Asianet Suvarna News Asianet Suvarna News

'ನಿಮ್ಮ ಸಿನಿಮಾ ನಮಗೆ Stress buster': ಜಗ್ಗೇಶ್‌ಗೆ ಪತ್ರ ಬರೆದ ಐಎಎಸ್ ಅಧಿಕಾರಿ

ಚಿಕ್ಕ ವಯಸ್ಸಿನಿಂದಲೂ ನಾನು ನಿಮ್ಮ ದೊಡ್ಡ ಅಭಿಮಾನಿ,  ನಾನು ಐಎಎಸ್ ಪರೀಕ್ಷೆ ತಯಾರಿ ನಡೆಸುವಾಗ ನನಗೆ ಬಹಳ ಸ್ಟ್ರೆಸ್ ಹಾಗೂ ಒತ್ತಡವಿರುತ್ತಿತ್ತು. ನಿಮ್ಮ ಹಾಸ್ಯ 'ಸ್ಟ್ರೆಸ್ ಬಸ್ಟರ್' ರೂಪದಲ್ಲಿ ನನ್ನ ಹುಮ್ಮಸ್ಸು ವೃದ್ಧಿಸುತ್ತಿತ್ತು. 

Thanjavur IAS officer Koushik heart touching letter to Kannada actor Jaggesh
Author
Bangalore, First Published Oct 21, 2021, 11:20 AM IST
  • Facebook
  • Twitter
  • Whatsapp

ಸ್ಯಾಂಡಲ್‌ವುಡ್‌ನ ನವರಸ ನಾಯಕ ಎಂದೇ ಚಿರಪರಿಚಿತರಾದ ಜಗ್ಗೇಶ್ (Jaggesh) ಅವರು ತುಂಬಾನೇ ಕಷ್ಟದಿಂದ ಚಿತ್ರರಂಗಕ್ಕೆ ಬಂದವರು. ಚಿತ್ರರಂಗದ ಆರಂಭದ ದಿನಗಳಲ್ಲೂ ಅವರು ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದರು. ಸದ್ಯ 'ರಂಗನಾಯಕ' (Ranganayaka) ಚಿತ್ರದ ಚಿತ್ರೀಕರಣದಲ್ಲಿ ಜಗ್ಗೇಶ್ ತೊಡಗಿದ್ದಾರೆ. ಹಾಗೂ  ಅವರ ಕೈಯಲ್ಲಿ  ಸಾಕಷ್ಟು ಸಿನಿಮಾಗಳಿವೆ. ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನಾ ಕೌಶಲ್ಯದಿಂದ ಬರೋಬ್ಬರಿ 40 ವರ್ಷಗಳನ್ನು ಜಗ್ಗೇಶ್ ಪೂರೈಸಿದ್ದು, ಇವರಿಗೆ ತನ್ನದೇಯಾದ ಅಭಿಮಾನಿ ವರ್ಗವಿದೆ. 

ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ (Social Media) ಸದಾ ಆಕ್ಟೀವ್ ಆಗಿದ್ದು, ತಮ್ಮ ಜೀವನದ ಬಗೆಗಿನ ಪ್ರಮುಖ ಮಾಹಿತಿ ಸೇರಿದಂತೆ ಚಿತ್ರಕ್ಕೆ ಸಂಬಂಧಿಸಿದ ಹಲವಾರು ವಿಷಯಗಳನ್ನು ಅವರು ಹಂಚಿಕೊಳ್ಳುತ್ತಿರುತ್ತಾರೆ. ಅಭಿಮಾನಿಗಳ ಎಲ್ಲ ಪ್ರಶ್ನೆಗಳಿಗೂ ಅವರು ಅದರ ಮುಖಾಂತರವೇ ಉತ್ತರಿಸುತ್ತಾರೆ. ಇದೀಗ ಐಎಎಸ್ ಅಧಿಕಾರಿಯೊಬ್ಬರು (IAS Officer) ನವರಸ ನಾಯಕನಿಗೆ ಪತ್ರವೊಂದನ್ನು (Letter) ಬರೆದಿದ್ದು, ಅದನ್ನು ಜಗ್ಗೇಶ್ ತಮ್ಮ ಟ್ವೀಟರ್ ಖಾತೆಯಲ್ಲಿ (Twitter) ಹಂಚಿಕೊಂಡಿದ್ದಾರೆ.

'ರಾಘವೇಂದ್ರ ಸ್ಟೋರ್ಸ್‌' ಚಿತ್ರದ ನಾಯಕ ಜಗ್ಗೇಶ್!

ಹೌದು! ಐಎಎಸ್ ಅಧಿಕಾರಿ ಕೌಶಿಕ್ (Koushik) ಅವರು ಜಗ್ಗೇಶ್ ಅವರನ್ನು ಹೊಗಳಿ ಪತ್ರ ಬರೆದಿದ್ದಾರೆ. 'ನಮಸ್ತೆ ಸರ್... ನನ್ನ ಹೆಸರು ಕೌಶಿಕ್ ನಾನು 2020ನೇ ಬ್ಯಾಚ್ ಐಎಎಸ್ ಅಧಿಕಾರಿ. ಈಗ ನಾನು ತಮಿಳುನಾಡಿನ ತಂಜಾವೂರಿನಲ್ಲಿ (Thanjavur) ಅಸಿಸ್ಟೆಂಟ್ ಕಲೆಕ್ಟರ್ (Assistant Collector) ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಚಿಕ್ಕ ವಯಸ್ಸಿನಿಂದಲೂ ನಾನು ನಿಮ್ಮ ದೊಡ್ಡ ಅಭಿಮಾನಿ ನಿಮ್ಮ ಎಲ್ಲಾ ಚಿತ್ರಗಳನ್ನು ನಾನು ಬಹಳ ಬಾರಿ ವೀಕ್ಷಿಸಿದ್ದೇನೆ. ನಾನು ಐಎಎಸ್ ಪರೀಕ್ಷೆ (IAS Exam) ತಯಾರಿ ನಡೆಸುವಾಗ ನನಗೆ ಬಹಳ ಸ್ಟ್ರೆಸ್ (Stress) ಹಾಗೂ ಒತ್ತಡವಿರುತ್ತಿತ್ತು. ಆಗ ನಿಮ್ಮ ಚಿತ್ರಗಳು ಹಾಗೂ ಅದರಲ್ಲಿನ ಹಾಸ್ಯ 'ಸ್ಟ್ರೆಸ್ ಬಸ್ಟರ್' ರೂಪದಲ್ಲಿ ನನ್ನ ಹುಮ್ಮಸ್ಸು ವೃದ್ಧಿಸುತ್ತಿತ್ತು. ನಮ್ಮನ್ನು ಇಷ್ಟು ವರ್ಷ ಮನರಂಜಿಸಿದಕ್ಕಾಗಿ ಧನ್ಯವಾದಗಳು ಹೀಗೆ ಸದಾ ನೀವು ನಮ್ಮನ್ನು ಮನರಂಜಿಸಬೇಕಾಗಿ ಕೋರಿಕೊಳ್ಳುತ್ತೇನೆ. ನೀವು ತಂಜಾವೂರಿಗೆ ಬರಬೇಕು ಹಾಗೂ ನಮ್ಮ ಆತಿಥ್ಯ ಸ್ವೀಕರಿಸಬೇಕು ಎಂದು ಆಶಿಸುತ್ತೇನೆ. 
ಕೌಶಿಕ್.ಎಚ್.ಆರ್, ಐಎಎಸ್
ಅಸಿಸ್ಟೆಂಟ್ ಕಲೆಕ್ಟರ್
ತಂಜಾವೂರ್, ಎಂದು ಜಗ್ಗೇಶ್ ಅವರಿಗೆ ಬರೆದು ಕಳುಹಿಸಿದ್ದಾರೆ.

 


ಇನ್ನು ಐಎಎಸ್ ಅಧಿಕಾರಿಯ ಪತ್ರಕ್ಕೆ ಭಾವುಕರಾದ ಜಗ್ಗೇಶ್, 'ಧನ್ಯವಾದ ಅಧಿಕಾರಿ ಮಿತ್ರರಿಗೆ.. ಸಾರ್ಥಕ ಅನ್ನಿಸಿತು ನನ್ನ ಕಲಾ ಬದುಕು' ಎಂದು ಹೇಳಿದ್ದಾರೆ. ಇನ್ನು ಜಗ್ಗೇಶ್, ಗುರುಪ್ರಸಾದ್‌ ನಿರ್ದೇಶನದ 'ರಂಗನಾಯಕ' ಚಿತ್ರೀಕರಣದಲ್ಲಿ ತೊಡಗಿದ್ದು, ಇದು ಇವರ ಕಾಂಬಿನೇಷನ್‌ನ ಮೂರನೇ ಚಿತ್ರ. ಈ ಹಿಂದೆ 'ಮಠ' (Mata), 'ಎದ್ದೇಳು ಮಂಜುನಾಥ' (Eddelu Manjunatha) ಚಿತ್ರದಲ್ಲಿ ಇವರ ಜುಗಲ್‌ಬಂದಿಯಿತ್ತು. ನಿರ್ಮಾಪಕಿ ಶ್ರುತಿ ನಾಯ್ಡು ನಿರ್ದೇಶನದ ಪ್ರೀಮಿಯರ್‌ ಪದ್ಮಿನಿ 2 (Premier Padmini)2 ಚಿತ್ರದಲ್ಲೂ ಜಗ್ಗೇಶ್‌ ನಟಿಸುತ್ತಿದ್ದು, ಶೀಘ್ರದಲ್ಲೇ ಚಿತ್ರ ಸೆಟ್ಟೇರಲಿದೆ.  ಹಾಗೂ ಹೊಂಬಾಳೆ ಫಿಲಂಸ್‌ನ (Hombale Films) ವಿಜಯ್‌ ಕಿರಗಂದೂರು (Vijay Kiragandur) ನಿರ್ಮಾಣದ 12ನೇ ಚಿತ್ರ 'ರಾಘವೇಂದ್ರ ಸ್ಟೋರ್ಸ್‌' (Raghavendra Stores) ಚಿತ್ರದಲ್ಲಿ ಜಗ್ಗೇಶ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಸಂತೋಷ್‌ ಆನಂದರಾಮ್‌ (Santhosh Ananddram) ನಿರ್ದೇಶನವಿದೆ. ಚಿತ್ರದ ಫಸ್ಟ್‌ಲುಕ್‌ (First Look) ಇತ್ತಿಚೆಗಷ್ಟೇ ಬಿಡುಗಡೆಯಾಗಿತ್ತು.

"

Follow Us:
Download App:
  • android
  • ios