Asianet Suvarna News Asianet Suvarna News

Round Up 2021: ಒಳ್ಳೇ ಕ್ಲೈಮ್ಯಾಕ್ಸು, ಆರ್ಡಿನರಿ ಓಪನಿಂಗ್‌, ಸೂಪರ್‌ ಸೆಕೆಂಡ್‌ ಹಾಫ್‌!

ಲೆಕ್ಕಪುಸ್ತಕದ ಪ್ರಕಾರ ತೆರೆಕಂಡ ಕನ್ನಡ ಸಿನಿಮಾಗಳು 106. ನೂರಾರು ಸಿನಿಮಾಗಳು ಬಂದವು ಅಂತ ತಮಾಷೆಯಾಗಿ ಹೇಳಬಹುದು. ತುಳು ಸಿನಿಮಾಗಳನ್ನೂ ಸೇರಿಸಿದರೆ ಟೋಟಲ್‌ 110. ಈ ವರ್ಷದ ಸಿನಿಮಾಗಳನ್ನು ಹಿಟ್ಟು ಪೊಟ್ಟು ಚಟ್ಟು ಅಂತೆಲ್ಲ ವರ್ಗೀಕರಣ ಮಾಡುವ ಹಾಗೆಯೇ ಇಲ್ಲ. ಯಾಕೆಂದರೆ ಇದು ಹೇಳಿಕೇಳಿ ಸಂಕಷ್ಟದ ವರ್ಷ. 
 

Round Up 2021 Good Climax Ordinary Opening Super Second Half gvd
Author
Bangalore, First Published Dec 31, 2021, 10:07 AM IST

ಲೆಕ್ಕಪುಸ್ತಕದ ಪ್ರಕಾರ ತೆರೆಕಂಡ ಕನ್ನಡ ಸಿನಿಮಾಗಳು 106. ನೂರಾರು ಸಿನಿಮಾಗಳು ಬಂದವು ಅಂತ ತಮಾಷೆಯಾಗಿ ಹೇಳಬಹುದು. ತುಳು ಸಿನಿಮಾಗಳನ್ನೂ ಸೇರಿಸಿದರೆ ಟೋಟಲ್‌ 110. ಈ ವರ್ಷದ ಸಿನಿಮಾಗಳನ್ನು ಹಿಟ್ಟು ಪೊಟ್ಟು ಚಟ್ಟು ಅಂತೆಲ್ಲ ವರ್ಗೀಕರಣ ಮಾಡುವ ಹಾಗೆಯೇ ಇಲ್ಲ. ಯಾಕೆಂದರೆ ಇದು ಹೇಳಿಕೇಳಿ ಸಂಕಷ್ಟದ ವರ್ಷ. ಬಿಡುಗಡೆಯಾದದ್ದೇ ಭಾಗ್ಯ! ಲಾಕ್‌ಡೌನ್‌, ಮುಕ್ತಾಯ, ಫಿಫ್ಟಿ ಪರ್ಸೆಂಟು, ಅಸ್ಥಿರತೆ, ಅನುಮಾನ, ಆತಂಕಗಳ ನಡುವೆಯೆ ಚಿತ್ರರಂಗ ಎದ್ದು ಬಿದ್ದು ಸೆಣೆಸಿದೆ. ಕ್ಲೈಮ್ಯಾಕ್ಸು ಚೆನ್ನಾಗಿತ್ತು, ಓಪನಿಂಗ್‌ ಆವರೇಜು, ಇಂಟರ್‌ವಲ್‌ ಪಾಯಿಂಟ್‌ ಸೂಪರ್‌, ಸೆಕೆಂಡ್‌ ಹಾಫ್‌ ದಿ ಬೆಸ್ಟ್‌.

ಎರಡು ಅಲೆ ಕೊರೋನಾ, ಎರಡೆರಡು ಸಲ ಲಾಕ್‌ಡೌನ್‌, ಆಗೀಗ ನೈಟ್‌ ಕರ್ಫ್ಯೂ ಇವೆಲ್ಲದರ ನಡುವೆ ಜನವರಿಯಲ್ಲಿ ನಿರ್ಮಾಪಕರು ವರಿ ಮಾಡಲಿಲ್ಲ. ಆದದ್ದಾಗಲಿ ಅಂತ ಹತ್ತು ಸಿನಿಮಾ ತೆರೆಗೆ ಬಿಟ್ಟರು. ಆ ಪ್ರಯೋಗ ಗೆದ್ದದ್ದು ಫೆಬ್ರವರಿಯಲ್ಲಿ. 28 ದಿನಗಳಲ್ಲಿ 19 ಸಿನಿಮಾಗಳು ಬಿಡುಗಡೆಯಾಗಿ ನಿಟ್ಟುಸಿರುಬಿಟ್ಟವು. ಅವುಗಳ ಪೈಕಿ ಗೆದ್ದದ್ದು ಧ್ರುವಸರ್ಜಾ ನಟನೆಯ ‘ಪೊಗರು’. ಮಾರ್ಚ್ ತಿಂಗಳ ಡಜನ್‌ ಚಿತ್ರಗಳ ಪೈಕಿ ರಿಷಬ್‌ ಶೆಟ್ಟಿಯ ‘ಹೀರೋ’ ಸದ್ದು ಮಾಡಿತು.

ಏಪ್ರಿಲ್‌ ಚಿತ್ರರಂಗಕ್ಕೆ ಕ್ರೂರಮಾಸ. ಕೇವಲ ನಾಲ್ಕು ಸಿನಿಮಾಗಳು ಬಂದವು. ಅವುಗಳ ಪೈಕಿ ಸೌಂಡು ಮಾಡಿದ್ದು ‘ಯುವರತ್ನ’. ಅದಕ್ಕೂ ಫಿಫ್ಟಿ ಪರ್ಸೆಂಟ್‌ ಸೀಟಿಂಗ್‌ ಅಡ್ಡಿಯಾಗಿ, ಬಹುಬೇಗ ಅದು ಓಟಿಟಿ ಸೇರಿತು. ಮೇ. ಜೂನ್‌, ಜುಲೈ ಶೂನ್ಯ ಮಾಸ. ಆಗಸ್ಟ್‌ನಲ್ಲಿ ಸ್ವಾತಂತ್ರ್ಯ ಸಿಕ್ಕರೂ ಪ್ರೇಕ್ಷಕರು ಅಂಥ ಉತ್ಸಾಹ ತೋರಲಿಲ್ಲ. ಅದರ ನಡುವೆಯೇ ‘ಸೀತಾರಾಮ್‌ ಬಿನೋಯ್‌’ ಮತ್ತು ಸೆಪ್ಟೆಂಬರ್‌ನ 7ರ ಪೈಕಿ ‘ಪುಕ್ಸಟ್ಟೆ ಲೈಫು’ ಗಮನ ಸೆಳೆದವು.

Round Up 2021: ಸ್ಯಾಂಡಲ್‌ವುಡ್ ಕಳೆದುಕೊಂಡ ಸಿನಿ ಗಣ್ಯರು!

ಅಕ್ಟೋಬರ್‌ ಸ್ಟಾರ್‌ ಮಂತ್‌. ತೆರೆಕಂಡ 12 ಚಿತ್ರಗಳ ಪೈಕಿ ‘ಕೋಟಿಗೊಬ್ಬ 3’, ‘ಸಲಗ’, ‘ಭಜರಂಗಿ 2’ - ಮೂರು ಸ್ಟಾರ್‌ ಸಿನಿಮಾಗಳು. ಅವು ಯಥಾನುಶಕ್ತಿ ಪ್ರೇಕ್ಷಕರನ್ನು ಸೆಳೆದು ಸಂಭ್ರಮಾಚರಣೆ ಮಾಡಿದವು. ಓಟಿಟಿಯಲ್ಲೂ ಡಾಲಿ ಧನಂಜಯ್‌ ನಟನೆಯ ‘ರತ್ನನ್‌ ಪ್ರಪಂಚ’ ಮೆಚ್ಚುಗೆ ಗಳಿಸಿತು. ನವೆಂಬರ್‌ 18 ಚಿತ್ರಗಳ ಬಿಡುಗಡೆಗೆ ಸಾಕ್ಷಿಯಾಯಿತು. ‘ಪ್ರೇಮಂ ಪೂಜ್ಯಂ’, ‘ಗರುಡಗಮನ ವೃಷಭ ವಾಹನ’, ‘100’ ಹಾಗೂ ‘ಸಖತ್‌’ ಚಿತ್ರಗಳು ಬಾಕ್ಸಾಫೀಸಲ್ಲಿ ಝಣಝಣ ಎಂದವು. ಪ್ರಶಸ್ತಿ ವಿಜೇತ ‘ಅಕ್ಷಿ’ ಚಿತ್ರ ಸೇರಿ ಡಿಸೆಂಬರ್‌ ತಿಂಗಳಲ್ಲಿ ಬಂದಿದ್ದು 15 ಚಿತ್ರಗಳು. ಈ ಪೈಕಿ ‘ದೃಶ್ಯ 2’, ‘ಬಡವ ರಾಸ್ಕಲ್‌’, ‘ರೈಡರ್‌’ ಹಾಗೂ ‘ಲವ್‌ ಯೂ ರಚ್ಚು’ ಚಿತ್ರಗಳಿಗೆ ಪ್ರೇಕ್ಷಕ ಮುಗುಳ್ನಕ್ಕ.

ಮೇ, ಜೂನ್‌, ಜುಲೈ ಶೂನ್ಯ ಮಾಸ: ವಾರಕ್ಕೆ ಐದಾರು ಸಿನಿಮಾ ತೆರೆಕಾಣುತ್ತಿದ್ದ ಚಿತ್ರರಂಗ, ಮೂರು ತಿಂಗಳು ಮೌನವಾಗಿ ಉಳಿಯಿತು. ಪ್ರೇಕ್ಷಕರು ಓಟಿಟಿಯಲ್ಲಿ ಸುಖವಾಗಿದ್ದರು. ನಿರ್ಮಾಪಕರು ಕಾತರದಿಂದ ಬಿಡುಗಡೆಯ ಭಾಗ್ಯಕ್ಕಾಗಿ ಕಾದರು. ಮೂರು ತಿಂಗಳಲ್ಲಿ ಒಂದೇ ಒಂದು ಹೊಸ ಸಿನಿಮಾ ‘ಇಕ್ಕಟ್‌’ ಓಟಿಟಿಯಲ್ಲಿ ಬಂದಿತು.

ಓಟಿಟಿಗೆ ಜೈ: ‘ಇಕ್ಕಟ್‌’, ‘ರತ್ನನ್‌ ಪ್ರಪಂಚ’, ‘1980’ ಹಾಗೂ ‘ಕನ್ನಡಿಗ’ ಚಿತ್ರಗಳು ನೇರವಾಗಿ ಓಟಿಟಿಯಲ್ಲಿ ತೆರೆಕಂಡವು. ಈ ಚಿತ್ರಗಳ ಪೈಕಿ ‘ಇಕ್ಕಟ್‌’, ‘ಕನ್ನಡಿಗ’ ಹಾಗೂ ‘ರತ್ನನ್‌ ಪ್ರಪಂಚ’ ಚಿತ್ರಗಳು ಮೆಚ್ಚುಗೆ ಪಡೆದವು. 1980 ಬಂದು ಹೋದದ್ದು ಗೊತ್ತೇ ಆಗಲಿಲ್ಲ.

2021 ಕಲಿಸಿದ ಪಾಠಗಳು: ಸಣ್ಣ ಬಜೆಟ್‌, ಒಳ್ಳೆಯ ಕತೆ, ಚೆಂದದ ಚಿತ್ರ

ಟೀವಿ ಪ್ರೀಮಿಯರ್‌: ಚಿತ್ರಮಂದಿರಗಳಲ್ಲಿ ತೆರೆಕಂಡು ಯಶಸ್ಸು ಆದ ಮೇಲೆ ಟೀವಿ ಬರುವುದು ಸಿನಿಮಾ ವಾಡಿಕೆ. ವಿಜಯ್‌ ರಾಘವೇಂದ್ರ ಅಭಿನಯದ ‘ಸೀತಾರಾಮ್‌ ಬಿನೋಯ್‌’ ಸಿನಿಮಾ ಮೊದಲು ಟೀವಿಯಲ್ಲಿ ತೆರೆಕಂಡಿತು. ನಂತರ ಚಿತ್ರಮಂದಿರಕ್ಕೆ ಬಂದು ಅಲ್ಲೂ ಜನಮನ್ನಣೆ ಗಳಿಸಿತು.

Round Up 2021 Good Climax Ordinary Opening Super Second Half gvd

ಕೊನೆಯ ಓವರಿಗೆ 3:
ಡಿಸೆಂಬರ್‌ 31ರಂದು ಮೂರು ಸಿನಿಮಾಗಳು ತೆರೆಕಂಡವು. ಅವುಗಳ ಪೈಕಿ ಪ್ರಜ್ವಲ್‌ ದೇವರಾಜ್‌ ನಟನೆಯ ‘ಅರ್ಜುನ್‌ ಗೌಡ’ ಹಾಗೂ ಅಜಯ್‌ ರಾವ್‌ ಅಭಿನಯದ ‘ಲವ್‌ ಯೂ ರಚ್ಚು’ ಚಿತ್ರಗಳು ಭರವಸೆ ಮೂಡಿಸಿವೆ.

ಒಟ್ಟು ಬಿಡುಗಡೆ ಆದ ಚಿತ್ರಗಳು: 106

ಓಟಿಟಿಗೆ ಬಂದ ಚಿತ್ರಗಳು: 4

ಚಿತ್ರರಂಗದ ಒಟ್ಟು ಹೂಡಿಕೆ: 500 ಕೋಟಿ

ಗ್ರಾಂಡ್‌ 6
1. ಪೊಗರು
2. ಯುವರತ್ನ
3. ಕೋಟಿಗೊಬ್ಬ 3
4. ಭಜರಂಗಿ 2
5. ಮದಗಜ
6. ರೈಡರ್‌

ಬ್ರಾಂಡ್‌ 6
1. ಸೀತಾರಾಮ್‌ ಬಿನೋಯ್‌
2. ಪುಕ್ಸಟ್ಟೆ ಲೈಫ್‌
3. ಪ್ರೇಮಂ ಪೂಜ್ಯಂ
4.100
5. ಸಖತ್‌
6. ಕಲಿವೀರ

ಲೆಜೆಂಡರಿ 3
1. ಸಲಗ
2. ಗರುಡಗಮನ ವೃಷಭ ವಾಹನ
3. ಬಡವ ರಾಸ್ಕಲ್‌

Follow Us:
Download App:
  • android
  • ios