ಮಾಲ್ಡೀವ್ಸ್‌ನಲ್ಲಿ ರಜನಿಕಾಂತ್: ಕೆಂಪು ಟಿ ಶರ್ಟ್, ಕಪ್ಪು ಚಡ್ಡಿಯಲ್ಲಿ ತಲೈವ ಮಸ್ತ್ ಎಂಜಾಯ್
ಮಾಲ್ಡೀವ್ಸ್‌ನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಮಸ್ತ್ ಮಜಾ ಮಾಡುತ್ತಿದ್ದಾರೆ. ಕೆಂಪು ಟಿ ಶರ್ಟ್, ಕಪ್ಪು ಚಡ್ಡಿಯಲ್ಲಿ ಕಾಣಿಸಿಕೊಂಡಿರುವ ರಜನಿಕಾಂತ್ ಫೋಟೋ ವೈರಲ್ ಆಗಿದೆ.
ಸೂಪರ್ ಸ್ಟಾರ್ ರಜನಿಕಾಂತ್ ಸದ್ಯ ಬಹುನಿರೀಕ್ಷೆಯ ಜೈಲರ್ ಮತ್ತು ಲಾಲ್ ಸಲಾಮ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈ ಎರಡು ಸಿನಿಮಾಗಳು ತೆರೆಮೇಲೆ ಬರಲು ಸಿದ್ಧವಾಗಿವೆ. ಜೈಲರ್ ಸಿನಿಮಾದಲ್ಲಿ ರಜನಿಕಾಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಲಾಲ್ ಸಲಾಮ್ ಸಿನಿಮಾ ರಜನಿಕಾಂತ್ ಮಗಳು ಐಶ್ವರ್ಯಾ ರಜನಿಕಾಂತ್ ನಿರ್ದೇಶನ ಮಾಡಿದ್ದು ಇದರಲ್ಲಿ ರಜನಿಕಾಂತ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಜೈಲರ್ ಸಿನಿಮಾ ಆಗಸ್ಟ್ 10ಕ್ಕೆ ತೆರೆ ಬರುತ್ತಿದೆ. ಈಗಾಗಲೇ ರಿಲೀಸ್ ಆಗಿರುವ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ತಮನ್ನಾ ನಟನೆಯ ಕಾವಾಲಿಯ ಹಾಡು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹಾಡಿನ ಕ್ರೇಜ್ ನೋಡಿ ಅಭಿಮಾನಿಗಳು ಸಿನಿಮಾಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಸೂಪರ್ ಸ್ಟಾರ್ ವಿದೇಶಿ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗುವ ಮೊದಲು ರಜನಿಕಾಂತ್ ಪ್ರವಾಸಕ್ಕೆ ತೆರಳಿದ್ದಾರೆ.
ಸೂಪರ್ ಸ್ಟಾರ್ ಸದ್ಯ ಮಾಲ್ಡೀವ್ಸ್ ನಲ್ಲಿದ್ದಾರೆ. ಮಾಲ್ಡೀವ್ಸ್ ನ ಪ್ರಕೃತಿ ಸೌಂದರ್ಯ ಸವಿಯುತ್ತಿರುವ ತಲೈವಾ ಬೀಚ್ ನಲ್ಲಿ ಮಸ್ತ್ ಎಂಜಾಯ್ ಮಾಡುತ್ತಿದ್ದಾರೆ. ಕೆಂಪು ಟಿ ಶರ್ಟ್ ಕಪ್ಪು ಚಡ್ಡಿಯಲ್ಲಿ ಕಾಣಿಸಿಕೊಂಡಿರುವ ಸೂಪರ್ ಸ್ಟಾರ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಾಲ್ಡೀವ್ಸ್‌ನ ಕಡಲತೀರದಲ್ಲಿ ರಜನಿಕಾಂತ್ ಓಡಾಡುತ್ತಿರುವ ಫೋಟೋ ವೈರಲ್ ಆಗಿದೆ. ವಿದೇಶಿ ಪ್ರವಾಸ ಎಂಜಾಯ್ ಮಾಡುತ್ತಿರು ಸೂಪರ್ ಸ್ಟಾರ್ ಸದ್ಯದಲ್ಲೇ ಭಾರತಕ್ಕೆ ಮರಳಿದ್ದಾರೆ. ಭಾರತಕ್ಕೆ ಬರುತ್ತಿದ್ದಂತೆ ಸಿನಿಮಾ ಪ್ರಚಾರಗಳಲ್ಲಿ ತೊಡಗಿಕೊಳ್ಳಲಿದ್ದಾರೆ.
ಅಣ್ಣಾಮಲೈಯಾರ್ ದೇವಸ್ಥಾನಕ್ಕೆ ಭೇಟಿ ನೀಡಿದ ರಜನಿಕಾಂತ್: ಸೂಪರ್ ಸ್ಟಾರ್ ನೋಡಲು ಮುಗಿಬಿದ್ದ ಫ್ಯಾನ್ಸ್
ಜೈಲರ್ ಸಿನಿಮಾ ಬಗ್ಗೆ ಹಹೇಳುವುದಾದರೆ ಈ ಸಿನಿಮಾದಲ್ಲಿ ತಮನ್ನಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಸ್ಟಾರ್ ಶಿವರಾಜ್ ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್ ಸ್ಟಾರ್ ಜಾಕಿ ಶ್ರಾಫ್, ರಮ್ಯಾ ಕೃಷ್ಣ, ಯೋಗಿ ಬಾಬು, ಮಲಯಾಳಂ ಸ್ಟಾರ್ ಮೋಹನ್ ಬಾಬು ಸೇರಿದಂತೆ ಅನೇಕರು ನಟಿಸಿದ್ದಾರೆ. ಜೈಲರ್ ಸಿನಿಮಾ ಬಳಿಕ ರಜನಿಕಾಂತ್ ಲಾಲ್ ಸಲಾಮ್ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ.
ಶಕೀರಾ ಸ್ಥಾನ ಸ್ವೀಕರಿಸಿದ ತಮನ್ನಾ; ಸೆಕ್ಸಿ ಸ್ಟೆಪ್ ವಿಡಿಯೋ ವೈರಲ್!
ಲಾಲ್ ಸಲಾಮ್ ಸಿನಿಮಾಗೆ ರಜನಿಕಾಂತ್ ಪುತ್ರಿ ಐಶ್ವರ್ಯಾ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿರುವುದಾಗಿ ಐಶ್ವರ್ಯಾ ಬಹಿರಂಗ ಪಡಿಸಿದ್ದಾರೆ. ಲಾಲ್ ಸಲಾಮ್ ಸಿನಿಮಾದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.