Asianet Suvarna News Asianet Suvarna News

ಭವಿಷ್ಯ ಮೊದಲೇ ಗೊತ್ತಿತ್ತಾ? ಹೇಗಿದ್ರೂ ಇಲ್ಲಿ ಏನ್ ಬೇಕಾದ್ರೂ ಆಗ್ಬಹುದು ಅಂದಿದ್ರು ಧನಂಜಯ್‌!

ಯಾವ್ ಸ್ಟಾರ್ ನಟರನ್ನ ಬಿಟ್ಟಿದಾರೆ? ಹಳೇ ನಟರನ್ನ ಬಿಟ್ಟಿದಾರಾ? ಯಾರು ಯಾರನ್ನೂ ಬಿಡಲ್ಲ.. ಅವ್ರ ಸಾಡಿಸಂನ ಆಚೆ ಹಾಕೋಕೆ ಒಂದು ಜಾಗ ತರ ಸಿಕ್ಕಿಬಿಟ್ಟಿದೆ ಅದು.. ನೀವು ಎಲ್ಲಿ ಫೇಕ್ ಅಕೌಂಟ್‌ ಮಾಡ್ಕೊಂಡು.. 

Actor dolly dhananjay talks with rapid rashmi in an interview about social media problem srb
Author
First Published Jun 22, 2024, 8:55 PM IST

ಸ್ಯಾಂಡಲ್‌ವುಡ್ ನಟ ಡಾಲಿ ಖ್ಯಾತಿಯ ಧನಂಜಯ್ ಅವರು ರ್‍ಯಾಪಿಡ್ ರಶ್ಮಿ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ. ಅಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಮೂಡಿಬರುವ ಟೀಕೆ, ಕಾಮೆಂಟ್‌ಗಳ ಬಗ್ಗೆ ಮಾತನಾಡಿದ್ದಾರೆ. ಹಾಗಿದ್ರೆ ನಟ ಧನಂಜಯ್ ಆ ಬಗ್ಗೆ ಅದೇನು ಹೇಳಿದ್ದಾರೆ ಗೊತ್ತಾ? 'ಸುಮ್‌ಸುಮ್ನೆ ಕಾಂಟ್ರೋವರ್ಸಿಗಳಾದಾಗ ನಿಜ ಹೇಳ್ಬೇಕು ಅಂದ್ರೆ ಹಿಂಸೆನೇ ಆಗಿದೆ. ಅದಾದ್ಮೇಲೆ ಒಂದು ಧೈರ್ಯನೂ ಬಂತು. ಓಕೆ, ಹೇಗಿದ್ರೂ ಕೂಡ ಇಲ್ಲಿ ಏನ್ ಬೇಕಾದ್ರೂ ಆಗ್ಬಹುದು ಅಂತ.. 

ನೀವು ಎಷ್ಟೇ ಸರಿ ಇದ್ರೂ ಆಗಬಹುದು, ಹೆಂಗಿದ್ದರೂ ಆಗ್ಬಹುದು. ನೀವು ಎಷ್ಟೇ ಪ್ರೀತಿಸ್ತಾ ಇದ್ರೂನೂ ಅದೇನ್ ಬೇಕಾದ್ರೂ ಆಗ್ಬಹುದು. ನೀವು ಎಷ್ಟೇ ಆನೆಷ್ಟ್ ಆಗಿದ್ರೂ ಏನ್ ಬೇಕಾದ್ರೂ ಆಗಬಹುದು. ಆಮೇಲೆ ನಾನು ಒಂದ್ ಬಾರಿ ಯೋಚ್ನೆ ಮಾಡ್ತಾ ಬಂದೆ. ಇವತ್ತು, ಸೋಷಿಯಲ್ ಮೀಡಿಯಾ, ಅದೂ ಇದೂ ಬಂದ್ಮೇಲೆ ಯಾರನ್ನ ಬಿಟ್ಟಿದಾರೆ ಹೇಳಿ? ಹೇಳಿ ನೋಡೋಣ, ಯಾರನ್ನ ಬಿಟ್ಟಿದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಪ್ರತಿ ದಿನ ನೋಡಿದ್ರೆ, ಯಾರನ್ನ ಬಿಟ್ಟಿದಾರೆ? 

ಹಿರಿಯ ನಟ ಅನಂತ್‌ ನಾಗ್ ಬಗ್ಗೆ 'ಮೀಟೂ' ಖ್ಯಾತಿ ನಟಿ ಶ್ರುತಿ ಹರಿಹರನ್ ಹೇಳಿದ್ದೇನು?

ಯಾವ್ ಸ್ಟಾರ್ ನಟರನ್ನ ಬಿಟ್ಟಿದಾರೆ? ಹಳೇ ನಟರನ್ನ ಬಿಟ್ಟಿದಾರಾ? ಯಾರು ಯಾರನ್ನೂ ಬಿಡಲ್ಲ.. ಅವ್ರ ಸಾಡಿಸಂನ ಆಚೆ ಹಾಕೋಕೆ ಒಂದು ಜಾಗ ತರ ಸಿಕ್ಕಿಬಿಟ್ಟಿದೆ ಅದು.. ನೀವು ಎಲ್ಲಿ ಫೇಕ್ ಅಕೌಂಟ್‌ ಮಾಡ್ಕೊಂಡು.. ನೀವು ಒರಿಜಿನಲ್ ಅಂತೇನೂ ಆಗಿರಲ್ಲ. ಅವ್ರು ಯಾರು ಅಂತಾನೂ ನಿಜವಾಗಿ ಗೊತ್ತಿರಲ್ಲ. ಅದಕ್ಕೆ, ಒಂದೇ ಒಂದು ಸೊಲ್ಯೂಷನ್ ಅಂದ್ರೆ, ಅದಕ್ಕೆ ತಲೆ ಕೆಡಿಸ್ಕೊಳ್ಳೋದು ಬಿಡ್ಬೇಕು.. ಅದನ್ನ ನೋಡೋದೇ ಬಿಡ್ಬೇಕು' ಎಂದಿದ್ದಾರೆ ನಟ ಡಾಲಿ ಖ್ಯಾತಿಯ ಧನಂಜಯ್. 

ಹಂಸಲೇಖಾ ಚೇಂಜ್ ಓವರ್ ಬಗ್ಗೆ ಗುರುಕಿರಣ್ ಹೇಳಿದ್ದೇನು; ಯಾರದ್ದು ಕಾಂಪ್ಲಿಕೇಟೆಡ್ ಅಂದ್ರು?

ನಟ ಧನಂಜಯ್ ಅವ್ರು ಸದ್ಯ 'ಕೋಟಿ' ಮೂಡ್‌ನಲ್ಲಿ ಇದ್ದಾರೆ. ಅಂದರೆ, ನಟ ಧನಂಜಯ್ ನಟನೆಯ ಕೋಟಿ ಚಿತ್ರವು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪರಮ್ ನಿರ್ದೇಶನದ ಕೋಟಿ ಚಿತ್ರದಲ್ಲಿ ಬಡ ಯುವಕನೊಬ್ಬ ಪ್ರಾಮಾಣಿಕ ಪ್ರಯತ್ನದ ಮೂಲಕ ಕೋಟಿ ಸಂಪಾದನೆ ಮಾಡಿ ತನ್ನ ಕುಟುಂಬವನ್ನು ಖುಷಿಯಾಗಿಸುವ ಕತೆಯಿದೆ. ಡಾಲಿ ಧನಂಜಯ್ ಕೋಟಿ ಸಿನಿಮಾಗೆ ಸಂಬಂಧಿಸಿದ ಸಂದರ್ಶನವೊಂದರಲ್ಲಿ ಅದೇ ಸಿನಿಮಾವನ್ನು ಹೆಸರಿಸಿ, 'ನನಗೆ ನಿಜವಾಗಿಯೂ ಹೀಗೆಯೇ ಕೋಟಿ ಸಂಪಾದಿಸಬೇಕು, ಕೋಟ್ಯಧಿಪತಿ ಆಗಬೇಕು ಎಂಬ ಆಸೆಯಿದೆ' ಎಂದಿದ್ದಾರೆ. 

ಮಧ್ಯರಾತ್ರಿ ಕೋಣೆ ಬಾಗಿಲು ತಟ್ಟಿದ್ರು ಡಾ ರಾಜ್‌ಕುಮಾರ್; ಶಾಕ್ ಆಗಿ ಪ್ರೊಡ್ಯೂಸರ್ ಮಾಡಿದ್ದೇನು?

ಅಂದಹಾಗೆ, ನಟ ಧನಂಜಯ್ ಅವರು ಇಂದು ಮಾಸ್ಕ್ ಧರಿಸಿ ಮೆಟ್ರೋದಲ್ಲಿ ಸಾಮಾನ್ಯ ಜನರಂತೆ ಓಡಾಡಿದ್ದಾರೆ ಎನ್ನಲಾಗಿದೆ. ಐಷಾರಾಮಿ ಕಾರು ಬಿಟ್ಟು, ಮಾಸ್ಕ್ ಹಾಗು ಗ್ಲಾಸ್ ಧರಿಸಿದ್ದ ನಟ ಧನಂಜಯ್ ಅವರನ್ನು ಮೆಟ್ರೋದಲ್ಲಿ ಯಾರೂ ಗುರುತು ಹಿಡಿಯಲಿಲ್ಲ. ಮುಖ ಸರಿಯಾಗಿ ಕಂಡರೆ ತಾನೇ ಗುರುತು ಸಿಗುವುದು? ಒಟ್ಟಿನಲ್ಲಿ ನಟ ಧನಂಜಯ್, ತಮ್ಮ ಹೀರೋಯಿಸಂ, ಸ್ಟಾರ್‌ಗಿರಿ ಬಿಟ್ಟು ಜನಸಾಮಾನ್ಯರಂತೆ ಮೆಟ್ರೋದಲ್ಲಿ ಓಡಾಡಿ ಆ ಅನುಭವವನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. 

ಆಮೇಲೇನಾಯ್ತು ಅನ್ನೋದು ಎಲ್ರಿಗೂ ಗೊತ್ತಿರೋ ವಿಷ್ಯ, ನಾನು ಹೇಳೋದೇನಿಲ್ಲ; ಚಂದನ್ ಶೆಟ್ಟಿ ಹೀಗಂದ್ಬಿಟ್ರು!

Latest Videos
Follow Us:
Download App:
  • android
  • ios