Asianet Suvarna News Asianet Suvarna News

ಕಾಂತಾರ ಪ್ರೀಕ್ವೆಲ್‌ನಲ್ಲಿ ಕಳರಿಪಯಟ್ಟು ಫೈಟ್, ಹೊಸ ಪ್ರಯೋಗಕ್ಕೆ ಸಜ್ಜಾದ ರಿಷಬ್ ಶೆಟ್ಟಿ..!

ಕಾಂತಾರ ಪ್ರೀಕ್ವೆಲ್‌ನಲ್ಲಿ ಕಳರಿಪಯಟ್ಟು ಪ್ರದರ್ಶನಕ್ಕೆ ನಟ-ನಿರ್ದೇಶಕ ರಿಷಬ್ ಶೆಟ್ಟಿ ಸಜ್ಜಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ಕೇರಳದ ಪರಿಣಿತರಿಂದ ಈ ಕಳರಿಪಯಟ್ಟು ಫೈಟ್ ಅನ್ನು ರಿಷಬ್ ಶೆಟ್ಟಿ ಕಲಿತಿದ್ದಾರೆ ಎನ್ನಲಾಗಿದೆ. ಕಳರಿಪಯಟ್ಟು ಫೈಟ್..

Rishab Shetty upcoming movie kantara prequel to show Kalaripayattu fight art srb
Author
First Published Aug 22, 2024, 12:43 PM IST | Last Updated Aug 22, 2024, 12:43 PM IST

ಸದ್ಯ ಕನ್ನಡ ಸಿನಿರಂಗ ಹಾಗು ಕರುನಾಡಿನಲ್ಲಿ ನಟ-ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಮತ್ತು ಕಾಂತಾರ ಸಿನಿಮಾದ್ದೇ ಹವಾ! ಕಾಂತಾರ ಸಿನಿಮಾದ ನಟನೆಗೆ ಬೆಸ್ಟ್ ಆಕ್ಟರ್ ಎಮದು ನ್ಯಾಷನಲ್ ಅವಾರ್ಡ್‌ ಪಡೆದಿರುವ ರಿಷಬ್ ಶೆಟ್ಟಿ ಇದೀಗ ಕನ್ನಡದ ಹೆಮ್ಮೆ ಆಗಿದ್ದಾರೆ. ಕಾಂತಾರ ಚಿತ್ರದ ನಟನೆಗಾಗಿ ನಟ-ನಟಿ ಇಬ್ಬರಿಗೂ ರಾಷ್ಟ್ರೀಯ ಪ್ರಶಸ್ತಿ ಲಭಿಸಿದ್ದು, ಈ ಮೂಲಕ ಕಾಂತಾರ ದೇಶವ್ಯಾಪಿ ಪ್ರಶಂಸೆಗೆ ಮತ್ತೆ ಪಾತ್ರವಾಗಿದೆ. 

ತಮ್ಮ ನಟನೆ-ನಿರ್ದೇಶನದ ಕಾಂತಾರ ಸಿನಿಮಾದಲ್ಲಿ ಕಂಬಳವನ್ನು ಕಣ್ಣಿಗೆ ಕಟ್ಟಿದಂತೆ ತೋರಿಸಿದ್ದ ರಿಷಬ್ ಶೆಟ್ಟಿ ಅವರು ಈಗ ಹೊಸ ಫೈಟ್ ಕಲೆಯೊಂದನ್ನು ಮುಂಬರುವ ಸಿನಿಮಾದಲ್ಲಿ ತೋರಿಸಲಿದ್ದಾರೆ. ಹೌದು, ಹಲವರಿಗೆ ಗೊತ್ತಿರುವಂತೆ, ಸದ್ಯ ರಿಷಬ್ ಶೆಟ್ಟಿ ಅವರು ಕಾಂತಾರಾ ಪ್ರೀಕ್ವೆಲ್‌ ಶೂಟಿಂಗ್‌ ನಡೆಸುತ್ತಿದ್ದಾರೆ.  ಈ ಚಿತ್ರದಲ್ಲಿ ಅವರು ಕಳರಿಪಯಟ್ಟು ತೋರಿಸಲಿದ್ದಾರೆ ಎನ್ನಲಾಗಿದೆ. 

ದಶಕಗಳ ಹಿಂದಿನ ಈ ಫೋಟೋದಲ್ಲಿ ತಾರಾ, ಮಾಲಾಶ್ರೀ ಜೊತೆ ಇರೋ ಬಾಲೆ ಯಾರು ಗೆಸ್ ಮಾಡ್ತೀರಾ?

ಹಾಗಿದ್ದರೆ ಏನಿದು ಕಳರಿಪಯಟ್ಟು? ಗೂಗಲ್‌ನಲ್ಲಿ ಇದನ್ನು 'ಶತಮಾನಗಳಿಂದ ಕೇರಳದಲ್ಲಿ ನೆಲೆಸಿದ ಒಂದು ಪ್ರತ್ಯೇಕ ಶಾರೀರಿಕ ಸಾಧನೆಯ ಕೊಡುಗೆಯೇ ಕಳರಿ ಪಯಟ್ಟು ಎಂಬ ಯುದ್ದ ಕಲೆ. ನಶಿಸುತ್ತಿರುವ ಈ ದೇಹಾಭ್ಯಾಸ ವಿಧಾನ. ಆರ್ಯ ದ್ರಾವಿಡ ಜನಾಂಗದಷ್ಟೆ ಪುರಾತನ, ವಿದೇಶಿಯರ ಆಕ್ರಮಣ ಸಡಿಲಗೊಂಡು ಕೇಂದ್ರಕೃತ ಆಡಳಿತ ಸಣ್ಣ ತುಂಡರಸರುಗಳ ಬೆಳವಣಿಗೆ ಇವು ಈ ಯುದ್ದ ಕಲೆಯನ್ನು ಪೋಷಿಸಿದ್ದಿರಬಹುದು..' ಎಂದು ವಿವರಿಸಲಾಗಿದೆ.. 

ಕಾಂತಾರ ಪ್ರೀಕ್ವೆಲ್‌ನಲ್ಲಿ ಕಳರಿಪಯಟ್ಟು ಪ್ರದರ್ಶನಕ್ಕೆ ನಟ-ನಿರ್ದೇಶಕ ರಿಷಬ್ ಶೆಟ್ಟಿ ಸಜ್ಜಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ಕೇರಳದ ಪರಿಣಿತರಿಂದ ಈ ಕಳರಿಪಯಟ್ಟು ಫೈಟ್ ಅನ್ನು ರಿಷಬ್ ಶೆಟ್ಟಿ ಕಲಿತಿದ್ದಾರೆ ಎನ್ನಲಾಗಿದೆ. ಕಳರಿಪಯಟ್ಟು ಫೈಟ್ ನ ಒಂದು ಝಲಕ್ ಅನ್ನು ಸೋಷಿಯಲ್ ಮೀಡಿಯಾಲದಲ್ಲಿ ರಿಷಬ್ ಶೆಟ್ಟಿ ಶೇರ್ ಮಾಡಿದ್ದಾರೆ. ಕಾಂತಾರ ಪ್ರೀಕ್ವೆಲ್ ಈಗಾಗಲೇ 35% ಶೂಟಿಂಗ್ ಕಂಪ್ಲೀಟ್ ಆಗಿದ್ದು, ಭರದಿಂದ ಚಿತ್ರೀಕರಣ ಸಾಗಿದೆ.

ವಸಿಷ್ಠ ಸಿಂಹ ಕಣ್ಣೀರು ಹಾಕಿದ್ರು, ಗೋಲ್ಡನ್ ಸ್ಟಾರ್ ಗಣೇಶ್ ಸೇರಿ ಎಲ್ಲರ ಕಣ್ಣಲ್ಲಿ ಯಾಕಷ್ಟು ಕಂಬನಿ!

ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿರುವ, ಕಳರಿಪಯಟ್ಟು ಫೈಟ್ ಮಾಡುತ್ತಿರುವ ರಿಷಬ್ ಶೆಟ್ಟಿ ಫೋಟೋ ಕಾಂತಾರ ಪ್ರೀಕ್ವೆಲ್ ಚಿತ್ರದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಮುಂಬರುವ ಕಾಂತಾರಾ ಪ್ರೀಕ್ವೆಲ್‌ನಲ್ಲಿ ನಾಯಕಿ ಸೇರಿದಂತೆ ಹಲವು ಕಲಾವಿದರನ್ನು ಇನ್ನೂ ಸೀಕ್ರೆಟ್ ಆಗಿಯೇ ಇಡಲಾಗಿದೆ. ಆ ಮೂಲಕ ಚಿತ್ರದ ಬಗೆಗಿನ ಕುತೂಹಲವನ್ನು, ಗೌಪ್ಯತೆಯನ್ನು ಕಾಯ್ದುಕೊಳ್ಳಲಾಗಿದೆ ಎನ್ನಬಹುದು. ಒಟ್ಟಿನಲ್ಲಿ, ಮುಂಬರುವ ಕಾಂತಾರಾ ಚಿತ್ರವು ಯಾವ ಹೊಸ ದಾಖಲೆ ಮಾಡಬಹುದು ಎಂದು ಎಲ್ಲರೂ ಕಾಯುವಂತಾಗಿದೆ. 
 

Latest Videos
Follow Us:
Download App:
  • android
  • ios