ಇಂದು (8 ಜುಲೈ 2026) ಬಿಡುಗಡೆ ಆಗಿರುವ ‘ತಬಾಹಿ’  ಸಾಂಗ್ ಮೂಲಕ, ಯಶ್ ನಾಯಕತ್ವ ಹಾಗೂ ಗೀತೂ ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರಕ್ಕೆ ಭಾರೀ ಕ್ರೇಜ್ ಸೃಷ್ಟಿಯಾಗಿದೆ. ಈ ಮೂಲಕ, 26 ಆಗಸ್ಟ್ 2026ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿರುವ 'ಪ್ಯಾನ್ ವರ್ಲ್ಡ್' ಟಾಕ್ಸಿಕ್‌ ಸಿನಿಮಾಗೆ ಸಂಚಲನ ಹಾಗೂ ನಿರೀಕ್ಷೆ ಮುಗಿಲು ಮುಟ್ಟಿದೆ.

ಕನ್ನಡದ ಪ್ಯಾನ್ ಇಂಡಿಯಾ ನಟ, ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹು ನಿರೀಕ್ಷಿತ 'ಟಾಕ್ಸಿಕ್' (Toxic) ಚಿತ್ರದ ಪ್ರತಿಯೊಂದು ಅಪ್‌ಡೇಟ್ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಸೆನ್ಸೇಷನ್ ಸೃಷ್ಟಿಸುತ್ತಿದೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್‌ ಹಾಗೂ ಸಾಂಗ್ ಮೂಲಕ ಟಾಕ್ಸಿಕ್ ಚಿತ್ರದ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದೀಗ ಹೊಸ ‘ತಬಾಹಿ (Tabaahi)’ ಸಾಂಗ್ ಬಿಡುಗಡೆ ಆಗಿದ್ದು ಇದು 'ಟಾಕ್ಸಿಕ್‌' ಜ್ವರವನ್ನು ಇನ್ನಷ್ಟು ಹೆಚ್ಚಿಸುವುದರಲ್ಲಿ ಸಂದೇಹವೇ ಇಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಡೀ ಜಗತ್ತು ಕುತೂಹಲದಿಂದ ಕಾಯುತ್ತಿದ್ದ ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಟಾಕ್ಸಿಕ್ ಚಿತ್ರದ ಎರಡನೇ ಹಾಡು ಇದೀಗ ಬಿಡುಗಡೆಯಾಗಿದೆ. ವಿಶಾಲ್ ಮಿಶ್ರಾ ಸಂಗೀತದ ಹೊಸ ಸಾಂಗ್‌ ಸಿಕ್ಕಾಪಟ್ಟೆ ವೈರಲ್ ಅಗುತ್ತಿದೆ. ತಬಾಹಿ ಹಾಡು ನಾಳೆ 11.33ಕ್ಕೆ ಬರಲಿದೆ ಎಂದು ನಿನ್ನೆಯೇ ಟಾಕ್ಸಿಕ್ ನಟಿ ಕಿಯಾರಾ ಅದ್ವಾನಿ ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು. (ಇಡೀ ಚಿತ್ರತಂಡ ಇಂದು ಲಾಂಚ್ ಆಗಲಿರುವ ತಬಾಹಿ ಸಾಂಗ್‌ಗೆ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿತ್ತು.). ಈಗ ಹಾಡು ಬಿಡುಗಡೆ ಆಗಿ ನಿರೀಕ್ಷೆಗೂ ಮೀರಿ ಸೆನ್ಸೇಷನ್ ಸೃಷ್ಟಿಸುತ್ತಿದೆ.

ಏನಿದೆ, ಹೇಗಿದೆ ತಬಾಹಿ ಹಾಡು?!

ವಿಶಾಲ್ ಮಿಶ್ರಾ ಸಂಗೀತ ನಿರ್ದೇಶನ, ಗಾಯನದ ಮೂಲಕ ಹೊರಬಂದಿರುವ ಈ ಹೊಸ ಹಾಡು ವಿಭಿನ್ನ ಹಾಗೂ ವಿಶೇಷ ಎನ್ನುವಂತಿದೆ. ಯೋಗರಾಜ್ ಭಟ್ ಸಾಹಿತ್ಯದಲ್ಲಿ ಮೂಡಿಬಂದಿರುವ ‘ತಬಾಹಿ.. ಎಲ್ಲಾ ಮೀತಿಮೀರಿ ಹೋಗೋಣ ಬಾ.. ಎನ್ನುವ ಹಾಡು ಯಶ್ ಹಾಗೂ ಕಿಯಾರಾ ಅಡ್ವಾನಿ ನಟನೆಯಲ್ಲಿ ಸೂಪರ್ ರೊಮ್ಯಾಂಟಿಕ್ ಎನ್ನುವಂತೆ ಇದೆ. ಜೆನ್ ಜೀ ಮಾತಲ್ಲಿ ಹೇಳಬೇಕು ಎಂದರೆ ಈ ಹಾಡು ’ಬೆಂಕಿ'.. ಮಿಕ್ಕ ವಾತಾವರಣ ಈ ಹಾಡಿಗೆ ಪೂರಕವಾಗಿದ್ದು, ಹೈ ಲೆವಲ್ ಕಮಾಲ್ ಈ ಹಾಡಿನಲ್ಲಿ ಎದ್ದು ಕಾಣುತ್ತಿದೆ. ಮೇಕಿಂಗ್ ರಿಚ್‌ನೆಸ್, ಹೈ ಟೆಕ್ನಾಲಜಿ ಸೇರಿದಂತೆ ಎಲ್ಲಾ ಅಂಶಗಳೂ ಈ ಹಾಡಿನಲ್ಲಿ ಬೇರೆಯದೇ ಲೆವೆಲ್‌ನಲ್ಲಿ ಮೇಳೈಸಿದ್ದು, ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತಿದೆ. ಇದೀಗ ಹೊರಜಗತ್ತಿಗೆ ಕಾಲಿಟ್ಟಿರುವ ತಬಾಹಿ ಹಾಡಿನ ಮೂಲಕ ಟಾಕ್ಸಿಕ್ ಸಿನಿಮಾಗೆ ಈಗಾಗಲೇ ಇರುವ ಅಪಾರ ನಿರೀಕ್ಷೆಯ ಬೆಂಕಿಗೆ ಇನ್ನಷ್ಟು ಮತ್ತಷ್ಟು ತುಪ್ಪ ಸುರಿದಿದೆ.

'ಲೇಡೀಸ್ & ಲೇಡೀಸ್' ಟೀಸರ್ ಭಾರೀ ಸಂಚಲನ

ಅಂದಹಾಗೆ, ಇತ್ತೀಚೆಗೆ ಬಿಡುಗಡೆ ಆಗಿರುವ ಟಾಕ್ಸಿಕ್ ಸಿನಿಮಾದ 'ಲೇಡೀಸ್ & ಲೇಡೀಸ್' ಟೀಸರ್ ಭಾರೀ ಸಂಚಲನ ಸೃಷ್ಟಿಸಿದೆ. ನಯನತಾರಾ, ಕಿಯಾರಾ ಅಡ್ವಾನಿ, ಹಿಮಾ ಖುರೇಶಿ, ರುಕ್ಮಿಣಿ ವಸಂತ್ ಹಾಗೂ ತಾರಾ ಸುತಾರಿಯಾ ಈ ಐದು ನಾಯಕಿಯರ ವಿಶೇಷ ಟೀಸರ್ ಇದಾಗಿದೆ. ಈ ಪಂಚ ಚಲುವೆಯರ ಜೊತೆ ಯಶ್ ಖದರ್ ಜೋರಾಗಿಯೇ ಹೈಲೈಟ್ ಆಗಿದೆ.

ಇಂದು (8 ಜುಲೈ 2026) ಬಿಡುಗಡೆ ಆಗಿರುವ ಸಾಂಗ್ ಮೂಲಕ, ಯಶ್ ನಾಯಕತ್ವ ಹಾಗೂ ಗೀತೂ ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರಕ್ಕೆ ಭಾರೀ ಕ್ರೇಜ್ ಸೃಷ್ಟಿಯಾಗಿದೆ. ಈ ಮೂಲಕ, ಮುಂದಿನ ತಿಂಗಳು, ಅಂದರೆ 26 ಆಗಸ್ಟ್ 2026ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿರುವ ಪ್ಯಾನ್ ಇಂಡಿಯಾ ಮೀರಿದ 'ಪ್ಯಾನ್ ವರ್ಲ್ಡ್' ಟಾಕ್ಸಿಕ್ ಸಂಚಲನ ಹಾಗೂ ನಿರೀಕ್ಷೆ ಮುಗಿಲು ಮುಟ್ಟಿದೆ.