Asianet Suvarna News Asianet Suvarna News

ಸಿನಿಮಾ ಫೀಲ್ಡ್‌ಗೆ ಬರುವ ಮೊದಲು ರಕ್ಷಿತ್ ಶೆಟ್ಟಿ ಸಿಮೆಂಟ್, ಇಟ್ಟಿಗೆ ಹೊತ್ತಿದ್ದು ನಿಜವೇ?

'ಸಿಂಪಲ್‌ ಆಗ್ ಒಂದ್ ಲವ್ ಸ್ಟೋರಿ' ಮೂಲಕ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟ ರಕ್ಷಿತ್ ಶೆಟ್ಟಿ ಇಂದು ನಟ ಹಾಗೂ ನಿರ್ದೇಶಕರಾಗಿ ಬೆಳೆದಿದ್ದಾರೆ. 777 ಚಾರ್ಲಿ , ಕಿರಿಕ್ ಪರ್ಠಿ, ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಮುಂತಾದ ಸಿನಿಮಾಗಳ ಮೂಲಕ ರಕ್ಷಿತ್ ಶೆಟ್ಟಿ ಇಂದು ಮನೆಮಾತು.

Sandalwood actor and director Rakshit Shetty life journey before his cinema career srb
Author
First Published Jun 6, 2024, 4:51 PM IST

ಸ್ಯಾಂಡಲ್‌ವುಡ್ ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ (Rakshit Shetty) ಅವರು ಬೆಂಗಳೂರಿಗೆ ಬಂದ ಪ್ರಾರಂಭದಲ್ಲಿ ಕೇವಲ 12 ಸಾವಿರ ರೂಪಾಯಿಗೆ ಇಟ್ಟಿಗೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅದಕ್ಕೂ ಮೊದಲು ರಕ್ಷಿತ್ ಶೆಟ್ಟಿ ತಂದೆ ಕಂಟ್ರಾಕ್ಷರ್ ಫೀಲ್ಡ್‌ನಲ್ಲಿ ಇದ್ರಂತೆ. ಅಪ್ಪ ಕೆಲಸ ಮಾಡುತ್ತಿದ್ದ ಜಾಗಕ್ಕೆ ಬರುತ್ತಿದ್ದ ರಕ್ಷಿತ್ ಶೆಟ್ಟಿ, ತಾವು 9-10ನೇ ಕ್ಲಾಸಿನಲ್ಲಿರುವಾಗಲೇ ದಿನಕ್ಕೆ 10-15 ಸಿಮೆಂಟ್ ಮೂಟೆಗಳನ್ನು ಹೊರುತ್ತಿದ್ದರಂತೆ. ಕಟ್ಟಡಗಳನ್ನು ಕಟ್ಟುತ್ತಿದ್ದ ಜಾಗಕ್ಕೆ ಸಿಮೆಂಟ್ ಮೂಟೆಗಳನ್ನು ಅಪ್ಲೋಡ್ ಹಾಗೂ ಅನ್ಲೋಡ್ ಮಾಡುತಿದ್ದರಂತೆ ರಕ್ಷಿತ್ ಶೆಟ್ಟಿ. ಪ್ರತಿ ಸಿಮೆಂಟ್ ಮೂಟಗೆ 2 ರೂಪಾಯಿ ಕೊಡುತ್ತಿದ್ದರಂತೆ. 

ಅಂದು ದಿನಕ್ಕೆ 100 ರಿಂದ 150 ರೂಪಾಯಿ ದುಡಿಯುತ್ತಿದ್ದ ರಕ್ಷಿತ್ ಶೆಟ್ಟಿಗೆ ಅಂದು ಅದೇ ಪಾಕೆಟ್‌ ಮನಿ ಆಗಿತ್ತಂತೆ. ಬಳಿಕ ಇಟ್ಟಿಗೆ ಕಂಪನಿಯಲ್ಲಿ ಕೂಡ ತಿಂಗಳಿಗೆ 12,000 ರೂಪಾಯಿ ಸಂಪಾದನೆ ಮಾಡುತ್ತಿದ್ದ ರಕ್ಷಿತ್ ಶೆಟ್ಟಿ ಇಂದು ಇಡೀ ಭಾರತವೇ ತಿರುತಿರುಗಿ ನೋಡುವಂತೆ ಬೆಳೆದು ನಿಂತಿದ್ದಾರೆ. ಇಟ್ಟಿಗೆ ಕಂಪನಿಯಲ್ಲಿ ಕೆಲಸ ಮಾಡುವಾಗಲೇ ಕೆಲಸದ ಬಗ್ಗೆ ಸಾಕಷ್ಟು ಶ್ರದ್ಧೆ ತೋರಿಸುತ್ತಿದ್ದರಂತೆ ರಕ್ಷಿತ್ ಶೆಟ್ಟಿ. ಓದಿನಲ್ಲೂ ಮುಂದಿದ್ದ ರಕ್ಷಿತ್ ಶೆಟ್ಟಿ ಅವರು, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯನಿಕೇಶನ್ ಎಂಜಿನಿಯರಿಂಗ್ ಮುಗಿಸಿ, ಸಿನಿಮಾರಂಗಕ್ಕೆ ಬರುವ ಮೊದಲು 2 ವರ್ಷ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ. 

ಪರಮ್-ಧನಂಜಯ್ ಕನಸಿನ 'ಕೋಟಿ' ಟ್ರೇಲರ್ ರಿಲೀಸ್; ಸಿನಿಮಾ ಬಿಡುಗಡೆಗೆ ದಿನಗಣನೆ

'ಸಿಂಪಲ್‌ ಆಗ್ ಒಂದ್ ಲವ್ ಸ್ಟೋರಿ' ಮೂಲಕ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟ ರಕ್ಷಿತ್ ಶೆಟ್ಟಿ ಇಂದು ನಟ ಹಾಗೂ ನಿರ್ದೇಶಕರಾಗಿ ಬೆಳೆದಿದ್ದಾರೆ. 777 ಚಾರ್ಲಿ , ಕಿರಿಕ್ ಪರ್ಠಿ, ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಮುಂತಾದ ಸಿನಿಮಾಗಳ ಮೂಲಕ ರಕ್ಷಿತ್ ಶೆಟ್ಟಿ ಇಂದು ಮನೆಮಾತು. ಆದರೆ, ಸಿನಿಮಾ ಕೆರಿಯರ್‌ಗೆ ಮೊದಲು ಅವರು ತಮ್ಮ ಅಪ್ಪನ ರೆಲೆವೆಂಟ್‌ ಫೀಲ್ಡ್‌ನಲ್ಲಿ ಕೆಲಸ ಮಾಡಿ ಅಲ್ಲಿಯೂ ತಮ್ಮ ಶ್ರದ್ಧೆ ತೋರಿಸಿದ್ದಾರೆ. ಇದೀಗ ಒನ್ ಬೈ ಒನ್ 5 ಸಿನಿಮಾಗಳ ನಿರ್ದೇಶನಕ್ಕೆ ಪ್ಲಾನ್ ಮಾಡುತ್ತಿರುವ ರಕ್ಷಿತ್ ಶೆಟ್ಟಿ, ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. 

ಶ್ರುತಿ ಹರಿಹರನ್: ಕ್ಯಾಮೆರಾ ಮುಂದೆ ಎಲ್ಲಾ ಮರೆತೋಯ್ತು, ಮರುದಿನ ಮತ್ತೆ ಹೋದೆ!

ಕಿರಿಕ್ ಪಾರ್ಟಿ ಬೆಡಗಿ, ಇಂದು ದೇಶಾದ್ಯಂತ ಸಂಚಲನ ಸೃಷ್ಟಿಸುತ್ತಿರುವ ನಟಿ ರಶ್ಮಿಕಾ ಮಂದಣ್ಣ ಜತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು ರಕ್ಷಿತ್‌ ಶೆಟ್ಟಿ. ಆದರೆ ಆ ಮದುವೆ ಯಾಕೋ ಕೈಗೂಡಲೇ ಇಲ್ಲ. ಇಂದು ರಕ್ಷಿತ್ ಶೆಟ್ಟಿ ತಮ್ಮ ಕೆರಿಯರ್‌ನಲ್ಲಿ ಹಾಗೇ ಮುಂದಕ್ಕೆ ಸಾಗುತ್ತಿದ್ದರೆ, ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡ ಸೇರಿದಂತೆ, ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲೂ ಮಿಂಚುತ್ತಾ, ಬಾಲಿವುಡ್ ಸಿನಿಮಾಗಳಲ್ಲೂ ಭಾರೀ ಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ. ಒಟ್ಟಿನಲ್ಲಿ, ನಟ-ನಿರ್ದೇಶಕರಾಗಿರುವ ರಕ್ಷಿತ್ ಶೆಟ್ಟಿ ಜೀವನ ಯಾನ ಬಹಳ ಅಸಕ್ತಿಕರವಾಗಿದೆ ಎನ್ನಬಹುದು.

ಮಗುವಿನೊಂದಿಗೆ ಮಗುವಾದ ಜೆಕೆ, ಯಾರ ಕಂದಮ್ಮ ಅದು?

Latest Videos
Follow Us:
Download App:
  • android
  • ios