ನಟ ಡಾಲಿ ಧನಂಜಯ್ ಅವರು ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದು ಇಂದು ಬಹುಭಾಷಾ ನಟರಾಗಿ ಬೆಳೆದಿದ್ದಾರೆ. ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ತಮ್ಮ ನಟನಾಜರ್ನಿಯನ್ನು ಮಾಡುತ್ತಿರುವ ನಟ ಧನಂಜಯ್ ಅವರು, ಸಿನಿಮಾ ನಿರ್ಮಾಣದ ಕೆಲಸದಲ್ಲೂ ಸಕ್ರಿಯರಾಗಿದ್ದಾರೆ.

Daali Dhananjay 40th birthday: ಸ್ಯಾಂಡಲ್‌ವುಡ್ ನಟ-ನಿರ್ಮಾಪಕ ಡಾಲಿ ಖ್ಯಾತಿಯ ಧನಂಜಯ್‌ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತಮ್ಮ 40ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ನಟ ಧನಂಜಯ್ ಅವರು ಇಂದು, 23 ಆಗಸ್ಟ್ 2026ರಂದು ಜಯನಗರದ ಎಂಇಎಸ್ ಮೈದಾನದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಬರ್ತಡೇ ಸೆಲೆಬ್ರೇಷನ್ ಮಾಡಿಕೊಳ್ಳಲಿದ್ದಾರೆ.

ಸಾವಿರಾರು ಅಭಿಮಾನಿಗಳೊಂದಿಗೆ ಜಯನಗರದ ಎಂಇಎಸ್ ಮೈದಾನದಲ್ಲಿ ಬರ್ತಡೇ ಸೆಲೆಬ್ರೇಷನ್ ಮಾಡಿಕೊಂಡ ನಟ ಧನಂಜಯ್ ಅವರು ರಕ್ತ ದಾನ ಮಾಡಿದ್ದಾರೆ. ಆ ಬಳಿಕ ಮಾತನ್ನಾಡಿದ ನಟ ಡಾಲಿ ದನಂಜಯ್, ತಮ್ಮ ಅಭಿಮಾನಿಗಳಿಗೆ 'ರಕ್ತ ದಾನ' ಮಾಡಲು ಸಂದೇಶ ನೀಡಿದ್ದಾರೆ. ಈ ವೇಳೆ ಸುವರ್ಣ ನ್ಯೂಸ್ ಜತೆ ಮಾತನಾಡಿದ ಡಾಲಿ ದನಂಜಯ್ 'ಪ್ರತಿ ಹುಟ್ಟು ಹಬ್ಬವೂ ವಿಶೇಷವಾಗಿರುತ್ತೆ, ಅಭಿಮಾನಿಗಳೊಂದಿಗೆ ಸೆಲೆಬ್ರೇಷನ್ ಮಾಡ್ತೀನಿ' ಎಂದಿದ್ದಾರೆ.

ಈ ಸಮಯದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ನಟ ಧನಂಜಯ್ ಅವರು 'ಟಾಕ್ಸಿಕ್ ಸಿನಿಮಾ ನಮ್ಮ ಕನ್ನಡದ ಹೆಮ್ಮೆಯ ಚಿತ್ರ. ಟಾಕ್ಸಿಕ್ ಚಿತ್ರಕ್ಕಾಗಿ ನಾನು ಕೂಡ ಕಾಯ್ತಿದ್ದೀನಿ' ಎಂದಿದ್ದಾರೆ. ಯಶ್ ನಟನೆಯ ಟಾಕ್ಸಿಕ್ ಸಿನಿಮಾ 26 ಆಗಸ್ಟ್ 2026ರಂದು ಇಡೀ ಜಗತ್ತಿನಾದ್ಯಂತ ಬೊಡುಗಡೆ ಆಗಲಿರುವುದು ಬಹುತೇಕ ಎಲ್ಲರಿಗೂ ಗೊತ್ತು. ಈ ಬಗ್ಗೆ ಮಾತನ್ನಾಡಿರುವ ಧನಂಜಯ್ ಅವರು 'ಟಾಕ್ಸಿಕ್ ಕನ್ನಡದ ಹೆಮ್ಮೆ' ಎಂದಿದ್ದಾರೆ.

ನಟ ಡಾಲಿ ಧನಂಜಯ್ ಅವರು ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದು ಇಂದು ಬಹುಭಾಷಾ ನಟರಾಗಿ ಬೆಳೆದಿದ್ದಾರೆ. ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ತಮ್ಮ ನಟನಾಜರ್ನಿಯನ್ನು ಮಾಡುತ್ತಿರುವ ನಟ ಧನಂಜಯ್ ಅವರು, ಸಿನಿಮಾ ನಿರ್ಮಾಣದ ಕೆಲಸದಲ್ಲೂ ಸಕ್ರಿಯರಾಗಿದ್ದಾರೆ. 'ಟಗರು ಪಲ್ಯ' ಸೇರಿದಂತೆ ಹಲವಾರು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಸದ್ಯ ಧನಂಜಯ್ ನಿರ್ಮಾಣದ ಹಲವು ಸಿನಿಮಾಗಳ ಕೆಲಸ ನಡೆಯುತ್ತಿದೆ. ತಮ್ಮ ನಿರ್ಮಾಣದ ಎಲ್ಲಾ ಸಿನಿಮಾಗಳಲ್ಲಿ ತಾವೇ ಹೀರೋ ಆಗದೇ ಇನ್ನೂ ಹಲವು ಪ್ರತಿಭಾವಂತ ನಟರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ನಟ ಡಾಲಿ ಧನಂಜಯ್.

ಇತ್ತೀಚೆಗೆ ಗಂಡುಮಗುವಿನ ತಂದೆಯೂ ಆಗಿರುವ ಧನಂಜಯ್ ಅವರು, ಸುಖಸಂಸಾರದ ಸಾರಥಿಯಾಗಿದ್ದಾರೆ. ಪತ್ನಿ ಧನ್ಯತಾ ಅವರು ಇಂದು ತಮ್ಮ ಪತಿ ಹಾಗೂ ಸ್ಯಾಂಡಲ್‌ವುಡ್ ನಟ ಧನಂಜಯ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಇಂದು ಫ್ಯಾನ್ಸ್‌ ಜೊತೆ ತಮ್ಮ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಮುಳುಗಿರುವ ನಟ ಧನಂಜಯ್ ಅವರು ಕನ್ನಡಕ್ಕೆ ನಟನೆ ಮಾತ್ರವಲ್ಲದೇ ನಿರ್ಮಾಣದ ಮೂಲಕವೂ ಅಪಾರ ಕೊಡುಗೆ ನೀಡುತ್ತಿದ್ದಾರೆ.