Asianet Suvarna News Asianet Suvarna News

ಪುಟಾಣಿ ಸಿಹಿಗೆ ಸೀತಾ 'ಬಾಡಿಗೆ ತಾಯಿ' ಅನ್ನೋ ಸತ್ಯವನ್ನು ಭಾರ್ಗವಿ ದೇಸಾಯಿಗೆ ಹೇಳ್ತಾರಾ ಡಾ.ಅನಂತಲಕ್ಷ್ಮಿ!

ಸೀತಾಳ ಮಗಳು ಸಿಹಿಯ ಜನ್ಮ ರಹಸ್ಯ ಬಹಿರಂಗಗೊಳ್ಳುವ ಸೂಚನೆಗಳು ಸಿಗುತ್ತಿವೆ. ಭಾರ್ಗವಿ ದೇಸಾಯಿ ಸತ್ಯ ಬಯಲು ಮಾಡಲು ಹವಣಿಸುತ್ತಿದ್ದರೆ, ಸೀತಾ ಆತಂಕದಲ್ಲಿದ್ದಾಳೆ.

Baby Sihi is not Seetha daughter Secret revealed by dr Ananthalakshmi sat
Author
First Published Sep 5, 2024, 8:21 PM IST | Last Updated Sep 5, 2024, 8:21 PM IST

ಬೆಂಗಳೂರು (ಸೆ.05): ಸೀತಾ ಮತ್ತು ರಾಮನ ಮದುವೆ ನಂತರದ ನೆಮ್ಮದಿಯನ್ನು ಕಿತ್ತುಕೊಳ್ಳಲು ಮುಂದಾಗಿರುವ ಖಳನಾಯಕಿ ಭಾರ್ಗವಿ ದೇಸಾಯಿ, ಸೀತಾಳ ಮಗಳು ಸಿಹಿಯ ಜನ್ಮರಹಸ್ಯವನ್ನು ತಿಳಿದುಕೊಳ್ಳಲು ಇಲ್ಲದ ಕಸರತ್ತು ಮಾಡುತ್ತಿದ್ದಾಳೆ. ಇದೀಗ ಸಿಹಿ ಜನ್ಮರಹ್ಯ ತಿಳಿದಿರುವ ಡಾ. ಅನಂತಲಕ್ಷ್ಮಿ ದೇಸಾಯಿ ಮನೆಗೆ ಬಂದಿದ್ದು, ಸೀತಾ ದಯವಿಟ್ಟು ನಾನು ಸಿಹಿಗೆ ಬಾಡಿಗೆ ತಾಯಿ ಎಂಬ ಸತ್ಯವನ್ನು ಯಾರಿಗೂ ಹೇಳಬೇಡಿ ಎಂದು ಮನವಿ ಮಾಡಿಕೊಂಡಿದ್ದಾಳೆ. ಆದರೆ, ಭಾರ್ಗವಿ ದೇಸಾಯಿ ಡಾ.ಅನಂತಲಕ್ಷ್ಮಿಯಿಂದ ಸತ್ಯ ತಿಳಿದುಕೊಳ್ಳದೇ ಅವರನ್ನು ಮನೆಯಿಂದ ಹೊರಗೆ ಕಳಿಸುತ್ತಾಳಾ? ಎಂಬ ಅನುಮಾನ ಎದುರಾಗಿದೆ.

ಸೀತಾಳ ಮಗಳು ಸಿಹಿ ಜನ್ಮರಹಸ್ಯದ ಹಿಂದೆ ಬಿದ್ದಿರುವ ಭಾರ್ಗವಿ ದೇಸಾಯಿಗೆ ಸತ್ಯವನ್ನು ಬಾಯಿ ಬಿಡಿಸಲು ಡಾ.ಅನಂತಲಕ್ಷ್ಮಿ ಒಬ್ಬರೇ ಪ್ರಮುಖ ಅಸ್ತ್ರವಾಗಿದ್ದಾರೆ. ಹೀಗಾಗಿ, ರಾಮನ ತಾತ ಸೂರ್ಯಪ್ರಕಾಶ್ ದೇಸಾಯಿ ಜನ್ಮದಿನಕ್ಕೆ ಶುಭ ಕೋರಲು ಡಾ.ಅನಂತಲಕ್ಷ್ಮಿಯನ್ನು ಆಹ್ವಾನಿಸಿ ಮನೆಯ ನೆಮ್ಮದಿಯನ್ನು ಹಾಳು ಮಾಡಿದ್ದಾರೆ. ಆದರೆ, ನೀರು ಕುಡಿಯಲು ಹೋಗುವದಾಗಿ ಪ್ರತ್ಯೇಕ ಕೋಣೆಗೆ ಬಂದ ಡಾಕ್ಟರ್ ಬಳಿ ಸೀತಾ ಕೈಮುಗಿದು ಬೇಡಿಕೊಳ್ಳುತ್ತಾ ನೀವು ಯಾವುದೇ ಕಾರಣಕ್ಕೂ ಸೀತಾ ತನ್ನ ಮಗಳಲ್ಲ ಎಂಬುದನ್ನು ಮನೆಯವರಿಗೆ ಹೇಳಬೇಡಿ ಎಂದು ಬೇಡಿಕೊಂಡಿದ್ದಾರೆ.

ಸಿಹಿಯ ಜನ್ಮರಹಸ್ಯ ಬಯಲು: ಡಾ.ಮೇಘಶ್ಯಾಮನೇ ಸಿಹಿಯ ಅಪ್ಪ, ಆದ್ರೆ ಸೀತಾಳ ಮೊದಲ ಗಂಡನಲ್ಲ!

ಸೀತಾಗೆ ನಾನು ಬಾಡಿಗೆ ತಾಯಿ ಆಗಿದ್ದು, ಅವರ ತಂದೆ-ತಾಯಿ ಯಾರೆಂಬುದು ಗೊತ್ತಾದರೆ ಅವರ ಬಳಿ ಕಳಿಸಿಬಿಡುತ್ತಾರೆ ಎಂಬ ಆತಂಕ ಶುರುವಾಗಿದೆ. ಆದ್ದರಿಂದ ಡಾ. ಅನಂತಲಕ್ಷ್ಮಿ ಅವರ ಮುಂದೆ ಕೈಮುಗಿದು ಬೇಡಿಕೊಂಡು ನೀವು ಸತ್ಯವನ್ನು ಯಾರ ಮುಂದೆಯೂ ಹೇಳದಂತೆ ಮನವಿ ಮಾಡಿಕೊಂಡಿದ್ದಾಳೆ. ಆದರೆ, ಸೀತಾ ಬಾಡಿಗೆ ತಾಯಿಯಾಗಿ ಸಿಹಿಗೆ ಜನ್ಮ ನೀಡಿದ್ದು, ಅದು ತನ್ನ ಮೊದಲ ಗಂಡನ ಮಗುವಲ್ಲ ಎಂಬ ಸತ್ಯಾಂಶ ಭಾರ್ಗವಿ ದೇಸಾಯಿಗೆ ಗೊತ್ತಾದರೆ ದೊಡ್ಡ ಅನಾಹುತವೇ ನಡೆದು ಹೋಗುತ್ತದೆ. ಸಿಹಿಯ ತಂದೆ ತಾಯಿಯನ್ನು ಹುಡುಕಿ ಅವರೊಂದಿಗೆ ಮಗುವನ್ನು ಕಳುಹಿಸಿ ಸೀತಾ ಮತ್ತು ರಾಮನಿಗೆ ನೋವು ನೀಡಲು ಮುಂದಾಗುತ್ತಾಳೆ. ಆದ್ದರಿಂದ ಸಿಹಿಯ ಜನ್ಮರಹಸ್ಯ ದುಷ್ಟ ಕೂಟದ ಕಿವಿಗೆ ಬೀಳದಂತೆ ಮುಚ್ಚಿಡಲಾಗುತ್ತಿದೆ.

ಡಾ.ಮೇಘಶ್ಯಾಮನೇ ಸಿಹಿ ತಂದೆ: ಇನ್ನು ಬೋರ್ಡಿಂಗ್ ಶಾಲೆಯಲ್ಲಿ ಸಿಹಿಯೊಂದಿಗೆ ತೀವ್ರ ಆಪ್ತ ಒಡನಾಟ ಹೊಂದಿದ್ದ ಹಾಗೂ ವಂಶವಾಹಿ ಗುಣಗಳನ್ನು ನೋಡಿದ ಡಾ. ಮೇಘಶ್ಯಾಮ್‌ಗೆ ತಾನು ಬಾಡಿಗೆ ತಾಯಿಯಿಂದ ಮಗು ಪಡೆಯಲು ಮುಂದಾಗಿದ್ದ ಬಗ್ಗೆ ನೆನಪು ಮಾಡಿಕೊಂಡು ಕೊರಗುತ್ತಾನೆ. ನಮ್ಮ ಮಗುವೂ ಇಷ್ಟೇ ದೊಡ್ಡದಿರಬಹುದಾ? ಎಂದು ಆಲೋಚನೆ ಮಾಡುತ್ತಾ ಕೊರಗುತ್ತಾನೆ. ಈ ಬಗ್ಗೆ ಹೆಂಡತಿಯೊಂದಿಗೆ ತಾವು ಆ ಮಗು ಉಳಿಸಿಕೊಳ್ಳಬೇಕಿತ್ತು ಎಂದು ಜಗಳವನ್ನೂ ಮಾಡುತ್ತಾನೆ. ಆದರೆ, ತನ್ನ ಮಗುವಿಗೆ ಸೀತಾ ಬಾಡಿಗೆ ತಾಯಿ ಹಾಗೂ ಸಿಹಿಯೇ ತಮ್ಮ ಬಗು ಎಂಬುದರ ಬಗ್ಗೆ ಡಾ.ಮೇಘಶ್ಯಾಮನಿಗೆ ಗೊತ್ತಿಲ್ಲ. ಇದೀಗ ಸಿಹಿ ಪುಟಾಣಿಯ ಮೇಲೆ ಹೆಚ್ಚು ಪ್ರೀತಿ ಹೊಂದಿರುವ ಡಾ.ಮೇಘಶ್ಯಾಮ್ ಹೆಂಡತಿ ಕರೆದುಕೊಂಡು ಸಿಹಿಯನ್ನು ನೋಡಲು ರಾಮನ ಮನೆಗೆ ಹೋಗುತ್ತಿದ್ದಾನೆ. ಇದೀಗ ಸಿಹಿ ಯಾರ ಪಾಲಾಗುತ್ತಾಳೆ ಎಂಬುದೇ ಧಾರಾವಹಿ ಟ್ವಿಸ್ಟ್ ಆಗಿದೆ.

ಸೀತಾರಾಮ: ದೇಸಾಯಿ ಮನೆಗೆ ಬಂದ ಡಾ. ಅನಂತಲಕ್ಷ್ಮಿ ಸಿಹಿ ಜನ್ಮ ರಹಸ್ಯ ಬಿಚ್ಚಿಡುತ್ತಾರಾ?

ಮೇಘಶ್ಯಾಮನಿಗೆ ಮಗು ಬದುಕಿದೆ ಎಂಬ ಸುಳಿವು ಕೊಟ್ಟ ಅನಂತಲಕ್ಷ್ಮಿ: ಡಾ.ಮೇಘಶ್ಯಾಮ್ ದಂಪತಿ ಹಾಗೂ ಸೀತಾಳ ನಡುವೆ ಬಾಡಿಗೆ ತಾಯಿಯ ಮೂಲಕ ಮಗುವನ್ನು ಹೆತ್ತುಕೊಡುವ ಬಗ್ಗೆ ಒಪ್ಪಂದ ಮಾಡಿಸಿದ್ದ ಡಾ.ಅನಂತಲಕ್ಷ್ಮಿ ಸೀತಾಗೆ ಹೆರಿಗೆ ಮಾಡಿಸಿದ್ದಾರೆ. ಆದರೆ, ಮಗುವನ್ನು ಪಡೆದುಕೊಂಡು ಹೋಗದ ಹಿನ್ನೆಲೆಯಲ್ಲಿ ಸೀತಾ ಮಗುವನ್ನು ಬೆಳೆಸಿದ್ದಾಳೆ. ಆದರೆ, ಡಾ. ಮೇಘಶ್ಯಾಮನ ನಾದಿನಿ ಚಾಂದಿನಿ ಮಗುವಿನ ಬಗ್ಗೆ ಮಾಹಿತಿ ಕಲೆ ಹಾಕಲು ಡಾ.ಅನಂತಲಕ್ಷ್ಮಿ ಬಳಿ ತೆರಳಿದ್ದರಿಂದ ಕೋಪಗೊಂಡಿದ್ದಾರೆ. ಹೀಗಾಗಿ, ಅನಂತಲಕ್ಷ್ಮಿ ಅವರು ಡಾ.ಮೇಘಶ್ಯಾಮನಿಗೆ ಕರೆ ಮಾಡಿ ನಿಮ್ಮ ಉದ್ದೇಶವೇನು? ಮಗುವಿನ ಬಗ್ಗೆ ತಿಳಿದುಕೊಳ್ಳಲು ಕುತಂತ್ರ ಮಾಡುತ್ತಿದ್ದೀರಾ? ಎಂಬು ಕೋಪದಿಂದಲೇ ಮಾತನಾಡಿದ್ದಾರೆ. ಆದರೆ, ಮಗು ಬದುಕಿದೆಯೋ, ಸತ್ತಿದೆಯೋ ಎಂಬ ಮಾಹಿತಿಯೂ ಇಲ್ಲದೆ ಕೊರಗುತ್ತಿದ್ದ ಡಾ.ಮೇಘಶ್ಯಾಮನಿಗೆ ಇದೀಗ ತನ್ನ ಮಗು ಬದುಕಿದೆ ಎಂಬ ಸತ್ಯ ಗೊತ್ತಾಗಿದ್ದು, ತೀವರ ಖುಷಿಯಲ್ಲಿದ್ದಾರೆ. ಅದೂ ಕೂಡ ಸಿಹಿಯೇ ತನ್ನ ಮಗಳೆಂದು ಗೊತ್ತಾದರೆ ಕಾನೂನಿನ ಮೂಲಕ ಹೋರಾಟ ಮಾಡಿ ಮಗುವನ್ನು ಪಡೆದುಕೊಳ್ಳುತ್ತಾನೆ.

Latest Videos
Follow Us:
Download App:
  • android
  • ios