ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ನಟನೆಯ ಬಹುನಿರೀಕ್ಷೆಯ 777 ಚಾರ್ಲಿ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಸಿನಿಮಾ ಜೂನ್ 10ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಯಲ್ಲಿ 777 ಚಾರ್ಲಿ ರಿಲೀಸ್ ಆಗುತ್ತಿದೆ. 

ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್​ ಶೆಟ್ಟಿ (Rakshit Shetty) ಸಿನಿಮಾ ಯಾವಾಗ ತೆರೆಗೆ ಬರುತ್ತೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಅವನೇ ಶ್ರೀಮನ್ನಾರಾಯಣ ಸಿನಿಮಾ ಬಳಿಕ ರಕ್ಷಿತ್ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಹಾಗಾಗಿ ಅಭಿಮಾನಿಗಳು ಕಾರತರಿಂದ ಕಾಯುತ್ತಿದ್ದಾರೆ. ರಕ್ಷಿತ್ ನಟನೆಯ ‘777 ಚಾರ್ಲಿ’ ಸಿನಿಮಾ (777 Charlie) ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾ ಕೂಡ ದೊಡ್ಡಮಟ್ಟದಲ್ಲಿ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಟೀಸರ್ ಮತ್ತು ಪೋಸ್ಟರ್ ಮೂಲಕ ಸದ್ದು ಮಾಡುತ್ತಿರುವ ಚಾರ್ಲಿ ಸಿನಿಮಾದ ಬಿಡುಗಡೆ ದಿನಾಂಕ ಬಹಿರಂಗವಾಗಿದೆ.

ನಾಯಿ ಮತ್ತು ಮನುಷ್ಯನ ನಡುವಿನ ಭಾವನಾತ್ಮಕ ಸಂಬಂಧ ಬಗ್ಗೆ ಇರುವ ಈ ಸಿನಿಮಾ ಈಗಾಗಲೇ ಟೀಸರ್ ಮೂಲಕ ಕುತೂಹಲ ಹೆಚ್ಚಿಸಿತ್ತು. ಯಾವಾಗ ತೆರೆ ಮೇಲೆ ಬರಲಿದೆ ಎಂದು ಕಾಯುತ್ತಿದ್ದರು. ಇದೀಗ ಸಿನಿಮಾ ಬಿಡುಗಡೆ ದಿನಾಂಕ ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದೆ ಸಿನಿಮಾತಂಡ. ಇಂದು (ಏಪ್ರಿಲ್ 10) ರಾಮ ನವಮಿಯ ವಿಶೇಷ ದಿನದಂದು ರಕ್ಷಿತ್ ಶೆಟ್ಟಿ ಆಂಡ್ ಟೀಂ ಬಹುನಿರೀಕ್ಷೆಯ 777 ಚಾರ್ಲಿ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಿದ್ದಾರೆ.

ಅಂದಹಾಗೆ 777 ಚಾರ್ಲಿ ಜೂನ್ 10ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ. ಸದ್ಯ ಸಿನಿಮಾದಿಂದ ಬಿಡುಗಡೆ ಪೋಸ್ಟರ್ ರಿಲೀಸ್ ಮಾಡಿ ಜೂನ್ 10ಕ್ಕೆ ಚಾರ್ಲಿ ನಿಮ್ಮ ಮುಂದೆ ಇರಲಿದೆ ಎಂದು ಸಿನಿಮಾತಂಡ ಹೇಳಿದೆ. ಈ ಬಗ್ಗೆ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ, '777ಚಾರ್ಲಿ ಜೂನ್ 10, 2022 ರಂದು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬಿಡುಗಡೆ. ಪ್ರೀತಿ, ಆಶೀರ್ವಾದ ಸದಾ ಇರಲಿ' ಎಂದು ಹೇಳಿದ್ದಾರೆ.

ರಕ್ಷಿತ್ ಶೆಟ್ಟಿ '777 ಚಾರ್ಲಿ' ಬಿಡುಗಡೆಗೆ ಡೇಟ್ ಫಿಕ್ಸ್; ಇಲ್ಲಿದೆ ಬಿಗ್ ಅಪ್ ಡೇಟ್

ಅಂದಹಾಗೆ 777 ಚಾರ್ಲಿ, ಕೋವಿಡ್​ ಕಾರಣದಿಂದ ಬಿಡುಗಡೆ ವಿಳಂಬವಾಗಿತ್ತು. ಈಗ ಸಿನಿಮಾ ಕೆಲಸಗಳು ಪೂರ್ಣಗೊಳ್ಳುವ ಹಂತ ತಲುಪಿದೆ. ಕನ್ನಡ ಮಾತ್ರವಲ್ಲದೆ ತೆಲುಗು, ಮಲಯಾಳಂ, ಹಿಂದಿ ಮತ್ತು ತಮಿಳಿನಲ್ಲೂ ‘777 ಚಾರ್ಲಿ’ ಬಿಡುಗಡೆ ಆಗುತ್ತಿದೆ.

Scroll to load tweet…

ಅಂದಹಾಗೆ ಎಲ್ಲವೂ ಅಂದುಕೊಂಡಂತ್ತೆ ಆಗಿದ್ದಾರೆ ಸಿನಿಮಾ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲೇ ತೆರೆಗೆ ಬರಬೇಕಿತ್ತು. ಆದರೆ ಕಾರಣಾಂತರ ಗಳಿಂದ ಸಿನಿಮಾ ಬಿಡುಗಡೆ ದಿನಾಂಕ ಮುಂದಾಡಲಾಗಿತ್ತು. ಈ ಬಗ್ಗೆ ಸಿನಿಮಾತಂಡ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು. '777 ಚಾರ್ಲಿಯ ಈ ಸುದೀರ್ಘ ಪಯಣದಲ್ಲಿ ನೀವು ನಮಗೆ ತೋರಿರುವ ಪ್ರೀತಿ ಹಾಗು ಬೆಂಬಲಕ್ಕೆ ನಾವು ಆಭಾರಿ. ನಾವು ಈ ಮೂಲಕ ತಿಳಿಸಬಯಸುವುದೇನೆಂದರೆ, ನಮ್ಮ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಈ ಮೊದಲು ನಿಗದಿಪಡಿಸಲಾಗಿದ್ದ ದಿನಾಂಕವಾದ 31 ಡಿಸೆಂಬರ್ 2021 ರಂದು ಚಿತ್ರವನ್ನು ಬಿಡುಗಡೆ ಮಾಡುತ್ತಿಲ್ಲ. ಕೆಲವು ವಿಳಂಬಗಳು ಹೊಸದೊಂದು ಅಧ್ಯಾಯಕ್ಕೆ ನಾಂದಿಯಾಗುತ್ತದೆ. ಅತೀ ಶೀಘ್ರದಲ್ಲಿ ಹೊಸ ಪ್ರಕಟಣೆಯೊಂದಿಗೆ ನಿಮ್ಮ ಮುಂದೆ ಬರಲಿದ್ದೇವೆ. ಅಲ್ಲಿಯವರೆಗೂ, ಹರಸಿ.. ಹಾರೈಸಿ' ಎಂದು ಹೇಳಿದ್ದರು.

ಸಿಂಪಲ್ ಸ್ಟಾರ್, ಹ್ಯಾಂಡ್ಸಂ ಬಾಯ್ ರಕ್ಷಿತ್‌ ಶೆಟ್ಟಿಗೆ ಕೂಡಿ ಬಂತಾ ಕಂಕಣ ಭಾಗ್ಯ..?

ಇದೀಗ ಹೊಸ ಬಿಡುಗಡೆ ದಿನಾಂಕ ಘೋಷಣೆ ಮಾಡುವ ಮೂಲಕ ಅಭಿಮಾನಿಗಳಿಗೆ ಥ್ರಿಲ್ಲಿಂಗ್ ಸುದ್ದಿ ನೀಡಿದೆ. 777 ಚಾರ್ಲಿ ಕಿರಣ್ ರಾಜ್ ಸಾರಥ್ಯದಲ್ಲಿ ಮೂಡಿಬಂದ ಸಿನಿಮಾ. ರಕ್ಷಿತ್ ಶೆಟ್ಟಿ ಜೊತೆ ಸಂಗೀತ ಶೃಂಗೇರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಉಳಿದಂತೆ ದಾನೀಶ್ ಸೇಠ್, ರಾಜ್ ಬಿ ಶೆಟ್ಟಿ, ಬಾಬಿ ಸಿಂಹ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಜೂನ್ 10ರಂದು 777 ಚಾರ್ಲಿಯನ್ನು ಕಣ್ತುಂಬಿ ಕೊಳ್ಳಲು ರಕ್ಷಿತ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.