ಪ್ರತಿಯೊಬ್ಬರ ಜೀವನದಲ್ಲೂ ಹೀಗೆ ಆಗುತ್ತೆ; ವರುಣ್ ಆರಾಧ್ಯ- ವರ್ಷ ಕಾವೇರಿ ಬ್ರೇಕಪ್ ಉತ್ತರ ಕೊಟ್ಟ ತಾಯಿ!
ವೈರಲ್ ಅಯ್ತು ವರುಣ್ ಆರಾಧ್ಯ ತಾಯಿ ಕೊಟ್ಟ ಉತ್ತರ. ಏನೇ ಆಗಲಿ ಮಗನ ಜೊತೆಗೆ ನಾನಿರುವೆ ಎಂದ ಮದರ್ ಇಂಡಿಯಾ.
ಬೃಂದಾವನ ನಟ ವರುಣ್ ಆರಾಧ್ಯ ಮತ್ತು ಸೋಷಿಯಲ್ ಮೀಡಿಯಾ ಕ್ವೀನ್ ವರ್ಷ ಕಾವೇರಿ ಬ್ರೇಕಪ್ ಮಾಡಿಕೊಂಡು ವರ್ಷ ಕಳೆದರೂ ಜನರು ಪ್ರಶ್ನೆ ಕೇಳುವುದನ್ನು ನಿಲ್ಲಿಸಿಲ್ಲ. ಕೆಲವು ದಿನಗಳ ಹಿಂದೆ ಪೊಲೀಸ್ ಮೆಟ್ಟಿಲೇರಿ ಚಿಕ್ಕ ಸಮಸ್ಯೆಯನ್ನು ದೊಡ್ಡ ಮಾಡಿಕೊಂಡಿದ್ದರು. ಇದೀಗ ತಮ್ಮ ಫಾಲೋವರ್ಸ್ ಕೇಳಿರುವ ಪ್ರಶ್ನೆಗೆ ವರುಣ್ ಆರಾಧ್ಯ ತಾಯಿ ಉತ್ತರಿಸಿದ್ದಾರೆ.
ಫಾಲೋವರ್ ಪ್ರಶ್ನೆ: ದಯವಿಟ್ಟು ಈ ಮೆಸೇಜ್‌ನ ನಿರ್ಲಕ್ಷ್ಯ ಮಾಡಬೇಡಿ. ಬ್ರೇಕಪ್ ವಿಚಾರ ಗೊತ್ತಾದಾಗ ನಿಮ್ಮ ತಾಯಿ ರಿಯಾಕ್ಷನ್ ಹೇಗಿತ್ತು?
'ಬ್ರೇಕಪ್ ವಿಚಾರ ಕೇಳಿದಾಗ ಆ ಕ್ಷಣಕ್ಕೆ ಬೇಸರ ಆಯ್ತು. ಆಗಬಾರದಿತ್ತು ಆದರೂ ಆಯ್ತು. ಬೇಜಾರ್ ಮಾಡಿಕೊಂಡು ಹಾಗೆ ಕೂತರೆ ಜೀವನ ಮುಂದಕ್ಕೆ ಸಾಗುವುದಿಲ್ಲ. ನಾವು ಬೇಸರ ಮಾಡಿಕೊಂಡರೆ ವರುಣ್ ಇದ್ದಿದ್ದು ಬೇಸರ ಮಾಡಿಕೊಳ್ಳುತ್ತಾನೆ. ದೊಡ್ಡವರಾಗಿ ನಾವು ಒಳ್ಳೆಯದ ಕಟ್ಟದ್ದು ತಿಳಿಸ ಹೇಳಬೇಕು ....ಅವರಿಬ್ಬರು ಒಂದು ದಾರಿ ಅಂತ ಹೋದರು ಅದು ಸರಿ ಹೋಗಲಿಲ್ಲ ಹೀಗಾಗಿ ಡಿವೈಡ್ ಆದ್ರು ಏನ್ ಮಾಡಲು ಆಗಲ್ಲ. ಪ್ರತಿಯೊಬ್ಬರ ಜೀವನದಲ್ಲೂ ಈ ರೀತಿ ಘಟನೆ ನಡೆದೇ ನಡೆಯುತ್ತದೆ ಏನು ಮಾಡಲು ಆಗಲ್ಲ. ಹೀಗೆ ಆಯ್ತು ಎಂದು ಮಗನನ್ನು ನಿರ್ಲಕ್ಷ್ಯ ಮಾಡಲು ಆಗಲ್ಲ ತಳ್ಳಲು ಆಗಲ್ಲ ತಪ್ಪೋ ಸರಿನೋ ತಿದ್ದಿಕೊಳ್ಳಿ ಎಂದು ಹೇಳಿ ಸಪೋರ್ಟ್ ಮಾಡಬೇಕು. ಈಗ ಸರಿ ದಾರಿಯಲ್ಲಿ ನಡೆಯುತ್ತಿರುವವನಿಗೆ ನಾವು ಸಪೋರ್ಟ್ ಮಾಡ್ಕೊಂಡು ಜೊತೆಯಾಗಿದ್ದೀವಿ ನೀವು ಕೂಡ ಜೊತೆಯಾಗಿದ್ದೀರಿ ಹೀಗೆ ವರುಣ್‌ಗೆ ಸಪೋರ್ಟ್ ಮಾಡಿ' ಎಂದು ವರುಣ್ ಆರಾಧ್ಯ ತಾಯಿ ಮಾತನಾಡಿದ್ದಾರೆ.
ಬಾತ್ ಟಬ್‌ನಲ್ಲಿ ಕಾಲೆತ್ತಿ ಕುಳಿತ ಬಿಗ್ ಬಾಸ್ ಅನುಷಾ ರೈ; ಫೋಟೋ ವೈರಲ್!
ದಯವಿಟ್ಟು ಬ್ರೇಕಪ್ ಬಗ್ಗೆ ಹೇಳಿ ಎಂದು ನಮ್ಮ ಅಕೌಂಟ್‌ನಲ್ಲಿ ಕಾಮೆಂಟ್ ಮಾಡುವುದು ಆಮೇಲೆ ಅಲ್ಲಿ ಅವರ ಅಕೌಂಟ್‌ನಲ್ಲಿ ಕಾಮೆಂಟ್ ಮಾಡುವುದು ಮಾಡಬೇಡಿ. ಬ್ರೇಕಪ್ ಆಗಿ ಒಂದು ವರ್ಷ ಆಯ್ತು. ನಾವು ಈಗ ಜೀವನದಲ್ಲಿ ಚೆನ್ನಾಗಿದ್ದೀವಿ. ನೀವುಗಳು ಕಾಮೆಂಟ್ ಹಾಕಿ ನಮಗೂ ಬೇಸರ ಮಾಡಬೇಡಿ ಅವರಿಗೂ ಬೇಸರ ಮಾಡಬೇಡಿ ಎಂದು ವರುಣ್ ಹೇಳಿದ್ದಾರೆ.
ಬಿಗ್ ಬಾಸ್ 1 ತುಂಬಾ ಇನೋಸೆಂಟ್ ಸೀಸನ್, ಟಿವಿ ನೋಡಿಲ್ಲ ಅಂದ್ರೆ ನನ್ನ ತಾಯಿಯ ದಿನ ಸಂಪೂರ್ಣ ಆಗಲ್ಲ: ವಿಜಯ್ ರಾಘವೇಂದ್ರ
ಪ್ರತಿಯೊಬ್ಬರ ಜೀವನದಲ್ಲಿ ಪ್ಲಸ್ ಆಂಡ್ ಮೈನಸ್ ಇದ್ದೇ ಇರುತ್ತದೆ. ತಪ್ಪು ಆಗುತ್ತದೆ ಏನು ಮಾಡಲು ಆಗಲ್ಲ ...ತಿಳುವಳಿಕೆ ಇಲ್ಲದೆ ಆಯ್ತೋ ಅಥವಾ ತಿಳುವಳಿಕೆ ಇಲ್ಲದೆ ಆಯ್ತೋ ಗೊತ್ತಿಲ್ಲ ...ಆದರೆ ಘಟನೆ ನಡೆದು ಹೋಗಿದೆ ಅದರ ಬಗ್ಗೆನೇ ಮಾತನಾಡುತ್ತಿದ್ದರ ಸಮಯ ವ್ಯರ್ಥ ಆಗುತ್ತದೆ. ಇದನ್ನು ಇಲ್ಲಿಗೆ ಬಿಟ್ಟು ಬಿಡಿ ಏಕೆಂದರೆ ಎಲ್ಲರಿಗೂ ಒಂದು ಜೀವನ ಇದೆ ಎಲ್ಲರಿಗೂ ಒಂದು ದಾರಿ ಇದೆ. ಅವರವರ ಜೀವನದಲ್ಲಿ ಅವರವರ ದಾರಿಯಲ್ಲಿ ಎಲ್ಲರೂ ಖುಷಿಯಾಗಿ ಚೆನ್ನಾಗಿರಲಿ ಅಷ್ಟೇ ಎಂದಿದ್ದಾರೆ ವರುಣ್ ತಾಯಿ.