Asianet Suvarna News Asianet Suvarna News

ರಾಕಿ ಬಾಯ್ ಬಗ್ಗೆ ಸಿಕ್ತು ಮತ್ತೊಂದು Exclusive: ಆ ಡೈರೆಕ್ಟರ್‌ಗೆ ಸಿಕ್ಕೇ ಬಿಡ್ತು ಯಶ್ ಕಾಲ್ ಶೀಟ್!

ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಚಿಕ್ಕದೊಂದು ಸುದ್ದಿ ಬಂದ್ರು ಅದು ನ್ಯಾಷನಲ್ ಇಶ್ಯೂ ಆಗುತ್ತೆ. ಯಾಕಂದ್ರೆ ಯಶ್ ಈಗ ನ್ಯಾಷನಲ್ ಸ್ಟಾರ್. ಹೀಗಾಗೆ ಯಶ್ ಬಗ್ಗೆ ಈಗ ದೇಶಾದ್ಯಂತ ಎಕ್ಸ್ಕ್ಲ್ಯೂಸೀವ್ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

Director Nitesh Tiwari got a call sheet from Yash gvd
Author
First Published Nov 8, 2023, 8:12 PM IST

ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಚಿಕ್ಕದೊಂದು ಸುದ್ದಿ ಬಂದ್ರು ಅದು ನ್ಯಾಷನಲ್ ಇಶ್ಯೂ ಆಗುತ್ತೆ. ಯಾಕಂದ್ರೆ ಯಶ್ ಈಗ ನ್ಯಾಷನಲ್ ಸ್ಟಾರ್. ಹೀಗಾಗೆ ಯಶ್ ಬಗ್ಗೆ ಈಗ ದೇಶಾದ್ಯಂತ ಎಕ್ಸ್ಕ್ಲ್ಯೂಸೀವ್ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಅದೇ ಯಶ್ ಕಾಲ್ ಶೀಟ್ ವಿಚಾರ. ಹೌದು, ನಟ ಯಶ್ ಭಾರತೀಯ ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಒಬ್ಬರಿಗೆ ತಮ್ಮ ಕಾಲ್ಶೀಟ್ ಕೊಟ್ಟಿದ್ದಾರಂತೆ. ಆ ಸ್ಟಾರ್ ಡೈರೆಕ್ಟರ್ ಯಾರು ಅಂತ ಕೇಳಿದ್ರೆ, ಮಲೆಯಾಳಂ ನ ರಾಷ್ಟ್ರ ಪ್ರಶಸ್ತಿ ವಿಜೇತ ಡೈರೆಕ್ಟರ್ ಗೀತು ಮೋಹನ್ ದಾಸ್ ವಿಚಾರ ಅಂತೂ ಅಲ್ಲವೇ ಇಲ್ಲ. 

ಇವ್ರು ಮತ್ತೊಬ್ಬ ಹೊಸ ಡೈರೆಕ್ಟರ್ ಅನ್ನೋದೆ ಈಗ ಇಂಟ್ರೆಸ್ಟಿಂಗ್. ಯಶ್ ತನ್ನ 19ನೇ ಸಿನಿಮಾವನ್ನ ಗೀತು ಮೋಹನ್ ದಾಸ್ ಡೈರೆಕ್ಷನ್ನಲ್ಲಿ ನಟಿಸೋದು ಕನ್ಫರ್ಮ್. ಆದ್ರೆ ಈಗ ಯಶ್ ಕಾಲ್ ಶೀಟ್ ಕೊಟ್ಟಿರೋದು ಬಾಲಿವುಡ್ ಡೈರೆಕ್ಟರ್ ನಿತೀಶ್ ತಿವಾರಿಗಂತೆ. 'ದಂಗಲ್‌' ಸಿನಿಮಾ ನಿರ್ದೇಶಕ ನಿತೇಶ್ ತಿವಾರಿ 'ರಾಮಾಯಣ' ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗಾಗಿ ಯಶ್ 15 ದಿನ ಮೀಸಲಿಟ್ಟಿದ್ದಾರಂತೆ. ನಿರ್ದೇಶಕ ನಿತೀಶ್ ತಿವಾರಿ ರಾಮಾಯಣವನ್ನ ಮೂರು ಪಾರ್ಟ್ನಲ್ಲಿ ಸಿದ್ಧಪಡಿಸುತ್ತಿದ್ದಾರೆ. 

ರಾವಣನ ರೋಲ್ನಲ್ಲಿ ಬರೋ ಯಶ್ ಮೊಲದ ಪಾರ್ಟ್ ಶೂಟಿಂಗ್ಗೆ 15 ದಿನ ಕಾಲ್ಶೀಟ್ ಕೊಟ್ಟಿದ್ದಾರೆ ಅಂತ ಸುದ್ದಿ ಹರಿದಾಡ್ತಿದೆ. 2024ರಿಂದ ರಾಮಾಯಣ ಚಿತ್ರೀಕರಣ ಶುರುವಾಗುತ್ತಂತೆ. ಬಾಲಿವುಡ್‌ ಸ್ಟಾರ್ ರಣಬೀರ್ ಕಪೂರ್ ರಾಮನ ರೋಲ್ ಮಾಡ್ತಾರೆ. ಆಲಿಯಾ ಭಟ್ ಸೀತೆ ಅಂತ ಹೇಳಿದ್ರು. ಆದ್ರೆ ಈಗ ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಸೆಲೆಕ್ಟ್ ಆಗಿದ್ದಾರಂತೆ ಅಂತ ಹೇಳಲಾಗ್ತಿದೆ. 

ಬಾಲಿವುಡ್ ರಾಮಾಯಣಕ್ಕೆ ಯಶ್ ಸಂಭಾವನೆ ಎಷ್ಟು?: ರಾವಣನ ಪಾತ್ರಕ್ಕೆ ಭರ್ಜರಿ ತಯಾರಿ!

ರಾಮಾಯಣ ಪಾರ್ಟ್ ಒಂದರಲ್ಲಿ ರಾಮ ಸೀತೆ ಕತೆ ಹೆಚ್ಚು ಬರಲಿದೆ. "ಯಶ್ ಮಾಡಲಿರೋ ರಾವಣ ರೋಲ್ ಶೂಟಿಂಗ್‌ 2024ರ ಜುಲೈನಲ್ಲಿ ನಡೆಯಲಿದೆಂತೆ. ಯಶ್ ಪಾತ್ರ ಪಾರ್ಟ್ 2ರಲ್ಲಿ ಹೆಚ್ಚು ಇರಲಿದ್ದು, ಅದು ಶ್ರೀಲಂಕಾದಲ್ಲಿ ನಡೆಯಲಿದೆ. ಹೀಗಾಗಿ ರಾಮಾಯಣದ ಮೊದಲ ಭಾಗದ ಚಿತ್ರೀಕರಣಕ್ಕಾಗಿ ನಟ ಯಶ್ 15 ದಿನ ಕಾಲ್‌ಶೀಟ್ ನೀಡಿದ್ದಾರೆ ಅಂತ ಟಾಕ್ ಇದೆ. ಆದ್ರೆ ಈ ಬಗ್ಗೆ ಯಶ್ ಯಾವ್ದೇ ಕನ್ಫರ್ಮ್ ಕೊಟ್ಟಿಲ್ಲ.

Follow Us:
Download App:
  • android
  • ios