Radhika Pandit Viral Photo: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ವಿಚಾರ ಸಖತ್ ಚರ್ಚೆಗೆ ಗ್ರಾಸವಾಗಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ವಿಚಾರ ಸಖತ್ ಚರ್ಚೆಗೆ ಗ್ರಾಸವಾಗಿದೆ. ಈ ಬಾರಿ ಸುದ್ದಿಯ ಕೇಂದ್ರಬಿಂದುವಾಗಿರುವುದು ನಟಿ ರಾಧಿಕಾ ಪಂಡಿತ್. ಅವರು ಹಂಚಿಕೊಂಡಿರುವ ಹೊಸ ಫೋಟೋ ಇದೀಗ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
ರಾಧಿಕಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಮುದ್ರ ತೀರದ ಹಿನ್ನೆಲೆಯಲ್ಲಿರುವ ಬೃಹತ್ ರಾವಣನ ಪ್ರತಿಮೆಯ ಮುಂದೆ ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಕತ್ತಿ ಮತ್ತು ಗುರಾಣಿ ಹಿಡಿದಿರುವ ರಾವಣನ ಪ್ರತಿಮೆಯ ಎದುರು ಸ್ಟೈಲಿಶ್ ಲುಕ್‌ನಲ್ಲಿ ಪೋಸ್ ಮಾಡಿರುವ ಅವರು, "ಗೊತ್ತಿರೋರಿಗೆ ಮಾತ್ರ ಗೊತ್ತು" (If you know, you know) ಎಂಬ ಕ್ಯಾಪ್ಶನ್ ಸೇರಿಸಿದ್ದಾರೆ.
ಈ ಪೋಸ್ಟ್ ಗಮನ ಸೆಳೆದಿರುವುದಕ್ಕೆ ಕಾರಣವೂ ಇದೆ. ಟ್ರೇಲರ್‌ನಲ್ಲಿ ಯಶ್ ಮೊದಲ ಬಾರಿಗೆ ಲಂಕಾಧಿಪತಿ ರಾವಣನಾಗಿ ಅಬ್ಬರಿಸಿರುವ ಝಲಕ್ ಅಭಿಮಾನಿಗಳ ಮೆಚ್ಚುಗೆ ಗಳಿಸಿರುವ ಸಮಯದಲ್ಲೇ ರಾಧಿಕಾ ಈ ಫೋಟೋ ಹಂಚಿಕೊಂಡಿದ್ದಾರೆ. ಇದರಿಂದ ಇದು ಕೇವಲ ಸಾಮಾನ್ಯ ಪೋಸ್ಟ್ ಅಲ್ಲ, ಪತಿಯ ಸಿನಿಮಾಗೆ ಪರೋಕ್ಷವಾಗಿ ನೀಡಿದ ಬೆಂಬಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಪೋಸ್ಟ್ ವೈರಲ್ ಆಗುತ್ತಿದ್ದಂತೆ ಕಾಮೆಂಟ್‌ಗಳ ಸುರಿಮಳೆಯೇ ಹರಿದಿದೆ. "ನಮ್ಮ ರಾವಣನ ನಿಜವಾದ ಮಂಡೋದರಿ ಇವರೇ", "ರಾಮಾಯಣ ಹೈಪ್‌ಗೆ ರಾಧಿಕಾ ಕೂಡ ಸಾಥ್ ನೀಡಿದ್ದಾರೆ", "ಕ್ಯಾಪ್ಶನ್‌ನಲ್ಲೇ ದೊಡ್ಡ ಕ್ಲೂ ಇದೆ" ಎಂಬಂತ ಹಲವು ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಫ್ಯಾಷನ್ ಸೆನ್ಸ್‌ಗೂ ಮೆಚ್ಚುಗೆ
ಫೋಟೋದಲ್ಲೂ ರಾಧಿಕಾ ತಮ್ಮ ಸರಳ ಹಾಗೂ ಆಕರ್ಷಕ ಸ್ಟೈಲ್‌ನಿಂದ ಗಮನ ಸೆಳೆದಿದ್ದಾರೆ. ಬಿಳಿ ಬಣ್ಣದ ಪ್ರಿಂಟೆಡ್ ಲಾಂಗ್ ಡ್ರೆಸ್, ಕಪ್ಪು ಸನ್‌ಗ್ಲಾಸ್ ಹಾಗೂ ಮಿನಿಮಲ್ ಲುಕ್‌ನಲ್ಲಿ ಅವರು ಕಾಣಿಸಿಕೊಂಡಿದ್ದು, ಅಭಿಮಾನಿಗಳು ಅವರ ಫ್ಯಾಷನ್ ಸೆನ್ಸ್‌ಗೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಸದ್ಯ ಯಶ್ ಅಭಿನಯದ 'ರಾಮಾಯಣ' ಟ್ರೇಲರ್ ಈಗಾಗಲೇ ವಿಶ್ವದಾದ್ಯಂತ ಭರ್ಜರಿ ಪ್ರತಿಕ್ರಿಯೆ ಪಡೆಯುತ್ತಿದ್ದು, ಅದರ ಬೆನ್ನಲ್ಲೇ ರಾಧಿಕಾ ಪಂಡಿತ್ ಅವರ ಈ ಪೋಸ್ಟ್ ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಯನ್ನು ಮತ್ತಷ್ಟು ಹೆಚ್ಚಿಸಿದೆ.


