ಏನಿದು 'ಕಾಂಪ್ಲಿಕೇಟೆಡ್' ಮ್ಯಾಟರ್..! ಹಂಸಲೇಖಾ ಚೇಂಜ್ ಓವರ್ ಬಗ್ಗೆ ಗುರುಕಿರಣ್ ಹೇಳಿದ್ದೇನು?
ಗುರುಕಿರಣ್ ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪಾರ. ಶುರುವಿನಲ್ಲಿ ಹೆಚ್ಚಾಗಿ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರ ಸಿನಿಮಾಗಳಿಗೇ ಗುರುಕಿರಣ್ ಅವರು ಸಂಗೀತ ನಿರ್ದೇಶನ ಮಾಡಿದ್ದರು. ಆದರೆ ಕಾಲಕಳೆದಂತೆ..
ಸಂದರ್ಶನವೊಂದರಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್ (Gurukiran) ಅವರು ಹಂಸಲೇಖ ಅವರ ಬಗ್ಗೆ ಮಾತನಾಡಿದ್ದಾರೆ. ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗುರುಕಿರಣ್ ಅವರು 'ನಮ್ಮ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಇಳೆಯರಾಜಾ ಫಾರ್ಮಾಟ್ ವರ್ಕ್ ಆಗ್ತಾ ಇದೆ. ಆದ್ರೆ, ಅದು ತುಂಬಾ ಕಾಂಪ್ಲಿಕೇಟೆಡ್. ಇಳೆಯರಾಜಾ ಮಾಡಿದಾಗ ಅದು ಕಾಂಪ್ಲಿಕೇಟೆಡ್ ಕೂಡ ತುಂಬಾ ಸಿಂಪಲ್ ಆಗಿ ಕಾಣಿಸುತ್ತೆ. ಹಂಸಲೇಖಾ (Hamsalekha) ಅವರು ಆ ಟೈಮ್‌ನಲ್ಲಿ, ಆ ಚೇಂಜ್ ಓವರ್ ಇದ್ಯಲ್ಲಾ, ಅದು ಗ್ರೇಟ್. ಆಡುಭಾಷೆ ಸಾಹಿತ್ಯ ಅಂತಲ್ಲ ಹಂಸಲೇಖಾ ಅವರ ಸಂಗೀತದಲ್ಲಿ!
ಹಂಸಲೇಖಾ ಅವರು ಕೊಟ್ಟ ಆಡುಭಾಷೆಯ ಸಾಹಿತ್ಯದಿಂದ ಸಿನಿಮಾ ಪ್ರೇಕ್ಷಕರಿಗೆ ಹಾಗೂ ಸಿನಿಮಾಗೆ ಕನೆಕ್ಟಿವಿಟಿ ಜಾಸ್ತಿಯಾಯ್ತು. ಅದು ನಿಜವಾಗಿಯೂ ಬಹುಮುಖ್ಯವಾದ ಬದಲಾವಣೆ. ಇನ್ನು ನಾನು ನನ್ನದೇ ಆದ ಹೊಸ ಶೈಲಿಯೊಂದನ್ನು ರೂಪಿಸಿಕೊಂಡೆ. ನನ್ನ ಉದ್ದೇಶ ಇದ್ದಿದ್ದು ಇಷ್ಟೇ, ನನ್ನ ಹಾಡುಗಳು ಯಾವತ್ತೂ ಹಳೆಯದು ಎನ್ನಿಸಬಾರದು. ಅದು ಎಲ್ಲಾ ಕಾಲಕ್ಕೂ ಸಲ್ಲುವಂತಿರಬೇಕು' ಎಂದಿದ್ದಾರೆ. 'ಹಂಸಲೇಖಾ ಅವರದು ಒಂದು ಸ್ಟಾಂಪ್ ಹಾಗು ಸೌಂಡಿಂಗ್ ಆದ್ರೆ ನಿಮ್ಮದು ಒಂಥರಾ ನ್ಯೂ ಏಜ್ ಮ್ಯೂಸಿಕ್ ಅಂತ ಬಂತು' ಎಂಬುದು ಪ್ರಶ್ನೆಯಾಗಿತ್ತು.
ಮಧ್ಯರಾತ್ರಿ ಕೋಣೆ ಬಾಗಿಲು ತಟ್ಟಿದ್ರು ಡಾ ರಾಜ್‌ಕುಮಾರ್; ಶಾಕ್ ಆಗಿ ಪ್ರೊಡ್ಯೂಸರ್ ಮಾಡಿದ್ದೇನು?
ಹೌದು, ಗುರುಕಿರಣ್ ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪಾರ. ಶುರುವಿನಲ್ಲಿ ಹೆಚ್ಚಾಗಿ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರ ಸಿನಿಮಾಗಳಿಗೇ ಗುರುಕಿರಣ್ ಅವರು ಸಂಗೀತ ನಿರ್ದೇಶನ ಮಾಡಿದ್ದರು. ಆದರೆ ಕಾಲಕಳೆದಂತೆ, ಉಪೇಂದ್ರ ನಿರ್ದೇಶನದ ಚಿತ್ರಗಳಿಗಿಂತ ಹೆಚ್ಚಾಗಿ ಉಪ್ಪಿ ನಟನೆಯ ಚಿತ್ರಗಳೇ ಹೆಚ್ಚು ತೆರೆಗೆ ಬರಲಾರಂಭಿಸಿದವು. ಗುರುಕಿರಣ್ ಸಹಜವಾಗಿಯೇ ಬೇರೆಬೇರೆ ನಿರ್ದೇಶಕರುಗಳ ಚಿತ್ರಗಳಿಗೂ ಕೆಲಸ ಮಾಡಲು ಶುರುವಿಟ್ಟುಕೊಂಡರು. ಅಲ್ಲೂ ಕೂಡ ಸಕ್ಸಸ್ ಪಡೆದುಕೊಂಡರು.
ಆಮೇಲೇನಾಯ್ತು ಅನ್ನೋದು ಎಲ್ರಿಗೂ ಗೊತ್ತಿರೋ ವಿಷ್ಯ, ನಾನು ಹೇಳೋದೇನಿಲ್ಲ; ಚಂದನ್ ಶೆಟ್ಟಿ ಹೀಗಂದ್ಬಿಟ್ರು!
ಉಪೇಂದ್ರ ನಿರ್ದೇಶನದ ಎ, ಉಪೇಂದ್ರ ಚಿತ್ರಗಳೂ ಸೇರಿದಂತೆ, ವಿಷ್ಣುವರ್ಧನ್ ನಟನೆಯ ಆಪ್ತಮಿತ್ರ, ಆಪ್ತರಕ್ಷಕ ಚಿತ್ರಗಳಿಗೂ ಸಹ ಗುರುಕಿರಣ್ ಅವರು ಸಂಗೀತ ಹಾಗೂ ಹಿನ್ನೆಲೆ ಸಂಗೀತ ಕೊಟ್ಟು ಚಿತ್ರದ ಯಶಸ್ಸಿಗೆ ಕಾರಣಕರ್ತರಾದರು. ರಾಜ್ಯಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿಗಳನ್ನೂ ಸಹ ಗುರುಕಿರಣ್ ಪಡೆದುಕೊಂಡಿದ್ದಾರೆ. ಗುರುಕಿರಣ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ, ಇತ್ತೀಚೆಗೆ ಟ್ರೆಂಡ್ ಆಗಿದ್ದ, ಕರೀಮಣಿ ಮಾಲೀಕ ನೀನಲ್ಲ ಹಾಡು ಇರಬಹುದು, ಅಥವಾ ಆಪ್ತರಕ್ಷಕ ಚಿತ್ರದ ಗರನೆಗರಗರನೆ ಹಾಡಿರಲಿ, ಬಹಳಷ್ಟು ಗೀತೆಗಳು ಗುರುಕಿರಣ್ ಪ್ರತಿಭೆಗೆ ಯಾವತ್ತು ಸಾಕ್ಷಿಯಾಗಿ ನಿಲ್ಲುತ್ತವೆ.
ಹೇಳಿಕೊಳ್ಳಲಾಗದ ಖಾಯಿಲೆಯಿಂದ ಬಳಲುತ್ತಿರುವ ನಟಿ ಅನುಷ್ಕಾ ಶೆಟ್ಟಿ, ಶುರುವಾದ್ರೆ ನಿಲ್ಲೋದೇ ಇಲ್ವಂತೆ!