ಖ್ಯಾತ ಗಾಯಕ ಎಸ್‌ಪಿಬಿ ಅವರನ್ನೇ ಟ್ರಾಕ್ ಸಿಂಗರ್ ಮಾಡಿದ್ದ ಆ ನಟ!

ಗ್ರೇಟ್ ಸಿಂಗರ್ ಎಸ್‌ಪಿಬಿಯವರಿಂದ ಚಿತ್ರದ 5 ಹಾಡುಗಳನ್ನು ಮೊದಲು ಹಾಡಿಸಿ ಅವರೇ ಓಕೆ ಅಂದಿದ್ದರು. ಬಳಿಕ ಅದೇನಾಯಿತೋ ಏನೋ, ಎಲ್ಲಾ ಹಾಡುಗಳನ್ನು ತಾವೇ ಹಾಡಿ ಎಸ್‌ಪಿಬಿ ಹಾಡುಗಳೇ ಇಲ್ಲದಂತೆ ಮಾಡಿಬಿಟ್ಟಿದ್ದರು. ಆ ಚಿತ್ರದ ಬಳಿಕ 'ಸಾರಥಿ' ಹೆಸರಿನಲ್ಲಿ ಮತ್ತೊಂದು ಚಿತ್ರವನ್ನು ಘೋಷಿಸಿದ್ದರು...

Kannada producer and actor Gulzar Khan makes SP Balasubrahmanyam as Track Singer srb

ಹೌದು, ಜಗತ್ಪ್ರಸಿದ್ಧ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ (SP Balasubrahmanyam) ಅವರ ಬಗ್ಗೆ ಯಾರಿಗೂ ಹೊಸದಾಗಿ ಹೇಳಬೇಕಾಗಿಯೇ ಇಲ್ಲ. ಜಗತ್ತಿನಲ್ಲಿಯೇ ಅತಿ ಹೆಚ್ಚು ಹಾಡುಗಳನ್ನು ಹಾಡಿ ಗಿನ್ನಿಸ್ ದಾಖಲೆ ನಿರ್ಮಿಸಿರುವ ಗಾಯಕರು ಎಸ್‌ಪಿ ಬಾಲಸುಬ್ರಹ್ಮಣ್ಯಂ. ಅವರಿಗೆ ಬಹಳಷ್ಟು ಖ್ಯಾತ ಗಾಯಕರೂ ಕೂಡ ಟ್ರಾಕ್ ಸಾಂಗ್ ಹಾಡಿದ್ದು ಇದೆ. ಆದರೆ, ಈ ನಟ ಹಾಗೂ ನಿರ್ಮಾಪಕ ಎಸ್‌ಪಿಬಿ ಅವರಿಂದ ಚಿತ್ರದ ಐದೂ ಹಾಡುಗಳನ್ನು ಹಾಡಿಸಿ, ಬಳಿಕ ಅದನ್ನು ತೆಗೆಸಿ ತಾನೇ ಎಲ್ಲ ಹಾಡುಗಳನ್ನು ಹಾಡಿ ಸಿನಿಮಾವನ್ನು ಬಿಡುಗಡೆ ಮಾಡಿಸಿದ್ದರು. 

ಇದೊಂದು ತುಂಬಾ ಆಸಕ್ತಿದಾಯಕ ಸ್ಟೋರಿ. ಎಸ್‌ಪಿಬಿ ಅವರನ್ನೇ ಟ್ರಾಕ್ ಸಿಂಗರ್ ಮಾಡಿದ್ದ ನಟ-ನಿರ್ಮಾಪಕ ಕನ್ನಡದವರೇ. ಅವರು ಮೂಲತಃ ಕೋಲಾರದ ಬೇತಮಂಗಲದವರು. ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ನೆಲೆಸಿದ್ದ ಅವರು ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. ಅವರು ಬೇರಾರೂ ಅಲ್ಲ, ಗುಲ್ಜಾರ್ ಖಾನ್ (Gulzar Khan). ನಿಮಗೆ ಗುಲ್ಜಾರ್ ಖಾನ್ ಎಂದರೆ ನೆನಪಾಗದಿದ್ದರೆ ಕನ್ನಡದ 'ತನಿಖೆ' ಹೆಸರಿನ ಸಿನಿಮಾವೊಂದನ್ನು ನೋಡಿ. 1994ರಲ್ಲಿ ತೆರೆಗೆ ಬಂದಿದ್ದ ಈ ಸಿನಿಮಾವನ್ನು 100 ದಿನ ಸ್ವಪ್ನಾದಲ್ಲಿ ಹಾಗೂ 25 ವಾರ ಮೂವಿಲ್ಯಾಂಡ್ ಥಿಯೇಟರ್‌ನಲ್ಲಿ ಓಡಿಸಲಾಗಿತ್ತು. 

ಯಶ್ ಟಾಕ್ಸಿಕ್ ಟೀಮ್​​ಗೆ ಬಿಗ್ ರಿಲೀಫ್ ಕೊಟ್ಟ ಹೈಕೋರ್ಟ್, ಭಾರೀ ಹಣ ಸೇಫ್!

ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಗುಲ್ಜಾರ್ ಖಾನ್ ಅವರು ತನಿಖೆ ಚಿತ್ರವನ್ನು ನಿರ್ಮಿಸಿ ಅದರಲ್ಲಿ ತಾವೇ ನಾಯಕರಾಗಿಯೂ ನಟಿಸಿ 1994ರಲ್ಲಿ ತೆರೆಗೆ ತಂದಿದ್ದರು. ಚಿಕ್ಕ ಥಿಯೇಟರ್ ಸ್ವಪ್ನಾದಲ್ಲಿ 100 ದಿನಗಳ ಪ್ರದರ್ಶನ ಮಾಡಿಸಿ ಬಳಿಕ ಅದನ್ನು ದೊಡ್ಡ ಥಿಯೇಟರ್ ಮೈವಿಲ್ಯಾಂಡ್‌ನಲ್ಲಿ 25 ವಾರಗಳ ಪ್ರದರ್ಶನ ಮಾಡಿಸಲಾಗಿತ್ತು. ಅಲ್ಲಿ ಸಿನಿಮಾ ನೋಡಲು ಬಂದ ಪ್ರೇಕ್ಷಕರಿಗೆ ಸ್ಟೀಲ್ ಟಿಫಿನ್ ಬಾಕ್ಸ್, ಸೀರೆ, ಅದೂ ಇದೂ ಗಿಫ್ಟ್ ಕೊಡಲಾಗುತ್ತಿತ್ತು. ಇಂಥ ಗುಲ್ಜಾರ್ ಖಾನ್ ಅವರು ತಮ್ಮ ಚಿತ್ರದ ಹಾಡುಗಳನ್ನು ತಾವೇ ಹಾಡಿದ್ದರು. 

ಗ್ರೇಟ್ ಸಿಂಗರ್ ಎಸ್‌ಪಿಬಿಯವರಿಂದ ಚಿತ್ರದ 5 ಹಾಡುಗಳನ್ನು ಮೊದಲು ಹಾಡಿಸಿ ಅವರೇ ಓಕೆ ಅಂದಿದ್ದರು. ಬಳಿಕ ಅದೇನಾಯಿತೋ ಏನೋ, ಎಲ್ಲಾ ಹಾಡುಗಳನ್ನು ತಾವೇ ಹಾಡಿ ಎಸ್‌ಪಿಬಿ ಹಾಡುಗಳೇ ಇಲ್ಲದಂತೆ ಮಾಡಿಬಿಟ್ಟಿದ್ದರು ಗುಲ್ಜಾರ್ ಖಾನ್. ತನಿಖೆ ಚಿತ್ರದ ಬಳಿಕ 'ಸಾರಥಿ' ಹೆಸರಿನಲ್ಲಿ ಮತ್ತೊಂದು ಚಿತ್ರವನ್ನು ಘೋಷಿಸಿದ್ದರು ನಟ-ನಿರ್ಮಾಪಕ ಗುಲ್ಜಾರ್ ಖಾನ್. ಆದರೆ, ಆ ಚಿತ್ರವು ಬರುವ ಮೊದಲು ಕೊಲೆ ಆರೋಪದಲ್ಲಿ ಗುಲ್ಜಾರ್ ಖಾನ್ ಅವರು ಜೈಲು ಸೇರಿ ಬಳಿಕ ಬಿಡುಗಡೆ ಆಗಿದ್ದರು. ಆದರೆ ಅಷ್ಟರಲ್ಲಾಗಲೇ ಅವರ ಆರೋಗ್ಯ ಹದಗೆಟ್ಟಿತ್ತು. 

ಉಪೇಂದ್ರ-ರಮ್ಯಾ ಜೋಡಿ 'ರಕ್ತ ಕಾಶ್ಮೀರ' ಚಿತ್ರದ ಬಿಡುಗಡೆ ಸೀಕ್ರೆಟ್ ಗೊತ್ತಾ?

ಅನಾರೋಗ್ಯದಿಂದ ಬಳಲುತ್ತಿದ್ದ ನಟ-ನಿರ್ಮಾಪಕ ಗುಲ್ಜಾರ್ ಖಾನ್ ಅವರು 12 ನವೆಂಬರ್ 2002ರಲ್ಲಿ ಇಹಲೋಕ ತ್ಯಜಿಸಿದ್ದಾರೆ. ಆದರೆ, ಅದೊಂದು ಅಚ್ಚರಿ ಎನಿಸುವ ದಾಖಲೆ ಅವರ ಹೆಸರಿನಲ್ಲಿ ಶಾಶ್ವತವಾಗಿ ಉಳಿದುಹೋಯಿತು. ಪ್ರಪಂಚದಲ್ಲೇ ಹೆಸರು ಮಾಡಿರುವ ಗಾಯಕ ಎಸ್‌ಪಿಬಿ ಅವರನ್ನು ಟ್ರಾಂಕ್ ಸಿಂಗರ್ ಮಾಡಿಬಿಟ್ರಲ್ಲಾ ಎಂದು ಜಗತ್ತೇ ಆಡಿಕೊಳ್ಳುವಂತಾಯಿತು. ಆದರೆ, ಅದಕ್ಕೆ ಎಸ್‌ಪಿಬಿಯವರು ಯಾವುದೇ ಪ್ರತಿಕ್ರಿಯೆ ಕೊಡಲಿಲ್ಲ, ಗುಲ್ಜಾರ್ ಖಾನ್ ಕೂಡ ಆ ಬಗ್ಗೆ ಏನೂ ಕಾಮೆಂಟ್ ಮಾಡಲಿಲ್ಲ. ಇಂತಹ ಅಪರೂಪ ಎನ್ನಿಸುವ ಸಂಗತಿ ನಡೆದಿದ್ದು ಅದೆಷ್ಟೋ ಜನರಿಗೆ ಗೊತ್ತಿರಲಿಲ್ಕಿಲ್ಲ!  

Latest Videos
Follow Us:
Download App:
  • android
  • ios