Asianet Suvarna News Asianet Suvarna News

ಗೋಕರ್ಣದ ಶ್ರೀ ಮಹಾಬಲೇಶ್ವರ ಕ್ಷೇತ್ರಕ್ಕೆ ಖ್ಯಾತ ಚಿತ್ರ ನಟ-ನಿರ್ದೇಶಕ ರಿಷಬ್ ಶೆಟ್ಟಿ‌ ಭೇಟಿ

ಪುರಾಣ ಪ್ರಸಿದ್ಧ ಗೋಕರ್ಣದ ಶ್ರೀ ಮಹಾಬಲೇಶ್ವರ ಕ್ಷೇತ್ರಕ್ಕೆ ಖ್ಯಾತ ಚಿತ್ರ ನಟ-ನಿರ್ದೇಶಕ ರಿಷಬ್ ಶೆಟ್ಟಿ‌ ಭೇಟಿ ನೀಡಿದ್ದಾರೆ. ಕುಟುಂಬ ಸಮೇತರಾಗಿ ಆತ್ಮಲಿಂಗದ ದರ್ಶನ ಮಾಡಿರುವ 'ಕಾಂತಾರ' ಖ್ಯಾತಿಯ ನಟ, ನಿರ್ದೇಶಕ ರಿಷಬ್ ಶೆಟ್ಟಿ ವೀಡಿಯೋ..

Sandalwood director and actor Rishab Shetty visited Gokarna Temple at Uttara Kannada srb
Author
First Published Jun 6, 2024, 5:25 PM IST

ಪುರಾಣ ಪ್ರಸಿದ್ಧ ಗೋಕರ್ಣದ ಶ್ರೀ ಮಹಾಬಲೇಶ್ವರ ಕ್ಷೇತ್ರಕ್ಕೆ ಖ್ಯಾತ ಚಿತ್ರ ನಟ-ನಿರ್ದೇಶಕ ರಿಷಬ್ ಶೆಟ್ಟಿ‌ ಭೇಟಿ ನೀಡಿದ್ದಾರೆ. ಕುಟುಂಬ ಸಮೇತರಾಗಿ ಆತ್ಮಲಿಂಗದ ದರ್ಶನ ಮಾಡಿರುವ 'ಕಾಂತಾರ' ಖ್ಯಾತಿಯ ನಟ, ನಿರ್ದೇಶಕ ರಿಷಬ್ ಶೆಟ್ಟಿ ವೀಡಿಯೋ ಈಗ ಮೀಡಿಯಾ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈಲರ್ ಆಗುತ್ತಿದೆ. ಪತ್ನಿ ಪ್ರಗತಿ, ಮಕ್ಕಳಾದ ರನ್ವಿತ್, ರಾಧ್ಯಾ ಹಾಗೂ ಗೆಳೆಯರೊಂದಿಗೆ ರಿಷಬ್ ಶೆಟ್ಟಿ ಶ್ರೀ ಕ್ಷೇತ್ರ ಗೋಕರ್ಣಕ್ಕೆ ಬೇಟಿ ನೀಡಿದ್ದಾರೆ. 

ಅಲ್ಲಿನ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕರಿಷಬ್ ಶೆಟ್ಟಿ ಕುಟುಂಬ ಆತ್ಮಲಿಂಗದ  ದರ್ಶನ ಪಡೆದಿದೆ. ನಂತರ ರಿಷಬ್ ಶೆಟ್ಟಿ ಕುಟುಂಬ ಶ್ರೀ ತಾಮ್ರಗೌರಿ ದೇವಾಲಯ, ಶ್ರೀ ಸ್ಮಶಾನಕಾಳಿ ದೇವಾಲಯಕ್ಕೆ ತೆರಳಿ ದರ್ಶನ ಪಡೆದರು. ಕ್ಷೇತ್ರದ ವ್ಯವಸ್ಥಾಪಕರು, ಸಿಬ್ಬಂದಿ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರದ ವತಿಯಿಂದ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರಿಗೆ ಸ್ಮರಣಿಕೆ, ಪ್ರಸಾದ ನೀಡಿ ಗೌರವ ನೀಡಲಾಯಿತು. 

ಇದಕ್ಕೂ ಮೊದಲು ಹರಿಹರಪುರ ಕ್ಷೇತ್ರಕ್ಕೆ ಸ್ಯಾಂಡಲ್‌ವುಡ್ 'ಡಿವೈನ್ ಸ್ಟಾರ್' ರಿಷಬ್ ಶೆಟ್ಟಿ ಭೇಟಿ ನೀಡಿದ್ದಾರೆ. ಪತ್ನಿ ಮಗಳ ಜೊತೆ ಕುಟುಂಬ ಸಮೇತರಾಗಿ ನಟ-ನಿರ್ದೇಶಕ ರಿಷಬ್ ಶೆಟ್ಟಿ ಭೇಟಿ ನೀಡಿದ್ದಾರೆ. ಕೊಪ್ಪ ತಾಲೂಕಿನ ಹರಿಹರಪುರ ಶ್ರೀ ಕ್ಷೇತ್ರ ಶಾರದಾ ಲಕ್ಷ್ಮಿ ನರಸಿಂಹಸ್ವಾಮಿಯ ದರ್ಶನ ಪಡೆದ ರಿಷಬ್ ದಂಪತಿಗಳು ಅಲ್ಲಿ ಅಭಿಮಾನಿಗಳ ಜತೆ ಫೊಟೋ ಕೂಡ ತೆಗೆಸಿಕೊಂಡೊದ್ದಾರೆ. 

ಸಿನಿಮಾ ಫೀಲ್ಡ್‌ಗೆ ಬರುವ ಮೊದಲು ರಕ್ಷಿತ್ ಶೆಟ್ಟಿ ಸಿಮೆಂಟ್, ಇಟ್ಟಿಗೆ ಹೊತ್ತಿದ್ದು ನಿಜವೇ?

ರಿಷಬ್ ಕಂಡು ಅಭಿಮಾನಿಗಳು ಸೆಲ್ಫಿಗೆ ಮುಗಿ ಬಿದ್ದಿದ್ದಾರೆ. ಬಳಿಕ, ಹರಿಹರಪುರದ ಶ್ರೀ ಸ್ವಯಂ ಸಚ್ಚಿದಾನಂದ ಶ್ರೀಗಳ ದರ್ಶನ ಪಡೆದಿದ್ದಾರೆ ಸ್ಯಾಂಡಲ್‌ವುಡ್ 'ಕಾಂತಾರ' ಸಿನಿಮಾ ಖ್ಯಾತಿಯ ರಿಷಬ್ ಶೆಟ್ಟಿ ದಂಪತಿಗಳು. ಮಠದ ಆವರಣದ ಆಂಜನೇಯನ ಬಳಿ ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ.

ಹರಿಹರಪುರ ಕ್ಷೇತ್ರವು ತುಂಗಾ ನದಿ ತಟದಲ್ಲಿರುವ ಇತಿಹಾಸ ಪ್ರಸಿದ್ಧ ದೇಗುಲ. ಅಲ್ಲಿಗೆ ದಿನಾಲೂ ಸಾವಿರಾರಿಉ ಭಕ್ತರು ಭೇಟಿ ನೀಡುತ್ತಾರೆ.  ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿರುವ ಈ ದೇವಾಲಯವು ಇತಿಹಾಸ ಪ್ರಸಿದ್ಧ ದೇಗುಲವಾಗಿದೆ. ಸದ್ಯ, ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿಯವರು ಕಾಂತಾರ ಚಿತ್ರದ ಪ್ರೀಕ್ವೆಲ್‌ಗೆ ಶೂಟಿಂಗ್ ಮಾಡುವುದರಲ್ಲಿ ನಿರತರಾಗಿದ್ದಾರೆ. ಈ ಚಿತ್ರದಲ್ಲಿ ಕಾಂತಾರ ಮೊದಲ ಭಾಗದಲ್ಲಿ ನಟಿಸಿರುವ ನಟಿ ಸಪ್ತಮಿ ಗೌಡ ನಟಿಸುತ್ತಿಲ್ಲ, ಬದಲಿಗೆ ಬೇರೊಬ್ಬ ನಟಿಯನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ. 

ಪರಮ್-ಧನಂಜಯ್ ಕನಸಿನ 'ಕೋಟಿ' ಟ್ರೇಲರ್ ರಿಲೀಸ್; ಸಿನಿಮಾ ಬಿಡುಗಡೆಗೆ ದಿನಗಣನೆ

ಕಾಂತಾರ ಚಿತ್ರದ ಡಿಜಿಟಲ್ ರೈಟ್ಸ್ 125 ಕೋಟಿ ರೂಪಾಯಿಗೆ ಅಮೆಜಾನ್ ಪ್ರೈಮ್ ವೀಡಿಯೋ ಕಂಪನಿಗೆ ಸೇಲ್‌ ಆಗಿದೆ. ಇದು ನಿಜವಾಗಿಯೂ ಎಲ್ಲರೂ ಖುಷಿ ಪಡಬೇಕಾದ ವಿಚಾರ. ಕಾರಣ, ಕೇವಲ 15-16 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಾಂತಾರ ಚಿತ್ರವು 125 ಕೋಟಿ ರೂ.ಗೆ ಸೇಲ್ ಆಗಿದ್ದು ಅಚ್ಚರಿ ಹುಟ್ಟಿಸುವ ಸಂಗತಿ. ಜತೆಗೆ, ಕಾಂತಾರ ಚಿತ್ರದ ಬಿಡುಗಡೆಯಿಂದ ಜಗತ್ತಿನಾದ್ಯಂತ 500 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿದೆ. ಇದೀಗ, ಅಚ್ಚರಿ ಹಾಗೂ ಖುಷಿ ಸಂಗತಿ ಎಂಬಂತೆ, ಕಾಂತಾರ ಚಿತ್ರದ ಡಿಜಿಟಲ್ ಹಕ್ಕು ಬರೋಬ್ಬರಿ 125 ಕೋಟಿಗೆ ಸೇಲ್ ಆಗಿದ್ದು, ಹೊಸ ದಾಖಲೆ ಬರೆದಿದೆ. 

ಮಗುವಿನೊಂದಿಗೆ ಮಗುವಾದ ಜೆಕೆ, ಯಾರ ಕಂದಮ್ಮ ಅದು?

ಕಡಿಮೆ ಬಜೆಟ್ಟಿನ ಕನ್ನಡ ಚಿತ್ರವೊಂದು ಈ ಮಟ್ಟಕ್ಕೆ ಪ್ರಖ್ಯಾತಿ ಪಡೆದು, ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿದ್ದು ಮತ್ತೊಂದು ದಾಖಲೆ ಎನ್ನಬಹುದು. ಈ ಬಗ್ಗೆ ಇಡೀ ಕಾಂತಾರ ಟೀಮ್ ಖುಷಿಯನ್ನು ಹಂಚಿಕೊಳ್ಳುವ ಕ್ಷಣ ಖಂಡಿತ ದೂರವಿಲ್ಲ. ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಜೋಡಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕಾಂತಾರ ಚಿತ್ರವು ಈ ಮೂಲಕ ಇದೀಗ ಮತ್ತೊಂದು ಮನ್ನಣೆಗೆ ಪಾತ್ರವಾಗಿದೆ. 

ಶ್ರುತಿ ಹರಿಹರನ್: ಕ್ಯಾಮೆರಾ ಮುಂದೆ ಎಲ್ಲಾ ಮರೆತೋಯ್ತು, ಮರುದಿನ ಮತ್ತೆ ಹೋದೆ!

ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರವು 'ದೈವಾರಾಧನೆ'ಗೆ ಸಂಬಂಧಿಸಿದ ವಿಷಯವನ್ನು ಒಳಗೊಂಡಿದೆ. ಈ ಚಿತ್ರವು ತನ್ನ ವಿಭಿನ್ನತೆ ಹಾಗು ಘನತೆಯಿಂದ ಅಪಾರ ಜನಮನ್ನಣೆ ಪಡೆದಿದೆ. ಈ ಚಿತ್ರವು ಕಡಿಮೆ ಬಜೆಟ್ ಹಾಗೂ ಹೆಚ್ಚಿನ ಗಳಿಕ ಮೂಲಕ ಇಡೀ ಜಗತ್ತಿನ ಗಮನವನ್ನು ಸೆಳೆದಿದೆ. ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಅವರು ಕಾಂತಾರ ಚಿತ್ರದ ಮೂಲಕ ಇಂಟರ್‌ನ್ಯಾಷನಲ್ ಖ್ಯಾತಿ ಪಡೆದುಕೊಂಡಿದ್ದಾರೆ. ಈಗ ಅವರಿಬ್ಬರನ್ನೂ ಪ್ಯಾನ್ ಇಂಡಿಯಾ ಸ್ಟಾರ್‌ಗಳೆಂದು ಕರೆಯುವುದರಲ್ಲಿ ಯಾವ ತಪ್ಪೂ ಇಲ್ಲ. 

ಬೃಂದಾವನ ವೈಂಡ್‌ಅಪ್ ಆಗೋಕೆ ವರುಣ್ ಆರಾಧ್ಯ ಕಾರಣನಾ? ಏನಂದ್ರು ರಾಮ್‌ಜಿ?
 
ಕನ್ನಡದಲ್ಲಿ ಕಡಿಮೆ ಬಜೆಟ್ಟಿನಲ್ಲಿ ನಿರ್ಮಾಣವಾಗಿ ದಾಖಲೆ ಗಳಿಕೆ ಕಂಡ ಈ ಕಾಂತಾರ ಚಿತ್ರದ ಕಥಾವಸ್ತು ಹಾಗೂ ಮೇಕಿಂಗ್ ಬಗ್ಗೆ ಇಡೀ ಜಗತ್ತು ಅಚ್ಚರಿಗೆ ಒಳಗಾಗಿದೆ. ಇಷ್ಟು ಕಡಿಮೆ ಬಜೆಟ್ಟಿನಲ್ಲಿ ಇಷ್ಟೊಂದು ಒಳ್ಳೆಯ ಸಿನಿಮಾ ಮಾಡಬಹುದೆಂದು ಕಾಂತಾರ ಹೆಸರಿನ ಕನ್ನಡ ಚಿತ್ರದ ಮೂಲಕ ಜಗತ್ತು ಕಂಡುಕೊಂಡಿದೆ. ಈಗ ಕಾಂತಾರ ಸೃಷ್ಟಿಕರ್ತ, ಅಂದರೆ ನಿರ್ದೇಶಕರಾದ ರಿಷಬ್ ಶೆಟ್ಟಿ ಈ ಚಿತ್ರದ 'ಪ್ರೀಕ್ವೆಲ್' ಅಂದರೆ ಮೊದಲ ಭಾಗದ ಸಿನಿಮಾ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. 

ಮತ್ತೊಮ್ಮೆ ಸೋತ ಗೀತಾ ಶಿವರಾಜ್ ಕುಮಾರ್, ದೊಡ್ಮನೆ ಸೊಸೆಗೆ ಒಲಿಯದ ಎಂಪಿ ಪಟ್ಟ!

ಕಾಂತಾರ ಪ್ರೀಕ್ವೆಲ್ ಸಿನಿಮಾದಲ್ಲಿ ಸೀಕ್ವೆಲ್‌ನಲ್ಲಿ ಅಂದರೆ ಕಾಂತಾರದಲ್ಲಿ ನಟಿಸಿದ್ದ ಸಪ್ತಮಿ ಗೌಡ ನಟಿಸುತ್ತಿಲ್ಲ. ಈ ಬಗ್ಗೆ ಸ್ವತಃ ಸಪ್ತಮಿ ಗೌಡ ಸಾಕಷ್ಟು ಕಡೆ ಹೇಳಿಕೊಂಡಿದ್ದಾರೆ. 'ನನ್ನ ಪಾತ್ರ ಕಾಂತಾರದಲ್ಲೇ ಕೊನೆಗೊಂಡಿದೆ. ಹೀಗಾಗಿ ಕಾಂತಾರ ಪ್ರೀಕ್ವೆಲ್‌ನಲ್ಲಿ ಸಹಜವಾಗಿಯೇ ಬೇರೆ ನಟಿಯ ಅಗತ್ಯವಿದೆ. ಹೀಗಾಗಿ ನಾನು ಅದರಲ್ಲಿ ನಟಿಸುತ್ತಿಲ್ಲ' ಎಂದಿದ್ದಾರೆ. ಅದೇನೇ ಇರಲಿ, 15 ಕೋಟಿ ರೂಪಾಯಿಯಲ್ಲಿ ನಿರ್ಮಿಸಲಾದ ಕಾಂತಾರ ಚಿತ್ರವು ಈಗ ಬರೋಬ್ಬರಿ 125 ಕೋಟಿ ರೂಪಾಯಿಗೆ ಡಿಜಿಟಲ್ ಹಕ್ಕುಗಳನ್ನು ಪಡೆದು ಎಲ್ಲರ ಅಚ್ಚರಿ ಹಾಗೂ ಸಂತೋಷಕ್ಕೆ ಕಾರಣವಾಗಿದೆ. 

Latest Videos
Follow Us:
Download App:
  • android
  • ios