ಬೃಂದಾವನ ವೈಂಡ್‌ಅಪ್ ಆಗೋಕೆ ವರುಣ್ ಆರಾಧ್ಯ ಕಾರಣನಾ? ಏನಂದ್ರು ರಾಮ್‌ಜಿ?
ನಾನಂತೂ ಸೋಷಿಯಲ್ ಮೀಡಿಯಾಗಳನ್ನು ನೋಡುವುದಿಲ್ಲ. ಹೀಗಾಗಿ ನನಗೆ ಸಾಮಾಜಿಕ ಜಾಲತಾಣಗಳಲ್ಲಿ ಹೀರೋ ಬಗ್ಗೆ, ಬದಲಾದ ವರುಣ್ ಆರಾಧ್ಯ ಬಗ್ಗೆ ಏನೆಲ್ಲ ಕಾಮೆಂಟ್ ಬಂದಿದೆ ಎಂಬುದು ತಿಳಿಯದು. ಆದರೆ, ಸೀರಿಯಲ್ ನಿಲ್ಲಲು...
ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿದ್ದ ಬೃಂದಾವನ ಸೀರಿಯಲ್ (Brundavana) ಏಕಾಏಕಿ ನಿಂತುಹೋಗಿದೆ. ಕೇವಲ 170 ಎಪಿಸೋಡ್‌ಗಳಿಗೆ ಈ ಸೀರಿಯಲ್ ನಿಂತುಹೋಗಲು ಕಾರಣವೇನು? ರಾಮ್‌ಜೀ ಅವರ ಸೀರಿಯಲ್‌ಗಳು ಎಂದರೆ ಸಾವಿರ, ಮೂರು ಸಾವಿರ, ಐದು ಸಾವಿರ ಎಪಿಸೋಡ್‌ಗಳಾದರೂ ನಿಲ್ಲುವುದಿಲ್ಲ, ಮುಂದಕ್ಕೆ ಓಡುತ್ತಲೇ ಇರುತ್ತವೆ. ಅಂಥದ್ರಲ್ಲಿ ಬೃಂದಾವನ ಇಷ್ಟು ಬೇಗ ವೈಂಡ್‌ಅಪ್ ಆಗಲು ಕಾರಣವೇನು? ಕೆಲವರ ಪ್ರಶ್ನೆ ಇದಕ್ಕೆ ಕಾರಣ ಬೃಂದಾವನ ಹೀರೋ ವರುಣ್ ಆರಾಧ್ಯ ಅವರೇನಾ? ಇದಕ್ಕೆಲ್ಲಾ ಈ ಸೀರಿಯಲ್ ನಿರ್ದೇಶಕರಾದ ರಾಮ್‌ಜೀ ಉತ್ತರ ಕೊಟ್ಟಿದ್ದಾರೆ. ಅದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ರಾಮ್‌ಜೀ (Ramji) ಈ ಬಗ್ಗೆ ಮಾತನಾಡುತ್ತ 'ಸೋಷಿಯಲ್ ಮೀಡಿಯಾಗಳಲ್ಲಿ ಹಾಗೂ ಕೆಲವರು ಈ ಸೀರಿಯಲ್ ಹೀರೋ ಬದಲಾವಣೆ ಬಗ್ಗೆ ಟೀಕೆ ಮಾಡಿದ್ದಾರೆ ಎಂಬುದನ್ನು ನಾನೂ ಕೇಳಿದ್ದೇನೆ. ಆದರೆ, ನನಗೇನೂ ಅದು ಕಾರಣ ಎನ್ನಿಸಿಲ್ಲ, ನಿರ್ದೇಶಕನಾಗಿರುವ ನನಗೆ ಸ್ಪಷ್ಟವಾಗಿ ಗೊತ್ತು, ಇದು ನಿಲ್ಲಲು ಟೆಕ್ನಿಕಲ್ ಕಾರಣ ಬಿಟ್ಟು ಬೇರೇನೂ ಇಲ್ಲ ಅಂತ. ಆದರೆ, ಈ ಸೀರಿಯಲ್‌ನಲ್ಲಿ ಹೀರೋ ಬದಲಾವಣೆ ಅನಿವಾರ್ಯವಾಗಿತ್ತು. ಕಾರಣ, ಮೊದಲು ಆಯ್ಕೆಯಾಗಿ ಶೂಟಿಂಗ್‌ನಲ್ಲಿ ಭಾಗಿಯೂ ಆಗಿದ್ದ ವಿಶ್ವನಾಥ್ ಹಾವೇರಿಗೆ ಮೈಗೆ ಹುಶಾರು ಇರಲಿಲ್ಲ. ವಿಶ್ವ ತುಂಬಾ ಒಳ್ಳೆಯ ಹುಡುಗ ಮತ್ತು ಆ ರೋಲ್‌ಗೆ ತುಂಬಾ ಆಪ್ಟ್ ಆಗುತ್ತಿದ್ದ.
ಎಂಎಲ್‌ಎ ಎಲೆಕ್ಷನ್‌ನಲ್ಲಿ ಸೋತಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ 'ಎಂಪಿ'ಯಾಗಿ ಆಯ್ಕೆಯಾಗಿದ್ದು ಹೇಗೆ?
ಬೃಂದಾವನ ಸೀರಿಯಲ್‌ನ ಮದುವೆ ಎಪಿಸೋಡ್‌ಗಳಿಗೆ 6 ದಿನಗಳು ಡೈ ಅಂಡ್ ನೈಟ್ ಶೂಟಿಂಗ್ ಮಾಡಬೇಕಿತ್ತು. ಆದರೆ, ಆಯ್ಕೆಯಾಗಿದ್ದ ನಾಯಕ ವಿಶ್ವನಿಗೆ ಹುಶಾರು ತಪ್ಪಿಬಿಟ್ಟಿತು. ಅನಾರೋಗ್ಯದಿಂದ ಬಳಲುತ್ತಿರುವ ಅವನನ್ನು ಹಾಕಿಕೊಂಡು ಡೈ ಅಂಡ್ ನೈಟ್ ಸತತವಾಗಿ ಆರು ದಿನಗಳ ಕಾಲ ಶೂಟ್ ಮಾಡಲು ಸಾಧ್ಯವೇ ಇರಲಿಲ್ಲ. ಅನಾರೋಗ್ಯದಿಂದ ಅದೆಷ್ಟು ಸಣ್ಣಗಾಗಿದ್ದ ಎಂದರೆ, ಮದುವೆ ಸೀನ್‌ನಲ್ಲಿ ತೋರಿಸೋಕೆ ಅಸಾಧ್ಯ ಎನ್ನುವಂತಾಗಿದ್ದ. ಬಳಿಕ ಮಧ್ಯರಾತ್ರಿಯ ಹುಡುಕಾಟದಲ್ಲಿ ಸಿಕ್ಕವರೇ ಈ ವರುಣ್ ಆರಾಧ್ಯ. ವರುಣ್ ಅವರನ್ನು ಹಾಕಿಕೊಂಡು ಶೂಟ್ ಮಾಡಿ ಸೀರಿಯಲ್ ಪ್ರಸಾರ ಆರಂಭಿಸಲಾಯಿತು.
ಮತ್ತೊಮ್ಮೆ ಸೋತ ಗೀತಾ ಶಿವರಾಜ್ ಕುಮಾರ್, ದೊಡ್ಮನೆ ಸೊಸೆಗೆ ಒಲಿಯದ ಎಂಪಿ ಪಟ್ಟ!
ಇನ್ನು ವರುಣ್ ಆರಾಧ್ಯ ಬಗ್ಗೆ ಹೇಳಬೇಕೆಂದರೆ, ನಟನಾಗಿ ಆತನಲ್ಲಿ ಯಾವದೇ ಸಮಸ್ಯೆ ಇರಲಿಲ್ಲ. ವೈಯಕ್ತಿಕ ಸಮಸ್ಯೆಯ ಬಗ್ಗೆ ಮಾತನಾಡುವುದು ಸರಿಯಲ್ಲ. ಯಾರದೇ ಪರ್ಸನಲ್ ಲೈಫ್ ಬಗ್ಗೆ ಯಾರೇ ಆದರೂ ಮಾತನಾಡುವುದು ತಪ್ಪು. ಹುಡುಕುತ್ತಾ ಹೋದರೆ ಎಲ್ಲರ ವೈಯಕ್ತಿಕ ಬದುಕಿನಲ್ಲೂ ಒಂದಲ್ಲ ಒಂದು ಘಟನೆಗಳು, ಸಮಸ್ಯೆಗಳು ಇದ್ದೇ ಇರುತ್ತವೆ. ಅದನ್ನೆಲ್ಲಾ ಕೆದಕುತ್ತಾ ಕುಳಿತರೆ ಮುಗಿಯುವುದೇ ಇಲ್ಲ. ಅಷ್ಟಕ್ಕೂ ಇನ್ನೊಬ್ಬರ ಬದುಕಿನಲ್ಲಿ ಇಣುಕಿ ನೋಡುವ ಅಗತ್ಯವಾದರೂ ಏನಿದೆ?
ಹಿಮಾಚಲ ಪ್ರದೇಶದ 'ಮಂಡಿ'ಯಲ್ಲಿ ಗೆದ್ದು ಸಂಸದೆಯಾದ ಬಾಲಿವುಡ್ ನಟಿ ಕಂಗನಾ ರಣಾವತ್!
ನಾನಂತೂ ಸೋಷಿಯಲ್ ಮೀಡಿಯಾಗಳನ್ನು ನೋಡುವುದಿಲ್ಲ. ಹೀಗಾಗಿ ನನಗೆ ಸಾಮಾಜಿಕ ಜಾಲತಾಣಗಳಲ್ಲಿ ಹೀರೋ ಬಗ್ಗೆ, ಬದಲಾದ ವರುಣ್ ಆರಾಧ್ಯ ಬಗ್ಗೆ ಏನೆಲ್ಲ ಕಾಮೆಂಟ್ ಬಂದಿದೆ ಎಂಬುದು ತಿಳಿಯದು. ಆದರೆ, ಸೀರಿಯಲ್ ನಿಲ್ಲಲು ಅನಿವಾರ್ಯ ಟೆಕ್ನಿಕಲ್ ಇಶ್ಯೂ ಕಾರಣ, ನಟ ವರುಣ್ ಆರಾಧ್ಯ ಅಲ್ಲ. ಕಾರಣವೇನೆಂದು ಬಹಿರಂಗವಾಗಿ ಹೇಳಲು ಅಸಾಧ್ಯ, ಅದು ಸಮಂಜಸವಲ್ಲ' ಎಂದಿದ್ದಾರೆ ಬೃಂದಾವನ ಸೀರಿಯಲ್ ನಿರ್ದೇಶಕರಾದ ರಾಮ್‌ಜೀ.