Asianet Suvarna News Asianet Suvarna News

ಡಿಸೆಂಬರ್‌ನಲ್ಲಿ ರಶ್ಮಿಕಾ ಮಂದಣ್ಣ ಫ್ಯಾನ್ಸ್‌ಗಳಿಗೆ ಫೆಸ್ಟಿವಲ್, ವಿಷ್ಯ ಗೊತ್ತಾದ್ರೆ ಫುಲ್ ಥ್ರಿಲ್ ಗ್ಯಾರಂಟಿ!

ನಟಿ ರಶ್ಮಿಕಾ ಮಂದಣ್ಣ ಕನ್ನಡ, ತೆಲುಗು ಸೇರಿದಂತೆ ತಮಿಳು, ಮಲಯಾಳಂ ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾದರು. ರಶ್ಮಿಕಾ ಮಂದಣ್ಣ ನಟನೆಯ ಪುಷ್ಪಾ ಚಿತ್ರ ಅವರಿಗೆ ಬಹಳಷ್ಟು ಜನಪ್ರಿಯತೆ ತಂದುಕೊಟ್ಟಿದೆ...

National crush Rashmika Mandanna Bollywood and Telugu movies to release soon srb
Author
First Published Aug 22, 2024, 5:06 PM IST | Last Updated Aug 22, 2024, 6:18 PM IST

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಈಗ ಭಾರತದ ಮೋಸ್ಟ್ ಪಾಪ್ಯುಲರ್ ನಟಿ. ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ತಮ್ಮ ನಟನೆ ಕೆರಿಯರ್ ಶುರುಮಾಡಿದ ರಶ್ಮಿಕಾ ಮಂದಣ್ಣ, ಈಗ ನ್ಯಾಷನಲ್ ಕ್ರಶ್ ಬಿರುದು ಪಡೆದಿದ್ದಾರೆ. ಸದ್ಯ ಬಾಲಿವುಡ್ ಸೇರಿದಂತೆ, ಸೌತ್ ಇಂಡಿಯಾ ಹಾಗು ನಾರ್ತ್‌ ಇಂಡಿಯಾದ ಹಲವು ಭಾಷೆಗಳಲ್ಲಿ ನಟಿ ರಶ್ಮಿಕಾ ಸಖತ್ ಮಿಂಚುತ್ತಿದ್ದಾರೆ. ಇದೀಗ ರಶ್ಮಿಕಾ ಅಭಿಮಾನಿಗಳು ಥ್ರಿಲ್ ಆಗುವಂಥ ಸುದ್ದಿಯೊಂದು ಹೊರಬಿದ್ದಿದೆ, ನೋಡಿ..

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ನಟಿಸಿರುವ ಎರಡು ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗುತ್ತಿವೆ. ಶ್ರೀವಲ್ಲಿ ಪಾತ್ರದಲ್ಲಿ ಈಗಾಗಲೇ 'ಪುಷ್ಪ' ಸಿನಿಮಾದಲ್ಲಿ ರಶ್ಮಿಕಾರನ್ನು ಸಿನಿಪ್ರೇಕ್ಷಕರು ಕಣ್ತುಂಬಿಕೊಂಡಾಗಿದೆ. ಈಗ ರಶ್ಮಿಕಾ-ಅಲ್ಲು ಅರ್ಜುನ್ ನಟನೆಯ ತೆಲುಗಿನ 'ಪುಷ್ಪ 2' ಸಿನಿಮಾ ಡಿಸೆಂಬರ್​ 6ಕ್ಕೆ ತೆರೆ ಮೇಲೆ ಬರಲಿದೆ. ಅದೇ ದಿನ ರಶ್ಮಿಕಾ ಮಂದಣ್ಣ ಹಿಂದಿಯಲ್ಲಿ ನಟಿಸಿರುವ 'ಚಾವಾ' ಸಿನಿಮಾ ಕೂಡ ತೆರೆ ಮೇಲೆ ಮೂಡಿ ಬರಲಿದೆ.

ಮತ್ತೆ ಬಂದ್ರು ಸಂಜೋತ ಭಂಡಾರಿ, 'ಲಂಗೋಟಿ ಮ್ಯಾನ್' ಟೀಸರ್ ಲಾಂಚ್ ಮಾಡಿದ ನಟ ಶರಣ್‌!

ಹೀಗಾಗಿ ಡಿಸೆಂಬರ್ 6 ರಶ್ಮಿಕಾ ಮಂದಣ್ಣ ಫ್ಯಾನ್ಸ್ ಅಂಡ್ ಫಾಲೋವರ್ಸ್‌ಗೆ ಹಬ್ಬದ ದಿನ ಎನ್ನಬಹುದು. ರಶ್ಮಿಕಾ ಮಂದಣ್ಣ ಹಾಗು ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿ, ಭಾರತವನ್ನೂ ಮೀರಿ ಜನಪ್ರಿಯತೆ ಪಡೆದಿತ್ತು. ಭಾರೀ ಕಲೆಕ್ಷನ್ ಹಾಗು ಜನಮೆಚ್ಚುಗೆ ಪಡೆದ ಪುಷ್ಪಾ ಇದೀಗ ಪುಷ್ಪ 2 ತೆರೆಗೆ ಬರೆಲು ಕಾರಣವಾಗಿದೆ. ಹೀಗಾಗಿ ಅಲ್ಲು ಅರ್ಜುನ್ ಹಾಗು ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ 2 ಚಿತ್ರವು ಭಾರೀ ಕುತೂಹಲ ಕೆರಳಿಸಿದೆ. 

ನಟಿ ರಶ್ಮಿಕಾ ಮಂದಣ್ಣ ಬಗ್ಗೆ ಯಾರಿಗೂ ಹೆಚ್ಚೇನೂ ಹೇಳಬೇಕಿಲ್ಲ. ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ಅವರು ಬಳಿಕ ಗೀತ ಗೋವಿಂದಂ ತೆಲುಗು ಚಿತ್ರದ ಮೂಲಕ ಟಾಲಿವುಡ್ ಸಿನಿಉದ್ಯಮದಲ್ಲಿ ಫೇಮಸ್ ಆದರು. ಆ ಬಳಿಕ ನಟಿ ರಶ್ಮಿಕಾ ಮಂದಣ್ಣ ಕನ್ನಡ, ತೆಲುಗು ಸೇರಿದಂತೆ ತಮಿಳು, ಮಲಯಾಳಂ ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾದರು. ರಶ್ಮಿಕಾ ಮಂದಣ್ಣ ನಟನೆಯ ಪುಷ್ಪಾ ಚಿತ್ರ ಅವರಿಗೆ ಬಹಳಷ್ಟು ಜನಪ್ರಿಯತೆ ತಂದುಕೊಟ್ಟಿದೆ. 

ಕಾಂತಾರ ಪ್ರೀಕ್ವೆಲ್‌ನಲ್ಲಿ ಕಳರಿಪಯಟ್ಟು ಫೈಟ್, ಹೊಸ ಪ್ರಯೋಗಕ್ಕೆ ಸಜ್ಜಾದ ರಿಷಬ್ ಶೆಟ್ಟಿ..!

ಈಗಂತೂ ನಟಿ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ ಹಿರಿಯ ನಟ ಸಲ್ಮಾನ್ ಖಾನ್ ಜತೆಗೆ ನಟಿಸುತ್ತಿದ್ದಾರೆ. ಈ ಮೊದಲು ಬಾಲಿವುಡ್ ಸ್ಟಾರ್ ನಟ ರಣಬೀರ್ ಕಪೂರ್ ಜೋಡಿಯಾಗಿ 'ಆನಿಮಲ್' ಚಿತ್ರದಲ್ಲಿ ನಟಿಸಿದ್ದರು ರಶ್ಮಿಕಾ ಮಂದಣ್ಣ. ಆ ಚಿತ್ರವು ಸೂಪರ್ ಹಿಟ್ ಆಗುವ ಮೂಲಕ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ಸಿನಿರಂಗದಲ್ಲಿ ಕೂಡ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡರು. 

ಯಾವುದೇ ಭಾಷೆಯ ಸ್ಟಾರ್ ನಟರ ಚಿತ್ರವಿರಲಿ, ಈಗ ಮೊದಲು ಕೇಳಿ ಬರುವುದು ರಶ್ಮಿಕಾ ಹೆಸರು. ಆದರೆ, ಎಲ್ಲಾ ಚಿತ್ರಗಳಿಗೆ ಅವರೊಬ್ಬರೇ ಕಾಲ್‌ಶೀಟ್ ಕೊಡಲು ಸಾಧ್ಯವಿಲ್ಲ. ಹೀಗಾಗಿ ಅವರ ಡೇಟ್ಸ್‌ಗೆ ಕಾದು ಕೆಲವರು ಕಾಲ್‌ಶೀಟ್ ಪಡೆದುಕೊಂಡರೆ, ಹಲವರು ಬೇರೆ ನಟಿಯರನ್ನು ತಮ್ಮ ಚಿತ್ರಗಳಿಗೆ ನಾಯಕಿಯನ್ನರಾಗಿ ಮಾಡಿಕೊಳ್ಳುತ್ತಾರೆ. ಒಟ್ಟಿನಲ್ಲಿ, ಕನ್ನಡದ ಕವರಿಯೊಬ್ಬರು ನ್ಯಾಷನಲ್ ಸ್ಟಾರ್ ಪಟ್ಟದಲ್ಲಿ ಮೆರೆಯುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯೇ ಸರಿ!

ದಶಕಗಳ ಹಿಂದಿನ ಈ ಫೋಟೋದಲ್ಲಿ ತಾರಾ, ಮಾಲಾಶ್ರೀ ಜೊತೆ ಇರೋ ಬಾಲೆ ಯಾರು ಗೆಸ್ ಮಾಡ್ತೀರಾ?

 

Latest Videos
Follow Us:
Download App:
  • android
  • ios