Kantara ಕಾಸ್ಟ್ಯೂಮ್ ಡಿಸೈನರ್ ಇವ್ರೆ ನೋಡಿ....ಪ್ರಗತಿ ರಿಷಬ್ ಶೆಟ್ಟಿ!
ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಶೆಟ್ರು ಪತ್ನಿ.... ಲವ್ ಸ್ಟೋರಿ ಆಂಡ್ ಕೆಲಸದ ಬಗ್ಗೆ ಮಾಹಿತಿ ಇಲ್ಲಿದೆ....

ಸ್ಯಾಂಡಲ್‌ವುಡ್ ಡಿಫರೆಂಟ್ ಡೈರೆಕ್ಟರ್ ಕಮ್ ನಟ ರಿಷಬ್ ಶೆಟ್ಟಿ ಕಾಂತಾರ ಸಿನಿಮಾ ವಿಶ್ವಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಮೂಲಕ ಪತ್ನಿ ಪ್ರಗತಿ ಅವರನ್ನೂ ಕೂಡ ಚಿತ್ರರಂಗಕ್ಕೆ ಲಾಂಚ್ ಮಾಡಿದ್ದಾರೆ.
ಕಾಂತಾರ ಸಿನಿಮಾದಲ್ಲಿ ಪ್ರಗತಿ ಮಹಾರಾಜನ ಪತ್ನಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಗತಿ ಜೊತೆಗೆ ಪುತ್ರ ರಣ್ವಿತ್ ಕೂಡ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ.
ರಿಷಬ್ ಶೆಟ್ಟಿ ವೈವಾಹಿಕ ಜೀನವಕ್ಕೆ ಕಾಲಿಟ್ಟ ನಂತರ ಪ್ರಗತಿ ಫ್ಯಾಷನ್ ಇಂಡಸ್ಟ್ರಿಯಲ್ಲಿ ತೊಡಗಿಸಿಕೊಂಡಿದ್ದರು. ರಿಷಬ್ ಪ್ರತಿಯೊಂದು ಚಿತ್ರಕ್ಕೂ ಪ್ರಗತಿನೇ ಡ್ರೆಸ್ ಡಿಸೈನ್ ಮಾಡುವುದು.
ಪ್ರಗತಿ ಮೂಲತಃ ಕುಂದಾಪುರದವರು, ರಕ್ಷಿತ್ ಶೆಟ್ಟಿ ರಿಕ್ಕಿ ಸಿನಿಮಾ ನೋಡಲು ಥಿಯೇಟರ್‌ಗೆ ಬಂದಾಗ ರಿಷಬ್‌ನ ಮೊದಲು ಭೇಟಿ ಮಾಡಿದ್ದಂತೆ.
ಆನಂತರ ಫೇಸ್‌ಬುಕ್‌ನಲ್ಲಿ ಪ್ರಗತಿ ರಿಷಬ್ ಶೆಟ್ಟಿ ಖಾತೆ ಹುಡುಗಿ ಫ್ರೆಂಡ್‌ಶಿಪ್ ರಿಕ್ವೆಸ್ಟ್ ಸೆಂಡ್ ಮಾಡಿದ್ದಾರೆ. ರಿಷಬ್ ಕೂಡ ಹುಡುಕುತ್ತಿದ್ದರಂತೆ ಆದರೆ ಸಿಕ್ಕಿರಲಿಲ್ಲ.
ಪ್ರಗತಿ ಫ್ರೆಂಡ್ ರಿಕ್ವೆಸ್ಟ್ ಒಪ್ಪಿಕೊಂಡ ನಂತರ ಮಾತುಕತೆ ಶುರುವಾಗಿ ಆನಂತರ ಪ್ರೀತಿ ಚಿಗುರಿದೆ. ಇಬ್ಬರೂ ಪೋಷಕರ ಒಪ್ಪಿಗೆ ಪಡೆದು ವೈವಾಹಿಕ ಜೀವನಕ್ಕೆ ಕಾಲಿಟ್ಟು ಇಬ್ಬರು ಮುದ್ದಾಗ ಮಕ್ಕಳಿದ್ದಾರೆ, ರಣ್ವಿತ್ ಮತ್ತು ರಾಧ್ಯಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.