Asianet Suvarna News Asianet Suvarna News

Round Up 2021: ಸ್ಯಾಂಡಲ್‌ವುಡ್‌ನ ಉಲ್ಲಾಸ, ಉತ್ಸಾಹ, ವಿವಾದ, ವಿಷಾದ

2021ರ ಆರಂಭದಲ್ಲಿ ಚಟುವಟಿಕೆಯಿಲ್ಲದೇ ಸ್ತಬ್ದವಾಗಿದ್ದ ಚಿತ್ರರಂಗ ವರ್ಷಾಂತ್ಯಕ್ಕೆ ಕಳೆಗಟ್ಟಿತ್ತು. ವಿವಾದ, ದುರಂತಗಳ ಜೊತೆಗೆ ಸಂಭ್ರಮವೂ ಗರಿಗೆದರಿತ್ತು. ಸ್ಯಾಂಡಲ್‌ವುಡ್‌ಗೆ ದುಃಖದ ಕಾರ್ಮೋಡ ಕವಿದಿದ್ದು ಪುನೀತ್‌ ಅಗಲಿದಾಗ. ಆ ಆಘಾತದಿಂದ ಚಿತ್ರರಂಗ ಇನ್ನೂ ಹೊರಬಂದಿಲ್ಲ. ಕೆಲವೊಂದು ವಿವಾದಗಳೂ ಮುನ್ನೆಲೆಗೆ ಬಂದವು. 

Round Up 2021 sandalwood excitement controversy regret gvd
Author
Bangalore, First Published Dec 31, 2021, 11:39 AM IST

2021ರ ಆರಂಭದಲ್ಲಿ ಚಟುವಟಿಕೆಯಿಲ್ಲದೇ ಸ್ತಬ್ದವಾಗಿದ್ದ ಚಿತ್ರರಂಗ ವರ್ಷಾಂತ್ಯಕ್ಕೆ ಕಳೆಗಟ್ಟಿತ್ತು. ವಿವಾದ, ದುರಂತಗಳ ಜೊತೆಗೆ ಸಂಭ್ರಮವೂ ಗರಿಗೆದರಿತ್ತು. ಸ್ಯಾಂಡಲ್‌ವುಡ್‌ಗೆ ದುಃಖದ ಕಾರ್ಮೋಡ ಕವಿದಿದ್ದು ಪುನೀತ್‌ ಅಗಲಿದಾಗ. ಆ ಆಘಾತದಿಂದ ಚಿತ್ರರಂಗ ಇನ್ನೂ ಹೊರಬಂದಿಲ್ಲ. ಕೆಲವೊಂದು ವಿವಾದಗಳೂ ಮುನ್ನೆಲೆಗೆ ಬಂದವು. ಕೋವಿಡ್‌ ಕಾರಣಕ್ಕೆ ಸಂಭ್ರಮಗಳು ಅಷ್ಟಾಗಿ ನಡೆಯದಿದ್ದರೂ ಸಣ್ಣಪುಟ್ಟಖುಷಿ, ಸಂಭ್ರಮ ಚಂದನವನದಲ್ಲಿ ಉಲ್ಲಾಸ ಮೂಡಿಸಿತು. 2021ರ ಖುಷಿ, ದುಃಖ, ಚರ್ಚೆ, ಜಗಳ ಇತ್ಯಾದಿಗಳ ಸಣ್ಣದೊಂದು ರೌಂಡಪ್‌ ಇಲ್ಲಿದೆ.

ವಿವಾದಗಳು
ಪೊಗರು ಚಿತ್ರದಲ್ಲಿ ಬ್ರಾಹ್ಮಣರಿಗೆ ಅವಹೇಳನ:
ಧ್ರುವ ಸರ್ಜಾ ನಟನೆ, ನಂದಕಿಶೋರ್‌ ನಿರ್ದೇಶನದ ಪೊಗರು ಚಿತ್ರದಲ್ಲಿ ಬ್ರಾಹ್ಮಣರಿಗೆ ಅವಹೇಳನೆ ಮಾಡಲಾಗಿದೆ ಎಂಬ ವಿವಾದ ಭುಗಿಲೆದ್ದಿತು. ಕೊನೆಗೆ ವಿವಾದಿತ ದೃಶ್ಯಗಳಿಗೆ ಕತ್ತರಿ ಹಾಕುವುದರೊಂದಿಗೆ ವಿವಾದ ತಣ್ಣಗಾಯಿತು.

ಲವ್‌ ಯೂ ರಚ್ಚು ಶೂಟಿಂಗ್‌ನಲ್ಲಿ ಫೈಟರ್‌ ಸಾವು: ರಚಿತಾ ರಾಮ್‌, ಅಜಯ್‌ ರಾವ್‌ ನಟನೆಯ ‘ಲವ್‌ ಯೂ ರಚ್ಚು’ ಸಿನಿಮಾ ಶೂಟಿಂಗ್‌ ವೇಳೆ ವಿದ್ಯುತ್‌ ಹರಿದು ಫೈಟರ್‌ ವಿವೇಕ್‌ ಮೃತಪಟ್ಟರು. ಫೈಟ್‌ ಮಾಸ್ಟರ್‌ ಅಜಾಗೃತೆಯಿಂದ ಹೀಗಾಯ್ತು ಎಂದು ನಾಯಕ ಅಜಯ್‌ ಸೇರಿದಂತೆ ಹಲವರು ಆರೋಪಿಸಿದರು. ಜೈಲು ಪಾಲಾಗುವ ಭೀತಿಯಿಂದ ನಿರ್ಮಾಪಕ ಗುರು ದೇಶಪಾಂಡೆ ತಲೆ ಮರೆಸಿಕೊಂಡರು.

ಕೋಟಿಗೊಬ್ಬ 3 ಬಿಡುಗಡೆಯ ಫಜೀತಿ: ಅ.14 ರಂದು ಬಿಡುಗಡೆಯಾಗಬೇಕಿದ್ದ ಸುದೀಪ್‌ ನಟನೆಯ ‘ಕೋಟಿಗೊಬ್ಬ 3’ ಒಂದು ದಿನ ತಡವಾಗಿ ರಿಲೀಸ್‌ ಆಯ್ತು. ಕೆಲವು ವಿತರಕರು ಸಿನಿಮಾ ಬಿಡುಗಡೆಗೆ ಅಡ್ಡಗಾಲು ಹಾಕಿದ್ದರಿಂದ ಬಿಡುಗಡೆ ಮುಂದೆ ಹೋಯ್ತು ಎಂದು ನಿರ್ಮಾಪಕ ಸೂರಪ್ಪ ಬಾಬು ಆರೋಪಿಸಿದರು.

ಹಂಸಲೇಖ ವಿವಾದ: ಕಾರ್ಯಕ್ರಮವೊಂದರಲ್ಲಿ ಪೇಜಾವರ ಸ್ವಾಮೀಜಿ ಕುರಿತು ಸಂಗೀತ ನಿರ್ದೇಶಕ ಹಂಸಲೇಖ ಆಡಿದ ಮಾತು ಹಲವರ ವಿರೋಧಕ್ಕೆ ಕಾರಣವಾಯ್ತು. ಹಂಸಲೇಖ ಕ್ಷಮೆಯಾಚಿಸಿದರೂ ಪ್ರಕರಣ ಪೊಲೀಸ್‌ ಸ್ಟೇಶನ್‌ ಮೆಟ್ಟಿಲೇರಿತು.

ಸಂಭ್ರಮದ ರಸ ಘಳಿಗೆಗಳು: 2021ರಲ್ಲಿ ಒಂದಿಷ್ಟುಮಂದಿ ತಾರೆಯರು ಹಸೆಮಣೆ ಏರಿದರು, ತಾಯಿ ತಂದೆಯಾದರು. ಹೊಸ ಅಚ್ಚರಿ, ಬೆರಗಿಗೆ ಕಣ್ಣರಳಿಸಿದರು.

Round Up 2021: ಒಳ್ಳೇ ಕ್ಲೈಮ್ಯಾಕ್ಸು, ಆರ್ಡಿನರಿ ಓಪನಿಂಗ್‌, ಸೂಪರ್‌ ಸೆಕೆಂಡ್‌ ಹಾಫ್‌!

ಮದುವೆಯ ಖುಷಿ
1. ಮಿಲನಾ ನಾಗರಾಜ್‌- ಡಾರ್ಲಿಂಗ್‌ ಕೃಷ್ಣ ಫೆ.14ರ ಪ್ರೇಮಿಗಳ ದಿನದಂದು ಮದುವೆಯಾದರು.

2. ಪ್ರಣೀತಾ ಸುಭಾಷ್‌ ಅವರು ಉದ್ಯಮಿ ನಿತಿನ್‌ ರಾಜು ಅವರ ಕೈ ಹಿಡಿದರು.

3. ಕಾಮಿಡಿಯನ್‌, ನಟ ದಾನಿಶ್‌ ಸೇಠ್‌ ಬಹುಕಾಲದ ಗೆಳತಿ ಅನ್ಯಾ ರಂಗಸ್ವಾಮಿ ಅವರ ಬಾಳ ಸಂಗಾತಿಯಾದರು.

4. ನಿರ್ದೇಶಕ ಮಂಸೋರೆ- ಅಖಿಲಾ ಅವರ ಜೊತೆಗೆ ಗೃಹಸ್ಥಾಶ್ರಮ ಪ್ರವೇಶಿಸಿದರು.

5. ಕಿರುತೆರೆಯ ಜನಪ್ರಿಯ ಜೋಡಿ ಚಂದನ್‌ ಕುಮಾರ್‌ ಹಾಗೂ ಕವಿತಾ ಗೌಡ ಸರಳವಾಗಿ ವಿವಾಹವಾದರು.

6. ಕಿರುತೆರೆ ಕಲಾವಿದೆ ಆಶಿತಾ ಚಂದ್ರಪ್ಪ ಅವರು ರೋಹನ್‌ ರಾಘವೇಂದ್ರ ಅವರನ್ನು ವರಿಸಿದರು.

7. ಕಿರುತೆರೆಯ ದೀಪಕ್‌ ಮಹಾದೇವ್‌ ಹಾಗೂ ಚಂದನಾ ಮಹಾಲಿಂಗಯ್ಯ ಸತಿಪತಿಗಳಾದರು.

8. ನಟಿ ಕಾವ್ಯಾಗೌಡ ಸೋಮಶೇಖರ್‌ ಜೊತೆಗೆ ಸಪ್ತಪದಿ ತುಳಿದರು.

9. ನಟಿ ಪ್ರಿಯಾಂಕಾ ಚಿಂಚೋಳಿ ಅವರು ಉದ್ಯಮಿ ರಾಕೇಶ್‌ ಅವರ ಕೈ ಹಿಡಿದರು.

10. ನಿರ್ದೇಶಕ ಆದರ್ಶ್ ಈಶ್ವರಪ್ಪ ಅವರು ಹಿಮಶ್ರೀ ಅವರ ಕೈ ಹಿಡಿದರು.

ಮಕ್ಕಳ ಖುಷಿ: ಚಿತ್ರತಾರೆಯರಾದ ಮಯೂರಿ ಕ್ಯಾತರಿ ಮಗನ ತಾಯಿಯಾದರು. ನಿರ್ದೇಶಕ ಎ ಪಿ ಅರ್ಜುನ್‌ ಗಂಡು ಮಗುವಿಗೆ ತಂದೆಯಾದರು. ಹಾಗೇ ವರ್ಷಾಂತ್ಯಕ್ಕೆ ನಟ ನಿಖಿಲ್‌ ಕುಮಾರಸ್ವಾಮಿ ರೇವತಿ ದಂಪತಿಗೆ ಗಂಡು ಮಗುವಾಯಿತು.

Round Up 2021: ವರ್ಷದ ಬೆಸ್ಟ್ ಬಿಕಿನಿ ಲುಕ್‌ಗಳಿವು

ಅಗಲಿದ ಸಿನಿ ಗಣ್ಯರು
ನಿರ್ಮಾಪಕ ರಾಮು:
ಮೂರು ದಶಕಗಳ ಕಾಲ ಸ್ಯಾಂಡಲ್‌ವುಡ್‌ನ ಯಶಸ್ವೀ ನಿರ್ಮಾಪಕರಾಗಿ ಕೋಟಿ ರಾಮು ಎಂದೇ ಗುರುತಿಸಿಕೊಂಡಿದ್ದ ನಿರ್ಮಾಪಕ ರಾಮು ಈ ವರ್ಷ ಏಪ್ರಿಲ್‌ 26ರಂದು ನಮ್ಮನ್ನಗಲಿದರು. ಕೋವಿಡ್‌ ಅವರನ್ನು ಬಲಿ ಪಡೆದಿತ್ತು.

ಜಯಂತಿ: ಅಭಿನಯ ಶಾರದೆ ಎಂದೇ ಗುರುತಿಸಿಕೊಂಡಿದ್ದ ಹಿರಿಯ ನಟಿ ಜಯಂತಿ ಜು.26ರಂದು ಇಹಲೋಕ ತ್ಯಜಿಸಿದರು. ಈ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಚಿತ್ರಗಳಲ್ಲೂ ಪ್ರತಿಭೆ ತೋರಿದವರು.

ಶಿವರಾಮ್‌: ನೂರಾರು ಸಿನಿಮಾಗಳಲ್ಲಿ ಅಭಿನಯಿಸಿದ್ದ ಹಿರಿಯ ನಟ ಶಿವರಾಮ್‌ ಈ ವರ್ಷದ ಕೊನೆಯಲ್ಲಿ ಕೊನೆಯುಸಿರೆಳೆದರು. ಅಪಘಾತವೊಂದರಲ್ಲಿ ತಲೆಗೆ ಏಟು ಬಿದ್ದದ್ದೇ ಕಾರಣವಾಗಿ ಅವರು ನಿಧನರಾದರು.

ಕೆ ವಿ. ರಾಜು: ಸಂಗ್ರಾಮ, ಬಂಧಮುಕ್ತ, ಯುದ್ಧಕಾಂಡದಂಥಾ ಚಿತ್ರ ನಿರ್ಮಿಸಿದ ಕೆ ವಿ ರಾಜು ಕನ್ನಡ ಚಿತ್ರರಂಗ ಕಂಡ ಹಿರಿಯ ನಿರ್ದೇಶಕರು. ಅವರು ಕೆಲವು ದಿನಗಳ ಕೆಳಗೆ ಹೃದಯಾಘಾತದಿಂದ ನಿಧನರಾದರು.

ಕೆ ಸಿ ಎನ್‌ ಚಂದ್ರಶೇಖರ್‌: ಬಭ್ರುವಾಹನ, ಹುಲಿ ಹಾಲಿನ ಮೇವುನಂಥಾ ಬ್ಲಾಕ್‌ ಬಾಸ್ಟರ್‌ ಚಿತ್ರಗಳ ನಿರ್ಮಾಪಕ ಕೆ ಸಿ ಎನ್‌ ಚಂದ್ರಶೇಖರ್‌. ತಮ್ಮ 69ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾದರು.

ಪ್ರೊ. ಜಿ ಕೆ ಗೋವಿಂದ ರಾವ್‌: ರಂಗಭೂಮಿ ಹಿನ್ನೆಲೆಯ ಈ ಹಿರಿಯ ನಟ ಕಿರುತೆರೆ ಹಿರಿತೆರೆಗಳಲ್ಲಿ ತಮ್ಮ ನಟನೆಯ ಛಾಪು ಮೂಡಿಸಿದವರು. ಶಂಕರ್‌ನಾಗ್‌ ನಿರ್ದೇಶನದ ಮಾಲ್ಗುಡಿ ಡೇಸ್‌ನಲ್ಲಿ ಗಮನಾರ್ಹ ಪಾತ್ರ ನಿರ್ವಹಿಸಿದವರು. ಇದರ ಜೊತೆಗೆ ವಿಚಾರವಾದಿಯಾಗಿ, ಚಳವಳಿಗಳಲ್ಲಿ ತೊಡಗಿಸಿಕೊಂಡವರು.

ಹಾಸ್ಯ ಕಲಾವಿದ ಶಂಕರ್‌ ರಾವ್‌: ಕಿರುತೆರೆ ಹಾಗೂ ಹಿರಿತೆರೆಗಳಲ್ಲಿ ತೊಡಗಿಸಿಕೊಂಡಿದ್ದ ಹಿರಿಯ ಕಲಾವಿದ. ಹಾಸ್ಯ ಪಾತ್ರಗಳ ಮೂಲಕವೂ ಮಿಂಚಿದವರು. ರಂಗಭೂಮಿಯ ಹಿನ್ನೆಲೆಯಿಂದ ಬಂದವರು. ಮಿಲನ, ಸಿದ್ಲಿಂಗು, ಅಪ್ಪು ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಹಿರಿಯ ನಿರ್ಮಾಪಕ ವಿಜಯ ಕುಮಾರ್‌: ಸಿಂಹಾದ್ರಿಯ ಸಿಂಹ ಸೇರಿದಂತೆ ಅನೇಕ ಸಿನಿಮಾಗಳನ್ನು ನಿರ್ಮಿಸಿದವ ಹಿರಿಯ ನಿರ್ಮಾಪಕ ವಿಜಯ ಕುಮಾರ್‌. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾಗಿದ್ದವರು.

ಹಿರಿಯ ನಟ ಕೃಷ್ಣೇಗೌಡ: 1993ರಲ್ಲಿ ಬಂದ ‘ಕರಿಮಲೆಯ ಕಗ್ಗತ್ತಲು’ ಚಿತ್ರದಲ್ಲಿನ ತಮ್ಮ ನಟನೆಗೆ ರಾಜ್ಯಸರ್ಕಾರದ ಅತ್ಯುತ್ತಮ ನಟ ಪ್ರಶಸ್ತಿ ಪಡೆದವರು ಹಿರಿಯ ನಟ ಕೃಷ್ಣೇಗೌಡ. ‘ಮುಖ್ಯಮಂತ್ರಿ’ ನಾಟಕದಲ್ಲಿನ ಇವರ ಪಾತ್ರ ಜನಪ್ರಿಯವಾಗಿದೆ.

ಶಂಕನಾದ ಅರವಿಂದ್‌: ತಮ್ಮ 70ನೇ ವಯಸ್ಸಿನಲ್ಲಿ ವಿಧಿವಶರಾದವರು ಹಿರಿಯ ನಟ ಶಂಕನಾದ ಅರವಿಂದ್‌. ಕಾಶಿನಾಥ್‌ ಅವರ ‘ಅಪರಿಚಿತ’ ಚಿತ್ರ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದ ನಟ, ಮುಂದೆ ಶಂಕನಾದ ಚಿತ್ರದ ಮೂಲಕ ಜನಮನ್ನಣೆ ಗಳಿಸಿದವರು. ಬೆಟ್ಟದ ಹೂವಿನ ಇವರ ಪಾತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ನೂರಾರು ಚಿತ್ರಗಳಲ್ಲಿ ನಟಿಸಿರುವ ಈ ಹಿರಿಯ ನಟ ಕೋವಿಡ್‌ನಿಂದ ಕೊನೆಯುಸಿರೆಳೆದರು.

ಸತ್ಯಜಿತ್‌: ಆಪ್ತಮಿತ್ರ, ಪುಟ್ನಂಜ ಮೊದಲಾದ ಚಿತ್ರಗಳ ಖಳನಟನ ಪಾತ್ರಗಳಿಂದ ಗಮನಸೆಳೆದವರು ಸತ್ಯಜಿತ್‌. 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ‘ಶಿವ ಮೆಚ್ಚಿದ ಕಣ್ಣಪ್ಪ’ ಚಿತ್ರದಲ್ಲಿನ ಅವರ ನಟನೆ ಪ್ರಶಂಸೆಗೆ ಪಾತ್ರವಾಗಿತ್ತು. ಕೊನೆಯ ದಿನಗಳಲ್ಲಿ ಈ ನಟ ಕೌಟುಂಬಿಕ ಕಲಹದಿಂದ ಸುದ್ದಿಯಲ್ಲಿದ್ದರು. ಗ್ಯಾಂಗ್ರಿನ್‌ನಿಂದ ಬಳಲಿ ಅಸುನೀಗಿದ್ದರು.

ಜಯಶ್ರೀ ರಾಮಯ್ಯ: ಬಿಗ್‌ಬಾಸ್‌ ಮೂಲಕ ಗುರುತಿಸಿಕೊಂಡ ನಟಿ ಜಯಶ್ರೀ ರಾಮಯ್ಯ. ಉಪ್ಪು ಹುಳಿ ಖಾರ ಚಿತ್ರದ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟವರು. ಬಿಗ್‌ಬಾಸ್‌ ಸೀಸನ್‌ 3ಯ ಸ್ಪರ್ಧಿಯಾಗಿದ್ದವರು. ಈ ವರ್ಷ ಆತ್ಮಹತ್ಯೆ ಮಾಡಿಕೊಂಡರು.

ನಿರ್ಮಾಪಕ ಕುಪ್ಪುಸ್ವಾಮಿ: ವಿತರಕ, ನಿರ್ಮಾಪಕರಾಗಿ ಗುರುತಿಸಿಕೊಂಡ ಕುಪ್ಪುಸ್ವಾಮಿ ಅವರು ರವಿಚಂದ್ರನ್‌ ಸಿನಿಮಾಗಳನ್ನು ನಿರ್ಮಿಸಿದವರು. ರಣಚಂಡಿ ಇವರ ಕೊನೆಯ ಚಿತ್ರ. ಸೈ, ಇಂದ್ರ, ವೀರ ಮೊದಲಾದ ಚಿತ್ರಗಳನ್ನು ನಿರ್ಮಿಸಿದವರು.

ತಿಪಟೂರು ರಘು: 80ರ ದಶಕದಲ್ಲಿ ‘ಕಲ್ಲುವೀಣೆ ನುಡಿಯಿತು’, ‘ಬೆಂಕಿ ಬಿರುಗಾಳಿ’, ‘ಗಜೇಂದ್ರ’ ಮೊದಲಾದ ಹಿಟ್‌ ಚಿತ್ರಗಳನ್ನು ನಿರ್ದೇಶಿಸಿದವರು ತಿಪಟೂರು ರಘು. ವಿಷ್ಣುವರ್ಧನ್‌, ಅಂಬರೀಶ್‌, ಶಂಕರ್‌ನಾಗ್‌ ಮೊದಲಾದ ದಿಗ್ಗಜರ ಜೊತೆಗೆ ಕೆಲಸ ಮಾಡಿದವರು.

ನಿರ್ದೇಶಕ ಅಭಿರಾಮ್‌: ಮೇ 27ರಂದು ಕೋವಿಡ್‌ಗೆ ಬಲಿಯಾದವರು ಯುವ ನಿರ್ದೇಶಕ ಅಭಿರಾಮ್‌. 100 ಪರ್ಸೆಂಟ್‌ ಲವ್‌, ಸಂಯುಕ್ತಾ ಚಿತ್ರಗಳನ್ನು ನಿರ್ದೇಶಿಸಿದ್ದ ಅಭಿರಾಮ್‌ ಸಿನಿಮಾ ಬಿಡುಗಡೆಗೂ ಮುನ್ನವೇ ಕೊನೆಯುಸಿರೆಳೆದರು. ಈ ಚಿತ್ರಗಳ ನಿರ್ಮಾಪಕ ಡಿ ಎಸ್‌ ಮಂಜುನಾಥ್‌ ಅವರೂ ಈ ವರ್ಷ ಕೋವಿಡ್‌ಗೆ ಬಲಿಯಾಗಿದ್ದಾರೆ.

2021 ಕಲಿಸಿದ ಪಾಠಗಳು: ಸಣ್ಣ ಬಜೆಟ್‌, ಒಳ್ಳೆಯ ಕತೆ, ಚೆಂದದ ಚಿತ್ರ

2021 ಸ್ಯಾಂಡಲ್‌ವುಡ್ ಫಿಲ್ಮೀಡೈರಿ

ಜನವರಿ (10)
ರಾಜತಂತ್ರ
ಅಮೃತವಾಹಿನಿ
ಮಹಿಷಾಸುರ
ವಿಕ್ಕಿ
ಕತ್ಲೆ ಕಾಡು
ಲಡ್ಡು
ಪಂಟ್ರು
ತಲಾಕ್‌ ತಲಾಕ್‌ ತಲಾಕ್‌
ಜಾನು ನನ್‌ ಜಾನು
ರಾಮಾರ್ಜುನ

ಫೆಬ್ರವರಿ (19)
ಗತ್ತು
ಇನ್ಸ್‌ಪೇಕ್ಟರ್‌ ವಿಕ್ರಂ
ಮಂಗಳವಾರ ರಜಾದಿನ
ಮಾಂಜ್ರ
ಶಾಡೋ
ಅಣ್‌ ತಮ್ಮ
ಕಲಾವಿದ
ಕನಸು ಮಾರಾಟಕ್ಕಿದೆ
ನಮ್ಮೂರು
ಪ್ರೀತಿ ಎಂದರೇನು
ರಾ
ಪೊಗರು
ಅಂಬಾನಿ ಪುತ್ರ
ಸೈನೇಡ್‌ ಮಲ್ಲಿಕ
ಕರ್ತ
ಕುಷ್ಕ
ಪ್ರೇಮನ್‌
ಸಾಲ್ಟ್‌
ಸ್ಕೇರಿ ಫಾರೆಸ್ಟ್‌

ಮಾರ್ಚ್ (11)
ಧೀರಂ
ಹೀರೋ
ಎಂಬಿಎ
ರಕ್ತಗುಲಾಬಿ
ಮುಂದುವರಿದ ಅಧ್ಯಯ
ಒಂದು ಗಂಟೆಯ ಕತೆ
ಅನಗ
ವಾರೆಂಟ್‌
ಪಾರು
ರಣಂ

ಏಪ್ರಿಲ್‌ (4)
ಯುವರತ್ನ
ಕೊಡೆ ಮುರುಗ
ಕೃಷ್ಣ ಟಾಕೀಸ್‌
ರಿವೈಂಡ್‌

ಜುಲೈ(1)
ಇಕ್ಕಟ್‌- ಓಟಿಟಿ

ಆಗಸ್ಟ್‌(5)
ಕಲಿವೀರ
ಸೀತಾರಾಮ್‌ ಬಿನೋಯಿ
ಜೀವ್ನನೇ ನಾಟ್ಕ ಸಾಮಿ
ಗ್ರೂಫಿ
ಶಾರ್ದುಲ

ಸೆಪ್ಟಂಬರ್‌ (7)
ಲಂಕೆ
ಓಶೋ
ಆಚಾರ್ಯ
ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಸಿಬಿಟ್ಟ
ಜಿಗಿರಿ ದೋಸ್ತ್
ಪುಕ್ಸಟ್ಟೆಲೈಫು
ಜನುಮದ ಜಾತ್ರೆ

ಅಕ್ಟೋಬರ್‌ ( 12)
ಕಾಗೆ ಮೊಟ್ಟೆ
ಮೋಹನ್‌ ದಾಸ್‌
ನಿನ್ನ ಸನಿಹಕೆ
ಇದು ಆಕಾಶವಾಣಿ ಬೆಂಗಳೂರು ನಿಲಯ
ತಿರುಗಿಸೋ ಮೀಸೆ
ಸಲಗ
ಕೋಟಿಗೊಬ್ಬ 3
ಶ್ರೀಕೃಷ್ಣ ಜೀಮೆಲ್‌.ಕಾಂ
1980
ರತ್ನನ್‌ ಪ್ರಪಂಚ
ರಿಯಲ್‌ ಎಸ್ಟೇಟ್‌
ಭಜರಂಗಿ 2

ನವೆಂಬರ್‌ (18)
ಗುಲಾಲ್‌.ಕಾಂ
ಆಟೋ ರಾಮಣ್ಣ
ಪ್ರೇಮಂ ಪೂಜ್ಯಂ
ಟಾಮ್‌ ಆಂಡ್‌ ಜರ್ರಿ
ಹಿಟ್ಲರ್‌
ಬೈ 1 ಗೆಟ್‌ 1 ಫ್ರೀ
ಯರ್ರಾ ಬಿರ್ರಿ
ಲಕ್ಷ್ಯ
100
ಗರುಡಗಮನ ವೃಷಭ ವಾಹನ
ಮುಗಿಲ್‌ ಪೇಟೆ
ನನ್‌ ಹೆಸರು ಕಿಶೋರ್‌
ಸ್ನೇಹಿತ
ಸೈದಾಪುರ
ಅಮೃತಾ ಅಪಾರ್ಟ್‌ಮೆಂಟ್ಸ್‌
ಗೋರಿ
ಗೋವಿಂದ ಗೋವಿಂದ
ಸಕತ್‌

ಡಿಸೆಂಬರ್‌ (14)
ಅಕ್ಷಿ
ಮದಗಜ
ದೃಶ್ಯ 2
ಬ್ರೇಕ್‌ ಫೈಲ್ಯೂರ್‌
ಸ್ವಚ್ಚ ಕರ್ನಾಟಕ
ಕ್ಯಾನ್ಸಿಲಿಯಂ
2020 ಗೋಪಿಕೆಯರು
ಶ್ರೀ ಜಗನ್ನಾಥ ದಾಸರು
ಬಡವರ ರಾಸ್ಕಲ್‌
ರೈಡರ್‌
ಗುರ್ಬಿ
ಕನ್ನಡಿಗ
ಅರ್ಜುನ್‌ ಗೌಡ
ಲವ್‌ ಯೂ ರಚ್ಚು

Follow Us:
Download App:
  • android
  • ios