Asianet Suvarna News Asianet Suvarna News

ಮೊದಲ ಬಾರಿಗೆ ನಟ ದರ್ಶನ್ ಕೇಸ್ ಬಗ್ಗೆ ಬಾಯ್ಬಿಟ್ಟ ರಾಧಿಕಾ ಕುಮಾರಸ್ವಾಮಿ, ಏನ್ ಹೇಳಿದ್ರು ನೋಡಿ!

ಎಲ್ಲೂ ಕೂಡ ಅವ್ರು ಅಷ್ಟು ದೊಡ್ಡ ನಟ ಅಂತ ತೋರಿಸ್ಕೋತಾ ಇರ್ಲಿಲ್ಲ.. ಸಡನ್ನಾಗಿ ಈ ವಿಚಾರ ಕೇಳಿಸ್ಕೊಂಡಾಗ ನಂಗೆ ಅನ್ನಿಸ್ತು, ನಿಜಾನ ಅದು? ಒಂದು ಕ್ಷಣ ನಂಗೆ ಅದನ್ನ ನಂಬೋಕಾಗಿಲ್ಲ.. ಇದು ನಿಜಾನಾ ಅಂತ ನಂಗೆ ಅನ್ನಿಸೋಕೆ ಶುರುವಾಗೋಯ್ತು..

Sandalwood sweety fame actress radhika kumaraswamy talks about darshan case srb
Author
First Published Sep 5, 2024, 8:22 PM IST | Last Updated Sep 5, 2024, 8:47 PM IST

ಸ್ಯಾಂಡಲ್‌ವುಡ್ ಬ್ಯೂಟಿ 'ಸ್ವೀಟಿ' ಖ್ಯಾತಿಯ ನಟಿ ರಾಧಿಕಾ ಕುಮಾರಸ್ವಾಮಿ (Radhika Kumaraswamy) ಅವರು ನಟ ದರ್ಶನ್ (Darshan) ಕೊಲೆ ಕೇಸ್‌ ಬಗ್ಗೆ ಮೊಟ್ಟಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಈ ಬಗ್ಗೆ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ರಾಧಿಕಾ ಅವರು 'ನಿಜ ಹೇಳ್ಬೇಕು ಅಂದ್ರೆ ಮನಸ್ಸಿಗೆ ತುಂಬಾ ನೋವಾಗುತ್ತೆ ಈ ವಿಷ್ಯ.. ನಾನು ಅವ್ರನ್ನ ನೋಡಿದ್ದು ಒಂದು ಅನಾಥರು ಸಿನಿಮಾದಲ್ಲಿ, ಇನ್ನೊಮದು ಮಂಡ್ಯ ಸಿನಿಮಾದಲ್ಲಿ.. ಅವ್ರು ಎಷ್ಟು ಚೆನ್ನಾಗಿ, ಅಂದ್ರೆ ಎಲ್ಲಾ ಟೆಕ್ನಿಶನ್ಸ್ ಜೊತೆ, ಅಣ್ಣಾ ಬನ್ನಿ ಹೋಗಿ ಅಂತ ಎಷ್ಟು ರೆಸ್ಪೆಕ್ಟ್‌ಫುಲ್‌ ಆಗಿ ಮಾತಾಡೋರು, ಎಷ್ಟು ಒಂದು ಹೊಂದಾಣಿಕೆಯಲ್ಲಿ ಇರೋರು.. 

ಎಲ್ಲೂ ಕೂಡ ಅವ್ರು ಅಷ್ಟು ದೊಡ್ಡ ನಟ ಅಂತ ತೋರಿಸ್ಕೋತಾ ಇರ್ಲಿಲ್ಲ.. ಸಡನ್ನಾಗಿ ಈ ವಿಚಾರ ಕೇಳಿಸ್ಕೊಂಡಾಗ ನಂಗೆ ಅನ್ನಿಸ್ತು, ನಿಜಾನ ಅದು? ಒಂದು ಕ್ಷಣ ನಂಗೆ ಅದನ್ನ ನಂಬೋಕಾಗಿಲ್ಲ.. ಇದು ನಿಜಾನಾ ಅಂತ ನಂಗೆ ಅನ್ನಿಸೋಕೆ ಶುರುವಾಗೋಯ್ತು.. ಬಟ್, ನಾನು ಏನ್ ಹೇಳೋದು ಅಂದ್ರೆ, ಅವ್ರವರ ಜೀವನದಲ್ಲಿ ಏನೇನ್ ಆಗಿರುತ್ತೆ ಅಂತ ಅವ್ರಿಗೆ ಮಾತ್ರ ಗೊತ್ತಿರೋಕೆ ಸಾಧ್ಯ..' ಎಂದಿದ್ದಾರೆ ನಟಿ ಸ್ವೀಟಿ ಖ್ಯಾತಿಯ ರಾಧಿಕಾ. 

ಈ ಮಹಾ ಸೀಕ್ರೆಟ್ ನಿಮಗೇನಾದ್ರೂ ಗೊತ್ತಿದ್ಯಾ? ರೇಖಾ ಜೋಡಿಯಾಗಿ ನಟಿಸಿದ್ದರು ಶಂಕರ್‌ ನಾಗ್!

ನಮಗೆ ನ್ಯೂಸ್‌ನಲ್ಲಿ ಬರೋದು, ಯಾರೋ ಹೇಳೋದು ಅಷ್ಟು ಮಾತ್ರ ನಮಗೆ ಗೊತ್ತಿರುತ್ತೆ ಅಷ್ಟೇ.. ಆದ್ರೆ ಅವ್ರ ಲೈಫಲ್ಲಿ ನಿಜವಾಗಿಯೂ ಏನಾಗಿದೆ ಅಂತ ನಮಗೆ ಗೊತ್ತಿರೋದಿಲ್ಲ. ಅವ್ರ ಬಗ್ಗೆ ನಾವು ಕಾಮೆಂಟ್ ಮಾಡೋದು ತಪ್ಪು.. ನಾನು ಒಂದ್ ಮಾತನ್ನ ಆನೆಸ್ಟ್ ಆಗಿ ಹೇಳ್ತೀನಿ, ಅವ್ರು ನಮ್ ಇಂಡಸ್ಟ್ರಿಗೆ ಬೇಕು.. ನಮ್ಮ ಚಿತ್ರರಂಗಕ್ಕೆ ಅವ್ರು ಬೇಕು.. ಅವ್ರಿಗೆ ಒಳ್ಳೇದಾಗ್ಲಿ ಅಂತ ಹೇಳ್ತೀನಿ ಅಷ್ಟೇ..  

ಎಲ್ಲರ ಲೈಫಲ್ಲೂ ಕೆಲವೊಂದು ಘಟನೆಗಳು ನಡಿತಾ ಹೋಗುತ್ತೆ.. ಯಾವುದೂನೂ ನಮಗೆ ಮುಂಚಿತವಾಗಿ ಗೊತ್ತಾಗಲ್ಲ.. ಮುಂಚಿತವಾಗಿ ಗೊತ್ತಾದ್ರೆ ನಾವು ಆ ಘಟನೆಗಳು ನಡೆಯೋದಕ್ಕೇ ಬಿಡಲ್ಲ.. ಯಾಕಂದ್ರೆ, ಯಾರ ಲೈಫಲ್ಲಿ ಕೆಟ್ಟ ಘಟನೆಗಳು ನಡೆದಿಲ್ಲ? ಎಲ್ಲರ ಲೈಫನ್ನೂ ತಿರುಗಿ ನೋಡಿದಾಗ, ನಮ್ಮೆಲ್ಲರ ಲೈಫಲ್ಲಿಯೂ ನಾವು ಕೆಲವೊಂದು ಕೆಟ್ಟ ಘಟನೆಗಳನ್ನು ನಾವೆಲ್ಲರೂ ಅನುಭವಿಸಿರ್ತೀವಿ.. 

ಇವರೆಲ್ಲ ಶಿಕ್ಷಕರ ಪಾತ್ರದಲ್ಲಿ ನಟಿಸಿರುವ ಕನ್ನಡ ನಟನಟಿಯರು, ನೆನಪಿದೆಯಾ ನಿಮಗೆ...?

ಬಟ್ ಅದನ್ನೆಲ್ಲಾ ಫೇಸ್ ಮಾಡ್ಕೊಂಡು ನಾವು ಮುಂದಕ್ಕೆ ಹೋಗ್ತಾ ಇರ್ಬೇಕು ಅಷ್ಟೇ.. ನಾನು ದರ್ಶನ್ ಅವ್ರಿಗೂ ಅದೇ ಹೇಳೊದು, ಈಗ ಲೈಫಲ್ಲಿ ಅವ್ರಿಗೆ ಏನು ತೊಂದ್ರೆಗಳು ಬರ್ತಾ ಇವೆ, ಆದಷ್ಟು ಬೇಗ ಅದನ್ನೆಲ್ಲಾ ಕ್ಲಿಯರ್ ಆಗಿ ಸಾಲ್ವ್ ಮಾಡ್ಕೊಂಡು, ಆದಷ್ಟು ಬೇಗ ಅವ್ರು ನಮ್ ಇಂಡಸ್ಟ್ರಿಗೆ ವಾಪಸ್ ಬರ್ಲಿ ಅಂತ.. 'ಎಂದಿದ್ದಾರೆ ನಟಿ ರಾಧಿಕಾ ಕುಮಾರಸ್ವಾಮಿ. ಅವರ ಮಾತಿಗೆ, ಮೆಚ್ಯೂರಿಟಿ ಅಭಿಪ್ರಾಯಕ್ಕೆ ಹಲವರು ಮೆಚ್ಚುಗೆ ಸೂಚಿಸಿ ಕಾಮೆಂಟ್ ಹಾಕಿದ್ದಾರೆ.

Latest Videos
Follow Us:
Download App:
  • android
  • ios