Asianet Suvarna News Asianet Suvarna News

ನೇತಾಜಿ ಸುಭಾಷ್ ಚಂದ್ರ ಬೋಸ್ ಕಟ್ಟಿದ 'ನೀರಾ ಆರ್ಯ' ಕಥೆಗೆ ರೂಪಾ ಅಯ್ಯರ್ ನಾಯಕಿ!

ನೇತಾಜಿ ಸುಭಾಷ್ ಚಂದ್ರ ಬೋಸ್ 126ನೃ ಜನ್ಮದಿನಾಚರಣೆ ಪ್ರಯುಕ್ತ ನೀರಾ ಆರ್ಯ ಸಿನಿಮಾ ಫಸ್ಟ್‌ ಲುಕ್ ಬಿಡುಗಡೆ. 

Roopa Iyer acts and directs freedom fighter Neera arya biography vcs
Author
First Published Jan 22, 2023, 4:05 PM IST

ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕಿ ರೂಪಾ ಐಯ್ಯರ್‌ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 126ನೇ ಜನ್ಮ ದಿನದ ಪ್ರಯುಕ್ತ ನೀರಾ ಅರ್ಯ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡಿದ್ದಾರೆ.  ಬೆಂಗಳೂರಿನ ಜಯನಗರದಲ್ಲಿರುವ ಎಂ.ಇ.ಎಸ್ ಗ್ರೌಂಡ್‌ನಲ್ಲಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತ್ತು. ಕಾರ್ಯಕ್ರಮದಲ್ಲಿ ನಟಿ ನಿರ್ದೇಶಕಿ ರೂಪಾ ಅಯ್ಯರ್, ನಟಿ ಮಾಲಾಶ್ರೀ , ಕರ್ನಾಟಕ ವಿಧಾನಸಭಾ ಪರಿಷತ್ ಸಭಾಪತಿ ಬಸವರಾಜ್ ಹೋರಟ್ಟಿ ಮತ್ತು ಕೇಂದ್ರ ಸಚಿವ ಭಗವಂತಗ ಖೂಬಾ ಭಾಗಿಯಾಗಿದ್ದರು. ನೇತಾಜಿಯವರ ಮರಿ ಮೊಮ್ಮಗಳು ರಾಜಶ್ರೀ ಚೌದರಿ ಕೂಡ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. 

ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಕಟ್ಟಿರುವ ಮೊದಲ ಮಹಿಳಾ ಆರ್ಮಿಯ ಕಥೆ ಆಧಾರಿತ ಸಿನಿಮಾ ಇದಾಗಿದ್ದು 'ನೀರಾ ಅರ್ಯ' ಎಂದು ಚಿತ್ರಕ್ಕೆ ಹೆಸರಿಟ್ಟಿದ್ದಾರೆ. ಸ್ವತಃ  ರೂಪಾ ಅಯ್ಯರ್ ನಟಿಸಿ ನಿರ್ದೇಶಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ವಿಶ್ವ ಹಿಂದು ಮಹಿಳಾ ಪ್ರತಿಷ್ಠಾನ ಆಯೋಜಿಸಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗಿತ್ತು. 

'ರೂಪಾ ಅಯ್ಯರ್ ನೀರಾ ಆರ್ಯ ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಮಾಡೋಕೆ ಧೈರ್ಯ ಬೇಕು. ರೂಪ ಅವರನ್ನು ನೋಡಿದ್ದರೆ ನೀರಾ ಆರ್ಯರನ್ನೇ ನೋಡಿದ ಹಾಗಾಗುತ್ತದೆ. ರೂಪಾ ಅವರಲ್ಲಿ ನೀರಾ ಆರ್ಯಗಿದ್ದ ಪವರ್ ಇದೆ' ಎಂದು ಸುಭಾಷ್ ಚಂದ್ರ ಬೋಸ್ ಅವರ ಮರಿ ಮೊಮ್ಮಗಳು ರಾಜಶ್ರೀ ಔದರಿ ಮಾತನಾಡಿದ್ದಾರೆ. 

ನೇತಾಜಿ ದೇಶಭಕ್ತಿಯ ಬೀಜ ಬಿತ್ತಿದ್ರು: ರೂಪಾ ಅಯ್ಯರ್

'ಸುಭಾಷ್ ಚಂದ್ರ ಬೋಸ್ ಅವರ ಮರಿ ಮೊಮ್ಮಗಳನ್ನು ಭೇಟಿ ಮಾಡಿ ತುಂಬಾನೇ ಸಂತೋಷವಾಗುತ್ತಿದೆ. ನೀರಾ ಅರ್ಯ ಸಿನಿಮಾ ಟೀಸರ್‌ನ  ನೋಡಿದೆ ಚೆನ್ನಾಗಿದೆ. ದೇಶಕ್ಕಾಗಿ ನೀರಾ ಆರ್ಯ ಎಷ್ಟು ಕಷ್ಟ ಪಟ್ಟಿದ್ದಾರೆ ಅಂತ ಗೊತ್ತಿದೆ. ಒಂದು ಹೆಣ್ಣು ಕಾಳಿ ಅವತಾರೆ ಎತ್ತಿದ್ರೆ ಶಿವನನ್ನೂ ಎದುತಿಸಬಹುದು. ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು ಅಲ್ಲ ಒಳಗೆ ಸೇರದೇ ಇದ್ರೂ ಹುಡುಗಿ ಗಂಡು ಆಗಬೇಕು. ಎಲ್ಲರೂ ನ್ಯಾಯಕ್ಕೋಸ್ಕರ ಹೋರಾಡಬೇಕು. ಪ್ರತಿಯೊಬ್ಬರು ಜೀವನದಲ್ಲಿ ಧೈರ್ಯ ಎದುರಿಸಬೇಕು. ನೀರಾ ಆರ್ಯ ಸಿನಿಮಾವನ್ನು ರೂಪಾ ಅಯ್ಯರ್ ಚೆನ್ನಾಗಿ ಮಾಡಿದ್ದಾರೆ.ಇದು ಸುಭಾಷ್ ಚಂದ್ರ ಬೋಸ್ ಅವರ ಮಹಿಳಾ ಆರ್ಮಿಯ ಕಥೆ ಇದು, ಇಂತಹ ಕಥೆ ಮಾಡಲು ಧೈರ್ಯ ಬೇಕು' ಎಂದು ಕನಸಿನ ರಾಣಿ ಮಾಲಾಶ್ರೀ ಮಾತನಾಡಿದ್ದಾರೆ. 

'ನೀತಾಜಿ ಸುಭಾಷ್ ಚಂದ್ರ ಬೋಸ್‌ ಅವರು ಒಂದು ಭಾಷಣ ಮಾಡಿದ್ದರೆ ಅಲ್ಲಿದ್ದ ಜನರು ಪ್ರಚೋಧನೆ ಆಗುತ್ತಿದ್ದರು. ನೇಜಾಜಿ ಅವರ ವ್ಯಕ್ತಿತ್ವ ಬಹಳ ದೊಡ್ಡದ್ದು. ದೇಶ ಭಕ್ತಿಯ ಬೀಜ ಬಿತ್ತಿದ್ರು ನೇತಾಜಿ ಅವರು. ಮೊದಲ ಮಹಿಳಾ ಆರ್ಮಿ ಕಟ್ಟಿದ್ದವರು ನೇತಾಜಿ ಅವರು. ಸುಭಾಷ್‌ ಚಂದ್ರ ಬೋಸ್‌ರನ್ನು ಉಳಿಸಿಕೊಳ್ಳಲು ತನ್ನ ಗಂಡನನ್ನೇ ಕೊಂದ ಮಹಿಳೆ ನೀರಾ ಆರ್ಯ. ಆದರೆ ಸರ್ಕಾರ ನೀರಾ ಆರ್ಯಗೆ ಯಾವುದೇ ಗೌರವ ಕೊಟ್ಟಿಲ್ಲ, ಅವರ ಆತ್ಮಕಥೆಯನ್ನು ಹೊರ ತರಲು ಬಿಡಲಿಲ್ಲ ಅಂತಹ ಸಿನಿಮಾವನ್ನು ನಾವು ಮಾಡುತ್ತಿದ್ದೇನೆ' ಎಂದು ರೂಪಾ ಅಯ್ಯರ್ ಹೇಳಿದ್ದಾರೆ.

Roopa Iyer acts and directs freedom fighter Neera arya biography vcs

'ನೇತಾಜಿ ಅವರ ಜನ್ಮ ದಿನವನ್ನು ರೂಪಾ ಅಯ್ಯರ್ ಆಚರಿಸುತ್ತಿದ್ದಾರೆ. ನೇತಾಜಿ ಅವರು ಯಾರಿಗೆ ಇನ್ ಸ್ಪೈರ್ ಮಾಡಿಲ್ಲ ಹೇಳಿ? ಪ್ರತಿಯೊಬ್ಬರಿಗೂ ಮಾರ್ಗದರ್ಶಿ ಆಗಿದ್ದಾರೆ. ರಕ್ತ ಕೊಡಿ ನಿಮಗೆ ಸ್ವಾತಂತ್ರ್ಯ ಕೊಡುತ್ತೀನಿ ಅಂತ ಹೇಳಿದವರು. ನಮ್ಮ ಯುವ ಜನಾಂಗದವರು ನೇತಾಜಿ ಅವರನ್ನು ನೇಪತ್ಯಕ್ಕೆ ತಳ್ಳಿದ್ದಾರೆ ಅನಿಸುತ್ತಿದೆ. ಮಾತಿನಿಂದ ಏನೂ ಆಗಲ್ಲ ಆಕ್ಷನ್ ನಿಂದ ಆಗುತ್ತದೆ ಎಂದವರು ಅವರು. ವಿಚಾರಗಳು ವಿಚಾರಗಳಾಗಿ ಉಳಿಯಬಾರದು ಅದು ಆಕ್ಷನ್ ಆಗಿ ಹೊರ ಬರಬೇಕು ಅದನ್ನು ಮಾಡಿ ತೋರಿಸಿದ್ದವರು ನೇತಾಜಿ. ರಾಷ್ಟ್ರ ಯಶಸ್ವಿಗೆ ನಾವು ಎಲ್ಲರೂ ಕಾರ್ಯೋನ್ಮುಖರಾಗಬೇಕು. ನಮ್ಮ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂದು ಎಲ್ಲರೂ ಚೂರು ಯೋಚಿಸಬೇಕು. ರೂಪಾ ಅಯ್ಯರ್ ನೇತಾಜಿ ಅವರ ಕಟ್ಟಿದ ಮಹಿಳಾ ಸೈನ್ಯದ ಸಿನಿಮಾ ಮಾಡಿದ್ದಾರೆ ಚಿತ್ರಕ್ಕೆ ಒಳ್ಳೆಯದಾಗಲಿ' ಎಂದಿದ್ದಾರೆ ಐಪಿಎಸ್‌ ಅಧಿಕಾರಿ ರೂಪಾ ಮೌದ್ಗಿಲ್‌. 

 

Follow Us:
Download App:
  • android
  • ios