ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾದ ಟ್ರೇಲರ್ ಮೇ 16ಕ್ಕೆ ಬಿಡುಗಡೆಯಾಗಲಿದೆ. ಮೇ 16ರ ಮಧ್ಯಾಹ್ನ 12.12 ಕ್ಕೆ 777 ಚಾರ್ಲಿ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ.
ರಕ್ಷಿತ್ ಶೆಟ್ಟಿ (Rakshit Shetty) ನಟನೆಯ ‘777 ಚಾರ್ಲಿ’ (777 Charlie) ಸಿನಿಮಾದ ಟ್ರೇಲರ್ (Trailer) ಮೇ 16ಕ್ಕೆ ಬಿಡುಗಡೆಯಾಗಲಿದೆ. ‘ಮೇ 16ರ ಮಧ್ಯಾಹ್ನ 12.12 ಕ್ಕೆ 777 ಚಾರ್ಲಿ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಕನ್ನಡ, ಮಲಯಾಳಂ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಟ್ರೇಲರ್ ರಿಲೀಸ್ ಆಗಲಿದೆ. ಈ ಮೂಲಕ ಧರ್ಮ ಮತ್ತು ಚಾರ್ಲಿಯ ಜಗತ್ತಿನ ಒಂದು ಕಿಟಕಿ ನಿಮಗೋಸ್ಕರ ತೆರೆಯಲಿದೆ’ ಎಂದು ಚಿತ್ರತಂಡ ಹೇಳಿದೆ.
‘ಚಾರ್ಲಿ ಹಾಗೂ ಧರ್ಮ ಥಿಯೇಟರ್ ಕಡೆ ನಡೆಯುತ್ತಿದ್ದಾರೆ. ಅದಕ್ಕೂ ಮುನ್ನ ಸ್ಪೆಷಲ್ಲಾಗಿ ನಿಮ್ಮ ಮುಂದೆ ಕಾಣಿಸಿಕೊಳ್ತಿದ್ದಾರೆ’ ಎಂದು ರಕ್ಷಿತ್ ಶೆಟ್ಟಿ ಟ್ರೇಲರ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ (Social Media) ಬರೆದುಕೊಂಡಿದ್ದಾರೆ. ‘ರಕ್ಷಿತ್ ನಿಮ್ಮ ಸಿನಿಮಾ ಆಗಮನಕ್ಕೆ ಎದುರು ನೋಡುತ್ತಿದ್ದೇನೆ’ ಎಂದು ನಟಿ ರಮ್ಯಾ (Ramya) ಟ್ವೀಟ್ ಮಾಡಿದ್ದಾರೆ. ಚಿತ್ರ ಜೂ.10ಕ್ಕೆ ತೆರೆ ಕಾಣಲಿದೆ. ಕಿರಣ್‌ರಾಜ್ (Kiran Raj) ನಿರ್ದೇಶನದ ಚಿತ್ರವನ್ನು ರಕ್ಷಿತ್ ಶೆಟ್ಟಿ ತಮ್ಮ ಪರಂವಃ ಸ್ಟುಡಿಯೋ ಮೂಲಕ ನಿರ್ಮಿಸುತ್ತಿದ್ದಾರೆ.
ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ವೀಕ್ಷಿಸಿದ ರಾಣಾದಗ್ಗುಬಾಟಿ; ತೆಲುಗು ಸ್ಟಾರ್ ನೀಡಿದ ಮೊದಲ ವಿಮರ್ಶೆ ಹೀಗಿದೆ
ಹಿಂದಿ ವಿತರಣೆ ಹಕ್ಕು ಖರೀದಿಸಿದ ಯುಎಫ್‌ಓ: ‘777 ಚಾರ್ಲಿ’ ಸಿನಿಮಾದ ಹಿಂದಿ ವಿತರಣೆ ಹಕ್ಕು ಖ್ಯಾತ ವಿತರಣಾ ಸಂಸ್ಥೆ ಯುಎಫ್‌ಓ ಪಾಲಾಗಿದೆ. ತೆಲುಗಿನಲ್ಲಿ ರಾಣಾ ದಗ್ಗು ಬಾಟಿ ವಿತರಣೆಯ ಹೊಣೆ ಹೊತ್ತರೆ, ತಮಿಳಿನಲ್ಲಿ ನಿರ್ದೇಶಕ ಕಾರ್ತಿಕ್ ಸುಬ್ಬರಾಜು, ಮಲಯಾಳಂನಲ್ಲಿ ನಟ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಚಿತ್ರ ವಿತರಣೆ ಜವಾಬ್ದಾರಿ ಹೊತ್ತಿದ್ದಾರೆ.
777 ಚಾರ್ಲಿಗೆ ರಾಣಾ ದಗ್ಗುಬಾಟಿ ಸಾಥ್: ರಕ್ಷಿತ್ ಶೆಟ್ಟಿನಟನೆ, ಕಿರಣ್ ರಾಜ್ ಕೆ ನಿರ್ದೇಶನದ ‘777 ಚಾರ್ಲಿ’ ಚಿತ್ರಕ್ಕೆ ತೆಲುಗಿನ ರಾಣಾ ದಗ್ಗುಬಾಟಿ ಸಾಥ್ ನೀಡಿದ್ದಾರೆ. ಬಹು ಭಾಷೆಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನು ರಾಣಾ ದಗ್ಗುಬಾಟಿ ಅವರು ಪ್ರಸ್ತುತ ಪಡಿಸುತ್ತಿದ್ದು, ತಮ್ಮ ಸುರೇಶ್ ಪ್ರೊಡಕ್ಷನ್ ಮೂಲಕ ಚಿತ್ರವನ್ನು ವಿತರಣೆ ಮಾಡಲಿದ್ದಾರೆ. ಆ ಮೂಲಕ ರಕ್ಷಿತ್ ಶೆಟ್ಟಿಅವರ ಈ ಚಿತ್ರವನ್ನು ಟಾಲಿವುಡ್‌ನಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ.
ಹೀಗಾಗಿ ‘ಕೆಜಿಎಫ್ 2’ ಚಿತ್ರದ ನಂತರ ಮತ್ತೊಂದು ಕನ್ನಡ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುವುದಕ್ಕೆ ತಯಾರಾಗುತ್ತಿದೆ. ಅಂದಹಾಗೆ ಜೂನ್ 10ಕ್ಕೆ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಳಂ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಸಂಗೀತ ಶೃಂಗೇರಿ ನಾಯಕಿಯಾಗಿ ನಟಿಸಿದ್ದಾರೆ. ತಮಿಳಿನ ಬಾಬಿ ಸಿಂಹ, ಡ್ಯಾನಿಶ್ ಸೇಠ್ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ. ‘ತೆಲುಗಿನಲ್ಲಿ ನಮ್ಮ ಚಿತ್ರವನ್ನು ರಾಣಾ ದಗ್ಗುಬಾಟಿ ಅವರು 10 ಜನರ ತಂಡದೊಂದಿಗೆ ಸಿನಿಮಾ ನೋಡಿದ ನಂತರ ಅಲ್ಲಿ ವಿತರಣೆ ಮಾಡಲು ಒಪ್ಪಿದ್ದು, ನಮ್ಮ ಚಿತ್ರಕ್ಕೆ ಸಿಕ್ಕಿರುವ ಬಹು ದೊಡ್ಡ ಮೆಚ್ಚುಗೆ.
ಸಿನಿಮಾ ನೋಡಿದ ಕೂಡಲೇ ರಾಣಾ ಅವರೇ ಟ್ವೀಟ್ ಮಾಡಿ, ಚಿತ್ರದ ಬಗ್ಗೆ ಎರಡೇ ಸಾಲಿನಲ್ಲಿ ರಿವ್ಯೂ ಕೂಡ ಹಾಕಿದ್ದಾರೆ. ಹೀಗಾಗಿ ಚಿತ್ರವನ್ನು ಅವರೇ ಪ್ರಸೆಂಟ್ ಮಾಡುವ ಜತೆಗೆ ಇದರ ತೆಲುಗು ವರ್ಷನ್ ಅನ್ನು ಸುರೇಶ್ ಪ್ರೊಡಕ್ಷನ್‌ನಿಂದ ಬಿಡುಗಡೆ ಮಾಡುತ್ತಿದ್ದಾರೆ. ಎಷ್ಟುಚಿತ್ರಮಂದಿರಗಳು, ಎಷ್ಟುಸ್ಕ್ರೀನ್‌ಗಳು ಎಂಬುದನ್ನು ಸದ್ಯದಲ್ಲೇ ಹೇಳುತ್ತಾರೆ. ಆದರೆ, ಕನ್ನಡ ಚಿತ್ರಕ್ಕೆ ಟಾಲಿವುಡ್‌ನಲ್ಲಿ ದೊಡ್ಡ ನಿರ್ಮಾಣ ಸಂಸ್ಥೆ ಜತೆಯಾಗಿದೆ ಎಂಬುದು ಈ ಕ್ಷಣದ ಸಂಭ್ರಮ’ ಎನ್ನುತ್ತಾರೆ ನಿರ್ದೇಶಕ ಕಿರಣ್ ರಾಜ್.
ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಗುಡ್ ನ್ಯೂಸ್; ಬಹಿರಂಗವಾಯ್ತು '777 ಚಾರ್ಲಿ' ರಿಲೀಸ್ ಡೇಟ್
ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಲಿರುವ ಮುಂದಿನ ಸಿನಿಮಾ ಎಂಬ ನಿರೀಕ್ಷೆ ಹುಟ್ಟಿರುವ ಸಿನಿಮಾ ‘777 ಚಾರ್ಲಿ’ ಜೂನ್ 10ರಂದು ಬಿಡುಗಡೆಯಾಗಲಿದೆ. ರಕ್ಷಿತ್ ಶೆಟ್ಟಿನಟಿಸಿರುವ, ಕಿರಣ್‌ರಾಜ್ ಕೆ ನಿರ್ದೇಶನದ ಈ ಚಿತ್ರದ ಕನ್ನಡ ಭಾಷೆಯ ಪ್ರಸಾರ ಹಕ್ಕುಗಳು ರು.21 ಕೋಟಿಗೆ ಕಲರ್ಸ್ ಕನ್ನಡದ ಪಾಲಾಗಿದೆ ಎಂದು ಮೂಲಗಳು ತಿಳಿಸಿವೆ. ಡಿಜಿಟಲ್ ಹಕ್ಕು ಕಲರ್ಸ್ ಸಂಸ್ಥೆಯ ಒಡೆತನದ ವೂಟ್ ಓಟಿಟಿಗೆ ದಕ್ಕಿದೆ.
