ವರ್ತೂರ್ ಸಂತೋಷ್‌ಗೆ ಸಿಕ್ತು ಅಮ್ಮನ ಕೈತುತ್ತು! ಜನಮತಕ್ಕಲ್ಲದಿದ್ದರೂ ಮಾತೆಯ ಮಾತಿಗೆ ತಲೆ ಬಾಗ್ತಾರಾ?
ದೀಪಾವಳಿ ಪ್ರಯುಕ್ತ ಬಿಗ್‌ಬಾಸ್ ಮನೆಯವರಿಗೆಲ್ಲ ಒಂದು ಭಾವುಕ ಸರ್ಪೈಸ್ ನೀಡಿದ್ದಾರೆ. ಮನೆಮಂದಿಗೆಲ್ಲರಿಗೂ ಅವರ ಮನೆಯಿಂದ ಅವರಿಗಿಷ್ಟವಾದ ತಿನಿಸನ್ನು ತರಿಸಿ ಕೊಡಲಾಗಿದೆ.
ಬೆಂಗಳೂರು (ನ.13): ದೀಪಾವಳಿ ಪ್ರಯುಕ್ತ ಬಿಗ್‌ಬಾಸ್ ಮನೆಯವರಿಗೆಲ್ಲ ಒಂದು ಭಾವುಕ ಸರ್ಪೈಸ್ ನೀಡಿದ್ದಾರೆ. ಮನೆಮಂದಿಗೆಲ್ಲರಿಗೂ ಅವರ ಮನೆಯಿಂದ ಅವರಿಗಿಷ್ಟವಾದ ತಿನಿಸನ್ನು ತರಿಸಿ ಕೊಡಲಾಗಿದೆ. ಬಾಕ್ಸ್‌ನಲ್ಲಿ ಬಂದ ತಮ್ಮಿಷ್ಟದ ತಿನಿಸನ್ನು ಮಾಡಿ ಕಳಿಸಿದ ಕುಟುಂಬದವರನ್ನು ನೆನಪಿಸಿಕೊಂಡು ಸ್ಪರ್ಧಿಗಳೆಲ್ಲ ಭಾವುಕರಾಗಿದ್ದಾರೆ.
ಎಲ್ಲರ ಮನೆಯಿಂದ ತಿಂಡಿ ಬಂದರೂ ಒಬ್ಬ ಸ್ಪರ್ಧಿಯ ಮನೆಯಿಂದ ಮಾತ್ರ ಬಾಕ್ಸ್ ಬಂದಿರಲಿಲ್ಲ. ಅದು ವರ್ತೂರ್ ಸಂತೋಷ್ ಮನೆಯಿಂದ. ಇದನ್ನು ನೋಡಿ ವರ್ತೂರ್ ಅವರು ದುಃಖದಿಂದ ಬಿಕ್ಕಿ ಬಿಕ್ಕಿ ಅಳುತ್ತಿದ್ದರು.ಕನ್ನಡದ ಬಿಗ್‌ಬಾಸ್ ಸೀಸನ್ 10ರ ಸ್ಪರ್ಧಿ ವರ್ತೂರು ಸಂತೋಷ್ ಅವರು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರಿಂದ ಮನೆಯನ್ನು ಬಿಟ್ಟು ಒಂದು ವಾರಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದಾರೆ. ಇದಾದ ನಂತರ ಪುನಃ ಬಿಗ್‌ಬಾಸ್ ಮನೆಗೆ ಹೋಗಿರುವ ಸಂತೋಷ್‌ಗೆ ರಾಜ್ಯದ 34 ಲಕ್ಷ ಜನರು ಮತವನ್ನು ಹಾಕಿ ಮನೆಯಲ್ಲಿ ಉಳಿಸಿದ್ದರೂ ತಾನು ಹೊರಗೆ ಹೋಗುತ್ತೇನೆಂದು ಹಠ ಹಿಡಿದಿದ್ದು, ಈಗ ಅವರನ್ನು ಸಮಾಧಾನ ಮಾಡಲು ಆಗಮಿಸಿದ್ದಾರೆ. ಈ ವೇಳೆ ದೀಪಾವಳಿ ಹಬ್ಬದ ಕೈತುತ್ತನ್ನೂ ತಿನ್ನಿಸಿದ್ದಾರೆ.
ವರ್ತೂರ್ ಸಂತೋಷ್‌ನ ಉಳಿಸಿಕೊಳ್ಳಲು ಬಿಗ್ ಬಾಸ್ ಮನೆಗೆ ಕಾಲಿಟ್ಟ ಭಾಗ್ಯ; ನೆಟ್ಟಿಗರಿಂದ ಆಕ್ರೋಶ!
ಆಗಲೇ ಇಡೀ ಮನೆಯವರೆಲ್ಲರೂ ದಂಗಾಗಿಬಿಡುವ ಆ ಘಟನೆ ನಡೆಯಿತು. ಈ ಘಟನೆ ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸೆರೆಯಾಗಿದೆ. ತೆರೆದ ಬಿಗ್‌ಬಾಸ್ ಮನೆಯ ಬಾಗಿಲಿಂದ ವರ್ತೂರ್ ಸಂತೋಷ್ ಅವರ ಅಮ್ಮನೇ ಬುತ್ತಿ ಹಿಡಿದು ನಡೆದುಕೊಂಡು ಬರುತ್ತಿದ್ದರು! ಅವರ ಬಾಯಿಂದ 'ಕಂದಾ' ಅಂದಾಗಲಂತೂ ಸ್ಪರ್ಧಿಗಳೆಲ್ಲರಿಗೂ ತಮ್ಮ ಅಮ್ಮನೇ ಕರೆದ ಅನುಭವ ಆಗಿದೆ.
ವರ್ತೂರ್ ಸಂತೋಷ್ ಅವರು ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗುತ್ತೇನೆ ಎಂದು ನಿನ್ನೆಯಿಂದಲೂ ಹೇಳುತ್ತಿದ್ದಾರೆ. ನಿರ್ಧಾರವನ್ನು ಅವರಿಗೇ ಬಿಟ್ಟು ಕಿಚ್ಚ ಸುದೀಪ್, ವೀಕೆಂಡ್ ಎಪಿಸೋಡ್ ಮುಗಿಸಿದ್ದಾರೆ. ಇಂದು ಅವರನ್ನು ಮನೆಯವರೆಲ್ಲ ಕನ್ವಿನ್ಸ್ ಮಾಡುತ್ತಿದ್ದಾರೆ ಕೂಡ. ಜೊತೆಗೆ 'ಭಾಗ್ಯಲಕ್ಷ್ಮಿ' ಧಾರಾವಾಹಿಯ ನಟಿ ಸುಷ್ಮಾ ಕೆ. ರಾವ್ ಕೂಡ ಬಂದು ವರ್ತೂರ್ ಅವರ ಜೊತೆಗೆ ಮಾತನಾಡಿ ಹೋಗಿದ್ದಾರೆ. ಆದರೆ, ವರ್ತೂರ್ ಅವರ ನಿರ್ಧಾರ ಏನು ಎನ್ನುವುದು ಇನ್ನೂ ಬಹಿರಂಗವಾಗಿಲ್ಲ.
ಭಾರತದ ಸ್ಟಾರ್ ಕ್ರಿಕೆಟಿಗರು ಮತ್ತವರ ಮುದ್ದಾದ ಪತ್ನಿಯರ ವಯಸ್ಸಿನ ಅಂತರವೆಷ್ಟು ಗೊತ್ತಾ? ಇಲ್ಲಿದೆ ಜನ್ಮದಿನಾಂಕ ವಿವರ!
ಈ ನಡುವೆಯೇ ಅವರ ಅಮ್ಮನೇ ಬಿಗ್‌ಬಾಸ್ ಮನೆಯೊಳಗೆ ಬಂದಿರುವುದು ಕುತೂಹಲ ಹೆಚ್ಚಿಸಿದೆ. ಜೊತೆಗೆ ಅವರು, 'ನನ್ನ ಆಸೆ ನೆರವೇರಿಸ್ತಾನೆ ನನ್ ಮಗ. ನಾನು ಇದೊಂದು ರಿಕ್ವೆಸ್ಟ್ ಮಾಡ್ಕೊಳ್ತಿದ್ದೀನಿ ನನ್ ಮಗನಲ್ಲಿ' ಎಂದು ನಡುಗುವ ಧ್ವನಿಯಲ್ಲಿ ಹೇಳಿರುವುದೂ ಪ್ರೋಮೊದಲ್ಲಿ ಸೆರೆಯಾಗಿದೆ. ವರ್ತೂರ್ ಅವರ ಅಮ್ಮ, ಮಗನಲ್ಲಿ ಮಾಡಿಕೊಂಡ ವಿನಂತಿ ಏನು? ಅದನ್ನು ನೇರವೇರಿಸುವುದಕ್ಕೆ ವರ್ತೂರ್ ಸಿದ್ಧರಾಗ್ತಾರಾ? ಈ ಎಲ್ಲವನ್ನು ಜಿಯೋ ಸಿನಿಮಾದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೋಡಿ ತಿಳಿದುಕೊಳ್ಳಬಹುದು.