ದೀಪಕ್ಕೆ ಬಣ್ಣ ಹಚ್ಚಿ ದೀಪಾವಳಿ ಕಳೆ ಹೆಚ್ಚಿಸಿದ ಯಶ್-ರಾಧಿಕಾ ಮಕ್ಕಳು!
ಈ ಬಾರಿ ದೀಪಾವಳಿ ಹಬ್ಬದಂದೇ ಮಕ್ಕಳ ದಿನಾಚರಣೆಯೂ ಬಂದಿದೆ. ಹೀಗಾಗಿ ಮಕ್ಕಳಿಗೆ ಡಬ್ಬಲ್ ಧಮಾಕಾ. ಈ ವೇಳೆ ಸಿನಿ ತಾರೆಯ ಮಕ್ಕಳ ದೀಪಾವಳಿ ಸಂಭ್ರಮ ಹೇಗಿತ್ತು ಎಂಬುದನ್ನು ನೋಡೋಣ.

ಪ್ರತಿ ದಿನವೂ ಮಕ್ಕಳ ದಿನ
ಅಮೂಲ್ಯ
ಈ ವರ್ಷವೂ ಮಕ್ಕಳಾದ ಅಥರ್ವ, ಅಧವ್ ಜತೆಗೆ ದೀಪಾವಳಿ ಹಬ್ಬವನ್ನು ಇಡೀ ಕುಟುಂಬ ಸೇರಿ ಆಚರಿಸಿದ್ದೇವೆ. ನಮಗೆ ಮಕ್ಕಳ ಜತೆಗೆ ಇದು 2ನೇ ವರ್ಷದ ದೀಪಾವಳಿ. ಹೊರಗೆ ಕೇಳುವ ಪಟಾಕಿ ಸದ್ದನ್ನು ಮಕ್ಕಳು ಮನೆಯಲ್ಲಿ ಡಮ್ ಡಮ್ ... ಎಂದು ಕೂಗುತ್ತಾ ತಿರುಗುವುದು, ಮಕ್ಕಳ ಜತೆಗೆ ಹೀಗೆ ಕಳೆಯುವ ಖುಷಿಯ ಕ್ಷಣಗಳನ್ನು ಫೋಟೋಗಳ ಮೂಲಕ ದಾಖಲಿಸಿಕೊಳ್ಳುವುದು ನನಗೆ ಮತ್ತೊಂದು ಖುಷಿ ವಿಚಾರ. ಬೆಳಕು ಸೂಚಿಸುವ ಪಟಾಕಿಗಳ ಜತೆಗೆ ದೀಪಾವಳಿ ಹಬ್ಬ ಆಚರಣೆ ಮಾಡಿದ್ದೇವೆ. ಮಕ್ಕಳ ದಿನಾಚರಣೆಗೆ ವಿಶೇಷ ಅಂತ ಏನೂ ಇಲ್ಲ. ಇಬ್ಬರ ಮಕ್ಕಳ ಜತೆಗೆ ನಾನು ಪ್ರತಿ ದಿನ ಮನೆಯಲ್ಲಿ ಮಕ್ಕಳ ದಿನಾಚರಣೆ ಮಾಡುತ್ತಿದ್ದೇನೆ.
ಅವಳಿ ಮಕ್ಕಳ ಜೊತೆ ಅಮೂಲ್ಯ ದೀಪಾವಳಿ ಸೆಲೆಬ್ರೇಶನ್: ಗೋಲ್ಡನ್ ಕ್ವೀನ್ ಪ್ರಿನ್ಸಸ್ ತುಂಟಾಟಕ್ಕೆ ಫ್ಯಾನ್ಸ್ ಫಿದಾ!
ಮಕ್ಕಳ ಕೈಗೆ ಪಟಾಕಿ ಕೊಡಲ್ಲ
ಪ್ರಗತಿ ಶೆಟ್ಟಿ
ಈ ಬಾರಿ ನಮ್ಮ ಕುಟುಂಬದವರೆಲ್ಲ ಬೆಂಗಳೂರಿನಲ್ಲೇ ಹಬ್ಬದ ಆಚರಣೆ ಮಾಡುತ್ತಿದ್ದೇವೆ. ಶೂಟಿಂಗ್‌ನಲ್ಲಿದ್ದ ರಿಷಬ್ ಅವರ ಬ್ರೇಕ್ ತೆಗೆದುಕೊಂಡು ಮಕ್ಕಳು, ಕುಟುಂಬದವರ ಜೊತೆಗೆ ಹಬ್ಬದಲ್ಲಿ ಭಾಗಿಯಾಗಿದ್ದಾರೆ. ನಮ್ಮ ಕಡೆ ದೀಪಾವಳಿಯಲ್ಲಿ ಗೋಪೂಜೆ ವಿಶೇಷ. ಜೊತೆಗೆ ವಾಹನಗಳನ್ನು ಅಲಂಕರಿಸಿ ಅವುಗಳಿಗೂ ಪೂಜೆ ಮಾಡುತ್ತೀವಿ. ಮಕ್ಕಳಾದ ರತ್ ಮತ್ತು ರಾಧ್ಯಾ ನಮ್ಮ ಪರಂಪರೆ, ಪದ್ಧತಿ ಬಗ್ಗೆ ತಿಳಿಯಬೇಕೆಂದು ಪ್ರತೀ ಆಚರಣೆಯಲ್ಲೂ ಅವರನ್ನು ತೊಡಗಿಸಿಕೊಳ್ಳುತ್ತೀವಿ. ಆದರೆ ಮಕ್ಕಳ ಕೈಗೆ ಪಟಾಕಿ ಮಾತ್ರ ಕೊಡಲ್ಲ, ಮನೆ ಮಂದಿ ಯಾರಾದರೂ ಪಟಾಕಿ ಹೊಡೆಯುತ್ತಿದ್ದರೆ ದೂರದಿಂದ
ಅವರಿಗೆ ತೋರಿಸುತ್ತೇವೆ, ಅಷ್ಟೇ.
ಅನಾಥಾಶ್ರಮದಲಿ ಮಕ್ಕಳ ದಿನ ಆಚರಣೆ
ಶ್ವೇತಾ ಶ್ರೀವಾತ್ಸವ್
ನನ್ನ ಮಗಳು ಅಶ್ಮಿತಾ ಶ್ರೀವಾತ್ಸವ್‌ಗೆ ಈಗ ಆರು ವರ್ಷ ವಯಸ್ಸು. ಹಬ್ಬ ಬಂದರೆ ಅವಳಿಗೆ ಸಿಕ್ಕಾಪಟ್ಟೆ ಖುಷಿ. ಕಸಿನ್ಸ್, ನೆಂಟರು, ಫ್ರೆಂಡ್ಸ್ ಅಂತ ಮನೆ ತುಂಬ ಜನ ಇದ್ದಷ್ಟು ಅವಳ ಉತ್ಸಾಹ ಹೆಚ್ಚಾಗುತ್ತಾ ಹೋಗುತ್ತದೆ. ನಮ್ಮ ಮನೆಯಲ್ಲಿ ಮೊದಲಿಂದಲೂ ಪಟಾಕಿ ಹೊಡೆಯೋ ಅಭ್ಯಾಸ ಇಲ್ಲ. ಪ್ರಾಣಿ ಪಕ್ಷಿಗ ಳಿಗೆ ಅದರಿಂದ ತೊಂದರೆ ಆಗುತ್ತೆ ಅನ್ನುವುದು ಕಾರಣ. ಆದರೆ ಈ ಸಲ ಮಾತ್ರ ಮಗಳಿಗೋ ಸ್ಕರ ಪಟಾಕಿ ತರಬೇಕಾಯ್ತು. 'ಪಟಾಕಿ ಸದ್ದಿ ನಿಂದ ಪ್ರಾಣಿ ಪಕ್ಷಿಗಳಿಗೆ ತೊಂದರೆ ಆಗುತ್ತೆ' ಅಂತ ನಾವಂದರೆ, ಮಗಳು, 'ನಾನು ಅವುಗಳ ಕಿವಿಗೆ ಹತ್ತಿ ಇಟ್ಟು ಬರ್ತೀನಿ' ಅಂತಾಳೆ. ''ಅಮ್ಮ ಒಂದೇ ಒಂದು ಸುರು ಸುರು ಬತ್ತಿ, ಒಂದೇ ನೆಲ ಚಕ್ರ' ಅಂತ ಗೋಗರೆದಾಗ ಇಲ್ಲ ಅನ್ನಲಾಗದೇ ಕೊಡಿಸಿದೆವು. ಮಕ್ಕಳ ದಿನಾಚರಣೆಗೆ ನಾವು ಪ್ರತೀವರ್ಷ ಅನಾಥ ಆಶ್ರಮಕ್ಕೆ ಹೋಗಿ ಅವರ ಜೊತೆಗೆ ಮಕ್ಕಳ ದಿನ ಆಚರಣೆ ಮಾಡುತ್ತೀವಿ.
ವರ್ತೂರ್ ಸಂತೋಷ್‌ಗೆ ಸಿಕ್ತು ಅಮ್ಮನ ಕೈತುತ್ತು! ಜನಮತಕ್ಕಲ್ಲದಿದ್ದರೂ ಮಾತೆಯ ಮಾತಿಗೆ ತಲೆ ಬಾಗ್ತಾರಾ?
ಭಾವಗೀತೆ ಹಾಡುವ ಮೂಲಕ ಸಂಭ್ರಮಾಚರಣೆ
ಅಜಯ್ ರಾಮ್
ಸದ್ದು ಮಾಡುವ ಪಟಾಕಿ ಹೊಡೆಯದೆ ದೀಪ ಹಚ್ಚು ಮೂಲಕ ಮಗಳು, ಪತ್ನಿಯ ಜೊತ ದೀಪಾವಳಿ ಆಚರಿಸಿದ್ದೇನೆ. ಮಕ್ಕಳ ದಿನಾಚರಣೆಯ ಮಗಳಿಗೆ ಕನ್ನಡದ ಒಳ್ಳೆಯ ಭಾವಗೀತೆ ಹಾಡುವ ಮತ್ತು ತೆಗೆದು ಕೊಡುವ ಮೂಲಕ ಆಚರಿಸುತ್ತೇವೆ. ಆದರೆ, ಈ ಬಾರಿ ನಾನು ಮಗಳು ಚರಿಷ್ಮಾ ಜೊತೆ ದೀಪಾವಳಿ ಆಚರಿಸಲು ಆಗಲಿಲ್ಲ. ನಾವೇ ನಿರ್ಮಾಣ ಹಾಗೂ ನಟನೆಯ 'ಯುದ್ಧಕಾಂಡ' ಚಿತ್ರದ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಆಗಿದ್ದೇನೆ. ಹಬ್ಬದ ದಿನವೂ ಸ್ಟುಡಿಯೋದಲ್ಲಿ ಕಾಲ ಕಳೆಯಬೇಕಾಗಿದ್ದು, ಇದೇ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದೇನೆ. ಹೀಗಾಗಿ ಈ ಬಾರಿ ಚರಿಷ್ಮಾ ಅಮ್ಮನೊಂದಿಗೆ ದೀಪಾವಳಿ ಮತ್ತು ಮಕ್ಕಳ ದಿನಾಚರಣೆಯನ್ನು ಆಚರಿಸಿದ್ದಾಳೆ.
ಮಕ್ಕಳಿಂದಲೇ ಮನೆಯ ಸಿಂಗಾರ
ರಾಧಿಕಾ ಪಂಡಿತ್
ಈ ಬಾರಿಯ ದೀಪಾವಳಿಗೆ ಮಕ್ಕಳಾದ ಐರಾ ಮತ್ತು ಅಥರ್ವ ಮನೆಗೆ ಅಲಂಕಾರ ಮಾಡಿದ್ದೇ ವಿಶೇಷ. ಮನೆಯ ಬಾಗಿಲಿಗೆ ತೋರಣ, ಚೆಂದದ ಆಕಾರ ಬುಟ್ಟಿ ಮಾಡಿ ಸಿಂಗಾರ ಮಾಡಿದ್ದು ಹಬ್ಬದ ಕಳೆ ಹೆಚ್ಚಿಸಿತು. ಹಣತೆಗೂ ಅವರಿಂದಲೇ ಬಣ್ಣ ಹಚ್ಚಿಸಿದ್ದು, ಮತ್ತೊಂದು ಅನುಭವ. ಮಕ್ಕಳೇ ಹಬ್ಬದ ಪ್ರತೀ ಆಚರಣೆಯಲ್ಲೂ ಅವರಿಗೆ ಹಬ್ಬದ ಮಹತ್ವ ತಿಳಿಯುತ್ತದೆ, ಮನೆ ಮಂದಿಯ ಖುಷಿಯೂ ಹೆಚ್ಚುತ್ತದೆ, ಈ ಬಾರಿಯ ದೀಪಾವಳಿ ಹಬ್ಬ ಎಲ್ಲರ ಬದುಕಿನ ಕತ್ತಲೆ ಕಳೆದು ಬೆಳಕು ಮೂಡುವಂತೆ ಮಾಡಲಿ ಎಂದು ಹಾರೈಸುತ್ತೇವೆ.