ಅವಳಿ ಮಕ್ಕಳ ಜೊತೆ ಅಮೂಲ್ಯ ದೀಪಾವಳಿ ಸೆಲೆಬ್ರೇಶನ್: ಗೋಲ್ಡನ್ ಕ್ವೀನ್ ಪ್ರಿನ್ಸಸ್ ತುಂಟಾಟಕ್ಕೆ ಫ್ಯಾನ್ಸ್ ಫಿದಾ!
ಸ್ಯಾಂಡಲ್ವುಡ್ನ ಗೋಲ್ಡನ್ ಕ್ವೀನ್ ನಟಿ ಅಮೂಲ್ಯ ಜಗದೀಶ್ ಮುದ್ದಾದ ಅವಳಿ ಮಕ್ಕಳು ತಾಯಿಯಾಗಿದ್ದು, ಮಕ್ಕಳ ಲಾಲನೆ-ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮ-ಸಡಗರದಿಂದ ಆಚರಿಸಿದ್ದಾರೆ.
ಕನ್ನಡ ಚಿತ್ರರಂಗದ ಐಶು ಅಮೂಲ್ಯ ಮನೆಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಅವಳಿ ಮಕ್ಕಳ ಜೊತೆ ಅಮೂಲ್ಯ ಗ್ರ್ಯಾಂಡ್ ಆಗಿ ಹಬ್ಬ ಆಚರಣೆ ಮಾಡಿದ್ದಾರೆ. ಹಬ್ಬದ ಸುಂದರ ಫೋಟೋಗಳನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬೇಡಿಕೆ ಇದ್ದಾಗಲೇ ಹಸೆಮಣೆ ಏರಿದ್ದ ಚೆಲುವೆ ಅಮೂಲ್ಯ ಈಗ ಮದುವೆ, ಮಕ್ಕಳು, ಸಂಸಾರ ಅಂತ ಅಪ್ಪಟ ಗೃಹಿಣಿಯಾಗಿದ್ದಾರೆ. ಯಾವುದೇ ಹಬ್ಬವಿದ್ದರೂ ಕೂಡ ಮನೆಯಲ್ಲಿ ಸೆಲೆಬ್ರೇಶನ್ ಜೋರಾಗಿಯೇ ಇರುತ್ತದೆ. ಜೊತೆಯೇ ಚೆಂದದ ಫೋಟೋಶೂಟ್ ಕೂಡ ನಟಿ ಶೇರ್ ಮಾಡುತ್ತಾರೆ.
ಟ್ರೆಡಿಷನಲ್ ಲುಕ್ ಬಿಳಿ ಬಣ್ಣದ ಉಡುಗೆಯಲ್ಲಿ ಅಮೂಲ್ಯ ಕಂಗೊಳಿಸಿದ್ರೆ, ಅವರ ಅವಳಿ ಮಕ್ಕಳು ಕೆಂಪು ಬಣ್ಣ ದಿರಿಸಿನಲ್ಲಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಬ್ಯಾಕ್‌ಗ್ರೌಂಡ್‌ನಲ್ಲಿ ಕಲರ್‌ಫುಲ್ ಲೈಟ್‌ನಲ್ಲಿ ನಡುವೆ ಅಮೂಲ್ಯ ಮಿಂಚಿದ್ದಾರೆ.
ನಟಿ ಅಮೂಲ್ಯ ಹಾಗೂ ಜಗದೀಶ್ ಅವರು ತಮ್ಮ ಅವಳಿ ಗಂಡು ಮಕ್ಕಳಿಗೆ ಅಥರ್ವ್ ಮತ್ತು ಆಧವ್ ಎಂದು ಹೆಸರು ಇಟ್ಟಿದ್ದಾರೆ. ಅ ಅಕ್ಷರದಿಂದಲೇ ಮಕ್ಕಳಿಗೆ ಹೆಸರಿಟ್ಟು ಅದ್ಧೂರಿಯಾಗಿ ನಾಮಕರಣ ಮಾಡಿದ್ದರು.
ಅಮೂಲ್ಯ ಬಾಲ ನಟಿಯಾಗಿಯ ಇಂಡಸ್ಟ್ರಿಗೆ ಕಾಲಿಟ್ಟಿದ್ದು ಗೊತ್ತೇ ಇದೆ. 2000 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅಮೂಲ್ಯ, ಚೆಲುವಿನ ಚಿತ್ತಾರ ಚಿತ್ರದ ಮೂಲಕ ಎಲ್ಲರ ಹೃದಯ ಕದ್ದರು. ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಈ ಚಿತ್ರದಲ್ಲಿ ಎಲ್ಲರಿಗೂ ಹೊಸ ಮೋಡಿನೇ ಮಾಡಿದರು.
2002 ರಿಂದಲೇ ಸಿನಿಮಾರಂಗದಲ್ಲಿರೋ ನಟಿ ಅಮೂಲ್ಯ 2017 ರವರೆಗೂ ಸಿನಿಮಾ ಮಾಡಿದ್ದಾರೆ. ಮಾಸ್ತಿ ಗುಡಿ ಹಾಗೂ ಮುಗುಳು ನಗೆ ಸಿನಿಮಾಗಳು ಈ ಸಮಯದಲ್ಲಿಯೇ ರಿಲೀಸ್ ಆಗಿದ್ದವು. ಎರಡೂ ಚಿತ್ರಗಳಲ್ಲಿ ಅಮೂಲ್ಯ ವಿಭಿನ್ನವಾಗಿಯೇ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದರು.