ಅವ್ರು ನಂಗೆ ಗುರುಗಳ ಸಮಾನ, ಉಪೇಂದ್ರ ಅವ್ರಿಗೇ ಇಲ್ಲದಿರೋ ತಲೆನೋವು ನಮಗ್ಯಾಕೆ?
ಹಾಗಿದ್ದರೆ ಕಥೆ ಏನು? ಕಿಚ್ಚ ಸುದೀಪ್ ಅವರಿಗೆ ನಿರೂಪಕರೊಬ್ಬರು ಪ್ರಶ್ನೆ ಕೇಳಿದ್ದಾರೆ. 'ಕನ್ನಡದ ಖ್ಯಾತ ನಿರ್ದೇಶಕ ಹಾಗೂ ರಿಯಲ್ ಸ್ಟಾರ್ ಉಪೇಂದ್ರರ ಯುಐ ತೆರೆಗೆ ಬರುವ 6ನೇ ದಿನದಲ್ಲಿ ನಿಮ್ಮ ಚಿತ್ರವೂ ಬಿಡುಗಡೆ ಆಗುತ್ತಿದೆ. ಯಾಕೆ ಹೀಗೆ? ನಿಮ್ಮ ಚಿತ್ರಗಳ ಮಧ್ಯೆ ಸ್ಪರ್ಧೆ ಬೇಕಿತ್ತಾ?' ಎಂದು..
ಸ್ಯಾಂಡಲ್‌ವುಡ್ ಸ್ಟಾರ್ ನಟರಾದ ಕಿಚ್ಚ ಸುದೀಪ್ (Kichcha Sudeep) ಹಾಗೂ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರಿಬ್ಬರ ಸಿನಿಮಾ ಕೊಡುಗೆ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿರುವ ಈ ಇಬ್ಬರೂ ನಟರು ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇದೀಗ, ಅವರಿಬ್ಬರ ಮಧ್ಯೆ ಜಟಾಪಟಿ, ಸ್ಟಾರ್ ವಾರ್, ಭಾರೀ ಕದನ, ಅದೂ ಇದೂ ಅಂತ ಸುದ್ದಿಗಳು ಓಡಾಡುತ್ತಿವೆ. ಅಷ್ಟೇ ಅಲ್ಲ, ಈ ಇಬ್ಬರು ನಟರಿಗೂ ಈ ಬಗ್ಗೆ ಪ್ರಶ್ನೆ ಕೇಳಿ ಉತ್ತರ ಪಡೆಯಲಾಗುತ್ತಿದೆ. ಹಾಗಿದ್ದರೆ ಮ್ಯಾಟರ್ ಏನು?
ರಿಯಲ್ ಸ್ಟಾರ್ ಉಪೇಂದ್ರ ನಟನೆ, ನಿರ್ದೇಶನದ ಬಹುನಿರೀಕ್ಷೆಯ 'ಯುಐ' (UI) ಸಿನಿಮಾ ಡಿಸೆಂಬರ್ 20ಕ್ಕೆ ತೆರೆಗೆ ಬರೋದು ಫಿಕ್ಸ್ ಆಗಿದೆ. ಈ ನಡುವೆ ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' (Max) ಕೂಡ ರಿಲೀಸ್ಗೆ ಸಜ್ಜಾಗಿದ್ದು ಡಿಸೆಂಬರ್ 26ಕ್ಕೆ ತೆರೆಗೆ ಬರೋ ತಯಾರಿಯಲ್ಲಿದೆ. ಅಲ್ಲಿಗೆ ಒಂದೇ ವಾರದ ಗ್ಯಾಪ್ನಲ್ಲಿ ಎರಡು ಬಿಗ್ ಸ್ಟಾರ್ಗಳ ಸಿನಿಮಾ ತೆರೆಗೆ ಬರಲಿದ್ದು, ಬಾಕ್ಸ್ಆಫೀಸ್ ಫೈಟ್ ನಡೆಯೋದು ಬಹುತೇಕ ಫಿಕ್ಸ್ ಆಗಿದೆ. ಇದೀಗ ಈ ಬಗ್ಗೆಯೇ ಪ್ರಶ್ನೆಗಳು ಏಳುತ್ತಿವೆ, ಉತ್ತರಗಳು ಹೊರಬರುತ್ತಿವೆ.
ಕಿಚ್ಚ ಸುದೀಪ್ ಅಂದು ಹೇಳಿದ್ದ ಆ ಮಾತು ಇಂದು ವೈರಲ್ ಆಗ್ತಿದೆ, ಅದೇನು ಮಾಯೆಯೋ!
ಹಾಗಿದ್ದರೆ ಕಥೆ ಏನು? ಕಿಚ್ಚ ಸುದೀಪ್ ಅವರಿಗೆ ನಿರೂಪಕರೊಬ್ಬರು ಪ್ರಶ್ನೆ ಕೇಳಿದ್ದಾರೆ. 'ಕನ್ನಡದ ಖ್ಯಾತ ನಿರ್ದೇಶಕ ಹಾಗೂ ರಿಯಲ್ ಸ್ಟಾರ್ ಉಪೇಂದ್ರರ ಯುಐ ತೆರೆಗೆ ಬರುವ 6ನೇ ದಿನದಲ್ಲಿ ನಿಮ್ಮ ಚಿತ್ರವೂ ಬಿಡುಗಡೆ ಆಗುತ್ತಿದೆ. ಯಾಕೆ ಹೀಗೆ? ನಿಮ್ಮ ಚಿತ್ರಗಳ ಮಧ್ಯೆ ಸ್ಪರ್ಧೆ ಬೇಕಿತ್ತಾ?' ಎಂದು ಕೇಳಿದ್ದಾರೆ. ಅದಕ್ಕೆ ಕಿಚ್ಚ ಸುದೀಪ್ ಅವರು ಮಾರ್ಮಿಕವಾಗಿ ಉತ್ತರ ಕೊಟ್ಟಿದ್ದಾರೆ. ಆ ಉತ್ತರವನ್ನು ಅಳೆದೂ ತೂಗಿ ಕೊಟ್ಟಿರುವ ಸುದೀಪ್ ಮಾತನ್ನು ಎಲ್ಲರೂ ಕೂಡ ಅದೇ ರೀತಿ ಅಳೆದೂ-ತೂಗಿಯೇ ಅರ್ಥ ಮಾಡಿಕೊಳ್ಳಬೇಕಿದೆ.
ಹಾಗಿದ್ದರೆ ನಟ ಕಿಚ್ಚ ಸುದೀಪ್ ಅದೇನು ಹೇಳಿದ್ದಾರೆ? ಇಲ್ಲಿದೆ ನೋಡಿ ಉತ್ತರ.. 'ಹೌದು, ಒಂದೇ ವಾರದ ಅಂತರದಲ್ಲಿ ಬರುತ್ತಿದ್ದೇವೆ. ಅದಕ್ಕೆ ಸಾಕಷ್ಟು ಕಾರಣಗಳು ಇರುತ್ತವೆ. ಅದೇನೂ ನಾವಿಬ್ಬರೇ ಕುಳಿತು ನಿರ್ಧಾರ ಮಾಡಿದ್ದಲ್ಲ. ಅಲ್ಲಿ ಬಹಳಷ್ಟು ಸಂಗತಿಗಳು ಕೆಲಸ ಮಾಡಿರುತ್ತವೆ. ನಾವು ಆಗಷ್ಟ್‌ನಲ್ಲಿ ಬರಬೇಕೆಂದು ಇದ್ದೆವು, ಆದರೆ ಆಗ ಇನ್ನೊಂದು ಸಿನಿಮಾಗೆ ಸ್ಪರ್ಧೆ ತಪ್ಪಿಸಲು ಹೋಗಿ ಈಗ ಬರುವಂತಾಗಿದೆ. ಆದರೆ, ಈಗ ಮತ್ತೊಂದು ಸಿನಿಮಾಗೆ ಕಾಂಪಿಟೀಶನ್ ಕೊಡಬೇಕಾಗಿದೆ.
ಯುವ 'ಎಕ್ಕ' ಹಿಂದೆ ಚಿಕ್ಕಮ್ಮ, ಧೀರೆನ್ ಹಿಂದೆ ದೊಡ್ಡಮ್ಮ; ದೊಡ್ಮನೆಗೆ ಶಕ್ತಿಯಾದ ಸೊಸೆಯಂದಿರು!
ನಿರ್ಮಾಪಕರು ಬಡ್ಡಿಗೆ ಹಣ ತಂದು ಹಾಕಿರುತ್ತಾರೆ. ಹೀಗಾಗಿ ಅವರ ನಿರ್ಧಾರದ ಮೇಲೆ ಸಿನಿಮಾ ಬಿಡಗಡೆ ಆಗುತ್ತದೆ. ಆ ಬಗ್ಗೆ ನಾವೂ ಸೇರಿದಂತೆ ಯಾರೊಬ್ಬರೂ ಟೀಕೆ ಮಾಡುವುದು ತಪ್ಪು. ಅವರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕಿದೆ. ಅಷ್ಟಕ್ಕೂ ಕನ್ನಡ ಚಿತ್ರ ವರ್ಷದ ಕೊನೆಯಲ್ಲಿ ಎರಡು ಬಿಡುಗಡೆ ಆಗುತ್ತಿದೆ ಎಂದು ಖುಷಿ ಪಡಬೇಕು. ಕಾರಣ, ನಮ್ಮ ಕನ್ನಡ ಚಿತ್ರದ ಬರದಿದ್ದರೆ ಬೇರೆ ಭಾಷೆಯ ಚಿತ್ರಗಳು ಬರುತ್ತಿದ್ದವು. ಅಟ್‌ಲೀಸ್ಟ್ ಕನ್ನಡ ಸಿನಿಮಾಗಳು ಎರಡೆರಡು ತೆರೆಯಲ್ಲಿ ಇರುತ್ತವೆ, ವರ್ಷದ ಕೊನೆಯಲ್ಲಿ ನೋಡಬಹುದು ಎಂದು ಯಾಕೆ ಯೋಚಿಸಬಾರದು.
ಅಷ್ಟಕ್ಕೂ ಉಪೇಂದ್ರ ಅವರ ಬಗ್ಗೆ ನಾನೇನು ಹೇಳುವುದು? ಅವರ ನಿರ್ದೇಶನದ ಪ್ರತಿಭೆ, ಅವರ ಸಿನಿಮಾಕ್ಕೆ ಇರುವ ಜಾಗತಿಕ ಪಪ್ಯೂಲಾರಿಟಿಗೆ ಹೋಲಿಸಿದರೆ ನಾನೇನೂ ಅಲ್ಲ. ಉಪೇಂದ್ರ ಅವರು ನನಗೆ ಗುರುಗಳ ಸಮಾನ. ಸಿನಿಮಾದಲ್ಲಿ ಅವರ ಸಾಧನೆ, ಅವರ ಪ್ರತಿಭೆ ಎದುರು ನಾನಿನ್ನೂ ಮಗು. ಅಂಥದ್ದರಲ್ಲಿ ನಮ್ಮಿಬ್ಬರ ಮಧ್ಯೆ ಹೋಲಿಕೆ ಯಾಕೆ? ಮುಂಬರುವ ಉಪೇಂದ್ರರ 'ಯುಐ' ಸಿನಿಮಾ ಪ್ಯಾನ್ ಇಂಡಿಯಾ ಮಾತ್ರ ಅಲ್ಲ, ಅದೊಂಥರಾ 'ಪ್ಯಾನ್ ವರ್ಲ್ಡ್' ಇದ್ದ ಹಾಗೆ. ಅವರ ಸಿನಿಮಾದ ಎದುರು ನಮ್ಮ ಸಿನಿಮಾ ಏನೇನೂ ಅಲ್ಲ. ಸಿನಿಮಾ ಪ್ರೇಕ್ಷಕರು ಎರಡೂ ಸಿನಿಮಾಗಳನ್ನು ನೋಡುತ್ತಾರೆ, ಅದರಲ್ಲೇನಿದೆ?
ವಿಜಯ್ ಫ್ಯಾಮಿಲಿಗೆ ಶ್ರೀವಲ್ಲಿ ತೋರಿಸಿದ ರಶ್ಮಿಕಾ, ಗುಸುಗುಸು ಸುದ್ದಿಗೆ ಮತ್ತೊಂದು ಮುದ್ರೆ?
ಅಷ್ಟಕ್ಕೂ ನಮ್ಮ ಸಿನಿಮಾ ಬರುತ್ತಿರುವ ಬಗ್ಗೆ ಉಪೇಂದ್ರ ಅವರೇ ಏನೂ ದೂರು ಹೇಳಿಲ್ಲ. ನಿಮಗೂ ನಮಗೂ ಯಾಕೆ ತಲೆನೋವು? ನಿರ್ಮಾಪಕರುಗಳ ನಿರ್ಧಾರದಂತೆ ಎರಡು ಕನ್ನಡ ಸಿನಿಮಾಗಳು ಹೀಗೆ ವರ್ಷದ ಕೊನೆಯಲ್ಲಿ ಬರುತ್ತಿವೆ. ಅದನ್ನು ಸ್ವಾಗತಿಸೋಣ. ಹೊಸ ವರ್ಷದ ಹೊಸ್ತಿಲಲ್ಲಿ ಎರಡು ಕನ್ನಡ ಸಿನಿಮಾಗಳನ್ನು ನೋಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಆಧಾರವಾಗಿರೋಣ. ಅಲ್ಲವೇ?' ಎಂದಿದ್ದಾರೆ ನಟ ಸುದೀಪ್.