Asianet Suvarna News Asianet Suvarna News

ದುನಿಯಾ ವಿಜಯ್‌ ಅವರನ್ನು ರಚಿತಾ ರಾಮ್ ಏನಂತ ಕರೆಯೋದು? ಡಿಂಪಲ್ ಕ್ವೀನ್ ಹೇಳಿದಿಷ್ಟು

ನಟಿ ರಚಿತಾ ರಾಮ್, ನಟ ದುನಿಯಾ ವಿಜಯ್ ಅವರನ್ನು ಸರ್ ಅಂತ ಕರೆಯುವುದಿಲ್ಲ ಎಂದು ಹೇಳಿದರು. ಮಾನ್ಸೂನ್ ರಾಗ ಪ್ರೀ ರಿಲೀಸ್ ಈವೆಂಟ್ ಗೆ ದುನಿಯಾ ವಿಜಯ್ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು. 

Rachita ram talks about Duniya Vijay in monsoon raaga pre release event sgk
Author
First Published Sep 14, 2022, 12:12 PM IST

ಸ್ಯಾಂಡಲ್ ವುಡ್‌ನಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾಗಳಲ್ಲಿ ಮಾನ್ಸೂನ್ ರಾಗ ಸಿನಿಮಾ ಕೂಡ ಒಂದು. ಡಾಲಿ ಧನಂಜಯ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿಯಾಗಿ ಬರ್ತಿರುವ ಮೊದಲ ಸಿನಿಮಾ. ಈಗಾಗಲೇ ಹಾಡು ಮತ್ತು ಟ್ರೈಲರ್ ಮೂಲಕ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿರುವ ಮಾನ್ಸೂನ್ ರಾಗ ಸಿನಿಮಾವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾ ರಿಲೀಸ್‌ಗೂ ಮೊದಲೇ ಸಿನಿಮಾತಂಡ ಪ್ರಿ ರಿಲೀಸ್ ಈವೆಂಟ್ ಹಮ್ಮಿಕೊಂಡು. ಬೆಂಗಳೂರಿನಲ್ಲಿ ನಡೆದ ಅದ್ದೂರಿ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಇಡೀ ಸಿನಿಮಾತಂಡ ಹಾಜರಾಗಿತ್ತು. ವಿಶೇಷ ಅತಿಥಿಯಾಗಿ ದುನಿಯಾ ವಿಜಯ್ ಆಗಮಿಸಿದ್ದರು. ನಟಿ ಸುಹಾಸಿನಿ, ಡಾಲಿ ಧನಂಜಯ್, ರಚಿತಾ ರಾಮ್, ಅಚ್ಯುತ್‌ ಕುಮಾರ್, ಯಶ ಶಿವಕುಮಾರ್ ಸೇರಿದಂತೆ ಇಡಿ ತಂಡ ಹಾಜರಗಿತ್ತು.

ರವೀಂದ್ರ ನಾಥ್ ನಿರ್ದೇಶನದಲ್ಲಿ ಮೂಡಿಬಂದ ಮನ್ಸೂನ್ ರಾಗ ಸಿನಿಮಾ ಇದೇ ತಿಂಗಳು 16ರಂದು ರಿಲೀಸ್ ಆಗುತ್ತಿದೆ. ಪ್ರೀ ರಿಲೀಸ್ ಈವೆಂಟ್‌ಗೆ ಸ್ಯಾಂಡಲ್ ವುಡ್ ಸ್ಟಾರ್ ದುನಿಯಾ ವಿಜಯ್ ವಿಶೇಷ ಅತಿಥಿಯಾಗಿದ್ದರು. ಈವೆಂಟ್‌ನಲ್ಲಿ ಮಾತನಾಡಿದ ನಟಿ ರಚಿತಾ ರಾಮ್ ದುನಿಯಾ ವಿಜಯ್ ಅವರನ್ನು ಮಚ್ಚಾ ಅಂತಾನೆ ಕರೆಯೋದು ಅಂತ ಹೇಳಿದ್ದಾರೆ.  'ದುನಿಯಾ‌ ವಿಜಯ್ ಅವರನ್ನು ಸರ್ ಅಂತ ಎಂದು‌ ಕರೆದಿಲ್ಲ. ಬ್ರೋ ಮಚ್ಚಾ ಅಂತಲೇ ನಾನು ಕರೆಯೋದು' ಎಂದು ಹೇಳಿದರು. 

ಇನ್ನು ನಟಿ ಸುಹಾಸಿನಿ ಅವರ ಬಗ್ಗೆ ಮಾತನಾಡಿ ಅವರ ಪಕ್ಕದಲ್ಲಿ ಕುಳಿತಿದ್ದು ಇದೇ ಮೊದಲು ಎಂದಿದ್ದಾರೆ. 'ಸುಹಾಸಿನಿ ಮೇಡಂ ಪಕ್ಕದಲ್ಲಿ ಕೂತಿದ್ದು ಇದೇ ಮೊದಲು. ಈ‌ ಸಿನಿಮಾದಲ್ಲಿ ಅಚ್ಯುತ್ ಸರ್ ಸುಹಾಸಿನಿ ಮೇಡಂ ಕಾಂಬಿನೇಷನ್ ತುಂಬಾ ಚೆನ್ನಾಗಿದೆ. ಧನಂಜಯ್ ಒಳ್ಳೆ ವ್ಯಕ್ತಿತ್ವ‌ ಇರೋ‌ ವ್ಯಕ್ತಿ. ನಾನು ಈ ಸಿನಿಮಾದಲ್ಲಿ ತುಂಬಾ ಎಂಜಾಯ್ ಮಾಡಿದ್ದೇನೆ. ಈ‌ ಸಿನಿಮಾ ಸೆಟ್ ನಲ್ಲಿ ತುಂಬಾ ತರ್ಲೆ ಮಾಡಿದ್ದು ನಾನೆ. ಎಂತಹ ಪಾತ್ರ‌ ಇದ್ರು ಅದ್ಭುತವಾಗಿ‌ ಪ್ರಸೆಂಟ್ ಮಾಡಿದ್ದಾರೆ. ಧನಂಜಯ್ ಗ್ರೇಟ್ ಪರ್ಫಾಮರ್. ಧನಂಜಯ್ ರನ್ನ ಸಾವಿತ್ರಮ್ಮನ ಮಗ ಎಲ್ಲಪ್ಪಾ ಅಂತ ಹುಡುಕ್ತೇನೆ. ಅಚ್ಯುತ್ ಸರ್ ಬಂದಿದ್ದು ಹೀರೋ ತರನೆ ಇತ್ತು' ಎಂದು ಹೇಳಿದರು. 

Monsoon Raaga: ಡಾಲಿ ಲವ್ ಫೆಲ್ಯೂರ್‌ಗೆ ಟಿಪ್ಸ್ ಕೊಟ್ಟ ಸಪ್ಲೈಯರ್

ಈ ಸಿನಿಮಾದಲ್ಲಿ ನಟಿ ರಚಿತಾ ರಾಮ್ ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ. ವೇಶ್ಯೆಯ ಪಾತ್ರದಲ್ಲಿ ರಚಿತಾ ನಟಿಸಿದ್ದಾರೆ. ಮೊದಲ ಬಾರಿಗೆ ರಚಿತಾ ಇಂತ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಈಗಾಗಲೇ ರಿಚಿತಾ ಲುಕ್ ವೈರಲ್ ಆಗಿದೆ. ವಿಭಿನ್ನ ಪಾತ್ರದಲ್ಲಿ ರಚಿತಾ ಅವರನ್ನು ತೆರೆಮೇಲೆ ನೋಡಲು ಕಾತರರಾಗಿದ್ದಾರೆ. 

ಸುಹಾಸಿನಿ ಮೇಡಂ ಜೊತೆ ನಟಿಸುವಾಗ ಎದೆ ಹಿಡಿದುಕೊಳ್ತಿತ್ತು; ನಟ ಅಚ್ಯುತ್ ಕುಮಾರ್

ನಟ ಧನಂಜಯ್ ರಚಿತಾ ಮತ್ತು ವಿಜಯ್ ಬಗ್ಗೆ ಮಾತನಾಡಿ,  'ವಿಜಿ ಸರ್ ನಮ್ಮೆಲ್ಲರಿಗಿಂತ ದೊಡ್ಡ ಗ್ಯಾಂಗ್ ಸ್ಟರ್. ರಚಿತಾ ರಾಮ್ ಎಲ್ಲರಿಗಿಂತ ದೊಡ್ಡ ಡಾನ್' ಎಂದು ಕಾಲೆಳೆದರು.  ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಮಾನ್ಸೂನ್ ರಾಗ ಸಿನಿಮಾ ಸೆಪ್ಟಂಬರ್ 16ರಂದು ತೆರೆಗೆ ಬರುತ್ತಿದ್ದು ಅಭಿಮಾನಿಗಳು ಕಾರರಾಗಿದ್ದಾರೆ. 

Follow Us:
Download App:
  • android
  • ios