ಪುನೀತ್‌ಗೆ ಮರಣೋತ್ತರ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಜಗ್ಗೇಶ್ ಆಗ್ರಹ
- ಉತ್ತಮ ನಟನೆ, ಸಜ್ಜನಿಕೆಯ ವ್ಯಕ್ತಿತ್ವ, ಸಮಾಜಮುಖಿ ಕಾರ್ಯ ಚಟುವಟಿಕೆ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದ ಪುನೀತ್
- ಸೇವೆ ಪರಿಗಣಿಸಿ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಮರಣೋತ್ತರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ನಟ ಜಗ್ಗೇಶ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬೆಂಗಳೂರು (ಅ.30): ಉತ್ತಮ ನಟನೆ, ಸಜ್ಜನಿಕೆಯ ವ್ಯಕ್ತಿತ್ವ, ಸಮಾಜಮುಖಿ ಕಾರ್ಯ ಚಟುವಟಿಕೆ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದ ಪುನೀತ್ ರಾಜ್‌ಕುಮಾರ್ (Puneeth Rajkumar) ಮಾದರಿಯಾಗಿ ಬದುಕಿದ್ದರು. ಕನ್ನಡಕ್ಕೆ (Kannada) ಅವರ ಸೇವೆ ಪರಿಗಣಿಸಿ ಈ ಬಾರಿಯ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಮರಣೋತ್ತರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ (Rajyotsava award) ನೀಡುವಂತೆ ಹಿರಿಯ ನಟ ಜಗ್ಗೇಶ್ (Jaggesh) ಅವರು ರಾಜ್ಯ ಸರ್ಕಾರವನ್ನು (karnataka govt) ಆಗ್ರಹಿಸಿದ್ದಾರೆ.
"
'ನಿಮ್ಮ ಸಿನಿಮಾ ನಮಗೆ Stress buster': ಜಗ್ಗೇಶ್‌ಗೆ ಪತ್ರ ಬರೆದ ಐಎಎಸ್ ಅಧಿಕಾರಿ
ಕನ್ನಡ ಚಿತ್ರರಂಗಕ್ಕೆ (Sandalwood) ಪುನೀತ್ ರಾಜ್‌ಕುಮಾರ್ ಕೊಡುಗೆ ಅಪಾರ. ಅನೇಕ ಹೊಸಬರಿಗೆ ಆಕಾಶ ಕಲ್ಪಿಸಿಕೊಟ್ಟಿದ್ದರು. ಅನಾಥಾಶ್ರಮ, ಹೆಣ್ಣು ಮಕ್ಕಳಿಗೆ ಶಿಕ್ಷಣ (Girls Education) ಸೇರಿ ಇನ್ನಿತರ ಸೇವಾ ಚಟುವಟಿಕೆಯನ್ನೂ ನಡೆಸುತ್ತಿದ್ದರು. ಇದರ ಜತೆಗೆ, ಕನ್ನಡ ಭಾಷೆ (kannada) ಸೇರಿ ಇನ್ನಿತರ ಹೋರಾಟದಲ್ಲಿ ಮುಂಚೂಣಿಯಾಗಿ, ಸಕ್ರಿಯರಾಗಿ ಭಾಗವಹಿಸುತ್ತಿದ್ದರು. ಕನ್ನಡ ಹಾಗೂ ಸ್ಥಳೀಯ ಸಂಸ್ಕೃತಿಗೆ ಒತ್ತು ನೀಡುತ್ತಿದ್ದರು. ನೇತ್ರದಾನ (Eye Donate) ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಅವರ ಸೇವೆ ಪರಿಗಣಿಸಿ ರಾಜ್ಯ ಸರ್ಕಾರವು ಈ ಸಾಲಿನ ಕನ್ನಡ ರಾಜ್ಯೊತ್ಸವ ಸಂದರ್ಭದಲ್ಲಿ ಮರಣೋತ್ತರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂದು ಕೋರುತ್ತೇನೆ ಎಂದು ಜಗ್ಗೇಶ್ ಕೋರಿದ್ದಾರೆ.
ಸಾಹಸಿ ವ್ಯಕ್ತಿತ್ವದ, ನೇರ ನುಡಿಯ ಸರಳ ಜೀವಿ
ಯಶವಂತಪುರದ ಎಪಿಎಂಸಿ (APMC) ಆವರಣದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಪುನೀತ್ ಕಳ್ಳರನ್ನು ಅಟ್ಟಿಸಿಕೊಂಡು ಹೋಗುವ ದೃಶ್ಯ. ದೂರದಿಂದ ಓಡಿ ಬಂದು ಬಂಡಿಯಿಂದ ಬಂಡಿಗೆ ಹಾರಿ, ಲಾರಿಯೊಳಗೆ ಜಿಗಿದು, ಅಲ್ಲಿಂದ ಲಾರಿಯ ಮತ್ತೊಂದು ಬಾಗಿಲಿನಿಂದ ಹೊರಗೆ ಹಾರಿ, ಕಳ್ಳರನ್ನು ಹಿಡಿಯುವ ಸನ್ನಿವೇಶವನ್ನು ಸಾಹಸ ನಿರ್ದೇಶಕ ಚಿತ್ರೀಕರಿಸಿಕೊಳ್ಳುತ್ತಿದ್ದರು. ಆ ದೃಶ್ಯದಲ್ಲಿ ಪುನೀತ್ ಎರಡು ಸಾರಿ ಓಡೋಡಿ ಬಂದು ಜಿಗಿದು ಆ ದೃಶ್ಯದಲ್ಲಿ ನಟಿಸಿದರು. ಎಲ್ಲೂ ಡ್ಯೂಪ್‌ಗಳನ್ನು ಬಳಸಲಿಲ್ಲ. ಅತ್ಯಂತ ಕಠಿಣವಾದ ಸನ್ನಿವೇಶವನ್ನೂ ತಾವೇ ನಿಭಾಯಿಸುವ ಅವರ ನಿರ್ಧಾರವನ್ನು ಪುನೀತ್ ಎಷ್ಟುಸಾಧ್ಯವೋ ಅಷ್ಟುಪಾಲಿಸಿಕೊಂಡು ಬರುತ್ತಿದ್ದರು.
ಅದೇ ದಿಟ್ಟತನವನ್ನು ಅವರು ಬದುಕಿನಲ್ಲೂ ಅನುಸರಿಸಿಕೊಂಡು ಬಂದವರು. ಪುನೀತ್ ಯಾವತ್ತೂ ಮತ್ಯಾರನ್ನೋ ಮೆಚ್ಚಿಸುವುದಕ್ಕೆಂದು ಸುಳ್ಳು ಹೇಳಲಿಲ್ಲ. ಸಿನಿಮಾ (Movie) ಚೆನ್ನಾಗಿಲ್ಲ ಅನ್ನಿಸಿದರೆ ನೇರವಾಗಿಯೇ ಚೆನ್ನಾಗಿಲ್ಲ ಎಂದು ಹೇಳುತ್ತಿದ್ದರು. ಅದು ಅವರದೇ ಚಿತ್ರವಾದರೂ ಸರಿಯೇ, ಸುಮ್ಮನೆ ಮೆಚ್ಚಿಕೊಂಡು ಮಾತಾಡುತ್ತಿರಲಿಲ್ಲ. ಅವರು ಯಾವತ್ತೂ ತನ್ನ ಸಿನಿಮಾ ಚೆನ್ನಾಗಿದೆ ಬಂದು ನೋಡಿ ಅಂದವರೇ ಅಲ್ಲ, ಬಂದು ನೋಡಿ ಚೆನ್ನಾಗಿದೆಯೋ ಎಂದು ನೀವು ಹೇಳಿ ಎನ್ನುತ್ತಿದ್ದರು.
ತನ್ನ ನಿರ್ಧಾರಗಳನ್ನು ಪುನೀತ್ ತಾನೇ ತೆಗೆದುಕೊಳ್ಳುತ್ತಿದ್ದ ನಟ. ಅವರ ಕತೆಯನ್ನು ಅವರೇ ಕೇಳುತ್ತಿದ್ದರು. ಅವರೇ ನಿರ್ಧಾರ ಮಾಡುತ್ತಿದ್ದರು. ಕತೆಗಾರರಿಂದಲೋ ನಿರ್ಮಾಪಕರಿಂದಲೋ ಅವರು ಕತೆ ಕೇಳುತ್ತಿರಲಿಲ್ಲ. ನಿರ್ದೇಶಕರೇ ಕತೆ ಹೇಳಬೇಕು ಅನ್ನುತ್ತಿದ್ದರು. ಒಮ್ಮೆ ಒಪ್ಪಿಗೆಯಾದ ಕತೆಯನ್ನು ಬದಲಾಯಿಸಲಿಕ್ಕೂ ಅವರು ಒಪ್ಪುತ್ತಿರಲಿಲ್ಲ. ಆಯಾ ಪಾತ್ರಕ್ಕೆ ಬೇಕಾದ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದ್ದರು.
ಪುನೀತ್ ಹಿಂದೆ ಮುಂದೆ ಸಾಮಾನ್ಯವಾಗಿ ಬೌನ್ಸರುಗಳಾಗಲೀ (Bouncers), ಬಾಡಿಗಾರ್ಡುಗಳಾಗಲೀ (Body Gaurd) ಇರುತ್ತಿರಲಿಲ್ಲ. ತೀರಾ ದೊಡ್ಡ ಸಮಾರಂಭವಾಗಿದ್ದರೆ ಮಾತ್ರ, ನಿರ್ಮಾಪಕರೇ ಯಾರನ್ನಾದರೂ ನಿಯೋಜಿಸುತ್ತಿದ್ದರು. ಇಲ್ಲದೇ ಹೋದರೆ ಪುನೀತ್ ಒಬ್ಬರೇ ಬರುತ್ತಿದ್ದರು. ಹೆಚ್ಚಿನ ಸಲ ತಾವೇ ಡ್ರೈವಿಂಗ್ (Driving) ಮಾಡಿಕೊಂಡು ಬಂದುಬಿಡುತ್ತಿದ್ದರು. ಮಲ್ಲೇಶ್ವರಂ (Malleshwaram) ರಸ್ತೆಗಳಲ್ಲಿ ಕಾರು ಓಡಿಸುವ, ಬನ್ನೇರುಘಟ್ಟದ (bannerughatta) ದಾರಿಯಲ್ಲಿ ಸೈಕಲ್ ಓಡಿಸುವ, ಹೆಂಡತಿ ಮಕ್ಕಳ ಜತೆ ಥೇಟ್ ಮಧ್ಯಮವರ್ಗದ ವಿಧೇಯ ಗಂಡನಂತೆ ಹೋಟೆಲಿಗೆ ಹೋಗಿ ಊಟ ಕೊಡಿಸುವುದನ್ನು ಕೂಡ ನೋಡಿದವರಿದ್ದಾರೆ.
- ಆ ಮಟ್ಟಿಗೆ ಪುನೀತ್ ನೇರನುಡಿಯ, ತಮಗನಿಸಿದ್ದನ್ನು ಮಾಡುವ, ದಿಟ್ಟತನದ ವ್ಯಕ್ತಿ.
- ಉತ್ತಮ ನಟನೆ, ಸಜ್ಜನಿಕೆಯ ವ್ಯಕ್ತಿತ್ವ, ಸಮಾಜಮುಖಿ ಕಾರ್ಯ ಚಟುವಟಿಕೆ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದ ಪುನೀತ್ ರಾಜ್‌ಕುಮಾರ್
- ಪುನೀತ್‌ಗೆ ಮರಣೋತ್ತರ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಜಗ್ಗೇಶ್ ಆಗ್ರಹ
- ಹೊಸಬರಿಗೆ ಆಕಾಶ ಕಲ್ಪಿಸಿಕೊಟ್ಟಿದ್ದರು. ಅನಾಥಾಶ್ರಮ, ಹೆಣ್ಣು ಮಕ್ಕಳಿಗೆ ಶಿಕ್ಷಣ ಸೇರಿ ಇನ್ನಿತರ ಸೇವಾ ಚಟುವಟಿಕೆಯನ್ನೂ ನಡೆಸುತ್ತಿದ್ದರು
- ಅನೇಕ ಹೊಸಬರಿಗೆ ಆಕಾಶ ಕಲ್ಪಿಸಿಕೊಟ್ಟಿದ್ದರು. ಅನಾಥಾಶ್ರಮ, ಹೆಣ್ಣು ಮಕ್ಕಳಿಗೆ ಶಿಕ್ಷಣ ಸೇರಿ ಇನ್ನಿತರ ಸೇವಾ ಚಟುವಟಿಕೆಯನ್ನೂ ನಡೆಸುತ್ತಿದ್ದರು