ಬರಬೇಡಿ ಅಂತ ಯಾರಿಗೆ ಯಾರೂ ಹೇಳೋಕಾಗಲ್ಲ, ಬರಲಿ ಬಿಡಿ; ನೀವು ಎರಡೂ ನೋಡಿ!

ಸ್ಟಾರ್‌ ವಾರ್ ಅಥವಾ ಬಾಕ್ಸ್ ಆಫೀಸ್ ಕದನ ಎನ್ನಲಾಗುತ್ತಿದೆ. ಆದರೆ, ಆ ಇಬ್ಬರೂ ಸ್ಟಾರ್‌ಗಳಿಗೆ ಅದನ್ನು ಹಾಗೆ ನೋಡುವುದು ಬೇಕಾಗಿಲ್ಲ. ಆ ಇಬ್ಬರೂ ಸ್ಟಾರ್‌ಗಳು ಹಾಗೆ ಪ್ರತಿಕ್ರಿಯೆ ನೀಡಿದ್ದಾರೆ. 'ನಿಮ್ಮ ಯುಐ ಹಾಗೂ ಸುದೀಪ್ ಮ್ಯಾಕ್ಸ್ ಒಟ್ಟಿಗೇ ಒಂದೇ ವಾರದ ಅಂತರದಲ್ಲಿ ಬರುತ್ತಿದೆಯಲ್ಲ?' ಎಂಬ ಪ್ರಶ್ನೆಗೆ ರಿಯಲ್ ಸ್ಟಾರ್ ಉಪ್ಪಿ ಕೂಲ್ ಆಗಿ..

Real Star Upendra talks about Kichcha Sudeep Max movie release srb

ಕನ್ನಡ ಚಿತ್ರರಂಗ ನಿಜವಾಗಿಯೂ ಬೆಳೆಯುತ್ತಿದೆ ಎನ್ನಬಹುದು. ಎರಡು ಸ್ಟಾರ್‌ಗಳ ಸಿನಿಮಾ ಒಂದೇ ವಾರದ ಅಂತರದಲ್ಲಿ ಬಿಡುಗಡೆಯಾಗುತ್ತಿದೆ. ಸ್ಟಾರ್‌ಗಳ ಸಿನಿಮಾ ತೆರೆಗೆ ಬರುತ್ತಿಲ್ಲ, ಹೊಸಬರ ಸಿನಿಮಾ ಥಿಯೇಟರ್‌ನಲ್ಲಿ ನಿಲ್ಲುತ್ತಿಲ್ಲ ಎಂಬ ಕೂಗಿನ ಮಧ್ಯೆ ಇದೀಗ 2024ರ ವರ್ಷದ ಕೊನೆಯಲ್ಲಿ ಇಬ್ಬರು ಕನ್ನಡದ ಇಬ್ಬರು ಸೂಪರ್‌ಸ್ಟಾರ್‌ಗಳ ಸಿನಿಮಾ 6 ದಿನಗಳ ಅಂತರದಲ್ಲಿ ಬರುತ್ತಿದೆ. ಹೌದು, ರಿಯಲ್ ಸ್ಟಾರ್ ಉಪೇಂದ್ರ (Real Star Upendra) ನಟನೆಯ ಯುಐ (UI) ಹಾಗೂ ಕಿಚ್ಚ ಸುದೀಪ್ (Kichcha Sudeep) ನಟನೆಯ ಮ್ಯಾಕ್ಸ್ (Max). 

ಈ ವರ್ಷದ ಕೊನೆಯಲ್ಲಿ, ಅಂದರೆ 20 ಡಿಸೆಂಬರ್ 2024ರಂದು ಉಪೇಂದ್ರ ನಟನೆಯ ಯುಐ ತೆರೆಗೆ ಬರಲಿದೆ. ಇದೇ ತಿಂಗಳ 26ರಂದು ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಬಿಡುಗಡೆ ಕಾಣಲಿದೆ. ಇದನ್ನು ಸ್ಟಾರ್‌ ವಾರ್ ಅಥವಾ ಬಾಕ್ಸ್ ಆಫೀಸ್ ಕದನ ಎನ್ನಲಾಗುತ್ತಿದೆ. ಆದರೆ, ಆ ಇಬ್ಬರೂ ಸ್ಟಾರ್‌ಗಳಿಗೆ ಅದನ್ನು ಹಾಗೆ ನೋಡುವುದು ಬೇಕಾಗಿಲ್ಲ. ಹೀಗಂತ ನಾವು ಹೇಳುತ್ತಿಲ್ಲ ಬದಲಿಗೆ, ಆ ಇಬ್ಬರೂ ಸ್ಟಾರ್‌ಗಳು ಹಾಗೆ ಪ್ರತಿಕ್ರಿಯೆ ನೀಡಿದ್ದಾರೆ. 

ಅವ್ರು ನಂಗೆ ಗುರುಗಳ ಸಮಾನ, ಉಪೇಂದ್ರ ಅವ್ರಿಗೇ ಇಲ್ಲದಿರೋ ತಲೆನೋವು ನಮಗ್ಯಾಕೆ?

'ನಿಮ್ಮ ಯುಐ ಹಾಗೂ ಸುದೀಪ್ ಮ್ಯಾಕ್ಸ್ ಒಟ್ಟಿಗೇ ಒಂದೇ ವಾರದ ಅಂತರದಲ್ಲಿ ಬರುತ್ತಿದೆಯಲ್ಲ?' ಎಂಬ ಪ್ರಶ್ನೆಗೆ ರಿಯಲ್ ಸ್ಟಾರ್ ಉಪ್ಪಿ ಕೂಲ್ ಆಗಿ ಉತ್ತರ ನೀಡಿದ್ದಾರೆ.  'ಬರಬೇಡಿ ಅಂತ ಯಾರಿಗೂ ಯಾರೂ ಹೇಳೋಕಾಗಲ್ಲ, ಬರಲಿ ಬಿಡಿ; ನೀವು ಎರಡೂ ಸಿನಿಮಾ ನೋಡಿ' ಎಂದಿದ್ದಾರೆ. ತಮಗೆ ತೂರಿ ಬಂದ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರ ನೀಡಿರುವ ಉಪೇಂದ್ರ ಅವರು 'ಸಿನಿಮಾ ಬಿಡುಗಡೆಯನ್ನು ರಜಾಗಳು ಇದ್ದಾಗ, ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡುವುದು ಸಾಮಾನ್ಯ. ಒಂದೇ ಚಿತ್ರ ಬರಬೇಕು ಅಂತೇನೂ ಇಲ್ಲ, ಎರಡೂ ಮೂರೂ ಬರಬಹುದು' ಎಂದಿದ್ದಾರೆ. 

ಈ ಬಗ್ಗೆ ನಟ ಸುದೀಪ್ 'ಹೌದು, ಒಂದೇ ವಾರದ ಅಂತರದಲ್ಲಿ ಬರುತ್ತಿದ್ದೇವೆ. ಅದಕ್ಕೆ ಸಾಕಷ್ಟು ಕಾರಣಗಳು ಇರುತ್ತವೆ. ಅದೇನೂ ನಾವಿಬ್ಬರೇ ಕುಳಿತು ನಿರ್ಧಾರ ಮಾಡಿದ್ದಲ್ಲ. ಅಲ್ಲಿ ಬಹಳಷ್ಟು ಸಂಗತಿಗಳು ಕೆಲಸ ಮಾಡಿರುತ್ತವೆ. ನಾವು ಆಗಷ್ಟ್‌ನಲ್ಲಿ ಬರಬೇಕೆಂದು ಇದ್ದೆವು, ಆದರೆ ಆಗ ಇನ್ನೊಂದು ಸಿನಿಮಾಗೆ ಸ್ಪರ್ಧೆ ತಪ್ಪಿಸಲು ಹೋಗಿ ಈಗ ಬರುವಂತಾಗಿದೆ. ಆದರೆ, ಈಗ ಮತ್ತೊಂದು ಸಿನಿಮಾಗೆ ಕಾಂಪಿಟೀಶನ್ ಕೊಡಬೇಕಾಗಿದೆ. 

ಕಿಚ್ಚ ಸುದೀಪ್ ಅಂದು ಹೇಳಿದ್ದ ಆ ಮಾತು ಇಂದು ವೈರಲ್ ಆಗ್ತಿದೆ, ಅದೇನು ಮಾಯೆಯೋ!

ನಿರ್ಮಾಪಕರು ಬಡ್ಡಿಗೆ ಹಣ ತಂದು ಹಾಕಿರುತ್ತಾರೆ. ಹೀಗಾಗಿ ಅವರ ನಿರ್ಧಾರದ ಮೇಲೆ ಸಿನಿಮಾ ಬಿಡಗಡೆ ಆಗುತ್ತದೆ. ಆ ಬಗ್ಗೆ ನಾವೂ ಸೇರಿದಂತೆ ಯಾರೊಬ್ಬರೂ ಟೀಕೆ ಮಾಡುವುದು ತಪ್ಪು. ಅವರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕಿದೆ. ಅಷ್ಟಕ್ಕೂ ಕನ್ನಡ ಚಿತ್ರ ವರ್ಷದ ಕೊನೆಯಲ್ಲಿ ಎರಡು ಬಿಡುಗಡೆ ಆಗುತ್ತಿದೆ ಎಂದು ಖುಷಿ ಪಡಬೇಕು. ಕಾರಣ, ನಮ್ಮ ಕನ್ನಡ ಚಿತ್ರದ ಬರದಿದ್ದರೆ ಬೇರೆ ಭಾಷೆಯ ಚಿತ್ರಗಳು ಬರುತ್ತಿದ್ದವು. ಅಟ್‌ಲೀಸ್ಟ್‌ ಕನ್ನಡ ಸಿನಿಮಾಗಳು ಎರಡೆರಡು ತೆರೆಯಲ್ಲಿ ಇರುತ್ತವೆ, ವರ್ಷದ ಕೊನೆಯಲ್ಲಿ ನೋಡಬಹುದು ಎಂದು ಯಾಕೆ ಯೋಚಿಸಬಾರದು. 

ಅಷ್ಟಕ್ಕೂ ಉಪೇಂದ್ರ ಅವರ ಬಗ್ಗೆ ನಾನೇನು ಹೇಳುವುದು? ಅವರ ನಿರ್ದೇಶನದ ಪ್ರತಿಭೆ, ಅವರ ಸಿನಿಮಾಕ್ಕೆ ಇರುವ ಜಾಗತಿಕ ಪಪ್ಯೂಲಾರಿಟಿಗೆ ಹೋಲಿಸಿದರೆ ನಾನೇನೂ ಅಲ್ಲ. ಉಪೇಂದ್ರ ಅವರು ನನಗೆ ಗುರುಗಳ ಸಮಾನ. ಸಿನಿಮಾದಲ್ಲಿ ಅವರ ಸಾಧನೆ, ಅವರ ಪ್ರತಿಭೆ ಎದುರು ನಾನಿನ್ನೂ ಮಗು. ಅಂಥದ್ದರಲ್ಲಿ ನಮ್ಮಿಬ್ಬರ ಮಧ್ಯೆ ಹೋಲಿಕೆ ಯಾಕೆ? ಮುಂಬರುವ ಉಪೇಂದ್ರರ 'ಯುಐ' ಸಿನಿಮಾ ಪ್ಯಾನ್ ಇಂಡಿಯಾ ಮಾತ್ರ ಅಲ್ಲ, ಅದೊಂಥರಾ 'ಪ್ಯಾನ್ ವರ್ಲ್ಡ್‌' ಇದ್ದ ಹಾಗೆ. ಅವರ ಸಿನಿಮಾದ ಎದುರು ನಮ್ಮ ಸಿನಿಮಾ ಏನೇನೂ ಅಲ್ಲ. ಸಿನಿಮಾ ಪ್ರೇಕ್ಷಕರು ಎರಡೂ ಸಿನಿಮಾಗಳನ್ನು ನೋಡುತ್ತಾರೆ, ಅದರಲ್ಲೇನಿದೆ?

ಯುವ 'ಎಕ್ಕ' ಹಿಂದೆ ಚಿಕ್ಕಮ್ಮ, ಧೀರೆನ್ ಹಿಂದೆ ದೊಡ್ಡಮ್ಮ; ದೊಡ್ಮನೆಗೆ ಶಕ್ತಿಯಾದ ಸೊಸೆಯಂದಿರು!

ಅಷ್ಟಕ್ಕೂ ನಮ್ಮ ಸಿನಿಮಾ ಬರುತ್ತಿರುವ ಬಗ್ಗೆ ಉಪೇಂದ್ರ ಅವರೇ ಏನೂ ದೂರು ಹೇಳಿಲ್ಲ. ನಿಮಗೂ ನಮಗೂ ಯಾಕೆ ತಲೆನೋವು? ನಿರ್ಮಾಪಕರುಗಳ ನಿರ್ಧಾರದಂತೆ ಎರಡು ಕನ್ನಡ ಸಿನಿಮಾಗಳು ಹೀಗೆ ವರ್ಷದ ಕೊನೆಯಲ್ಲಿ ಬರುತ್ತಿವೆ. ಅದನ್ನು ಸ್ವಾಗತಿಸೋಣ. ಹೊಸ ವರ್ಷದ ಹೊಸ್ತಿಲಲ್ಲಿ ಎರಡು ಕನ್ನಡ ಸಿನಿಮಾಗಳನ್ನು ನೋಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಆಧಾರವಾಗಿರೋಣ. ಅಲ್ಲವೇ?' ಎಂದಿದ್ದಾರೆ ನಟ ಸುದೀಪ್. 

Latest Videos
Follow Us:
Download App:
  • android
  • ios