Asianet Suvarna News Asianet Suvarna News

ಸುಹಾಸಿನಿ ಮೇಡಂ ಜೊತೆ ನಟಿಸುವಾಗ ಎದೆ ಹಿಡಿದುಕೊಳ್ತಿತ್ತು; ನಟ ಅಚ್ಯುತ್ ಕುಮಾರ್

ಪ್ರಿ ರಿಲೀಸ್ ಈವೆಂಟ್ ‌ನಲ್ಲಿ ಮಾತನಾಡಿದ ನಟ ಅಚ್ಯುತ್ ಕುಮಾರ್, ಸುಹಾಸಿನಿ ಮೇಡಂ ಜೊತೆ ನಟೆಸುವಾಗ ಎದು ಹಿಡಿದುಕೊಳ್ತಿತ್ತು, ಭಯ ಆಗುತ್ತಿತ್ತು ಎಂದು ಹೇಳಿದರು. 

Actor Achyuth Kumar talks about Suhasini and monsoon raga sgk
Author
First Published Sep 14, 2022, 10:28 AM IST

ಮಾನ್ಸೂನ್ ರಾಗ, ಸ್ಯಾಂಡಲ್ ವುಡ್‌ನಲ್ಲಿ ರಿಲೀಸ್‌ಗೆ ರೆಡಿಯಾಗಿರುವ ಬಹುನಿರೀಕ್ಷೆಯ ಸಿನಿಮಾ. ಡಾಲಿ ಧನಂಜಯ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿಯಾಗಿ ಬರ್ತಿರುವ ಮೊದಲ ಸಿನಿಮಾ. ಈಗಾಗಲೇ ಹಾಡು ಮತ್ತು ಟ್ರೈಲರ್ ಮೂಲಕ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿರುವ ಮಾನ್ಸೂನ್ ರಾಗ ಸಿನಿಮಾವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾ ರಿಲೀಸ್‌ಗೂ ಮೊದಲೇ ಸಿನಿಮಾತಂಡ ಪ್ರಿ ರಿಲೀಸ್ ಈವೆಂಟ್ ಹಮ್ಮಿಕೊಂಡು. ಬೆಂಗಳೂರಿನಲ್ಲಿ ನಡೆದ ಅದ್ದೂರಿ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಇಡೀ ಸಿನಿಮಾತಂಡ ಹಾಜರಾಗಿತ್ತು. ವಿಶೇಷ ಅತಿಥಿಯಾಗಿ ದುನಿಯಾ ವಿಜಯ್ ಆಗಮಿಸಿದ್ದರು. ನಟಿ ಸುಹಾಸಿನಿ, ಡಾಲಿ ಧನಂಜಯ್, ರಚಿತಾ ರಾಮ್, ಅಚ್ಯುತ್‌ ಕುಮಾರ್, ಯಶ ಶಿವಕುಮಾರ್ ಸೇರಿದಂತೆ ಇಡಿ ತಂಡ ಹಾಜರಗಿತ್ತು. 

ರವೀಂದ್ರ ನಾಥ್ ನಿರ್ದೇಶನದಲ್ಲಿ ಮೂಡಿಬಂದ ಮನ್ಸೂನ್ ರಾಗ ಸಿನಿಮಾ ಇದೇ ತಿಂಗಳು 16ರಂದು ರಿಲೀಸ್ ಆಗುತ್ತಿದೆ. ಪ್ರಿ ರಿಲೀಸ್ ಈವೆಂಟ್ ‌ನಲ್ಲಿ ಮಾತನಾಡಿದ ನಟ ಅಚ್ಯುತ್ ಕುಮಾರ್, ಸುಹಾಸಿನಿ ಮೇಡಂ ಜೊತೆ ನಟೆಸುವಾಗ ಎದು ಹಿಡಿದುಕೊಳ್ತಿತ್ತು, ಭಯ ಆಗುತ್ತಿತ್ತು ಎಂದು ಹೇಳಿದರು. 'ಮಾನ್ಸೂನ್ ರಾಗ ಸಿನಿಮಾದ ಹಾಡಿನ ಶೂಟಿಂಗ್ ಮಾಡುವಾಗ ಬೇಸರ ಆಗಿತ್ತು. ಏಕೆಂದರೆ ಗೋಕರ್ಣದಲ್ಲಿ ಹಾಡಿನ ಶೂಟಿಂಗ್ ಮಾಡಿದ್ದು, ತುಂಬಾ ಬಿಸಿಲು ಇತ್ತು ಹಾಗಾಗಿ. ಸುಹಾಸಿನಿ ಮೇಡಮ್ ಜೊತೆ ನಟಿಸುವಾಗ ಭಾಯದಲ್ಲೇ ಇದ್ದೆ. ಸುಹಾಸಿನಿ ಅವರ ನಟನೆಯನ್ನ ನೋಡಿದ್ದೇವೆ. ಸುಹಾಸಿನಿ ಮೇಡಂ ಜೊತೆ ನಟಿಸುವಾಗ ಎದೆ ಹಿಡೆದುಕೊಳ್ಳೊಕೆ ಶುರುವಾಯ್ತು. ತುಂಬಾ ಒಳ್ಳೆ ನಟರ ಜೊತೆ ನಟಿಸೋದು ತುಂಬಾ ಸುಲಭ. ಯಾಕಂದ್ರೆ ಅವರು ಮೊದಲ ದೃಶ್ಯದ ಶೂಟಿಂಗ್ ನಲ್ಲೇ ಕಂಫರ್ಟ್ ಜೋನ್ ಕೊಡ್ತಾರೆ' ಎಂದು ಹೇಳಿದರು.  

ಸುಹಾಸಿನಿ ಅವರ ಜತೆ ಆಕ್ಟ್‌ ಮಾಡಿದ್ದು ಒಳ್ಳೆ ಅವಕಾಶ: ಅಚ್ಯುತ್ ಕುಮಾರ್

ಇನ್ನು ಮಾನ್ಸೂನ್ ರಾಗ ಸಿನಿಮಾನ ಎಲ್ಲರೂ ನೋಡಿ ಮಿಸ್ ಮಾಡಿಕೊಳ್ಳಬೇಡಿ ಎಂದು ಅಚ್ಯುತ್ ಕುಮಾರ್ ಹೇಳಿದರು. ಈ ಸಿನಿಮಾದಲ್ಲಿ ನಟ ಅಚ್ಯುತ್ ಕುಮಾರ್ ಅವರಿಗೆನೇ ಒಂದು ವಿಶೇಷ ಹಾಡನ್ನು ಮಾಡಲಾಗಿದೆ. ಈಗಾಗಲೇ ಈ ಹಾಡು ಅಭಿಮಾನಿಗಳ ಹೃದಯ ಗೆದ್ದಿದೆ. ಅಚ್ಯುತ್ ಮತ್ತು ಸುಹಾನಿಸಿ ಕಾಂಬಿನೇಷನ್ ನೋಡಲು ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ. 

25 ಸಾವಿರ ಹಣಕ್ಕಾಗಿ ಅಚ್ಯುತ್‌ ಕುಮಾರ್‌ರನ್ನ ಪೀಡಿಸಿದ್ರ ಸತೀಶ್ ನೀನಾಸಮ್!

ಇನ್ನು ನಟಿ ಸುಹಾಸಿನಿ ಕೂಡ ಸಿನಿಮಾದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅಚ್ಯುತ್ ಜೊತೆ ನಟಿಸಲು ಭಯ ಆಗ್ತಿತ್ತು ಎಂದು ಹೇಳಿದ್ದಾರೆ. ಇನ್ನು ಈ ಸಿನಿಮಾದಲ್ಲಿ ತನಗೆ ಹ್ಯಾಪಿ ರೊಮ್ಯಾಂಟಿಕ್ ಪಾತ್ರ ಕೊಟ್ಟಿದ್ದಾರೆ ಎಂದು ಹಿರಿಯ ನಟಿ ಸುಹಾಸಿನಿ ತನ್ನ ಪಾತ್ರದ ಬಗ್ಗೆ ಬಹಿರಂಗ ಪಡಿಸಿದರು. ಮಾನ್ಸೂನ್ ರಾಗ ಮೂಲಕ ನಟಿ ಸುಹಾಸಿನಿ ಮತ್ತೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಮಾನ್ಸೂನ್ ರಾಗ ಸಿನಿಮಾ ಸೆಪ್ಟಂಬರ್ 16ರಂದು ತೆರೆಗೆ ಬರುತ್ತಿದ್ದು ಅಭಿಮಾನಿಗಳು ಕಾರರಾಗಿದ್ದಾರೆ. 

Follow Us:
Download App:
  • android
  • ios