ಅದ್ಧೂರಿಯಾಗಿ ನಡೆಯಿತ್ತು ತಲೈವ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ.ಚಿಕ್ಕಪ್ಪ ಜೊತೆ ಮರೆಯಲಾಗದ ಘಟನೆ ನೆನಪಿಸಿಕೊಂಡ ಶಿವಣ್ಣ...  

‘ಒಂದು ದಿನ ನನ್ನ ತಂದೆ ಶಬರಿಮಲೆಗೆ ಹೋಗಿದ್ದ ಸಂದರ್ಭದಲ್ಲಿ ನಾನು ರಜನಿಕಾಂತ್‌ ಅವರ ಕೈ ಹಿಡಿದು ಅವರ ಜತೆಗೆ ಹೆಜ್ಜೆ ಹಾಕಿದ್ದೆ. ಅವರು ಅಂದು ತೋರಿದ ಪ್ರೀತಿಯನ್ನು ಈಗಲೂ ತೋರಿಸುತ್ತಾರೆ. ಅವರು ನನಗೆ ಚಿಕ್ಕಪ್ಪ ಇದ್ದಂತೆ’.

- ಈ ಮಾತು ಹೇಳಿದ್ದು ಶಿವರಾಜ್‌ಕುಮಾರ್‌. ಸಂದರ್ಭ: ‘ಜೈಲರ್‌’ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ.

ಚೆನ್ನೈನಲ್ಲಿ ನಡೆದ ರಜನಿಕಾಂತ್ ನಟನೆಯ ‘ಜೈಲರ್’ ಕಾರ್ಯಕ್ರಮದಲ್ಲಿ ಕುಟುಂಬ ಸಮೇತರಾಗಿ ಪಾಲ್ಗೊಂಡಿದ್ದ ಶಿವರಾಜ್‌ಕುಮಾರ್‌ ಆಡಿದ ಮಾತುಗಳು ಜನಮೆಚ್ಚುಗೆ ಗಳಿಸುತ್ತಿವೆ.

ಮಾಲ್ಡೀವ್ಸ್‌ನಲ್ಲಿ ರಜನಿಕಾಂತ್: ಕೆಂಪು ಟಿ ಶರ್ಟ್, ಕಪ್ಪು ಚಡ್ಡಿಯಲ್ಲಿ ತಲೈವ ಮಸ್ತ್ ಎಂಜಾಯ್

‘ನಾನು ಹುಟ್ಟಿದ್ದು, ಬೆಳೆದಿದ್ದು, ಓದಿದ್ದು ಚೆನ್ನೈನಲ್ಲಿ. ಹೀಗಾಗಿ ನನಗೆ ಚೆನ್ನೈ ಎಂದರೆ ತುಂಬಾ ಇಷ್ಟ. ನನಗೆ ತಮಿಳು ಚಿತ್ರರಂಗದಲ್ಲಿ ಬಹಳಷ್ಟು ಮಂದಿ ಇಷ್ಟವಾಗುತ್ತಾರೆ. ‘ಬೀಸ್ಟ್’ ಚಿತ್ರದ ನಂತರ ನೆಲ್ಸನ್ ನನಗೆ ಕರೆ ಮಾಡಿದ್ದರು. ನಂತರ ನಾನು ವಿಜಯ್ ಅವರನ್ನು ಭೇಟಿಯಾಗಿದ್ದೆ. ಅದೇ ರೀತಿ ನಾನು ಧನುಷ್ ಅವರ ದೊಡ್ಡ ಅಭಿಮಾನಿ. ಜೈಲರ್‌ ಚಿತ್ರದಲ್ಲಿ ನನ್ನದು ಚಿಕ್ಕ ಪಾತ್ರ. ಆದರೆ, ಕ್ಯಾಪ್ಟನ್‌ ಮಿಲ್ಲರ್‌ ಚಿತ್ರದಲ್ಲಿ ದೊಡ್ಡ ಪಾತ್ರ’ ಎಂದು ಶಿವಣ್ಣ ಹೇಳಿದ್ದಾರೆ.

ನೆಲ್ಸನ್‌ ನಿರ್ದೇಶನದ ‘ಜೈಲರ್‌’ ಸಿನಿಮಾ ಆಗಸ್ಟ್‌ 10ಕ್ಕೆ ತೆರೆಗೆ ಬರುತ್ತಿದೆ.

ರ್ನಾಟಕ ವಿತರಣೆ ಹಕ್ಕು ಸೋಲ್ಡ್ ಔಟ್:

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಹಾಡುಗಳು ಹಾಗೂ ಟೀಸರ್ ಮೂಲಕ ಕಮಾಲ್ ಮಾಡಿರೋ ಜೈಲರ್ ಚಿತ್ರದ ಕರ್ನಾಟಕ ವಿತರಣೆ ಹಕ್ಕು ಜಯಣ್ಣ ಕಂಬೈನ್ಸ್ ಪಾಲಾಗಿದೆ..ಈ ಮೂಲಕ‌ ಮತ್ತೆ ಜಯಣ್ಣ ಕಂಬೈನ್ಸ್ ಮತ್ತೆ ಸುದ್ದಿಯಲ್ಲಿದೆ.

ಟ್ರೆಂಡಿಂಗ್ ನಲ್ಲಿದೆ ಕಾವಾಲ ಸಾಂಗ್

ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾದ ಕಾವಾಲ ಸಾಂಗ್ ಸಖತ್ ಟ್ರೆಂಡಿಂಗ್ ನಲ್ಲಿದೆ. ಈ ಹಾಡಿಗೆ ತಮ್ಮನ್ನ ಡಾನ್ಸ್ ಮಾಡಿದ್ದು ಇದೇ ಮೊದಲ ಬಾರಿಗೆ ಡಿಫ್ರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಈ ಹಾಡು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಯಾರ್ ನೋಡಿದ್ರು ಈ ಹಾಡಿಗೆ ರೀಲ್ಸ್ ಮಾಡಿ ಎಂಜಾಯ್ ಮಾಡುತ್ತಿದ್ದಾರೆ. 

ಶಕೀರಾ ಸ್ಥಾನ ಸ್ವೀಕರಿಸಿದ ತಮನ್ನಾ; ಸೆಕ್ಸಿ ಸ್ಟೆಪ್‌ ವಿಡಿಯೋ ವೈರಲ್‌!

ಜೈಲರ್ ಸಿನಿಮಾ ಬಗ್ಗೆ ಹೇಳುವುದಾದರೆ ಈ ಸಿನಿಮಾದಲ್ಲಿ ತಮನ್ನಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಸ್ಟಾರ್ ಶಿವರಾಜ್ ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್ ಸ್ಟಾರ್ ಜಾಕಿ ಶ್ರಾಫ್, ರಮ್ಯಾ ಕೃಷ್ಣ, ಯೋಗಿ ಬಾಬು, ಮಲಯಾಳಂ ಸ್ಟಾರ್ ಮೋಹನ್ ಬಾಬು ಸೇರಿದಂತೆ ಅನೇಕರು ನಟಿಸಿದ್ದಾರೆ. ನೆಲ್ಸನ್ ದಿಲೀಪ್ ನಿರ್ದೇಶನ ಮಾಡಿದ್ದಾರೆ. ಆಗಸ್ಟ್ ನಲ್ಲಿ ತೆರೆಗೆ ಬರಲಿದೆ ಜೈಲರ್.