ಕೊನೆಯ ಸಂದರ್ಶನದಲ್ಲಿ ಪುನೀತ್ ನಟರಾದ ದರ್ಶನ್-ಸುದೀಪ್ ಬಗ್ಗೆ ಏನ್ ಹೇಳಿದ್ರು? ನಂಬೋದಕ್ಕೇ ಆಗಲ್ಲ!
ಡಾ ರಾಜ್‌ಕುಮಾರ್ ಮಗ, ಪುನೀತ್ ರಾಜ್‌ಕುಮಾರ್ ಅವರು 17 ಮಾರ್ಚ್ 1975 ರಂದು (17 March 1975) ಚೆನ್ನೈನಲ್ಲಿ ಜನಿಸಿದ್ದರು. ತಮ್ಮ 46ನೇ ವಯಸ್ಸಿನಲ್ಲಿ 29 ಅಕ್ಟೋಬರ್ 2021 (29 October 2021) ರಲ್ಲಿ ಹೃದಯ ಸ್ಥಂಭನದಿಂದ ಅಸುನೀಗಿದರು. ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಮಕ್ಕಳಾದ ವಂದಿತಾ ಹಾಗೂ ಧೃತಿ..
ದರ್ಶನ್ ಹಾಗೂ ಸುದೀಪ್ ಬಗ್ಗೆ ದಿವಂಗತ ನಟ ಪುನೀತ್ ರಾಜ್‌ಕುಮಾರ್ ಕೊನೆಯದಾಗಿ ಮಾತನಾಡಿದ್ದು ಏನು? ಈ ಬಗ್ಗೆ ಹಲವರಲ್ಲಿ ಸಹಜವಾಗಿಯೇ ಕುತೂಹಲವಿದೆ. ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಎರಡು ವರ್ಷಗಳ ಹಿಂದೆ ನಮ್ಮನ್ನಗಲಿರುವ ಪುನೀತ್ ರಾಜ್‌ಕುಮಾರ್ ಅವರು ನಟರಾದ ದರ್ಶನ-ಸುದೀಪ್ ಬಗ್ಗೆ ಮಾತನಾಡಿರುವ ವೀಡಿಯೋ ವೈರಲ್ ಆಗುತ್ತಿದೆ. ಹಾಗಿದ್ದರೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅದೇನು ಹೇಳಿದ್ದರು?
ಹೌದು, ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಮಾತುಕತೆ ವೇಳೆ ಬಂದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ನಟ ಪುನೀತ್ 'ದರ್ಶನ್ ಜೊತೆಗಾ? ವೈ ನಾಟ್..? ಒಂದು ಒಳ್ಳೆ ಕಥೆ ಬಂದು ಒಳ್ಳೇ ಕಾಂಬಿನೇಶನ್ ಚಿತ್ರ ಅಂದ್ರೆ ವಿ ವಿಲ್ ಡೆಫಿನೆಟ್ಲಿ ಡೂ' ಎಂದಿದ್ದಾರೆ. ಮುಂದೆ, 'ಸುದೀಪ್ ಅಣ್ಣ ಜತೆ? ಓಹ್, ಸುದೀಪ್ ಅಣ್ಣಾ ಜೊತೆನಲ್ಲೂ ಸಿನಿಮಾ ಮಾಡ್ಬೇಕಾ? ಖಂಡಿತ ಮಾಡೋಣ, ಅದಕ್ಕೇನಂತೆ? ಆಫ್‌ಕೋರ್ಸ್ , ನಾವೆಲ್ಲಾ ಒಟ್ಟಿಗೇ ಸಿನಿಮಾಕ್ಕೆ ಬಂದೋರು. ನಾನಿರ್ಬಹುದು, ಸುದೀಪ್ ಇರ್ಬಹುದು, ದರ್ಶನ್ ಇರ್ಬಹುದು.
ಭವಿಷ್ಯ ಮೊದಲೇ ಗೊತ್ತಿತ್ತಾ? ಹೇಗಿದ್ರೂ ಇಲ್ಲಿ ಏನ್ ಬೇಕಾದ್ರೂ ಆಗ್ಬಹುದು ಅಂದಿದ್ರು ಧನಂಜಯ್!
ಎಲ್ಲರ ಜೊತೆ ಚಾನ್ಸ್ ಸಿಕ್ಕಿದ್ರೆ ಕಂಡಿತ ಒಟ್ಟಿಗೇ ಸಿನಿಮಾ ಮಾಡೋಣ. ಅದಕ್ಕೆಲ್ಲಾ ಒಳ್ಳೊಳ್ಲೆ ಕಥೆಗಳು ಸಿಗ್ಬೇಕು ಅಷ್ಟೇನೇ. ಇಟ್ ವಿಲ್ ಬಿ ಪ್ಲೆಸರ್ ವಿತ್ ಆಲ್ ಆಫ್ ದೆಮ್. ಶಿವಣ್ಣ ಜತೆ ಒಂದೊಳ್ಳೆ ಕಥೆ ಸಿಕ್ಕಿದ್ ತಕ್ಷಣ ಶುರು. ನನಗೂ ಕೂಡ ಖುಷಿ, ಶಿವಣ್ಣ ಜೊತೆ ನಟನೆ ಮಾಡೋಕೆ. ನಾನೂ ಕೂಡ ಶಿವಣ್ಣನ ಅಭಿಮಾನಿ' ಎಂದಿದ್ದಾರೆ. ಮುಂದಿನ ಪ್ರಶ್ನೆಗೆ 'ಯಶ್ ಜೊತೆಗಾ? ಯಶ್‌ನೇ ಕೇಳಿ, ಮುಂದಿನ ಸಾರಿ ಸಿಕ್ಕಾಗ... ನಾವು ಯಾವತ್ತೂ ಸಿಕ್ಕಾಗ ಮಾತಾಡ್ತಾ ಇರ್ತೀವಿ, ಡೆಫಿನೆಟ್ಲೀ ಹ್ಯಾಪಿ' ಎಂದಿದ್ದಾರೆ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. ಆದರೆ, ಅವೆಲ್ಲವೂ ಆಗುವುದಕ್ಕೆ ಮೊದಲೇ ಅವರು ನಮ್ಮನ್ನಗಲಿದರು.
ಮಧ್ಯರಾತ್ರಿ ಕೋಣೆ ಬಾಗಿಲು ತಟ್ಟಿದ್ರು ಡಾ ರಾಜ್‌ಕುಮಾರ್; ಶಾಕ್ ಆಗಿ ಪ್ರೊಡ್ಯೂಸರ್ ಮಾಡಿದ್ದೇನು?
ಅಂದಹಾಗೆ, ಡಾ ರಾಜ್‌ಕುಮಾರ್ ಮಗ, ಪುನೀತ್ ರಾಜ್‌ಕುಮಾರ್ ಅವರು 17 ಮಾರ್ಚ್ 1975 ರಂದು (17 March 1975) ಚೆನ್ನೈನಲ್ಲಿ ಜನಿಸಿದ್ದರು. ತಮ್ಮ 46ನೇ ವಯಸ್ಸಿನಲ್ಲಿ 29 ಅಕ್ಟೋಬರ್ 2021 (29 October 2021) ರಲ್ಲಿ ಹೃದಯ ಸ್ಥಂಭನದಿಂದ ಅಸುನೀಗಿದರು. ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಮಕ್ಕಳಾದ ವಂದಿತಾ ಹಾಗೂ ಧೃತಿ ಅವರು ನಟ ಪುನೀತ್ ರಾಜ್‌ಕುಮಾರ್ ಅವರಿಂದ ದೂರವಾದರು. ದೊಡ್ಮನೆ ಕುಡಿ ಅಪ್ಪು ಖ್ಯಾತಿಯ ಪುನೀತ್ ರಾಜ್‌ಕುಮಾರ್ ಅವರನ್ನು ಕರುನಾಡು ಎಂದಿಗೂ ಮರೆಯಲು ಸಾಧ್ಯವಿಲ್ಲ.
ಹಂಸಲೇಖಾ ಚೇಂಜ್ ಓವರ್ ಬಗ್ಗೆ ಗುರುಕಿರಣ್ ಹೇಳಿದ್ದೇನು; ಯಾರದ್ದು ಕಾಂಪ್ಲಿಕೇಟೆಡ್ ಅಂದ್ರು?