ಕಿಚ್ಚ ಸುದೀಪ್ ಹೇಳಿರುವುದೇನು ಆಗಿರುವುದೇನು? ಉಲ್ಟಾ ಪ್ರೊಜೆಕ್ಷನ್ ಅಂದ್ರೆ ಇದೇನಾ?

ನಟ ಸುದೀಪ್ ಹೇಳಿದ್ದೇನು? ಅದ್ಯಾಕೆ ಅದು ಬೇರೆಯದೇ ರೀತಿಯಲ್ಲಿ ಪ್ರೊಜೆಕ್ಟ್ ಆಗುತ್ತಿದೆ? ಇದಕ್ಕೆ ಉತ್ತರ ಇಲ್ಲಿದೆ.. ನಟ ಸುದೀಪ್ ಅವರು ಸಂದರ್ಶನವೊಂದರಲ್ಲಿ 'ನಾನು ಸ್ವಾತಿ ಮುತ್ತು ಮಾಡಿದೀನಿ, ಮೈ ಆಟೋಗ್ರಾಫ್ ಮಾಡಿದೀನಿ..

Sandalwood actor Kichcha Sudeep talk becomes wrong projection in Social Media srb

ಸ್ಯಾಂಡಲ್‌ವುಡ್ 'ಜಂಟಲ್‌ಮನ್' ಖ್ಯಾತಿ ನಟ ಕಿಚ್ಚ ಸುದೀಪ್ (Kichcha Sudeep) ಅವರು ಅದೊಂದು ಮಾತನ್ನು ತುಂಬಾ ನೋವಿನಿಂದ ನುಡಿದಿದ್ದಾರೆ. ಆದರೆ, ಆ ಮಾತನ್ನು ಆಡುವಾಗ ಸುದೀಪ್ ಅವರ ಮುಖಭಾವ ಹಾಗೂ ನೋವಿನ ನುಡಿ ಟೋನ್ ಅರ್ಥ ಮಾಡಿಕೊಳ್ಳದ ಕೆಲವರು ಅದನ್ನು ಬೇರೆಯದೇ ರೀತಿ ಬಿಂಬಿಸುತ್ತಿದ್ದಾರೆ. ಅವರು ಇನ್ನೊಬ್ಬರು ಸೂಪರ್ ಸ್ಟಾರ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ ಎಂಬ ಪುಕಾರು ಸೋಷಿಯಲ್ ಮೀಡಿಯಾಗಳಲ್ಲಿ ಹಬ್ಬುತ್ತಿದೆ. ಆದರೆ, ಸುದೀಪ್ ಈ ಮಾತಿನ ನಿಜವಾದ ಅಸಲಿಯತ್ತೇನು ಎಂಬುದು ಗೌಣವಾಗಿದೆ. 

ಹೌದು, ಸುದೀಪ್ ಅವರು ಅಂದು ಆಡಿರುವ ಮಾತು ನೋವಿನ ನುಡಿ. ಅದು ಇನ್ಯಾರೋ ಕನ್ನಡದ ಸ್ಟಾರ್‌ಗೆ ಕೊಟ್ಟ ಟಾಂಗ ಅಲ್ಲ. ಅದು ಅವರು ಮಾತನಾಡಿರುವ ಧ್ವನಿಯ ಭಾವನೆಯಲ್ಲೇ ಅರ್ಥವಾಗುವಂತಿದೆ. ಆ ಮಾತನ್ನಾಡಿದಾದ ಸುದೀಪ್ ಟೋನ್ ಗಮನಿಸಿದರೆ ಅದು ಎಂಥವರಿಗೂ ಅರ್ಥವಾಗುತ್ತದೆ. ಅವರು ಅದೇನು ಹೇಳಿದ್ದಾರೋ ಅದನ್ನು ಅವರು ನೋವಿನಿಂದ ಹಾಗೂ ದುಃಖದಿಂದ ಹೇಳಿದ್ದಾರೆ ಹೊರತೂ ಕೋಪದಿಂದಲೋ ಅಥವಾ ಟಾಂಗ ಕೊಡುವ ಉದ್ಧೇಶಕ್ಕಾಗಿಯೋ ಅಲ್ಲವೇ ಅಲ್ಲ ಎಂಬುದು ಸತ್ಯ. 

ಬರಬೇಡಿ ಅಂತ ಯಾರಿಗೆ ಯಾರೂ ಹೇಳೋಕಾಗಲ್ಲ, ಬರಲಿ ಬಿಡಿ; ನೀವು ಎರಡೂ ನೋಡಿ!

ಹಾಗಿದ್ದರೆ ನಟ ಸುದೀಪ್ ಹೇಳಿದ್ದೇನು? ಅದ್ಯಾಕೆ ಅದು ಬೇರೆಯದೇ ರೀತಿಯಲ್ಲಿ ಪ್ರೊಜೆಕ್ಟ್ ಆಗುತ್ತಿದೆ? ಇದಕ್ಕೆ ಉತ್ತರ ಇಲ್ಲಿದೆ.. ನಟ ಸುದೀಪ್ ಅವರು ಸಂದರ್ಶನವೊಂದರಲ್ಲಿ 'ನಾನು ಸ್ವಾತಿ ಮುತ್ತು ಮಾಡಿದೀನಿ, ಮೈ ಆಟೋಗ್ರಾಫ್ ಮಾಡಿದೀನಿ, ಮೈ ಆಟೋಗ್ರಾಫ್ ಮಾಡಿದೀನಿ.. ಮುಸ್ಸಂಜೆ ಮಾತು ಮಾಡಿದೀನಿ.. ಎಂತೆಂತದೋ ಸಿನಿಮಾ ಮಾಡಿ ಮೆಸೇಜ್ ಎಲ್ಲಾ ಕೊಟ್ಟೆ.. ಆದ್ರೆ ಎಲ್ಲಾ ಸೇರಿ ನನ್ ಮನೆಗೆ ಕಳಿಸಿದ್ರು.. ಆವಾಗ ಕತ್ತಿ, ಮಚ್ಚು ಹಿಡ್ಕೊಂಡವ್ರನ್ನ ತಗೊಂಡೋಗಿ ನಂಬರ್ ಒನ್, ನಂಬರ್ ಟೂ ಸ್ಥಾನ ತೋರಿಸಿದ್ರು.. ' ಎಂದಿದ್ದಾರೆ ನಟ ಸುದೀಪ್. 

ನಟ ಸುದೀಪ್ ಅವರು ಹೇಳಿರುವ ಮಾತು ಮೇಲ್ನೋಟಕ್ಕೆ ಯಾವುದೋ ಇನ್ನೊಬ್ಬ ಸ್ಟಾರ್‌ಗೆ ಟಾಂಗ್ ಕೊಟ್ಟಂತೆಯೇ ಇದೆ. ಆದರೆ, ಆ ಮಾತನ್ನು ಸುದೀಪ್ ಆಡುವಾಗ ಅವರ ಮುಖಭಾವವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದು ಟಾಂಗ್‌ ಅಲ್ಲ, ಜಸ್ಟ್ ನೋವಿನ ನುಡಿ ಎಂಬುದು ತಲೆಗೆ ಹೊಳೆಯುತ್ತದೆ. ನಟ ಸುಧಿಪ್ ಹೇಗೆಂದರೆ ಅವರು ಮಾತನ್ನು ಆಡುವಾಗ ನೇರಾನೇರವಾಗಿ ಮಾತನ್ನಾಡುತ್ತಾರೆ. ಅದು ಯಾರೊಗೋ ಕೊಡುವ ಟಾಂಗ್ ಆಗಿರೋದಿಲ್ಲ. ಆದರೆ, ಅವರ ಮಾತು ಮೇಲ್ನೋಟಕ್ಕೆ ಯಾರಿಗೋ ಸಂಬಂಧಿಸಿದಂತೆ ಇರುತ್ತದೆ. ಕಾರಣ, ಸತ್ಯ ಹೇಳಿದಾಗ ಅದು ಕೆಲವೊಮ್ಮೆ ಯಾರನ್ನೋ ಬೆರಳು ಮಾಡಿ ತೋರಿಸಿದಂತೇ ಇರುತ್ತದೆ ಎನ್ನಬಹುದು, ಏನಂತೀರಾ?

ಅವ್ರು ನಂಗೆ ಗುರುಗಳ ಸಮಾನ, ಉಪೇಂದ್ರ ಅವ್ರಿಗೇ ಇಲ್ಲದಿರೋ ತಲೆನೋವು ನಮಗ್ಯಾಕೆ?

ಒಟ್ಟಿನಲ್ಲಿ, ಸುದೀಪ್ ಅದೇನು ಮಾತನ್ನಾಡಿದರೂ ಅದಕ್ಕೆ ಕೆಲವರು ಕೆಲವೊಂದು ಬಣ್ಣ ಬಳಿದು ನೋಡುತ್ತಾರೆ. ಅದು ಸೋಷಿಯಲ್ ಮೀಡಿಯಾಗಳಲ್ಲಿ ಹಲವು ಬಣ್ಣಗಳನ್ನು ಪಡೆದು ಜಗತ್ತನ್ನೆಲ್ಲಾ ಸುತ್ತುತ್ತ ಇರುತ್ತದೆ. ಆದರೆ, ನಟ ಕಿಚ್ಚ ಸುದೀಪ್ ಮಾತ್ರ 'ನನಗೆ ಏನೂ ಆಗಿಲ್ಲ, ನಾನು ನನ್ನ ಮನಸ್ಸಿನ ಮಾತನ್ನು ಹೇಳಿದ್ದೇನೆ, ಇನ್ನೊಬ್ಬರ ಬಗ್ಗೆ ನಾನ್ಯಾಕೆ ಮಾತನ್ನಾಡಲಿ? ಅದು ಅವರ ಜೀವನ, ಅವರ ಹಣೆಬರಹ..' ಎಂಬಂತೆ ತಮ್ಮ ಜೀವನ ನಡೆಸುತ್ತ ಇರುತ್ತಾರೆ. ಇದಕ್ಕೆ 'ಕಾಲಾಯ ತಸ್ಮೈ ನಮಃ' ಎನ್ನಬಹುದೇನೋ!

Latest Videos
Follow Us:
Download App:
  • android
  • ios