Asianet Suvarna News Asianet Suvarna News

ಅಪ್ಪುವಿಗೆ ಕೊನೆಗೂ ಈಡೇರದ ಈ ಕನಸು

  • ನಮ್ಮನ್ನಗಲಿದ ನಟ ಪುನೀತ್ ರಾಜ್‌ಕುಮಾರ್ ಫಾರ್ಮ್ ಹೌಸ್ ನಿರ್ಮಾಣ ಮಾಡುವ ಕನಸೊಂದನ್ನು ಬಿಟ್ಟು ಹೋಗಿದ್ದಾರೆ
  • ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಮಂಚನಾಯಕನಹಳ್ಳಿಯಲ್ಲಿ ಫಾರ್ಮ್ ಹೌಸ್ ನಿರ್ಮಾಣ ಮಾಡಬೇಕೆಂಬ ಕನಸು ಕಟ್ಟಿಕೊಂಡಿದ್ದ ನಟ ಪುನೀತ್
Actor Puneeth rajkumar Bidadi Farmhouse dream  did not fulfilled snr
Author
Bengaluru, First Published Oct 30, 2021, 11:40 AM IST
  • Facebook
  • Twitter
  • Whatsapp

ವರದಿ :  ಎಂ.ಅಫ್ರೋಜ್ ಖಾನ್ 

  ರಾಮನಗರ (ಅ.30):  ನಮ್ಮನ್ನಗಲಿದ ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ಫಾರ್ಮ್ ಹೌಸ್ (Farm House) ನಿರ್ಮಾಣ ಮಾಡುವ ಕನಸೊಂದನ್ನು ಬಿಟ್ಟು ಹೋಗಿದ್ದಾರೆ. ರಾಮನಗರ (Ramanagara) ಜಿಲ್ಲೆಯ ಬಿಡದಿ (Bidadi) ಹೋಬಳಿಯ ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿ (Grama panchayat) ವ್ಯಾಪ್ತಿಯ ಶೇಷಗಿರಿಹಳ್ಳಿಯ ಸರ್ವೇ ಸಂಖ್ಯೆ 72 ಹಾಗೂ 73ಕ್ಕೆ ಸೇರಿದ ಸುಮಾರು 16 ಎಕರೆ ಜಮೀನಿನಲ್ಲಿ (Land) ಫಾರ್ಮ್ ಹೌಸ್ ನಿರ್ಮಾಣ ಮಾಡಬೇಕೆಂಬ ಕನಸು ಕಟ್ಟಿಕೊಂಡಿದ್ದ ನಟ ಪುನೀತ್ ರಾಜ್‌ಕುಮಾರ್ ಅವರ ಕನಸು (Dream) ಕನಸಾಗಿಯೇ ಉಳಿದುಕೊಂಡಿದೆ. 

ದಿವಂಗತ ಡಾ ರಾಜ್ ಕುಮಾರ್ (Dr Rajkumar) ಅವರು ಮೈಸೂರಿಗೆ (Mysuru) ಶೂಟಿಂಗ್‌ಗೆ ತೆರಳುವ ಸಂದರ್ಭದಲ್ಲಿ ಬಿಡದಿಯಲ್ಲಿ ತಟ್ಟೆ ಇಡ್ಲಿ ಸೇವಿಸಿಯೇ ಮುಂದೆ ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಡಾ ರಾಜ್ ಇಲ್ಲೊಂದು ಜಮೀನು ಖರೀದಿಸುವ ಯೋಚನೆ ಮಾಡಿ 16 ಎಕರೆ ಜಾಗವನ್ನು ಶೇಷಗಿರಿಹಳ್ಳಿಯಲ್ಲಿ ಖರೀದಿ ಸಿದ್ದರು. 

"

ಗಣಿ ನಾಡು ಬಳ್ಳಾರಿ ಜತೆ ನಿಕಟ ಸಂಪರ್ಕ ಹೊಂದಿದ್ದ ಅಪ್ಪು..!

ನಂತರ ಈ ಜಮೀನಿನ ಸಂಪೂರ್ಣ ಉಸ್ತುವಾರಿಯನ್ನು ತಮ್ಮ ಕಿರಿಯ ಪುತ್ರ ಪುನೀತ್ ರಾಜ್‌ಕುಮಾರ್ ಅವರಿಗೆ ವಹಿಸಿಕೊಟ್ಟಿದ್ದರು ಎನ್ನಲಾಗಿದೆ. ಪುನೀತ್ ತಮ್ಮ ತಂದೆ ಹಾಗೂ ತಮ್ಮ ಅಚ್ಚುಮೆಚ್ಚಿನ ಜಾಗದಲ್ಲಿ ಒಂದು ಒಳ್ಳೆಯ ಫಾರ್ಮ್ ಹೌಸ್ ನಿರ್ಮಾಣ ಮಾಡಬೇಕೆಂಬ ಕನಸು ಕಟ್ಟಿಕೊಂಡಿದ್ದರು. ಈ ನಡುವೆ ನೂತನ ಬೆಂಗಳೂರು (Bengaluru) ಮೈಸೂರು (Mysuru) ಹೆದ್ದಾರಿಗೆ ಇವರ ಜಮೀನಿನ ಅಲ್ಪ ಭಾಗ ಕೂಡ ಹೋಗಿತ್ತು.

 ಹೆದ್ದಾರಿಯ ಎಲ್ಲಾ ಕಾಮಗಾರಿಗಳು ಮುಗಿದ ನಂತರ ಇಲ್ಲೊಂದು ಫಾರ್ಮ್ ಹೌಸ್ ನಿರ್ಮಾಣ ಮಾಡಬೇಕೆಂದು ಅಪ್ಪು ಕನಸು ಕಟ್ಟಿಕೊಂಡಿದ್ದರು. ಕೊನೆಗೂ ಪವರ್ ಸ್ಟಾರ್ ಕನಸು ಈಗ ಕನಸಾಗಿಯೇ ಉಳಿದಿದೆ.  

ಹೊಸ ಅಲೆಯ ಚಿತ್ರ ನಿರ್ಮಾಣದ ಹಂಬಲ ಹೊಂದಿದ್ದರು

ನಟರಾಗಿದ್ದುಕೊಂಡೇ ಚಿತ್ರರಂಗದ ಅಭಿವೃದ್ಧಿಗಾಗಿ ಬಹು ದೊಡ್ಡ ಕನಸು ಕಂಡಿದ್ದವರು ಪುನೀತ್‌ ರಾಜ್‌ಕುಮಾರ್‌. ಕ್ಲಾಸಿಕ್‌ ಕತೆಗಳನ್ನು ಸಿನಿಮಾ ಮಾಡಬೇಕು, ಹೊಸ ಹೊಸ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಅವಕಾಶ ಕೊಡಬೇಕು, ಕನ್ನಡದಲ್ಲೂ ಇಂಗ್ಲಿಷ್‌ ಮಾದರಿಯ ಸಿನಿಮಾಗಳನ್ನು ನಿರ್ಮಿಸುವ ಬಹು ದೊಡ್ಡ ಕನಸು ಕಂಡಿದ್ದರು. ಆ ಉದ್ದೇಶದಿಂದಲೇ ತಮ್ಮ ಸಾರಥ್ಯದಲ್ಲಿ ಪಿಆರ್‌ಕೆ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಲಾ, ಫ್ರೆಂಚ್‌ ಬಿರಿಯಾನಿ, ಮಾಯಾಬಜಾರ್‌, ಕವಲುದಾರಿ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದರು. ಅಲ್ಲದೆ ಹೊಸಬರ ಚಿತ್ರಗಳ ಆಡಿಯೋಗೂ ಮಾರುಕಟ್ಟೆ ಮಾಡುತ್ತಿದ್ದರು. ಆ ಮೂಲಕ ಕನ್ನಡ ಚಿತ್ರರಂಗಕ್ಕೆ ಕಂಟೆಂಟ್‌ ಆಧಾರಿತ ಸಿನಿಮಾಗಳು ಹೆಚ್ಚೆಚ್ಚು ಬರಬೇಕು ಎಂದು ಕನಸು ಕಂಡಿದ್ದರು.

ಅಪ್ಪನ ರೀತಿ ಯೋಗ ಮಾಡಬೇಕು ಅಂತಿದ್ದರು;ದೇಹವನ್ನು ಫ್ಲೆಕ್ಸಿಬಲ್‌ ಆಗಿಸಲು ಶ್ರಮಿಸುತ್ತಿದ್ದರು Puneeth Rajkumar!

ಪಿಆರ್‌ಕೆ ನಿರ್ಮಾಣದ ಎಸ್‌.ಅರ್ಜುನ್‌ ಕುಮಾರ್‌ ನಿರ್ದೇಶನದ ಇನ್ನೊಂದು ಚಿತ್ರ ‘ಫ್ಯಾಮಿಲಿ ಪ್ಯಾಕ್‌’ ಬಿಡುಗಡೆಯ ಹಾದಿಯಲ್ಲಿದೆ. ಇನ್ನೂ ಹಲವಾರು ಪ್ರಯೋಗಾತ್ಮಕ ಕನ್ನಡ ಸಿನಿಮಾ ನಿರ್ಮಾಣಕ್ಕೂ ಪಿಆರ್‌ಕೆ ಪ್ರೊಡಕ್ಷನ್‌ ಹೌಸ್‌ ಮುಂದಾಗಿತ್ತು. ಸಾಕಷ್ಟುಸಿನಿಮಾಗಳ ಆಡಿಯೋಗಳನ್ನೂ ಸಹ ಈ ಬ್ಯಾನರ್‌ನಿಂದ ಬಿಡುಗಡೆ ಮಾಡಲಾಗಿದೆ.

ರಾಜ್‌ ಬಯೋಪಿಕ್‌ಗೆ ನಿರ್ಧಾರ:

ಅಲ್ಲದೆ ತಂದೆ ವರನಟ ಡಾ.ರಾಜ್‌ಕುಮಾರ್‌ ಅವರ ಬಯೋಪಿಕ್‌ ನಿರ್ಮಿಸುವ ಆಸೆ ಪುನೀತ್‌ ಅವರಲ್ಲಿ ಇತ್ತು. ಪಿಆರ್‌ಕೆ ಪ್ರೊಡಕ್ಷನ್‌ ಅಡಿಯೇ ನಿರ್ಮಿಸಬೇಕೆಂಬ ಅಭಿಲಾಷೆ ಹೊಂದಿದ್ದರು. ‘ಅಪ್ಪಾಜಿ ಬಯೋಪಿಕ್‌ ಮಾಡುವ ಆಸೆ ಇದೆ. ಅದೊಂದು ದೊಡ್ಡ ಪ್ರಾಜೆಕ್ಟ್. ಸೂಕ್ತ ಕಲಾವಿದರು ಬೇಕು. ಅದಕ್ಕೊಂದು ಯೋಜನೆ ರೂಪಿಸಬೇಕು. ಅಂತಹ ಅವಕಾಶ ಲಭಿಸಿದರೆ ಖಂಡಿತ ಹಿಂದೆ ಸರಿಯುವುದಿಲ್ಲ’ ಎಂದು ಪುನೀತ್‌ ಹಲವು ಬಾರಿ ಹೇಳಿಕೊಂಡಿದ್ದರು.

ತಂದೆ ಡಾ.ರಾಜ್‌ ಬಗ್ಗೆ ಪುಸ್ತಕ ಬರೆದಿದ್ದ ಮಗ

‘ಡಾ.ರಾಜ್‌ಕುಮಾರ್‌- ದ ಪರ್ಸನ್‌ ಬಿಹೈಂಡ್‌ ಪರ್ಸನಾಲಿಟಿ’

ಇದು ತಮ್ಮ ತಂದೆ ಡಾ.ರಾಜ್‌ಕುಮಾರ್‌ ಅವರ ಬಗ್ಗೆ ಪುನೀತ್‌ ರಾಜ್‌ಕುಮಾರ್‌ ದಾಖಲಿಸಿದ ಜೀವನಚರಿತ್ರೆ. ಡಾ.ಪ್ರಕೃತಿ ಬನವಾಸಿ ಇದನ್ನು ಬರವಣಿಗೆಗೆ ಇಳಿಸಿದ್ದಾರೆ. ತಮ್ಮ ಬದುಕಿನ ಮೇಲೆ ತಂದೆಯ ಪ್ರಭಾವ, ತಂದೆಯ ಜೊತೆಗೆ ಕಳೆದ ದಿನಗಳು, ಅಪರೂಪದ ಘಟನೆಗಳು ಇತ್ಯಾದಿಗಳನ್ನು ಬಯಾಗ್ರಫಿ ರೀತಿಯಲ್ಲಿ ಪುನೀತ್‌ ವಿವರಿಸುತ್ತಾ ಹೋಗಿದ್ದಾರೆ. ಕನ್ನಡ ಹಾಗೂ ಇಂಗ್ಲೀಷ್‌ಗಳೆರಡರಲ್ಲೂ ಈ ಕೃತಿ ಲಭ್ಯವಿದೆ. 272 ಪುಟಗಳು, ಒಂದು ಲಕ್ಷ ಪದಗಳು ಹಾಗೂ 1750 ಡಾ.ರಾಜ್‌, ಪುನೀತ್‌ ಹಾಗೂ ಅವರ ಕುಟುಂಬದ ಅಪರೂಪದ ಛಾಯಾಚಿತ್ರಗಳು ಈ ಬೃಹತ್‌ ಗ್ರಂಥದಲ್ಲಿವೆ. ಕಾಫಿ ಟೇಬಲ್‌ ಬುಕ್‌ ವಿನ್ಯಾಸದಲ್ಲಿರುವ ಈ ಪುಸ್ತಕ ಪುನೀತ್‌ ತನ್ನ ಜೀವಿತಾವಧಿಯಲ್ಲಿ ಮಾಡಿದ ಅಪರೂಪದ ಕಾರ್ಯಗಳಲ್ಲೊಂದು.

ನನ್ನ ಮಕ್ಕಳು ಈ ಫಿಲಂ ನೋಡ್ತಾರೆ ಅಂದಿದು: Puneeth Rajkumar

ಪಾರ್ವತಮ್ಮ ಪಬ್ಲಿಕೇಶನ್ಸ್‌ನಿಂದ ಪುನೀತ್‌ ಈ ಕೃತಿಯನ್ನು ಪ್ರಕಟಿಸಿದ್ದಾರೆ. ಜನವರಿ 1, 2012ರಲ್ಲಿ ಈ ಕೃತಿ ಬಿಡುಗಡೆಯಾಗಿದೆ.

Follow Us:
Download App:
  • android
  • ios