕಿಂಗ್ ಅಧ್ಯಕ್ಷ ಶರಣ್ ಹಾಗೂ ಸಿಂಪಲ್ ಸುನಿ ನಿರ್ದೇಶನದ ಅವತಾರ ಪುರುಷ ಚಿತ್ರದ ಲಡ್ಡೂ ಬಂದು ಬಾಯಿಗೆ ಬಿತ್ತಾ ಹಾಡು ಪುಷ್ಕರ್ ಫಿಲ್ಮ್ಸ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.

Kannada movie avatar purusha laddoo song out starrer Sharan gvd
Author
Bangalore, First Published Nov 29, 2021, 12:06 AM IST

ಕಾಮಿಡಿ ಕಿಂಗ್ ಅಧ್ಯಕ್ಷ ಶರಣ್ (Sharan) ಹಾಗೂ ಸಿಂಪಲ್ ಸುನಿ (Simple Suni) ನಿರ್ದೇಶನದ 'ಅವತಾರ ಪುರುಷ' (Avatar Purusha) ಚಿತ್ರ ಡಿಸೆಂಬರ್‌ 10ರಂದು ತೆರೆಗೆ ಬರುತ್ತಿದೆ. ಶರಣ್‌ಗೆ ಜೋಡಿಯಾಗಿ ಚುಟು ಚುಟು ಹುಡುಗಿ ಆಶಿಕಾ ರಂಗನಾಥ್ (Ashika Ranganath) ನಟಿಸಿದ್ದಾರೆ. ಈ ಮಧ್ಯೆ ಚಿತ್ರದ ಪ್ರಚಾರ ಕೆಲಸಗಳು ಪ್ರಾರಂಭವಾಗಿದ್ದು, ಇದೀಗ ಚಿತ್ರದ ಎರಡನೇಯ ಹಾಡು ಬಿಡುಗಡೆಯಾಗಿದೆ. ಹೌದು! ಶರಣ್ ಹಾಗೂ ಆಶಿಕಾ ಕಾಂಬಿನೇಷನ್‌ನಲ್ಲಿ 'ಲಡ್ಡೂ' (Laddoo) ಹಾಡು ಪುಷ್ಕರ್ ಫಿಲ್ಮ್ಸ್ (Pushkar Films) ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.

ನಿಹಾಲ್ ಟೌರೊ (Nihal Tauro) ಕಂಠಸಿರಿಯಲ್ಲಿ 'ಲಡ್ಡೂ ಬಂದು ಬಾಯಿಗೆ ಬಿತ್ತಾ' ಹಾಡು ಮೂಡಿಬಂದಿದ್ದು, ಸಿಂಪಲ್ ಸುನಿ ಸಾಹಿತ್ಯ ರಚಿಸಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ (Arjun Janya) ಹಾಡಿಗೆ ಸಂಗೀತ ಸಂಯೋಜಿಸಿದ್ದು, ಶರಣ್ ಹಾಗೂ ಆಶಿಕಾ ಕಾಂಬಿನೇಷನ್‌ ಕೆಮಿಸ್ಟ್ರಿ ಹಾಡಿನಲ್ಲಿ ಸಖತ್ ವರ್ಕೌಟ್ ಆಗಿದೆ. 'ಲಡ್ಡೂ' ಹಾಡಿಗೆ ಸಿನಿರಸಿಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. 'ಹಾಡು ಸಖತ್ ಆಗಿದೆ. ಖಂಡಿತಾ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಜಯ ಗಳಿಸುತ್ತೆ. ಈ ಹಾಡಿನಲ್ಲೂ ಸಖತ್ ಪ್ರಮೋಷನ್ ಮಾಡ್ತೀರಾ ಅಲ್ವಾ ಸುನಿ ಸರ್. ನಮ್ಮ ನಿಹಾಲ್ ವಾಯ್ಸ್ ಬೊಂಬಾಟ್'. ಸೂಪರ್ ಆಗಿದೆ ಹಾಡು. ಹಾಸ್ಯ ಕಲಾವಿದನಾಗಿ ಬಂದ ಇವರು ಈಗ ಒಬ್ಬ ಯಶಸ್ವಿ ನಟ. ಇದು ನಟನೆಗೆ ಇರೋ ಪವರ್.' ಹಾಗೂ ಈ ಹಾಡು ಒಂದ್ ತರಹ ಡಿಫರೆಂಟ್ ಆಗಿದೆ' ಅಂತೆಲ್ಲಾ ನೆಟ್ಟಿಗರು ಕಾಮೆಂಟಿಸಿದ್ದಾರೆ.

ನಮ್ಮ ಜೀವನದ ಪ್ರತಿ ಘಳಿಗೆಯಲ್ಲೂ ಮಕ್ಕಳು ಅತ್ಯಮೂಲ್ಯ: ನಟ ಶರಣ್

'ಅವತಾರ ಪುರುಷ' ಚಿತ್ರದ ಟೀಸರ್‌ ಹಾಗೂ ಟ್ರೇಲರ್‌ನಿಂದ ಈಗಾಗಲೇ ಸಾಕಷ್ಟು ಗಮನ ಸೆಳೆದಿದೆ. ಸಸ್ಪೆನ್ಸ್ ಥ್ರಿಲ್ಲಿಂಗ್ ಇರುವ ಚಿತ್ರದಲ್ಲಿ ಶರಣ್ ಅವರನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಮತ್ತು ಹೊಸ ಅವತಾರದಲ್ಲಿ ಕಾಣಬಹುದಾಗಿದೆ. ಮುಖ್ಯವಾಗಿ ಸಿಕ್ಕಾಪಟ್ಟೆ ಶಾಕ್‌ನೊಂದಿಗೆ ಭಯಮೂಡಿಸುವಂತಹ ಬ್ಲ್ಯಾಕ್ ಮ್ಯಾಜಿಕ್ (Black Maagic) ಚಿತ್ರಕಥೆ ಈ ಚಿತ್ರದಲ್ಲಿದೆ. ಇದೊಂದು ಬ್ಲಾಕ್‌ ಮ್ಯಾಜಿಕ್‌ ಕತೆ. ಕಾಮಿಡಿ, ಬ್ಲಾಕ್‌ ಮ್ಯಾಜಿಕ್‌ ಅಂಶಗಳ ಸುತ್ತ ಈ ಸಿನಿಮಾ ಸಾಗುತ್ತದೆ. ಇದು ವೆಬ್‌ ಸರಣಿಗೆ ಮಾಡಿಕೊಂಡಿದ್ದ ಕತೆಯಾಗಿದ್ದರಿಂದ ಅದನ್ನು ಸಿನಿಮಾ ಮಾಡಲು ಹೊರಟಾಗ ಒಂದೇ ಕಂತಿನಲ್ಲಿ ಹೇಳುವುದು ಕಷ್ಟಎನಿಸಿತು. ಹೀಗಾಗಿ ಆರಂಭದಲ್ಲೇ ಎರಡು ಪಾರ್ಟ್‌ಗಳಲ್ಲಿ ಸಿನಿಮಾ ಮಾಡುವ ಪ್ಲಾನ್‌ ಮಾಡಿಕೊಂಡು ಚಿತ್ರ ಆರಂಭಿಸಲಾಯಿತು ಎಂದು ನಿರ್ದೇಶಕ ಸಿಂಪಲ್ ಸುನಿ ಈ ಹಿಂದೆ ಹೇಳಿದ್ದರು.

ಡಿಸೆಂಬರ್ 10ಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾನೆ 'ಅವತಾರ ಪುರುಷ'

'ಅವತಾರಪುರುಷ' ಚಿತ್ರ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. 'ಅವತಾರ ಪುರುಷ 1' ಮತ್ತು 'ಅವತಾರ ಪುರುಷ 2' ಹೆಸರಿನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಆದರೆ, ಚಿತ್ರದ ಟ್ಯಾಗ್‌ಲೈನ್  ಮಾತ್ರ ಬೇರೆ ಬೇರೆ ಇಡಲಾಗುತ್ತಿದೆ. ಮೊದಲ ಭಾಗಕ್ಕೆ ಅಷ್ಟದಿಗ್ಬಂಧನ ಮಂಡಲಕ ಹಾಗೂ ಎರಡನೇ ಪಾರ್ಟ್‌ಗೆ  ತ್ರಿಶಂಕು ಎನ್ನುವ ಟ್ಯಾಗ್‌ಲೈನ್ ಇಡಲಾಗಿದೆ. ಇನ್ನು ಈ ಚಿತ್ರವು ಪುಷ್ಕರ್ ಫಿಲಂಸ್ ಬ್ಯಾನರ್‌ನಡಿ ಪುಷ್ಕರ್ ಮಲ್ಲಿಕಾರ್ಜುನಯ್ಯ (Pushkara Mallikarjunaiah) ನಿರ್ಮಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ವಿಕ್ರಮ್ ಮೊರ್ ಅವರು ಚಿತ್ರಕ್ಕೆ ನೃತ್ಯ ಸಂಯೋಜನೆ ಮಾಡಿದ್ದಾರೆ. ವಿಲಿಯಮ್ ಡೇವಿಡ್ ಛಾಯಾಗ್ರಹಣದಲ್ಲಿ 'ಅವತಾರ ಪುರುಷ'  ಚಿತ್ರ ಮೂಡಿ ಬಂದಿದೆ. ಇನ್ನು ಈ ಚಿತ್ರದಲ್ಲಿ ಸಾಯಿಕುಮಾರ್‌, ಶ್ರೀನಗರ ಕಿಟ್ಟಿ,  ಸುಧಾರಾಣಿ, ಸಾಧುಕೋಕಿಲ, ಭವ್ಯ, ಅಯ್ಯಪ್ಪ ಸೇರಿದಂತೆ ಮುಂತಾದವರ ತಾರಬಳಗವಿದೆ. 
 

Follow Us:
Download App:
  • android
  • ios