Asianet Suvarna News Asianet Suvarna News

Kantara ಹೆಂಡ್ತಿ ಕಾಲೆಳೆಯುತ್ತಾಳೆ ಆದ್ರೂ ರೊಮ್ಯಾಂಟಿಕ್‌ ಸೀನ್‌ ಮಾಡೋಕೆ ಕಷ್ಟ ಆಗುತ್ತೆ: ರಿಷಬ್ ಶೆಟ್ಟಿ

ಕಾಂತಾರ ಸಿನಿಮಾದಲ್ಲಿ ರಿಷಬ್ ರೊಮ್ಯಾನ್ಸ್‌ ಮಾಡಲು ಎಷ್ಟು ಕಷ್ಟ ಪಟ್ರು? ಪತ್ನಿ ಪ್ರಗತಿ ಸೆಟ್‌ನಲ್ಲಿದ್ದುಕೊಂಡು ಹೇಗೆ ಸಪೋರ್ಟ್‌ ಕೊಟ್ಟರು?
 

Rishab shetty talks about wife Pragathi shetty support for Kantara vcs
Author
First Published Oct 25, 2022, 5:30 PM IST

ಎಲ್ಲಿ ನೋಡಿದ್ದರೂ ಕಾಂತಾರ ಕಾಂತಾರ ಕಾಂತಾರ. ದೊಡ್ಡ ಅಲೆ ಎಬ್ಬಿಸಿರುವ ಕನ್ನಡ ಸಿನಿಮಾ ಈಗ ಪ್ಯಾನ್ ಇಂಡಿಯಾ ಸಿನಿಮಾ ಆಗಿ 150 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುತ್ತಿದೆ. ಸಿನಿಮಾ ಬಿಡುಗಡೆಯಾಗಿ ಮೂರ್ನಾಲ್ಕು ವಾರವಾದರೂ ಹೌಸ್‌ಫುಲ್ ಬುಕ್ಕಿಂಗ್. ಟಿಕೆಟ್ ಸಿಗುತ್ತಿಲ್ಲ ಸಿನಿಮಾ ನೋಡೋದು ಯಾವಾಗ ಎಂದು ಅದೆಷ್ಟೋ ಸಿನಿ ರಸಿಕರು ಕಾಯುತ್ತಿದ್ದಾರೆ. ಹೊಂಬಾಳೆ ಫಿಲ್ಮಂ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ಅಭಿನಯಿಸಿದ್ದಾರೆ. ಶಿವ ಮತ್ತು ಲೀಲಾ ಸಣ್ಣ ಪುಟ್ಟ ರೊಮ್ಯಾನ್ಸ್‌ ವೀಕ್ಷಕರ ಗಮನ ಸೆಳೆದಿದೆ. ಇದೇ ಚಿತ್ರಕ್ಕೆ ರಿಷಬ್ ಪತ್ನಿ ಪ್ರಗತಿ ಕಾಸ್ಟಿಯೂಮ್ ಡಿಸೈನ್ ಮಾಡುತ್ತಿದ್ದ ಕಾರಣ ರಿಷಬ್‌ಗೆ ಆನ್‌ಸ್ಕ್ರೀನ್ ರೊಮ್ಯಾನ್ಸ್ ಮಾಡಲು ಕೊಂಚ ಕಷ್ಟ ಆಗಿತ್ತು ಎನ್ನಬುದು. ಈ ವಿಚಾರದ ಬಗ್ಗೆ ಖಾಸಗಿ ಸೈಟ್‌ವೊಂದರಲ್ಲಿ ಮಾತನಾಡಿದ್ದಾರೆ.

ಪತ್ನಿ ಬಗ್ಗೆ ರಿಷಬ್ ಮಾತು:

'ನಾನು ನಾಯಕನಾಗಬೇಕು ಎಂದು ಪತ್ನಿ ಪ್ರಗತಿ ತುಂಬಾನೇ ಪುಶ್ ಮಾಡಿದ್ದಳು. ಸಿನಿಮಾ ನಾನೇ ಮಾಡಬೇಕು ಅಂತ ಬರೆದೆ ಆಮೇಲೆ ಅವಳಿಗೆ ಕಥೆನೂ ಹೇಳಿದೆ ಲಾಕ್‌ಡೌನ್‌ ಸಮಯದಲ್ಲಿ ನಾವೆಲ್ಲ ಒಟ್ಟಿಗೆ ಇದ್ವೀ. ಎರಡು ದಿನಗಳ ಕಾಲ ಆಕೆ ಅಕ್ಕನ ಮನೆಗೆ ಹೋಗಿ ಬರ್ತೀನಿ ಅಂತ ಹೇಳಿದ್ದಳು. ಅವಳು ಹೋಗಿ ಬರುವಷ್ಟರಲ್ಲಿ ಕಥೆ ರೆಡಿ ಮಾಡ್ತೀವಿ ಅಂತ ಎರಡೇ ದಿನಕ್ಕೆ ವಾಪಸ್ ಬಂದಿದ್ದಳು. ಆದರೆ ಎರಡು ದಿನದಲ್ಲಿ ಬೇಸಿಕ್ ಕಥೆ ರೆಡಿಯಾಗಿತ್ತು. ಪ್ರಗತಿಗೆ ಈ ರೀತಿ ಕಥೆಗಳು ಅದರಲ್ಲೂ ಕೋಣ ಓಡಿಸುವುದು ಎಲ್ಲಾ ತುಂಬಾನೇ ಇಷ್ಟ ಆಗುತ್ತೆ. ನೀನೆ ಮಾಡ್ಬೇಕು ನೀನೆ ಮಾಡ್ಬೇಕು ಅಂತ ತುಂಬಾನೇ ಹೇಳುತ್ತಿದ್ದಳು. ಈ ನಡುವೆ ಅಪ್ಪು ಸರ್‌ ಬಗ್ಗೆ ವಿಚಾರ ಬಂತು ನಿಜಕ್ಕೂ ಅಪ್ಪು ಸರ್ ಅಥವಾ ಯಾರಾದರೂ ಒಳ್ಳೆಯ ನಟ ಡೇಟ್‌ ಸಿಕ್ಕರೆ ನೆಮ್ಮದಿಯಾಗಿ ಡೈರೆಕ್ಷನ್ ಮಾಡುತ್ತಿದ್ದೆ ಏಕೆಂದರೆ ಈ ಸಿನಿಮಾದಲ್ಲಿ ಡೈರೆಕ್ಷನ್‌ ಕಡೆ ಹೆಚ್ಚಿಗೆ ಫೋಕಸ್ ಮಾಡಲು ಇಷ್ಟವಿತ್ತು. ಹೆಂಡತಿ ಮುಂದೆ ರೊಮ್ಯಾನ್ಸ್‌ ಮಾಡುವುದಕ್ಕೆ ತುಂಬಾನೇ ಕಷ್ಟ. ಮಾಡುತ್ತಿರುವುದು ಆಕ್ಟಿಂಗ್ ಹೀಗಾಗಿ ಏನೂ ಕಷ್ಟ ಆಗುತ್ತಿರಲಿಲ್ಲ ಆದರೆ ಈ ನನ್ನಮಕ್ಕಳು ಸೇರ್ಕೊಂಡು ಕಾಲೆಳೆಯುತ್ತಾರೆ ಅದರಲ್ಲೂ ಪ್ರಗತಿ, ಅರವಿಂದಾ, ರಾಜ್‌ ಶೆಟ್ರು...ಇನ್ನೂ ಸುಮಾರು ಜನರು ಇದ್ದಾರೆ ಅಗ ಒಂಥರಾ ನಾಚಿಕೆ ಅಗುತ್ತೆ' 

Rishab shetty talks about wife Pragathi shetty support for Kantara vcs

ರಿಷಬ್ ಪತ್ನಿ ಪ್ರಗತಿ ಮಾತು:

'ಮೊದಲು ಗರ್ಭಿಣಿ ಆದಾಗ ಚಾರ್ಲಿ ಸಿನಿಮಾಗೆ ಕೆಲಸ ಮಾಡಿದ್ದೆ ಎರಡನೇ ಪ್ರೆಗ್ನೆನ್ಸಿ ಸಮಯದಲ್ಲಿ ಕಾಂತಾರ ಸ್ಕ್ರಿಪ್ಟ್‌ ಕೆಲಸ ಶುರುವಾಯ್ತು ಹೀಗಾಗಿ ನನ್ನ ಮಗಳಿಗೆ ಕಾಂತಾರ ಬೇಬಿ ಎಂದು ಹೇಳುವೆ. ನನ್ನ ಮಗಳಿಗೆ 6 ತಿಂಗಳು ಆಕೆ, ನಾನು ಮತ್ತು ನನ್ನ ಮಗ ಮೂವರು ಕಾಂತಾರ ಸಿನಿಮಾದಲ್ಲಿ ಡೆಬ್ಯೂ ಮಾಡಿದ್ದೀವಿ. ಕಾಸ್ಟ್ಯೂಮ್ ಮ್ಯಾನೇಜ್ ಮಾಡುವುದು ತುಂಬಾನೇ ಕಷ್ಟ ಆಯ್ತು ಏಕೆಂದರೆ ಮಳೆ ಹೆಚ್ಚಿಗೆ ಇತ್ತು ಶೆಟ್ರು ಜಾಸ್ತಿ ಟೈಂ ಕೊಟ್ಟಿಲ್ಲ. ರಿಷಬ್ ಅವರಿಗೆ ಇದು ದೊಡ್ಡ ಸಿನಿಮಾ ಅಗುತ್ತಿತ್ತು ಮೊದಲು 100 ಜನ ಸೆಟ್‌ನಲ್ಲಿ ಇರುತ್ತಿದ್ದರು ಆಮೇಲೆ 300 ಜನ ಆದ್ರು. ಗರ್ಭಿಣಿ ಆಗಿದ್ದ ಕಾರಣ ಹೆಚ್ಚಿಗೆ ಪ್ರಯಾಣ ಮಾಡಲು ಕಷ್ಟವಾಗಿ ಹುಡುಗರನ್ನು ಕಳುಹಿಸುತ್ತಿದ್ದೆ. ರಿಷಬ್‌ ಬಗ್ಗೆ ನನಗೆ ತುಂಬಾನೇ ಹೆಮ್ಮೆ ಇದೆ. ಪ್ರತಿಯೊಂದು ಸಿನಿಮಾಗೆ ಕಷ್ಟ ಪಡುತ್ತಾರೆ ಎಲ್ಲಾ ಸಿನಿಮಾ ಸ್ವೆಟ್‌ ತೆಗೆದುಕೊಂಡರೆ ಕಾಂತಾರ ಬ್ಲಡ್‌ನ ಕೂಡ ತೆಗೆದುಕೊಂಡಿದೆ. ಸಿನಿಮಾದಲ್ಲಿ ಎಲ್ಲೂ ಡ್ಯೂಪ್ ಬಳಸದೆ ಸಿನಿಮಾ ಮಾಡಿದ್ದಾರೆ ಅದರಲ್ಲೂ ಕಂಬಳ ಅಭ್ಯಾಸ ಮಾಡಬೇಕಿತ್ತು...ಡೈರೆಕ್ಟರ್‌ ಮತ್ತು ನಟನ ಜವಾಬ್ದಾರಿ ಹೆಚ್ಚಿಗೆ ಇತ್ತು ಹೀಗಾಗಿ ನಿದ್ರೆ ಮಾಡಲು ಸಮಯ ಇರಲಿಲ್ಲ'

Kantara ಕಾಸ್ಟ್ಯೂಮ್ ಡಿಸೈನರ್ ಇವ್ರೆ ನೋಡಿ....ಪ್ರಗತಿ ರಿಷಬ್ ಶೆಟ್ಟಿ!

'ರಿಷಬ್ ಎನರ್ಜಿ ಹೇಗಿರುತ್ತೆ ಅಂದ್ರೆ ಎಲ್ಲೂ ನೆಗೆಟಿವ್ ಮಾತು ಬರುವುದಿಲ್ಲ . ಕೈ ಕಾಲು ಮುರಿದುಕೊಂಡು ಬಂದಾಗ ಬೇಸರ ಮಾಡಿಕೊಳ್ಳುತ್ತಿರಲಿಲ್ಲ. ದಿನವೂ ಒಂದೊಂದು ಗಾಯ ಮಾಡಿಕೊಳ್ಳುತ್ತಿದ್ದರು. ರಿಷಬ್ ಮಾತ್ರವಲ್ಲ ನಮ್ಮ ತಂಡದಲ್ಲಿರುವ ಪ್ರತಿಯೊಬ್ಬರಿಗೂ ಗಾಯ ಅಗುತ್ತಿತ್ತು. ಯಾರಿಗೂ ಏನೂ ಆಗಬಾರದು ಎಂದು ತುಂಬಾ ದೇವರಿಗೆ ಹರಿಕೆ ಹೊತ್ತುಕೊಂಡಿದೆ. ನಮ್ಮ ದೈವದ ಮನೆ ಬಗ್ಗೆ ದಕ್ಕೆ ಆಗಬಾರದು, ಸೆಟ್‌ನಲ್ಲಿ ಬೆಂಕಿ ಹಾಕುತ್ತಿದ್ದರು..ಹೀಗೆ ಯಾವ ಸಣ್ಣ ಪುಟ್ಟದಕ್ಕೂ ಹರಿಕೆ ಪ್ರಾರ್ಥನೆ ಮಾಡಿಕೊಂಡಿರುವೆ.  ಕಾಂತಾರ ನೋಡುವವರಿಗೆ ದೈವದ ಮೇಲೆ ಭಕ್ತಿ ಹೆಚ್ಚಾಗುತ್ತದೆ. ಕಾಂತಾರ ಸಿನಿಮಾ ಮಾಡಿರುವುದಲ್ಲ ಎಲ್ಲವೂ ಆಗಿರುವುದು' ಎಂದಿದ್ದಾರೆ ಪ್ರಗತಿ ಶೆಟ್ಟಿ. 

Follow Us:
Download App:
  • android
  • ios