Radhika Pandit Yash : ರಾಧಿಕಾ ಪಂಡಿತ್ ಫ್ಯಾನ್ಸ್ ಗೆ ಸೂಪರ್ ಗಿಫ್ಟ್ ನೀಡಿದ್ದಾರೆ. ತಮ್ಮ ಎಂಗೇಜ್ಮೆಂಟ್ ವಿಡಿಯೋ ಪೋಸ್ಟ್ ಮಾಡಿ ಎಂಗೇಜ್ಮೆಂಟ್ ಆನಿವರ್ಸರಿ ಖುಷಿಯನ್ನು ಎಲ್ಲರ ಮುಂದೆ ಹಂಚಿಕೊಂಡಿದ್ದಾರೆ

ಕರ್ನಾಟಕದ ಜನರ ಮನಸ್ಸಿನಲ್ಲಿ ಅಣ್ಣ ಅತ್ತಿಗೆ ಅಂತಾನೇ ಫೇಮಸ್ ಆಗಿರುವ ಯಶ್ ಹಾಗೂ ರಾಧಿಕಾ ಪಂಡಿತ್ ಸ್ಯಾಂಡಲ್ ವುಡ್ ಆದರ್ಶ ದಂಪತಿ. ಇಬ್ಬರ ಜೋಡಿ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಸದಾ ಕಾತರರಾಗಿರ್ತಾರೆ. ಆಗಸ್ಟ್ 12, 2016 ರಂದು ಗೋವಾದಲ್ಲಿ ಸ್ಯಾಂಡಲ್ ವುಡ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಉಂಗುರ ಬದಲಿಸಿಕೊಂಡಿದ್ದರು. ಕೆಲ ಸ್ಯಾಂಡಲ್ವುಡ್ ಸ್ಟಾರ್ಸ್, ಸಂಬಂಧಿಕರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಗ್ರ್ಯಾಂಡ್ ಆಗಿ ಎಂಗೇಜ್ಮೆಂಟ್ ನಡೆದಿತ್ತು. ಈವರೆಗೆ ಎಂಗೇಜ್ಮೆಂಟ್ ಫೋಟೋಗಳನ್ನು ಮಾತ್ರ ಪೋಸ್ಟ್ ಮಾಡಿದ್ದ ರಾಧಿಕಾ ಪಂಡಿತ್ ತಮ್ಮ ಎಂಗೇಜ್ಮೆಂಟ್ 10ನೇ ಆನಿವರ್ಸರಿಯಲ್ಲಿ ಫ್ಯಾನ್ಸ್ ಗೆ ಸುಂದರ ಗಿಫ್ಟ್ ನೀಡಿದ್ದಾರೆ.

ಎಂಗೇಜ್ಮೆಂಟ್ ವಿಡಿಯೋ

ರಾಧಿಕಾ ಪಂಡಿತ್ ಹಾಗೂ ಯಶ್ ಎಂಗೇಜ್ಮೆಂಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಅತ್ಯಂತ ಸುಂದರವಾಗಿ ವಿಡಿಯೋ ಸೆರೆ ಹಿಡಿಯಲಾಗಿದೆ. ಅಪ್ಸರಯಂತೆ ರಾಧಿಕಾ ಪಂಡಿತ್ ಮಿಂಚುತ್ತಿದ್ದಾರೆ. ವಿಡಿಯೋ ಪೋಸ್ಟ್ ಮಾಡಿರುವ ರಾಧಿಕಾ ಪಂಡಿತ್ ನಿಶ್ಚಿತಾರ್ಥವಾಗಿ ಇಂದಿಗೆ 10 ವರ್ಷ. ಜೀವಮಾನವಿಡೀ ಪ್ರೀತಿಯಲ್ಲಿ. ನಮ್ಮ ನೆಚ್ಚಿನ ಕಥೆ, ಇನ್ನೂ ಬರೆಯಲ್ಪಡುತ್ತಿದೆ. 12/8/2016. ನೀವು ಯಾವಾಗಲೂ ನನ್ನ ನೆಚ್ಚಿನ YE ಆಗಿರುತ್ತೀರಿ ಎಂದು ರಾಧಿಕಾ ಪಂಡಿತ್ ಶೀರ್ಷಿಕೆ ಹಾಕಿದ್ದಾರೆ.

ರಾಧಿಕಾ ಪಂಡಿತ್ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ರಾಧಿಕಾ ಪಂಡಿತ್ ಹಾಗೂ ಯಶ್ ನಿಶ್ಚಿತಾರ್ಥಕ್ಕೆ ಸಿದ್ಧರಾಗ್ತಿರೋದನ್ನು ಆರಂಭದಲ್ಲಿ ನೀವು ನೋಡ್ಬಹುದು. ಅತ್ಯಂತ ಸುಂದರವಾದ ಜಾಗದಲ್ಲಿ ಇಬ್ಬರೂ ಉಂಗುರ ಬದಲಿಸಿಕೊಂಡಿದ್ದು, ನಂತ್ರ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು. ಈ ವಿಡಿಯೋ ನೋಡಿದ ಫ್ಯಾನ್ಸ್ ಖುಷಿ ವ್ಯಕ್ತಪಡಿಸಿದ್ದಾರೆ. ಯಶ್ ಹಾಗೂ ರಾಧಿಕಾ ಪಂಡಿತ್ ದಾಂಪತ್ಯ ಜೀವನವನ್ನು ಮನಸಾರೆ ಹೊಗಳಿದ್ದಾರೆ. ಹೇಳಿ ಮಾಡಿಸಿದ ಜೋಡಿ, ಇಬ್ಬರೂ ಒಟ್ಟಿಗೆ ಬೆಳೆಯುತ್ತಿರುವುದು ಖುಷಿ ನೀಡಿದೆ ಅಂತ ಕಮೆಂಟ್ ಮಾಡಿದ್ದಾರೆ. ರಾಧಿಕಾ ಪಂಡಿತ್ ಡ್ರೆಸ್, ಔಟ್ ಫಿಟ್ ಅಭಿಮಾನಿಗಳ ಗಮನ ಸೆಳೆದಿದೆ.

ರಾಧಿಕಾ ಪಂಡಿತ್ ಹಾಗೂ ಯಶ್, ಡಿಸೆಂಬರ್ 2016ರಲ್ಲಿ ಬೆಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಡಿಸೆಂಬರ್ 2, 2018ರಲ್ಲಿ ರಾಧಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. 2019 ಅಕ್ಟೋಬರ್ 30 ರಂದು ಗಂಡು ಮಗುವಿನ ತಾಯಿಯಾಗಿದ್ದಾರೆ. ಮದುವೆ ನಂತ್ರ ಸಿನಿಮಾದಿಂದ ದೂರ ಇರುವ ರಾಧಿಕಾ ಪಂಡಿತ್ ಈಗ್ಲೂ ಎಲ್ಲರ ಅಚ್ಚುಮೆಚ್ಚಿನ ನಟಿ. ಸದ್ಯ ಯಶ್ ಸುದ್ದಿಯಲ್ಲಿದ್ದಾರೆ. ಅವರ ಎರಡು ಸಿನಿಮಾಗಳು ಸ್ಯಾಂಡಲ್ ವುಡ್ ಮಾತ್ರವಲ್ಲ ಬಾಲಿವುಡ್ ಸೇರಿದಂತೆ ಹಾಲಿವುಡ್ ವರೆಗೆ ಸದ್ದು ಮಾಡ್ತಿದೆ.

View post on Instagram