Asianet Suvarna News Asianet Suvarna News

ಕ್ಯಾಮೆರಾ ಮುಂದೆ ಏನೋ ಆಗೋಯ್ತು, ಮರುದಿನ ಮತ್ತೆ ಅದೇ ಸ್ಪಾಟ್‌ಗೇ ಹೋದೆ: ಶ್ರುತಿ ಹರಿಹರನ್!

ಪವನ್ ಕುಮಾರ್‌ ಟೆರೆಸ್‌ ಮೇಲೆ ಆಡಿಷನ್ ತಗೋತಾ ಇದ್ರು, ಕ್ಯಾಮೆರಾ ರೋಲ್ ಆನ್ ಅಂದ್ರು. ಆದ್ರೆ ಆವತ್ತು ಅದೇನಾಯ್ತೋ ಏನೋ, ನಾನು ಅಡಿಷನ್‌ನಲ್ಲಿ ಫುಲ್ ಬ್ಲಾಂಕ್ ಆಗ್ಬಿಟ್ಟೆ. ಎಲ್ಲಾ ಮರ್ತೋಯ್ತು. ಅದು ನನ್ನ ಜೀವನದ ವರ್ಸ್ಟ್ ಆಡಿಷನ್..

Actress Sruthi Hariharan says about her selection for Pavan Kumar Lucia movie srb
Author
First Published Jun 6, 2024, 1:13 PM IST

ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿ ಸದ್ಯ ತೆರೆಮರೆಯಲ್ಲಿದ್ದು, ತಾಯ್ತನವನ್ನು ಅನುಭವಿಸುತ್ತಿರುವ ನಟಿ ಶ್ರುತಿ ಹರಿಹರನ್ (Sruthi Hariharan), ಲೂಸಿಯಾ ಚಿತ್ರಕ್ಕೆ ತಾವು ಆಯ್ಕೆಯಾಗಿದ್ದು ಹೇಗೆ ಎಂಬ ಬಗ್ಗೆ ನಟಿ ಶ್ರುತಿ ಹರಿಹರನ್ ಅವರು ಹೇಳಿಕೊಂಡಿರುವ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಲೂಸಿಯಾ ಚಿತ್ರವು ಸ್ಯಾಂಡಲ್‌ವುಡ್‌ನಲ್ಲ ವಿಭಿನ್ನ ಕಂಟೆಟ್ ಮೂಲಕ ಬಹಳಷ್ಟು ಗಮನಸೆಳೆದಿತ್ತು. ಈ ಚಿತ್ರದಲ್ಲಿ ನಟ ಸತೀಶ್ ನಿನಾಸಂ ಜೋಡಿಯಾಗಿ ನಟಿ ಶ್ರುತಿ ಹರಿಹರನ್ ತೆರೆ ಹಂಚಿಕೊಂಡಿದ್ದರು. 

ಲೂಸಿಯಾ ಚಿತ್ರಕ್ಕೆ ತಾವು ಆಯ್ಕೆಯಾಗಿದ್ದು ಹೇಗೆ ಎಂಬ ಬಗ್ಗೆ ಮಾತನಾಡುತ್ತ ನಟಿ ಶ್ರುತಿ ಹರಿಹರನ್ 'ಲೂಸಿಯಾ ಚಿತ್ರಕ್ಕೆ ಆಗಷ್ಟೇ ಲೈಫು ಇಷ್ಟೇನೇ ಚಿತ್ರ ಮಾಡಿದ್ದ ಪವನ್ ಕುಮಾರ್ ಅವರು ಅಡಿಷನ್ ತಗೋತಾ ಇದ್ರು ಎಂಬ ಮಾಹಿತಿ ಸಿಕ್ತು. ತಕ್ಷಣ ನಾನು ನನ್ನ ಸ್ಕೂಟರ್‌ನಲ್ಲಿ ಅಡಿಷನ್‌ಗೆ ಹೋದೆ. ಇದೇನು ಹೀರೋಯಿನ್ ಆಗೋಳು ಸ್ಕೂಟರ್‌ನಲ್ಲಿ ಬರ್ತಿದಾಳೆ ಅಂದ್ಕೊಂಡ್ರಂತೆ. ಬಟ್, ನಾನು ಆಗ ಇದ್ದಿದ್ದೇ ಹಾಗೆ. 

ಮಗುವಿನೊಂದಿಗೆ ಮಗುವಾದ ಜೆಕೆ, ಯಾರ ಕಂದಮ್ಮ ಅದು?

ಪವನ್ ಕುಮಾರ್‌ ಟೆರೆಸ್‌ ಮೇಲೆ ಆಡಿಷನ್ ತಗೋತಾ ಇದ್ರು, ಕ್ಯಾಮೆರಾ ರೋಲ್ ಆನ್ ಅಂದ್ರು. ಆದ್ರೆ ಆವತ್ತು ಅದೇನಾಯ್ತೋ ಏನೋ, ನಾನು ಅಡಿಷನ್‌ನಲ್ಲಿ ಫುಲ್ ಬ್ಲಾಂಕ್ ಆಗ್ಬಿಟ್ಟೆ. ಎಲ್ಲಾ ಮರ್ತೋಯ್ತು. ಅದು ನನ್ನ ಜೀವನದ ವರ್ಸ್ಟ್ ಆಡಿಷನ್. ಮಾರನೆಯ ದಿನ ಮತ್ತೆ ಕಾಲ್ ಮಾಡಿ 'ಈ ಚಿತ್ರಕ್ಕೆ ಸತೀಶ್ ನೀನಾಸಂ ನಾಯಕರು. ಅವರ ಜತೆಯಲ್ಲಿ ನೀವು ಒಮ್ಮೆ ಅಡಿಷನ್ ಕೊಡಿ, ನೋಡೋಣ ಅಂದ್ರು ಪವನ್ ಕುಮಾರ್. ಸರಿ ಎಂದು ನಾನು ಹೋದೆ, ಅಡಿಷನ್ ಕೊಟ್ಟು ಬಂದೆ. ಅದು ಓಕೆ ಆಯ್ತು ಅವ್ರಿಗೆ. 

ಮಗು ಅಳ್ತಾ ಇದ್ರೆ ನಂಗೆ ಟೆನ್ಷನ್ ಆಗುತ್ತೆ, ಎಲ್ರೂ ಹಾಲು ಕೊಡು ಅಂತಾರೆ, ಆದ್ರೆ... ; ಶ್ರುತಿ ಹರಿಹರನ್

ಹೀಗೆ ನಾನು ಲೂಸಿಯಾ ಚಿತ್ರಕ್ಕೆ ಸೆಲೆಕ್ಟ್ ಆದೆ' ಎಂದು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ ನಟಿ ಶ್ರುತಿ ಹರಿಹರನ್. ಒಟ್ಟಿನಲ್ಲಿ, ಪವನ್ ಕುಮಾರ್ ನಿರ್ದೇಶನದ ಲೂಸಿಯಾ ಚಿತ್ರವು ಆ ಕಾಲದಲ್ಲಿ ಭಾರೀ ಜನಮೆಚ್ಚುಗೆ ಗಳಿಸಿತ್ತು. ಬಜೆಟ್ ಹೋಲಿಕೆಯಲ್ಲಿ ಗಳಿಕೆ ನೋಡಿದರೂ ಕೂಡ ಚಿತ್ರವು ಸೂಪರ್ ಹಿಟ್ ಅಂತಲೇ ಹೇಳಬೇಕಾಗುತ್ತದೆ. ಸ್ಮಾಲ್ ಬಜೆಟ್ ಲೂಸಿಯಾ ಸಿನಿಮಾ ಬಿಗ್ ಕಲೆಕ್ಷನ್ ಮಾಡಿದೆ ಅಂತಲೇ ಹೇಳಬಹುದು. 

ಶಿವಣ್ಣ 'ಜೋಗಿ' ಸಿನಿಮಾ ಬಗ್ಗೆ ನಟ ವಿಷ್ಣುವರ್ಧನ್‌ ಭವಿಷ್ಯ ಏನಿತ್ತು? ಆಮೇಲೆ ಏನಾಯ್ತು?

ಅಂದಹಾಗೆ, ನಟಿ ಶ್ರುತಿ ಹರಿಹರನ್ ಸದ್ಯ ಹೆಣ್ಣು ಮುಗುವೊಂದರ ತಾಯಿಯಾಗಿ ತಮ್ಮ ತಾಯ್ತನ ಹಾಗೂ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಸದ್ಯಕ್ಕೆ ಯಾವುದೇ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಹಿಂದೊಮ್ಮೆ ಅವರು ಮೀಟೂ ಅಭಿಯಾನದ ಕಾರಣಕ್ಕೆ ಸಾಕಷ್ಟು ಸುದ್ದಿಯಾಗಿದ್ದರೂ ಈಗ ಅವೆಲ್ಲವೂ ತಣ್ಣಗಾಗಿವೆ.

ಬೃಂದಾವನ ವೈಂಡ್‌ಅಪ್ ಆಗೋಕೆ ವರುಣ್ ಆರಾಧ್ಯ ಕಾರಣನಾ? ಏನಂದ್ರು ರಾಮ್‌ಜಿ? 

Latest Videos
Follow Us:
Download App:
  • android
  • ios