Asianet Suvarna News Asianet Suvarna News

ರಾಕಿ ಬಗ್ಗೆ ಇಲ್ಲಿದೆ ಮತ್ತೊಂದು Exclusive: ಹೊಸ ಹೆಜ್ಜೆಗೆ ಮುನ್ನುಡಿ ಬರೆದ ಯಶ್!

ರಾಕಿಂಗ್ ಸ್ಟಾರ್ ಯಶ್ ಸಧ್ಯ ಎಕ್ಸ್ಕ್ಲ್ಯೂಸಿವ್ ಸುದ್ದಿಗಳ ಹೆಡ್ ಆಫೀಸ್ ಆಗಿದ್ದಾರೆ. ತಾಕಂದ್ರೆ ಯಶ್ ಬಗ್ಗೆ ಉತ್ತರದಿಂದ ದಕ್ಷಿಣ, ಪೂರ್ವದಿಂದ ಪಶ್ಚಿಮದ ವರೆಗೂ ದಿನಕ್ಕೊಂದು ಸುದ್ದಿ ಹರಿದಾಡುತ್ತವೆ.. ಈಗ ಸ್ಯಾಂಡಲ್ವುಡ್ನ ಈ ರಾಮಾಚಾರಿ ಹೊಸ ಹೆಜ್ಜೆಯೊಂದಕ್ಕೆ ಮುನ್ನುಡಿ ಬರೆದು ರೆಡಿಯಾಗಿದ್ದಾರೆ ಅಂತ ಮತ್ತೊಂದು ಎಕ್ಸ್ಕ್ಲ್ಯೂಸೀವ್ ಸುದ್ದಿ ಸಿಕ್ಕಿದೆ. 

Rocking Star Yash wrote the foreword to a new step gvd
Author
First Published Nov 10, 2023, 8:16 PM IST

ರಾಕಿಂಗ್ ಸ್ಟಾರ್ ಯಶ್ ಸಧ್ಯ ಎಕ್ಸ್ಕ್ಲ್ಯೂಸಿವ್ ಸುದ್ದಿಗಳ ಹೆಡ್ ಆಫೀಸ್ ಆಗಿದ್ದಾರೆ. ತಾಕಂದ್ರೆ ಯಶ್ ಬಗ್ಗೆ ಉತ್ತರದಿಂದ ದಕ್ಷಿಣ, ಪೂರ್ವದಿಂದ ಪಶ್ಚಿಮದ ವರೆಗೂ ದಿನಕ್ಕೊಂದು ಸುದ್ದಿ ಹರಿದಾಡುತ್ತವೆ.. ಈಗ ಸ್ಯಾಂಡಲ್ವುಡ್ನ ಈ ರಾಮಾಚಾರಿ ಹೊಸ ಹೆಜ್ಜೆಯೊಂದಕ್ಕೆ ಮುನ್ನುಡಿ ಬರೆದು ರೆಡಿಯಾಗಿದ್ದಾರೆ ಅಂತ ಮತ್ತೊಂದು ಎಕ್ಸ್ಕ್ಲ್ಯೂಸೀವ್ ಸುದ್ದಿ ಸಿಕ್ಕಿದೆ. ಯಶ್ ಸಿನಿಮಾ ಅನೌನ್ಸ್ ಮಾಡ್ತಾರೆ ಅಂತ ಅವರ ಫ್ಯಾನ್ಸ್ ಅದೆಷ್ಟು ಹಬ್ಬಗಳನ್ನ ಕಳೆದಿದ್ದಾರೆ ಅಲ್ವಾ. ಈಗ ಪ್ಯಾನ್ ಇಂಡಿಯಾ ತುಂಬ ನಡೆಯೋ ಹಬ್ಬ ದೀಪಾವಳಿ ಬಂದಿದೆ. ಈ ದೀಪಾವಳಿಗೆ ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಸಿನಿಮಾ ಅನೌನ್ಸ್ ಮಾಡ್ತಾರೆ. 

ಇದು ದೀಪಾವಳಿ ಧಮಾಕ ಅಂತ ಎಲ್ಲಾ ಕಡೆ ಸುದ್ದಿ ಹೊರ ಬಂದಿದೆ. ದೀಪಾವಳಿ ಹಬ್ಬಕ್ಕೆ ಯಶ್ ಸಿನಿಮಾ ಅನೌನ್ಸ್ ಆಗೋ ಸುದ್ದಿ ಲೀಕ್ ಆಗಿದೆ. ಆದ್ರೆ ಯಾವ್ ಸಿನಿಮಾ ಅನ್ನೋದೆ ಈಗ ಕಾಡ್ತಿರೋ ಪ್ರಶ್ನೆ. ಯಾಕಂದ್ರೆ ಯಶ್ ಬಾಲಿವುಡ್ನಲ್ಲಿ ರಾಮಾಯಣ ಸಿನಿಮಾ ಮಾಡ್ತಾರೆ ಅಂತ ಹೇಳಲಾಗ್ತಿದೆ. ಇದರ ಜತೆಗೆ ಯಶ್ 19 ಕೂಡ ರೆಡಿಯಾಗಿದೆ. ಆದ್ರೆ ಈ ಎರಡರಲ್ಲಿ ಯಾವ್ ಸಿನಿಮಾ ಅನ್ನೋದೆ ಈಗ ಇರೋ ಇಂಟ್ರೆಸ್ಟಿಂಗ್ ವಿಷಯ. ಯಶ್ ದೀಪಾವಳಿ ಹಬ್ಬವನ್ನ ಭರ್ಜರಿಯಾಗೆ ಆಚರಿಸೋಕೆ ಫ್ಯಾನ್ಸ್ಗೆ ಅಸ್ತು ಅಂತಾರೋ ಇಲ್ವೋ ಅದು ರಾಕಿಗೆ ಗೊತ್ತು. ಆದ್ರೆ ಯಶ್ ಮಾತ್ರ ಕಳೆದ ಮೂರ್ನಾಲ್ಕು ತಿಂಗಳಿನಿಂದ ಮೂರು ದೇಶ ಸುತ್ತಿದ್ದಾರೆ. 

8000 ಕಿಲೋ ಮೀಟರ್ ಪ್ರಯಾಣ ಮಾಡಿದ್ದಾರೆ. ಒಂದೊಂದು ದೇಶದಲ್ಲಿ 25 ದಿನ ಕಾಲ ಕಳೆದಿದ್ದಾರೆ. ಅದು ಯಾರಿಗಾಗಿ ಯಾಕಾಗಿ ಅನ್ನೋದೇ ಈಗಿರೋ ಕುತೂಹಲ. ಯಶ್ 19 ಸಿನಿಮಾ ಫಸ್ಟ್ ಲುಕ್ ರೆಡಿಯಾಗಿ 2-3 ತಿಂಗಳಾಗಿದೆ. ಟೈಟಲ್ ಟೀಸರ್ ರೆಡಿಯಾಗಿ ಬಹಳ ದಿನಗಳಾಗಿವೆ. ಆದ್ರೆ ಯಶ್ ಮಾತ್ರ ಶ್ರೀಲಂಕಾದಲ್ಲಿ 15 ದಿನ, ಲಂಡನ್ನಲ್ಲಿ 25 ದಿನ ಕಳೆದ್ರು. ಅಷ್ಟೆ ಅಲ್ಲ ಮಲೇಶಿಯಾದಲ್ಲಿ 10 ದಿನ ಕಳೆದ್ರು. ವಿದೇಶದಲ್ಲಿ ಹಲವು ಟೆಕ್ನಿಷಿಯನ್ಸ್ ಭೇಟಿ ಮಾಡಿ ಮುಂದಿನ ಸಿನಿಮಾಗೆ ಬೇಕಾಗಿರುವ ಪೂರ್ವ ಭಾವಿ ತಯಾರಿ ಮಾಡಿದ್ದಾರೆಂತೆ. ಇಷ್ಟೆಲ್ಲಾ ಆದ್ಮೇಲೆ ಯಶ್ ಹೊಸ ಸಿನಿಮಾ ಅನೌನ್ಸ್ ಮಾಡಿಯೇ ಮಾಡ್ತಾರೆ ಅನ್ನೋ ಆಸೆಗಣ್ಣಿನಲ್ಲಿ ಫ್ಯಾನ್ಸ್ ಇದ್ದಾರೆ. ಅದು ದೀಪಾವಳಿಗೆ ಈಡೇರುತ್ತಾ ಅನ್ನೋದೆ ಈಗಿರೋ ಕುತೂಹಲ. 

ರಾಕಿ ಬಾಯ್ ಬಗ್ಗೆ ಸಿಕ್ತು ಮತ್ತೊಂದು Exclusive: ಆ ಡೈರೆಕ್ಟರ್‌ಗೆ ಸಿಕ್ಕೇ ಬಿಡ್ತು ಯಶ್ ಕಾಲ್ ಶೀಟ್!

ಬಾಲಿವುಡ್ ರಾಮಾಯಣಕ್ಕೆ ಯಶ್ ಸಂಭಾವನೆ ಎಷ್ಟು?: ಯಶ್ 19 , ಕೆಜಿಎಫ್ 3 ಸಿನಿಮಾಗಳು ಯಶ್ ಖಾತೆಯಲ್ಲಿದ್ದು ಅದಕ್ಕೂ ಮುನ್ನ ಯಶ್ ರಾವಣನಾಗ್ತಾರೆ ಅನ್ನೋ ಸುದ್ದಿ ದಟ್ಟವಾಗಿ ಹಬ್ಬಿದೆ.ಬಾಲಿವುಡ್ನಲ್ಲಿ ರಾಮಾಯಣ ಮಾಡೋದು ಖಚಿತವಾಗಿದೆ. ರಣ್ಬೀರ್ಕಪೂರ್ ರಾಮನಾಗಿ ಹಾಗೂ ಸಾಯಿಪಲ್ಲವಿ ಸೀತೆಯಾಗಿ ನಟಿಸುವುದು ಖಚಿತವಾಗಿದೆ, ಇ್ತತ ರಾಕಿಭಾಯ್ ಯಶ್ ರಾವಣನ ಪಾತ್ರ ಮಾಡಬೇಕೆಂದು ಅವರಿಗಾಗಿ ಈಗಾಗಲೆ ಲುಕ್ ಟೆಸ್ಟ್ ಕೂಡ ಮಾಡಲಾಗಿದೆಯೆಂದು ಚರ್ಚೆಗಳಾಗುತ್ತಿವೆ. ರಾಮನ ಪಾತ್ರಧಾರಿ ರಣ್ಬೀರ್ ಕಪೂರ್ಗಿಂತ ಯಶ್ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಯಶ್ 100 ರಿಂದ 150 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆಂಬ ಸುದ್ದಿ ಇದೀಗ ಬಾಲಿವುಡ್ ಅಂಗಳಲ್ಲಿದೆ. 

Follow Us:
Download App:
  • android
  • ios