Asianet Suvarna News Asianet Suvarna News

2021 ಕಲಿಸಿದ ಪಾಠಗಳು: ಸಣ್ಣ ಬಜೆಟ್‌, ಒಳ್ಳೆಯ ಕತೆ, ಚೆಂದದ ಚಿತ್ರ

ಕೋಟಿ ಕೋಟಿ ಬಜೆಟ್ಟಿನ ಸಿನಿಮಾಗಳ ಕಾಲ ಮುಗಿಯಿತು! ಹಾಗಂತ ಹಿರಿಯ ನಟರೊಬ್ಬರು ಅಭಿಪ್ರಾಯಪಟ್ಟರು. ಅದು ನಿಜವೋ ಸುಳ್ಳೋ ಅನ್ನುವುದನ್ನು ಕಾಲವೇ ಹೇಳಲಿದೆ. ಆದರೆ ಅದು ಪೂರ್ತಿ ಸುಳ್ಳಲ್ಲ ಅನ್ನುವುದಕ್ಕೆ ಸಣ್ಣ ಸೂಚನೆಯಂತೂ ಸಿಕ್ಕಿದೆ. ದೊಡ್ಡ ಬಜೆಟ್ಟಿನ ಸಿನಿಮಾಗಳು ಸೆಟ್ಟೇರುವುದು ಕಡಿಮೆಯಾಗಿದೆ. ಸಣ್ಣ ಬಜೆಟ್ಟಿನ ಸಿನಿಮಾಗಳು ಗೆದ್ದು ಬೀಗುತ್ತಿವೆ.

round up 2021 Small budget good story good films gvd
Author
Bangalore, First Published Dec 31, 2021, 9:26 AM IST

ಕೋಟಿ ಕೋಟಿ ಬಜೆಟ್ಟಿನ ಸಿನಿಮಾಗಳ ಕಾಲ ಮುಗಿಯಿತು! ಹಾಗಂತ ಹಿರಿಯ ನಟರೊಬ್ಬರು ಅಭಿಪ್ರಾಯಪಟ್ಟರು. ಅದು ನಿಜವೋ ಸುಳ್ಳೋ ಅನ್ನುವುದನ್ನು ಕಾಲವೇ ಹೇಳಲಿದೆ. ಆದರೆ ಅದು ಪೂರ್ತಿ ಸುಳ್ಳಲ್ಲ ಅನ್ನುವುದಕ್ಕೆ ಸಣ್ಣ ಸೂಚನೆಯಂತೂ ಸಿಕ್ಕಿದೆ. ದೊಡ್ಡ ಬಜೆಟ್ಟಿನ ಸಿನಿಮಾಗಳು ಸೆಟ್ಟೇರುವುದು ಕಡಿಮೆಯಾಗಿದೆ. ಸಣ್ಣ ಬಜೆಟ್ಟಿನ ಸಿನಿಮಾಗಳು ಗೆದ್ದು ಬೀಗುತ್ತಿವೆ.

2021 ಕಲಿಸಿಕೊಟ್ಟ ಪಾಠಗಳಲ್ಲಿ ಇದೂ ಒಂದು. ಸ್ಮಾಲ್‌ ಈಸ್‌ ಬ್ಯೂಟಿಫುಲ್‌. ಬಜೆಟ್ಟು ಸಣ್ಣದಾದಷ್ಟೂರಿಸ್ಕ್‌ ಕಡಿಮೆ, ಲಾಭ ಜಾಸ್ತಿ. ಇಂಥ ಪಾಠಗಳನ್ನು ಚಿತ್ರರಂಗ ಕಾಲಕಾಲಕ್ಕೆ ಕಲಿಯುತ್ತಲೇ ಬಂದಿದ್ದರೂ ಅದು 2021ರ ಕೊರೋನಾ ಹಿನ್ನೆಲೆಯಲ್ಲಿ ಮತ್ತಷ್ಟುನಿಚ್ಚಳವಾಯಿತು ಎಂದೇ ಹೇಳಬೇಕು. ಅದಕ್ಕೆ ತಕ್ಕಂತೆ ಪುಕ್ಸಟ್ಟೆಲೈಫು, ರತ್ನನ್‌ ಪ್ರಪಂಚ, ಗರುಡಗಮನ ವೃಷಭವಾಹನ ಮತ್ತು ಬಡವ ರಾಸ್ಕಲ್‌- ಈ ವರುಷದಲ್ಲಿ ಪ್ರೇಕ್ಷಕ ಮೆಚ್ಚಿದ ಚಿತ್ರಗಳಾಗಿವೆ. ಅವುಗಳು ನಿರ್ಮಾಪಕರ ಕೈಯನ್ನೂ ಹಿಡಿದಿವೆ.

Round Up 2021: ಸ್ಯಾಂಡಲ್‌ವುಡ್ ಕಳೆದುಕೊಂಡ ಸಿನಿ ಗಣ್ಯರು!

ಹಾಗಂತ ದೊಡ್ಡ ಬಜೆಟ್ಟಿನ ಸಿನಿಮಾಗಳನ್ನು ಪ್ರೇಕ್ಷಕ ದೂರ ಇಟ್ಟಿಲ್ಲ. ಆದರೆ ದೊಡ್ಡ ಬಜೆಟ್ಟಿನ ಸಿನಿಮಾಗಳಿಗೆ ಇದು ಕಾಲವಲ್ಲ. ಕೊರೋನಾ ಪೂರ್ವದಲ್ಲಿದ್ದ ಚಿತ್ರಮಂದಿರಗಳ ಪೈಕಿ ಶೇಕಡಾ 30ರಷ್ಟುಚಿತ್ರಮಂದಿರಗಳು ರೀಓಪನ್‌ ಆಗಿಲ್ಲ. ಶೇಕಡಾ 60ರಷ್ಟುಪ್ರೇಕ್ಷಕರು ಓಟಿಟಿಗೆ ಒಗ್ಗಿಕೊಂಡಿದ್ದಾರೆ. ಅದೆಂಥಾ ದೊಡ್ಡ ಸಿನಿಮಾ ಬಂದರೂ, ನಾಳೆ ಓಟಿಟಿಗೆ ಬಂದೇ ಬರುತ್ತದೆ ಎಂಬ ನಂಬಿಕೆಯಲ್ಲಿ ಬಹಳಷ್ಟುಮಂದಿ ಥೇಟರಿಗೆ ತಲೆ ಹಾಕುತ್ತಿಲ್ಲ. ಅವರ ನಂಬಿಕೆಯನ್ನು ಓಟಿಟಿ ಸುಳ್ಳುಮಾಡಿಲ್ಲ ಕೂಡ. ಯುವರತ್ನ ಒಂದೆರಡು ವಾರಕ್ಕೆ, ಭಜರಂಗಿ ಒಂದು ತಿಂಗಳಿಗೆ, ರತ್ನನ್‌ ಪ್ರಪಂಚ ಬಿಡುಗಡೆಯ ಮೊದಲೇ ಓಟಿಟಿಗೆ ಬಂದವು. ಒಂದು ಕಾಲದಲ್ಲಿ ಟೀವೀಲಿ ಬರುತ್ತೆ ಅನ್ನೋ ಮಂದಿ, ಈಗ ಓಟಿಟಿಯನ್ನು ನಂಬಿ ಕೂತಿದ್ದಾರೆ.

ಆ ಮಟ್ಟಿಗೆ ಓಟಿಟಿ ಟೀವಿಗಿಂತ ಅನುಕೂಲಕರವಾಗಿ ಪರಿಣಮಿಸಿದೆ. ಮೊಬೈಲಿನಲ್ಲಿ ಅವರವರಿಗೆ ಬಿಡುವಾಗಿರುವ ಹೊತ್ತಲ್ಲಿ ಸಿನಿಮಾ ನೋಡಬಹುದು. ಚಿತ್ರಮಂದಿರಕ್ಕಿಂತ ಇದು ಅಗ್ಗ ಮತ್ತು ಆರೋಗ್ಯಕರ. ಚಿತ್ರಮಂದಿರದಲ್ಲೇ ನೋಡಬೇಕು ಅನ್ನುವಂಥ ಸಿನಿಮಾಗಳನ್ನು ಕೂಡ ಓಟಿಟಿಯಲ್ಲಿ ನೋಡಿ ಆನಂದಿಸುವ ವ್ಯವಸ್ಥೆಯೂ ಇದೆ. ಮನೆಯಲ್ಲಿ ದೊಡ್ಡ ಟೀವಿ ಹಾಕಿಕೊಂಡರೆ ಚಿತ್ರಮಂದಿರದ ಇಫೆಕ್ಟೇ ಸಿಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಟ್ರಾಫಿಕ್ಕಿನ ಗಲಾಟೆಯಾಗಲೀ, ಆರೋಗ್ಯದ ಚಿಂತೆಯಾಗಲೀ ಇಲ್ಲದೇ ಸಿನಿಮಾ ನೋಡಬಹುದು. ಓಟಿಟಿಗೆ ಒಂದು ವರ್ಷಕ್ಕೆ ಕಟ್ಟುವ ಹಣ ಒಂದು ಸಾರಿ ಸಿನಿಮಾಕ್ಕೆ ಹೋಗಿ ಬಂದರೆ ಖರ್ಚಾಗುತ್ತದೆ ಅನ್ನುವುದು ಕೂಡ ಕೊರೋನಾ ನಂತರದ ಜ್ಞಾನೋದಯ.

Round Up 2021: ವರ್ಷದ ಬೆಸ್ಟ್ ಬಿಕಿನಿ ಲುಕ್‌ಗಳಿವು

ಅಂದರೆ ಪ್ರೇಕ್ಷಕ ಕೂಡ ಲೋ ಬಜೆಟ್‌ ಮಾದರಿಗೆ ಒಗ್ಗಿಹೋಗಿದ್ದಾನೆ. ಚಿತ್ರರಂಗ ಕೂಡ ಈಗ ಅದನ್ನೇ ಮಾಡಬೇಕಾಗಿದೆ. ಈ ವರುಷ ಬಂದಿರುವ ಆಘಾತಕರ ಸುದ್ದಿಯೆಂದರೆ ಸ್ಟಾರ್‌ ನಟರು ನಿರ್ಮಾಪಕರ ಹುಡುಕಾಟದಲ್ಲಿದ್ದಾರೆ. ಒಬ್ಬೊಬ್ಬ ನಟರಿಗೂ ಐದಾರು ಮಂದಿ ನಿರ್ಮಾಪಕರು ಅಡ್ವಾನ್ಸ್‌ ಕೊಟ್ಟು ಕಾಯುತ್ತಿರುತ್ತಿದ್ದರು. ಈಗ ಆ ಪರಿಸ್ಥಿತಿ ಬದಲಾಗಿದೆ. ನಲವತ್ತು ಕೋಟಿ ಹೂಡುವ ಮುನ್ನ ನಲವತ್ತು ಸಲ ಯೋಚಿಸುವ ಪರಿಸ್ಥಿತಿ ಇದೆ. ಇದು ಚಿತ್ರರಂಗವನ್ನು ಕಥೆ ಆಧರಿತ, ನಿರ್ದೇಶಕರೇ ಚುಕ್ಕಾಣಿಯಾಗಿರುವ ಮಾಧ್ಯಮವಾಗಿ ಬದಲಾಯಿಸಲು ಸಕಾಲ.

Follow Us:
Download App:
  • android
  • ios