ತಂದೆ 2ನೇ ಮದುವೆ ಆದಾಗ ಪಾರ್ವತಮ್ಮ ರಾಜ್‌ಕುಮಾರ್ ಕರೆ ಮಾಡಿ ಹೇಳಿದ್ದ ಮಾತು ಮರೆಯಲ್ಲ: ರಕ್ಷಿತಾ ಪ್ರೇಮ್

ತಂದೆ ತಾಯಿ ಡಿವೋರ್ಸ್ ಪಡೆದಾಗ ಮಕ್ಕಳು ಚಿಕ್ಕ ವಯಸ್ಸಿಗೆ ಮೆಚ್ಯೂರಿಟಿ ಪಡೆಯುತ್ತಾರೆ ಅಂತಾರೆ ರಕ್ಷಿತಾ ಪ್ರೇಮ್. 

Rakshita prem talks about parvathamma rajkumar support during father 2nd marriage vcs

ಸ್ಯಾಂಡಲ್‌ವುಡ್ ಡ್ರೀಮ್ ಗರ್ಲ್ ರಕ್ಷಿತಾ ಪ್ರೇಮ್ ತೆರೆ ಮೇಲೆ ಎಷ್ಟು ಖುಷಿಯಿಂದ ಮಿಂಚಿ ನಗುತ್ತಾರೋ ತೆರೆ ಹಿಂದೆ ಅಷ್ಟೇ  ಕಷ್ಟಗಳನ್ನು ನೋಡಿದ್ದಾರೆ. ತಂದೆ ತಾಯಿ ಡಿವೋರ್ಸ್ ಪಡೆದಾಗ ಮನೆಯ ಪರಿಸ್ಥಿತಿ ಹೇಗಿತ್ತು? ತಂದೆ ಎರಡನೇ ಮದುವೆ ಮಾಡಿಕೊಂಡಾಗ ಪಾರ್ವತಮ್ಮ ರಾಜ್‌ಕುಮಾರ್ ಕೊಟ್ಟ ಧೈರ್ಯ ಇದಂತೆ.....

ತಂದೆ ನೆನಪು:

'ಪ್ರತಿ ಸಲ ಶೂಟಿಂಗ್ ಆರಂಭಿಸುವ ಮುನ್ನ ನಾನು ಕ್ಯಾಮೆರಾಗೆ ನಮಸ್ಕಾರ ಮಾಡಿ ಶುರು ಮಾಡುವುದು. ಏಕೆಂದರೆ ಕ್ಯಾಮೆರಾ ಹಿಂದೆ ನನ್ನ ತಂದೆ ಇದ್ದಾರೆ ನನ್ನ ಕೆಲಸ ನೋಡುತ್ತಿದ್ದಾರೆ ಅನ್ನೋ ಧೈರ್ಯ ಬರುತ್ತದೆ. ಆದರೆ ನನ್ನ ಬಾಲ್ಯ ಅಷ್ಟು ಸುಲಭವಾಗಿ ಇರಲಿಲ್ಲ ಕಷ್ಟ ಅನ್ನೋದು ಪ್ರತಿಯೊಬ್ಬರಿಗೂ ಇರುತ್ತದೆ. ತಂದೆ ಕೆಟ್ಟವರು ಅಥವಾ ನನ್ನ ತಾಯಿ ಕೆಟ್ಟವರು ಎಂದು ನಾನು ಹೇಳುವುದಿಲ್ಲ, ಸಮಯ ಸಂದರ್ಭ ಜನರನ್ನು ಕಷ್ಟಕ್ಕೆ ಸಿಲುಕಿಸುತ್ತದೆ. ನನ್ನ ತಂದೆ ಕಡೆಯವರು ನಮ್ಮನ್ನು ಹೊರ ದಬ್ಬಿದಾಗ ನಮ್ಮ ತಾಯಿ ಜೊತೆ ರಸ್ತೆಯಲ್ಲಿ ಒಂದು ದಿನ ಮಲಗಿದ್ದೀನಿ. ಕೈಯಲ್ಲಿ ಇದ್ದ ಬಳೆಗಳನ್ನು ಅಮ್ಮ ಮಾರಿ ಅದರಿಂದ ಬಂದ ಹಣದಿಂದ ಬಾಂಬೆಯಲ್ಲಿ ನನಗೆ ವಿದ್ಯಾಭ್ಯಾಸ ಕೊಡಿಸಿದ್ದರು. ಅಮ್ಮ ಹಿಂತಿರುಗಿ ಕೆಲಸ ಮಾಡಲು ಶುರು ಮಾಡಿದ್ದರು. ಅಲ್ಲಿಗೆ ನನಗೆ ಅರ್ಥವಾಯ್ತು ಹೆಣ್ಣು ಮಕ್ಕಳು ದುಡಿಯುವುದು ಎಷ್ಟು ಮುಖ್ಯವಾಗಿತ್ತು ಎಂದು' ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ರಕ್ಷಿತಾ ಪ್ರೇಮ್ ಮಾತನಾಡಿದ್ದಾರೆ.

ಪ್ರತಿಯೊಬ್ಬರ ಜೀವನದಲ್ಲೂ ಹೀಗೆ ಆಗುತ್ತೆ; ವರುಣ್ ಆರಾಧ್ಯ- ವರ್ಷ ಕಾವೇರಿ ಬ್ರೇಕಪ್‌ ಉತ್ತರ ಕೊಟ್ಟ

ತಂದೆ ಎರಡನೇ ಮದುವೆ:

ಹಿಂದಿ ಸಿನಿಮಾಗಳನ್ನು ಚಿತ್ರೀಕರಣ ಮಾಡಲು ತಂದೆ ಬಾಂಬೆಗೆ ಬರುತ್ತಿದ್ದರು ಆಗ ಭೇಟಿ ಮಾಡುತ್ತಿದ್ದೆ ಆದರೆ ಅಷ್ಟಾಗಿ ಕ್ಲೋಸ್ ಇರಲಿಲ್ಲ. ನಮ್ಮ ಪೋಷಕರು ದೂರ ಆದಾಗ ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಮೆಚ್ಯೂರ್ ಆಗುತ್ತಾರೆ.  ಅಪ್ಪ ಅಮ್ಮ ಡಿವೋರ್ಸ್ ಪಡೆದಾ ನನಗೆ 10 ವರ್ಷ ಆಗಿದ್ದು, ಆ ಸಮಯಲ್ಲಿ ತಂದೆ ಸಿಕ್ಕಾಗ ನೋಡು ಅವರು ನಿಮ್ಮ ತಂದೆ ತುಂಬಾ ಒಳ್ಳೆಯ ವ್ಯಕ್ತಿ ಅವರೊಟ್ಟಿಗೆ ನೀನು ಮಾತನಾಡಬೇಕು ಎಂದು ಹೇಳಿಕೊಟ್ಟರು. ನನ್ನ ತಂದೆ ಮೇಲೆ ನನಗೆ ಗೌರವ ಹೆಚ್ಚಾಗಿದ್ದು ನನ್ನ ತಾಯಿಯಿಂದಲೇ. ನಾನು 7ನೇ ಕ್ಲಾಸ್‌ನಲ್ಲಿದ್ದಾಗ ತಂದೆ ಎರಡನೇ ಮದುವೆ ಮಾಡಿಕೊಂಡರು, ಆಗ ಪಾರ್ವತಮ್ಮ ರಾಜ್‌ಕುಮಾರ್ ನನಗೆ ಕರೆ ಮಾಡಿದ್ದರು. ಅಪ್ಪಾಜೀ ಮದುವೆ ಆಯ್ತು ಇವತ್ತು...ನಾನು ನಿನ್ನ ಜೊತೆ ಇರುತ್ತೀನಿ ಅಂದ್ರು. ಇವತ್ತಿಗೂ ಆ ಮಾತು ತುಂಬಾ ಧೈರ್ಯ ಕೊಡುತ್ತದೆ ಎಂದು ರಕ್ಷಿತಾ ಪ್ರೇಮ್ ಹೇಳಿದ್ದಾರೆ. 

ಬಾತ್‌ ಟಬ್‌ನಲ್ಲಿ ಕಾಲೆತ್ತಿ ಕುಳಿತ ಬಿಗ್ ಬಾಸ್ ಅನುಷಾ ರೈ; ಫೋಟೋ ವೈರಲ್!

Latest Videos
Follow Us:
Download App:
  • android
  • ios