ಚ್ಚ ಸುದೀಪ್ ಮಾತನಾಡಿರುವ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಅದಕ್ಕೆ ವಿಭಿನ್ನ ಕಾಮೆಂಟ್‌ಗಳು ಹರಿದು ಬರುತ್ತಿವೆ. ಎಲ್ಲವೂ ಮೆಚ್ಚುಗೆಯ ಕಾಮೆಂಟ್‌ಗಳೇ ಆಗಿದ್ದರೂ ಅದರಲ್ಲೂ ಬಹಳಷ್ಟು ವಿಭಿನ್ನತೆಗಳಿವೆ. ಹಾಗಿದ್ದರೆ ನಟ ಕಿಚ್ಚ ಸುದೀಪ್ ಅದೇನು ಹೇಳಿದ್ದಾರೆ, ಯಾವ ವಿಷಯದ..

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ (Kichcha Sudeep) ಅವರನ್ನು ಮೋಟಿವೇಶನಲ್ ಸ್ಪೀಕರ್ ಅಂತನೂ ಕರೀಬಹುದು. ಯಾಕಂದ್ರೆ, ಅವ್ರು ಆಗಾಗ, ಅಂದ್ರೆ ಕೆಲವೊಮ್ಮೆ ಸಂದರ್ಶನದಲ್ಲಿ ಹಾಗೂ ಹಲವು ಬಾರಿ ವೇದಿಕೆಗಳಲ್ಲಿ ಇನ್‌ಸ್ಫೈರ್ ಆಗುವಂಥ ಮಾತುಗಳನ್ನು ಆಡುತ್ತಲೇ ಇರುತ್ತಾರೆ. ಅದು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಲೇ ಇರುತ್ತವೆ. ಅವರ ಮಾತುಗಳನ್ನು ಮೆಚ್ಚಿ ಹಲವರು ಕಾಮೆಂಟ್ ಮಾಡುತ್ತಲೇ ಇರುತ್ತಾರೆ. ಇದೀಗ ಅಂತಹುದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಹೌದು, ಕಿಚ್ಚ ಸುದೀಪ್ ಮಾತನಾಡಿರುವ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಅದಕ್ಕೆ ವಿಭಿನ್ನ ಕಾಮೆಂಟ್‌ಗಳು ಹರಿದು ಬರುತ್ತಿವೆ. ಎಲ್ಲವೂ ಮೆಚ್ಚುಗೆಯ ಕಾಮೆಂಟ್‌ಗಳೇ ಆಗಿದ್ದರೂ ಅದರಲ್ಲೂ ಬಹಳಷ್ಟು ವಿಭಿನ್ನತೆಗಳಿವೆ. ಹಾಗಿದ್ದರೆ ನಟ ಕಿಚ್ಚ ಸುದೀಪ್ ಅದೇನು ಹೇಳಿದ್ದಾರೆ, ಯಾವ ವಿಷಯದ ಬಗ್ಗೆ ಮಾತನಾಡಿದ್ದಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ.. 

ಯುವ 'ಎಕ್ಕ' ಹಿಂದೆ ಚಿಕ್ಕಮ್ಮ, ಧೀರೆನ್ ಹಿಂದೆ ದೊಡ್ಡಮ್ಮ; ದೊಡ್ಮನೆಗೆ ಶಕ್ತಿಯಾದ ಸೊಸೆಯಂದಿರು!

'ಬನ್ನಿ, ಹೋಗಿ ಅಂತ ಏನಕ್ಕೆ ಹೇಳ್ತೀನಿ ಅಂದ್ರೆ, ಅದೇ ಅವ್ರ ಟ್ರೆಂಡ್ ಆಗ್ಬೇಕು.. ಯಾರಿಗೂ ಏಕವಚನದಲ್ಲಿ ಮಾತಾಡ್ಬೇಡಿ ಅಂತ ನಾನು ನನ್ ಮನೆಯವ್ರಿಗೂ ಕೂಡ ತುಂಬಾ ಹೇಳಿಕೊಡ್ತೀನಿ ನಾನು ಮನೆಲ್ಲಿ.. ಬೇಡಿ, ಅವ್ರು ಎಷ್ಟೇ ಕಿರಿಯರಾಗಿರ್ಲಿ, ಚಿತ್ರರಂಗದ ಕಿರಿಯರಾಗಿರ್ಲಿ, ಅಟ್‌ಲೀಸ್ಟ್ ನನಗೆ ಅದು ಬರಲ್ಲ ಸರ್.. ಎಂಥ ಹೊಸ ಹೀರೋಯಿನ್ ಬಂದ್ರೂ ನಾನು ಮೇಡಂ ಅಂತಾನೇ ಕರೆಯೋದು.. ಯಾರೇ ಆದ್ರೂ ಸರ್ ಅಂತಾನೇ ಕರೆಯೋದು.. ಯಾಕೆ ಅಂದ್ರೆ ಇದು ನಂಗೆ ಹ್ಯಾಬಿಟ್. ಆಕ್ಚ್ಯುಲಿ, ನನ್ ಪ್ರಕಾರ, ನಮ್ಗೆ ಗೌರವ ಪಡೆಯೋ ಆಸೆ ಇದ್ರೆ ಮೊದ್ಲು ಅದನ್ನು ಕೊಡೋದು ಕಲಿತ್ಕೋಬೇಕು..' ಎಂದಿದ್ದಾರೆ ಸುದೀಪ್. 

ಸುದೀಪ್ ಬಿಗ್ ಬಾಸ್ ಹೋಸ್ಟಿಂಗ್ ಮೆಚ್ಚಿ ಪ್ರಿನ್ಸಿಪಾಲ್‌ ಅವರು 'ಸುದೀಪ್ ಸರ್, 10 ವರ್ಷಗಳಿಂದ ನಾನು ಬಿಗ್ ಬಾಸ್ ಶೋ ನೋಡುತ್ತಿದ್ದೇನೆ. ಅದೂ ಕೂಡ ನಿಮಗಾಗಿ, ಶನಿವಾರ ಹಾಗೂ ರವಿವಾರದ ಶೋ ನೋಡುತ್ತಿದ್ದೇನೆ. 59 ವರ್ಷದ ನನ್ನದೇ ಶಾಲೆಯ ಪ್ರಿನ್ಸಿಪಾಲ್‌ ಆಗಿರವ ನಾನು ನಮ್ಮ ಮೀಟಿಂಗ್‌ಗಳಲ್ಲಿ ಅದೆಷ್ಟೋ ಸಾರಿ ಕಠಿಣವಾಗಿ (Rough) ಮಾತನಾಡಿಬಿಡುತ್ತಿದ್ದೆ, ಆಮೇಲೆ ಬೇಜಾರು ಮಾಡ್ಕೊತಾ ಇದ್ದೆ. ಆದರೆ, ನಿಮ್ಮ ಬಿಗ್ ಬಾಸ್ ನಿರೂಪಣೆಯಲ್ಲಿ ನಿಮ್ಮ ಕಮ್ಯುನಿಕೇಶನ್ ಕಲೆ, ವಿಷಯಗಳನ್ನು ಹ್ಯಾಂಡಲ್‌ ಮಾಡುವ ರೀತಿ, ಉಪಯೋಗಿಸುವ ಶಬ್ಧಗಳು, ನಿಮ್ಮ ವಿಭಿನ್ನ ಹಾಗೂ ಉತ್ತಮ ಕೌಶಲ್ಯ ಎಲ್ಲವನ್ನೂ ನೋಡಿ ತುಂಬಾ ಕಲಿತಿದ್ದೇನೆ. 

ವಿಜಯ್ ಫ್ಯಾಮಿಲಿಗೆ ಶ್ರೀವಲ್ಲಿ ತೋರಿಸಿದ ರಶ್ಮಿಕಾ, ಗುಸುಗುಸು ಸುದ್ದಿಗೆ ಮತ್ತೊಂದು ಮುದ್ರೆ?

ಈಗ ನಾನು ದೊಡ್ಡದೊಡ್ಡ ಮೀಟಿಂಗ್ ಮಾಡುವಾಗ ನನ್ನ ಮನದಲ್ಲಿ ನೀವು ಇರುತ್ತೀರಿ. ಯೋಚ್ನೆ ಮಾಡ್ತೀನಿ, ಮಾತಾಡ್ತೀನಿ.. ತುಂಬಾ ಮೇಚ್ಯೂರ್ಡ್ ಆಗಿದೀನಿ.. ನನ್ನ ಪ್ರೊಫೆಶನ್ ವಿಷಯದಲ್ಲಿ ನನಗೆ ನೀವು ರೋಲ್ ಮಾಡೆಲ್. ಮುಂದಿನ ಸೀಸನ್‌ನಿಂದ ಬಿಗ್ ಬಾಸ್ ನೋಡಲ್ಲ, ನಿಮ್ಮ ಸ್ಥಾನದಲ್ಲಿ ನಾನು ಬೇರೊಬ್ಬರನ್ನು ನೋಡಲು ಅಸಾಧ್ಯ. ಆದರೆ ನಾನು ನಿಮ್ಮ ನಿರ್ಧಾರವನ್ನು ಗೌರವಿಸುತ್ತೇನೆ' ಎಂದು ಕಿಚ್ಚ ಸುದೀಪ್ ಅವರಿಗೆ ಪತ್ರ ಬರೆದು ಪೋಸ್ಟ್ ಮಾಡಿದ್ದಾರೆ. ಈ ಪತ್ರದ ಪೋಸ್ಟ್‌ ಈಗ ಸಖತ್ ವೈರಲ್ ಆಗುತ್ತಿದೆ. 

ಅಂದಹಾಗೆ, ನಟ ಕಿಚ್ಚ ಸುದೀಪ್ ಅವರು ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 11 ಶೋ ನಡೆಸಿಕೊಡುತ್ತಿದ್ದಾರೆ. ಅದು ಈಗಾಗಲೇ ಎಂಟು ವಾರಗಳನ್ನು ದಾಟಿ ಮುನ್ನಡೆಯುತ್ತಿದ್ದು, 'ಮುಂದಿನ ಸೀಸನ್ ನಾನು ಹೋಸ್ಟ್ ಮಾಡೋದಿಲ್ಲ, ಇದೇ ನನ್ನ ಲಾಸ್ಟ್ ಬಿಗ್ ಬಾಸ್ ಹೋಸ್ಟಿಂಗ್' ಎಂದಿದ್ದಾರೆ ಸುದೀಪ್. ಸುದೀಪ್ ನಟನೆಯ 'ಮ್ಯಾಕ್ಸ್‌' ಚಿತ್ರವು ಈ ವರ್ಷ, ಡಿಸೆಂಬರ್ 25ರಂದು ಬಿಡುಗಡೆ ಆಗಲಿದೆ. ಮ್ಯಾಕ್ಸ್ ಚಿತ್ರದಲ್ಲಿ ವರಲಕ್ಷ್ಮೀ ಶರತ್‌ಕುಮಾರ್ ಅವರು ಕಿಚ್ಚ ಸುದೀಪ್ ಅವರಿಗೆ ನಾಯಕಿ. 

ಖ್ಯಾತ ಗಾಯಕ ಎಸ್‌ಪಿಬಿ ಅವರನ್ನೇ ಟ್ರಾಕ್ ಸಿಂಗರ್ ಮಾಡಿದ್ದ ಆ ನಟ!

Kiccha Sudeep Motivation Speech #kicchasudeep #kicchasudeepa #sudeep #kannada #sandalwood