Asianet Suvarna News Asianet Suvarna News

ಪ್ಯಾಂಟಿನೊಳಗಿನ ಬಟ್ಟೆ ಹರಿದರೂ ಹೊಸದು ಕೊಡಲಿಲ್ಲ; ಕರಾಳ ಘಟನೆ ಬಿಚ್ಚಿಟ್ಟ ರಾಧಿಕಾ ಕುಮಾರಸ್ವಾಮಿ!

ಕನ್ನಡ ಚಿತ್ರರಂಗದಲ್ಲಿ ತಮಗಾದ ಅವಮಾನಕರ ಘಟನೆಯನ್ನು ನಟಿ ರಾಧಿಕಾ ಕುಮಾರಸ್ವಾಮಿ ಬಿಚ್ಚಿಟ್ಟಿದ್ದಾರೆ. ಸಿನಿಮಾ ಶೂಟಿಂಗ್ ಸಮಯದಲ್ಲಿ ತಮಗೆ ಅಗೌರವ ಸಂಭವಿಸಿದ ಘಟನೆಯನ್ನು ವಿವರಿಸಿದ್ದಾರೆ.

Radhika Kumaraswamy says my stockings were torn but not given new sat
Author
First Published Sep 5, 2024, 9:18 PM IST | Last Updated Sep 5, 2024, 9:18 PM IST

ಬೆಂಗಳೂರು (ಸೆ.05): ಕನ್ನಡ ಚಿತ್ರರಂಗದಲ್ಲಿಯೂ ಕಾಸ್ಟಿಂಗ್ ಕೌಚ್ ನಡೆಯುತ್ತಿದೆ ಎಂದು ನಟಿಯರು ಒಗಟ್ಟು ಪ್ರದರ್ಶಿಸಿದ ಬೆನ್ನಲ್ಲಿಯೇ ನಟಿ ರಾಧಿಕಾ ಕುಮಾರಸ್ವಾಮಿ ಕೂಡ ತಮಗಾದ ಕರಾಳ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ. ನಾನು ಹೊಸದಾಗಿ ಸಿನಿಮಾಕ್ಕೆ ಬಂದಿದ್ದಾಗ, ನನ್ನ ಪ್ಯಾಂಟಿನೊಳಗಿನ ತೆಳುವಾದ ಬಟ್ಟೆ (ಸ್ಟಾಕಿಂಗ್ಸ್) ಹರಿದು ಹೋಗಿದೆ, ಬೇರೆಯದ್ದು ಕೊಡಿ ಎಂದು ಕೇಳಿದೆ. ಆದರೆ, ನಿರ್ದೇಶಕರು ನಿನ್ನ ಮುಖಕ್ಕೆ ಅದು ಬೇರೆ ಬೇಕಾ ಎಂದು ತುಂಬಾ ಕೀಳಾಗಿ ನಡೆಸಿಕೊಂಡಿದ್ದನ್ನು ಬಿಚ್ಚಿಟ್ಟಿದ್ದಾರೆ.

ಕೇರಳ ಚಿತ್ರರಂಗದಲ್ಲಿ ಸಿನಿಮಾ ನಟಿಯರು, ಸಹ ಕಲಾವಿದೆಯರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಮಾ ಕಮಿಟಿ ವರದಿ ಬಿಚ್ಚಿಟ್ಟಿದೆ. ಇದರ ಬೆನ್ನಲ್ಲಿಯೇ ಕರ್ನಾಟಕದಲ್ಲಿಯೂ ಕಾಸ್ಟಿಂಗ್ ಕೌಚ್ ನಡೆಯುತ್ತಿದ್ದು, ಇದರ ತನಿಖೆಗೆ ಸಮಿತಿ ರಚಿಸುವಂತೆ 153ಕ್ಕೂ ಅಧಿಕ ನಟ, ನಟಿಯರು ಸಹಿ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಹಲವರು ಸಿನಿಮಾ ರಂಗದ ಮಹಿಳೆಯರ ಮೇಲಿನ ದೌರ್ಜನ್ಯಗಳು ನಿಲ್ಲಬೇಕು. ಇದಕ್ಕಾಗಿ ಸರ್ಕಾರದಿಂದ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಆಗ್ರಹಿಸಿದ್ದಾರೆ. ಇದಕ್ಕೆ ಸಾರ್ವಜನಿಕ ವಲಯದಿಂದಲೂ ಹೆಚ್ಚು ಪ್ರೋತ್ಸಾಹ ಸಿಗುತ್ತಿದೆ.

ಮೊದಲ ಬಾರಿಗೆ ನಟ ದರ್ಶನ್ ಕೇಸ್ ಬಗ್ಗೆ ಬಾಯ್ಬಿಟ್ಟ ರಾಧಿಕಾ ಕುಮಾರಸ್ವಾಮಿ, ಏನ್ ಹೇಳಿದ್ರು ನೋಡಿ!

ಸ್ಯಾಂಡಲ್‌ವುಡ್ ಸ್ವೀಟಿ ಖ್ಯಾತಿಯ ನಟಿ ರಾಧಿಕಾ ಕುಮಾರಸ್ವಾಮಿ ಅವರನ್ನು ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಮಾಧ್ಯಮಗಳಿಂದ ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಉತ್ತರಿಸಿದ ಅವರು, ನನಗೆ ಲೈಂಗಿಕವಾಗಿ ಕಿರುಕುಳ ನೀಡಿದ ಅನುಭವವಾಗಿಲ್ಲ. ಆದರೆ, ನಾನು ಸಿನಿಮಾ ಕ್ಷೇತ್ರಕ್ಕೆ ಆರಂಭದಲ್ಲಿ ಕಾಲಿಟ್ಟಾಗ ನನಗೂ ಒಂದು ಕೆಟ್ಟ ಅನುಭವ ಆಗಿತ್ತು. ನಾನು ಶೂಟಿಂಗ್‌ನಲ್ಲಿದ್ದಾಗ ನನಗೆ ಕೊಡಲಾಗಿದ್ದ ಸ್ಟಾಕಿಂಗ್ಸ್ (ಪ್ಯಾಂಟ್ ಅಥವಾ ತುಂಡು ಬಟ್ಟೆ ಧರಿಸಿದಾಗ ಕಾಲಿನ ಒಳಭಾಗ ಕಾಣದಂತೆ ಧರಿಸುವ ತೆಳುವಾದ ಬಟ್ಟೆ) ಹರಿದು ಹೋಗಿತ್ತು. ಆಗ ಹೊಸ ಸ್ಟಾಕಿಂಗ್ಸ್ ಕೊಡುವಂತೆ ಕೇಳಲಾಯಿತು. ಆಗ ನನಗೆ ನಿನ್ನ ಮುಖಕ್ಕೆ ಅದು ಬೇರೆ ಬೇಕಾ ಎಂದು ಅವಮಾನಿಸಿದ್ದರು.

ಜೀವನದಲ್ಲಿ ಏನಾದರೂ ಒಂದು ಸಾಧನೆ ಮಾಡಬೇಕು, ಸಿನಿಮಾದಲ್ಲಿ ಯಶಸ್ಸು ಗಳಿಸಿ, ಹೆಸರು ಮಾಡಬೇಕು ಎಂಬ ಗುರಿಯನ್ನು ಇಟ್ಟುಕೊಂಡು ಚಿತ್ರರಂಗಕ್ಕೆ ಬಂದಿರುತ್ತಾರೆ. ಹೀಗೆ ಬಂದ ಹೊಸಬರಿಗೆ ಅನೇಕ ರೀತಿಯಲ್ಲಿ ಕೆಟ್ಟ ಅನುಭವ ಆಗುತ್ತದೆ. ಯಾವತ್ತು ಆ ರೀತಿ ತಪ್ಪು ಆಗಬಾರದು. ಇನ್ನು ನಾನು ಸಿನಿಮಾಕ್ಕೆ ಬಂದಾಗ ಲೈಂಗಿಕವಾಗಿ ಕಿರುಕುಳ ನೀಡುವ ಯಾವುದೇ ಘಟನೆಗಳು ಸಂಭವಿಸಿಲ್ಲ. ಆದರೆ, ಆ ತರಹದ ಘಟನೆಗಳೇನಾದರೂ ಇಂಡಸ್ಟ್ರಿಯಲ್ಲಿ ನಡೆಯುತ್ತಿದ್ದರೆ ನಾವೆಲ್ಲ ಸೇರಿ ಯಾರು ಆ ರೀತಿ ಮಾಡುತ್ತಾರೆಯೋ ಅಂಥವರಿಗೆ ಶಿಕ್ಷೆಯನ್ನು ಕೊಡಿಸಲು ಹೋರಾಡಬೇಕು ಎಂದಿದ್ದಾರೆ. ಎಲ್ಲೆಲ್ಲಿ ತಪ್ಪು ನಡೆಯುತ್ತದೆ ಅದನ್ನು ಅಲ್ಲಿಯೇ ನಿಲ್ಲಿಸಿಬಿಡಬೇಕು. ಕನ್ನಡ ಚಿತ್ರರಂಗದಲ್ಲಿ ಯಾವುದೇ ಮಹಿಳೆಯರಿಗೆ ತೊಂದರೆ ಆಗಬಾರದು ಎಂದು ನಟಿ ರಾಧಿಕಾ ಕುಮಾರಸ್ವಾಮಿ ತಿಳಿಸಿದರು.

ಪುಟಾಣಿ ಸಿಹಿಗೆ ಸೀತಾ 'ಬಾಡಿಗೆ ತಾಯಿ' ಅನ್ನೋ ಸತ್ಯವನ್ನು ಭಾರ್ಗವಿ ದೇಸಾಯಿಗೆ ಹೇಳ್ತಾರಾ ಡಾ.ಅನಂತಲಕ್ಷ್ಮಿ!

ಕನ್ನಡ ಚಿತ್ರರಂಗಕ್ಕೆ ಭರವಸೆ ಕೊಟ್ಟ ಸಿದ್ದರಾಮಯ್ಯ: ಕನ್ನಡ ಸಿನಿಮಾ ಇಂಡಸ್ಟ್ರಿಯ ಪ್ರಮುಖ ನಟರಾದ ನಟ ಸುದೀಪ್, ನಟಿ ರಮ್ಯಾ ಸೇರಿದಂತೆ ಒಟ್ಟು 153 ಜನರು ಸಹಿ ಮಾಡಿದ ಮನವಿ ಪತ್ರವನ್ನು ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೇರಳದ ಹೇಮಾ ಸಮಿತಿ ಮಾದರಿಯಲ್ಲಿ ಕರ್ನಾಟಕದಲ್ಲೂ ಸಮಿತಿ ರಚನೆ ಮಾಡಿ ಎಂದು ಮನವಿ ಕೊಟ್ಟಿದ್ದೀರಿ. ಈ ಮನವಿಯನ್ನು ಸಚಿವ ಸಂಪುಟದ ಮುಂದಿಟ್ಟು ಚರ್ಚಿಸಿ ಸಮಿತಿ ರಚನೆ ಮಾಡುವುದರ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

Latest Videos
Follow Us:
Download App:
  • android
  • ios