Asianet Suvarna News Asianet Suvarna News

ನನ್ನ ಹೆಂಡತಿಯೇ ಹೀರೋಯಿನ್, ಸ್ವಲ್ಪ ಕಷ್ಟ ಆಗೋಯ್ತು: ಹೀಗಂದ್ರು 'ಧ್ರುವತಾರೆ' ಹೀರೋ ಪ್ರತೀಕ್‌..!

ಜಿ.ಪಿ. ಫಿಲಂಸ್ ಸ್ಟುಡಿಯೋಸ್ ಬ್ಯಾನರ್ ನಡಿ, ಗಣೇಶ್ ಕುಮಾರ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಪ್ರತೀಕ್ ನಿರ್ದೇಶನದ ಜೊತೆಗೆ ನಟನೆಯನ್ನು ಮಾಡಿದ್ದು, ಒಂದು ಫ್ಯಾಮಿಲಿ ಡ್ರಾಮಾದ ಕಥೆ ಇದಾಗಿದೆ. ನಿರ್ಮಾಪಕ ಎಂ.ಎನ್. ಸುರೇಶ್ ಅವರು ಹೊಸ..

Real life couple Pratheek and Moulya acts in upcoming kannada movie Dhruvathare srb
Author
First Published Aug 22, 2024, 6:16 PM IST | Last Updated Aug 22, 2024, 6:15 PM IST

'ಧ್ರುವತಾರೆ' ಎಂದಾಕ್ಷಣಾ ಅಣ್ಣಾವ್ರ ನೆನಪು ಕಾಡದೆ ಇರುವುದಿಲ್ಲ. 1985ರಲ್ಲಿಯೇ ಡಾ.ರಾಜ್‍ಕುಮಾರ್ (Dr Rajkumar) ಹಾಗೂ ಗೀತಾ (Geetha) ಅಭಿನಯದ ಧ್ರುವತಾರೆ (Dhruvathare) ರಿಲೀಸ್ ಆಗಿತ್ತು. ಇಂದಿಗೂ ಆ ಸಿನಿಮಾ ಎಲ್ಲರ ಫೇವರಿಟ್. ಇದೀಗ ಅದೇ ಟೈಟಲ್ ನೊಂದಿಗೆ ಸ್ಯಾಂಡಲ್ ವುಡ್ ನಲ್ಲಿ ಧ್ರುವತಾರೆ ಸಿನಿಮಾ ಸದ್ದು ಮಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಜೋಡಿ ಪ್ರತೀಕ್ ಅಂಡ್ ಮೌಲ್ಯ ನಟನೆಯ ಸಿನಿಮಾ ಇದಾಗಿದ್ದು, ರಿಲೀಸ್ ಗೂ ರೆಡಿಯಾಗಿದೆ. 

ಜಿ.ಪಿ. ಫಿಲಂಸ್ ಸ್ಟುಡಿಯೋಸ್ ಬ್ಯಾನರ್ ನಡಿ, ಗಣೇಶ್ ಕುಮಾರ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಪ್ರತೀಕ್ ನಿರ್ದೇಶನದ ಜೊತೆಗೆ ನಟನೆಯನ್ನು ಮಾಡಿದ್ದು, ಒಂದು ಫ್ಯಾಮಿಲಿ ಡ್ರಾಮಾದ ಕಥೆ ಇದಾಗಿದೆ. ನಿರ್ಮಾಪಕ ಎಂ.ಎನ್. ಸುರೇಶ್ ಅವರು ಹೊಸ ತಂಡದ ಜೊತೆಗೆ ನಿಂತಿದ್ದಾರೆ. ಸಿನಿಮಾದ ಆಡಿಯೋ ಲಾಂಚ್ ಮಾಡುವ ಮೂಲಕ ಪ್ರತೀಕ್ ತಂಡಕ್ಕೆ ಎಂ.ಎನ್. ಸುರೇಶ್ ಬೆನ್ನು ತಟ್ಟಿದ್ದಾರೆ. 

ಡಿಸೆಂಬರ್‌ನಲ್ಲಿ ರಶ್ಮಿಕಾ ಮಂದಣ್ಣ ಫ್ಯಾನ್ಸ್‌ಗಳಿಗೆ ಫೆಸ್ಟಿವಲ್, ವಿಷ್ಯ ಗೊತ್ತಾದ್ರೆ ಫುಲ್ ಥ್ರಿಲ್ ಗ್ಯಾರಂಟಿ!

ಈ ವೇಳೆ ಮಾತನಾಡಿದ ನಿರ್ಮಾಪಕ ಎಂ.ಎನ್. ಸುರೇಶ್, ಧ್ರುವತಾರೆ ಸಿನಿಮಾ ಒಂದೊಳ್ಳೆ ಕಂಟೆಂಟ್ ಇಟ್ಟುಕೊಂಡು ಮಾಡಿರುವಂತ ಸಿನಿಮಾ. ಚಿತ್ರರಂಗಕ್ಕೆ ಒಂದೊಳ್ಳೆ ಸಿನಿಮಾ ಕೊಡಬೇಕು ಎಂಬ ಉದ್ದೇಶದಿಂದ ಟೆಕ್ನಿಕಲಿ ಬಹಳ ಚೆನ್ನಾಗಿ ತೆಗೆದಿದ್ದಾರೆ. ಹೊಸಬರಿಗೆ ನನ್ನ ಬೆಂಬಲ ಯಾವಾಗಲೂ ಇರುತ್ತೆ. ಮ್ಯೂಸಿಕ್ ಚೆನ್ನಾಗಿದೆ. ಇಡೀ ಸಿನಿಮಾ ತಂಡಕ್ಕೆ ಒಳ್ಳೆಯದಾಗಲಿ ಎಂದಿದ್ದಾರೆ.

ನಿರ್ದೇಶಕ ಪ್ರತೀಕ್ ಮಾತನಾಡಿ, 'ಧ್ರುವತಾರೆ.. ಇದು ನನ್ನ ಐದು ವರ್ಷದ ಕನಸು.. ಮೂರು ವರ್ಷದ ಶ್ರಮ. ನಾನು ಮೂಲತಃ ಮೈಸೂರಿನ ಹುಡುಗ. ಓದುತ್ತಿದ್ದಾಗಲೇ ಸಿನಿಮಾ ಮೇಲೆ ಆಸಕ್ತಿ ಇತ್ತು. ಆಮೇಲೆ ಶಾರ್ಟ್ ಫಿಲ್ಮ್ ನ ಡೈರೆಕ್ಟ್ ಮಾಡುತ್ತಾ ಬಂದೆ. ಫೈನಲೀ ನನ್ನ ಆಸೆ ಈಡೇರಿದೆ. ನಿರ್ದೇಶನದ ಜೊತೆಗೆ ನಟನೆ ಕೂಡ ಮಾಡಿದ್ದೀನಿ.‌ ಸಿನಿಮಾ ಮಾಡುವುದು ಸುಲಭ. ಆದರೆ ರಿಲೀಸ್ ಮಾಡುವುದು ಕಷ್ಟ ಇದೆ. 

ಮತ್ತೆ ಬಂದ್ರು ಸಂಜೋತ ಭಂಡಾರಿ, 'ಲಂಗೋಟಿ ಮ್ಯಾನ್' ಟೀಸರ್ ಲಾಂಚ್ ಮಾಡಿದ ನಟ ಶರಣ್‌!

ನಾನೊಂದು ನಂಬ್ತೀನಿ, ಸಿನಿಮಾ ಚೆನ್ನಾಗಿದ್ದರೆ ರಿಲೀಸ್ ಗೆ ಎಲ್ಲರೂ ಕೈ ಜೋಡಿಸುತ್ತಾರೆ. ಬೇರೆ ಶಾರ್ಟ್ ಮೂವಿಗಳನ್ನೆಲ್ಲಾ ನಾನು ನಿರ್ದೇಶಕನಾಗಿ ಶೂಟ್ ಮಾಡುವುದು ಬಹಳ ಸುಲಭ. ಆದರೆ ಈ ಸಿನಿಮಾದಲ್ಲಿ ನನ್ನ ಹೆಂಡತಿಯೇ ಹೀರೋಯಿನ್. ಇಲ್ಲಿ ಸ್ವಲ್ಪ ಕಷ್ಟ ಆಗೋಯ್ತು. ಖಂಡಿತ ಈ ಸಿನಿಮಾದಲ್ಲಿ ಮೌಲ್ಯ ಅವರ ನಟನೆ ತುಂಬಾ ಚೆನ್ನಾಗಿ‌ ಮಾಡಿದ್ದಾರೆ. ಎಲ್ಲರೂ ಕೂಡ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಸಿನಿಮಾ ನೋಡಿದ ಮೇಲೆ ಖಂಡಿತ ನಿಮಗೆ ಗೊತ್ತಾಗುತ್ತೆ' ಎಂದಿದ್ದಾರೆ.

ನಟಿ ಮೌಲ್ಯ ಮಾತನಾಡಿ, 'ಧ್ರುವತಾರೆ ಸಿನಿಮಾ ನನ್ನ ಜೀವನದ ಒಂದು ಭಾಗವಾಗಿದೆ. ನಾನು ಸಿನಿಮಾಗೆ ಬರ್ತೀನಿ, ಆಕ್ಟ್ ಮಾಡ್ತೀನಿ ಅಂತ ಗೊತ್ತಿರಲಿಲ್ಲ. ಸಿನಿಮಾದವರನ್ನ ಮದುವೆ ಆಗ್ತೀನಿ ಅಂತಾನೂ ಗೊತ್ತಿರಲಿಲ್ಲ. ಸಿನಿಮಾದಲ್ಲಿ ಅಪೂರ್ವ ಎಂಬ ಪಾತ್ರ ನನ್ನದು. ಮುಗ್ಧೆ, ಕುತೂಹಲ ಜಾಸ್ತಿ, ಡ್ಯಾನ್ಸ್ ತುಂಬಾ ಇಷ್ಟಪಡುವ ಹುಡುಗಿಯ ಪಾತ್ರ ಅದು. ಬಾಡಿ ಶೇಮಿಂಗ್ ಎಷ್ಟು ಪರಿಣಾಮ ಬೀರುತ್ತದೆ ಎಂಬ ಪಾತ್ರದ ಮೂಲಕ ತೋರಿಸಿಕೊಡಲಾಗುತ್ತಿದೆ. ಗೊತ್ತಿಲ್ಲದೆಯೇ ಆ ಪಾತ್ರಕ್ಕೆ ಎಲ್ಲರೂ ಕನೆಕ್ಟ್ ಆಗುತ್ತಾರೆ' ಎಂದು ತಮ್ಮ ಪಾತ್ರದ ಬಗ್ಗೆ ಹೇಳಿದ್ದಾರೆ. 

ಕಾಂತಾರ ಪ್ರೀಕ್ವೆಲ್‌ನಲ್ಲಿ ಕಳರಿಪಯಟ್ಟು ಫೈಟ್, ಹೊಸ ಪ್ರಯೋಗಕ್ಕೆ ಸಜ್ಜಾದ ರಿಷಬ್ ಶೆಟ್ಟಿ..!

ಪ್ರತೀಕ್ ಹಾಗೂ ಮೌಲ್ಯ ಮುಖ್ಯ ತಾರಾಗಣದಲ್ಲಿ ಕಾಣಿಸಿಕೊಂಡಿದ್ದು, ಉಳಿದಂತೆ ರಮೇಶ್ ಭಟ್, ಮೂಗೂರು ಸುರೇಶ್, ಸುಮನ್ ನಗರ್ಕರ್, ಅಶ್ವಿನ್ ರಾವ್ ಪಲ್ಲಕ್ಕಿ, ಪಿ.ಡಿ ಸತೀಶ್ ಸೇರಿದಂತೆ ಹಲವರು ಇದ್ದಾರೆ. ಬಹುಮುಖ್ಯವಾಗಿ ನೆಗೆಟಿವ್ ಶೇಡ್‌ನಲ್ಲಿ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಕಾಣಿಸಿಕೊಂಡಿದ್ದಾರೆ. ಸೆಪ್ಟೆಂಬರ್20ಕ್ಕೆ ಈ ಧ್ರುವತಾರೆ ಸಿನಿಮಾ ತೆರೆಗೆ ಬರಲಿದೆ. 

Latest Videos
Follow Us:
Download App:
  • android
  • ios